Nooru Janmaku Serial: ನೂರು ಜನ್ಮಕೂ ಹೊಸ ಧಾರಾವಾಹಿ ಮೈತ್ರಿಯ ನಿಜವಾದ ಹೆಸರೇನು, ಯಾವ ಊರು? ಮಾಡೆಲಿಂಗ್‌ನಲ್ಲೂ ಮಿಂಚಿದ್ದಾರೆ ಈ ಚೆಲುವೆ
- Nooru janmaku Serial Actress Shilpa kamath: ಕಲರ್ಸ್ ಕನ್ನಡ ವಾಹಿನಿಯಲ್ಲಿ ನೂರು ಜನ್ಮಕೂ ಅನ್ನೋ ಹೊಸ ಧಾರಾವಾಹಿ ಇನ್ನೇನು ಡಿ. 23ರಿಂದ ಶುರುವಾಗಲಿದೆ. ಗೀತಾ ಸೀರಿಯಲ್ ನಟ ಧನುಷ್ ಮತ್ತೆ ಈ ಸೀರಿಯಲ್ ಮೂಲಕ ಆಗಮಿಸಿದರೆ, ಅವರಿಗೆ ಹೊಸ ನಟಿ ಜತೆಯಾಗಿದ್ದಾರೆ. ಈಗಾಗಲೇ ಪ್ರೋಮೋ ಮೂಲಕವೇ ಗಮನ ಸೆಳೆದ ಈ ಸೀರಿಯಲ್‌ನ ನಾಯಕಿಯ ಬಗ್ಗೆ ಇಲ್ಲಿದೆ ಒಂದಷ್ಟು ಮಾಹಿತಿ.

(1 / 8)
ಕಲರ್ಸ್ ಕನ್ನಡದಲ್ಲಿ ಒಂದಾದ ಮೇಲೊಂದು ಹೊಸ ಸೀರಿಯಲ್‌ಗಳು ಆಗಮಿಸುತ್ತಿವೆ. ಆ ಪೈಕಿ ನೂರು ಜನ್ಮಕೂ ಧಾರಾವಾಹಿಯೂ ಸಹ ಒಂದು. (Instagram\ Shilpa Kamath)
(2 / 8)
ಈ ಹಿಂದೆ ಗೀತಾ ಸೀರಿಯಲ್ ಮಾಡಿದ್ದ ನಟ ಧನುಷ್ ಇದೀಗ ಮತ್ತೆ ನೂರು ಜನ್ಮಕೂ ಮೂಲಕ ಆಗಮಿಸುತ್ತಿದ್ದಾರೆ. ಪ್ರೋಮೋಗಳ ಮೂಲಕವೇ ಈ ಧಾರಾವಾಹಿ ಗಮನ ಸೆಳೆದಿದೆ.
(3 / 8)
ಹಾರರ್ ಕಥೆಯ ಮೂಲಕ ಆಗಮಿಸುತ್ತಿರುವ ನೂರು ಜನ್ಮಕೂ ಧಾರಾವಾಹಿ ಮೂಲಕ ಕಲರ್ಸ್ ಕನ್ನಡಕ್ಕೆ ಆಗಮಿಸುತ್ತಿದ್ದಾರೆ ನಟಿ ಶಿಲ್ಪಾ ಕಾಮತ್.
(4 / 8)
ಈ ವರೆಗೂ ಸಿನಿಮಾ, ಕಿರುಚಿತ್ರಗಳ ಮೂಲಕ ಗುರುತಿಸಿಕೊಂಡಿರುವ ಶಿಲ್ಪಾ ಕಾಮತ್ ಇದೀಗ ಮೊದಲ ಸಲ ಕಿರುತೆರೆಗೆ ಎಂಟ್ರಿಕೊಡುತ್ತಿದ್ದಾರೆ.
(5 / 8)
ಮೂಲತಃ ಮಂಗಳೂರಿನವರಾದ ಶಿಲ್ಪಾ ಕಾಮತ್, ನಟನಾ ಆಸಕ್ತಿ ಜತೆಗೆ ಮಾಡೆಲಿಂಗ್‌ನಲ್ಲಿಯೂ ಮಿಂಚಿದ್ದಾರೆ. 2023ರಲ್ಲಿ ನಡೆದ ಮಿಸ್ ಮಂಗಳೂರು ಸ್ಪರ್ಧೆಯಲ್ಲಿ ಎರಡನೇ ರನ್ನರ್ ಅಪ್ ಆಗಿದ್ದಾರೆ ಶಿಲ್ಪಾ ಕಾಮತ್.
(6 / 8)
ಇದೀಗ ಅದೇ ಮಾಡೆಲಿಂಗ್ ಲೋಕದಿಂದ ಬಣ್ಣದ ಲೋಕಕ್ಕೆ ಕಾಲಿಟ್ಟು, ಸೆವೆನ್ ಡೇಸ್ ಎಂಬ ಕಿರುಚಿತ್ರ, ಈ ಪಯಣ ಎಂಬ ಆಲ್ಬಂ ಹಾಡು ಜತೆಗೆ ರಂಗಸ್ಥಳ ಸಿನಿಮಾದಲ್ಲಿಯೂ ನಟಿಸಿದ್ದಾರೆ.
(7 / 8)
ಅಷ್ಟೇ ಅಲ್ಲ ಜೀವಣ್ ಅನ್ನೋ ಕೊಂಕಣಿ ಸಿನಿಮಾದಲ್ಲಿಯೂ ಶಿಲ್ಪಾ ಕಾಮತ್ ನಟಿಸಿದ್ದಾರೆ. ಕರೊಪಾಡಿ ಅಕ್ಷಯ್ ನಾಯಕ್ ಈ ಸಿನಿಮಾ ನಿರ್ದೇಶನ ಮಾಡಿದ್ದಾರೆ.
ಇತರ ಗ್ಯಾಲರಿಗಳು