Entertainment News in Kannada Live December 21, 2024: Allu Arjun: ಸುದ್ದಿಗೋಷ್ಠಿಯಲ್ಲಿ ನನ್ನ ಚಾರಿತ್ಯಹರಣವಾಗುತ್ತಿದೆ ಎಂದ ಅಲ್ಲು ಅರ್ಜುನ್; ಯಾರನ್ನೂ ದೂರಲ್ಲ ಎಂದಿದ್ಯಾಕೆ?
ಇದು 'ಎಚ್‌ಟಿ ಕನ್ನಡ' ಜಾಲತಾಣದ ಸ್ವಯಂಚಾಲಿತ ಲೈವ್‌ಬ್ಲಾಗ್. ಕನ್ನಡ ಟಿವಿ ಧಾರಾವಾಹಿಗಳು, ಒಟಿಟಿ ಸರಣಿಗಳು, ಸ್ಯಾಂಡಲ್‌ವುಡ್, ಕಾಲಿವುಡ್, ಟಾಲಿವುಡ್, ಬಾಲಿವುಡ್, ಕನ್ನಡ ಕಿರುತೆರೆ, ಕನ್ನಡ ಸಿನಿಮಾ ಜಗತ್ತು, ಒಟಿಟಿ ತಾಣಗಳಿಗೆ ಸಂಬಂಧಿಸಿದ ಸಮಗ್ರ ಮಾಹಿತಿ ಮತ್ತು ತಾಜಾ ಸುದ್ದಿ ಇಲ್ಲಿ ಲಭ್ಯ. ವಿವಿಧ ಜನಪ್ರಿಯ ಸಿನಿಮಾಗಳ ವಿಮರ್ಶೆ ಇಲ್ಲಿದೆ.
Sat, 21 Dec 202404:39 PM IST
- ಅಲ್ಲು ಅರ್ಜುನ್ ಅವರು ಹೈದರಾಬಾದ್‌ನಲ್ಲಿ ‘ಪುಷ್ಪ 2’ ಸಿನಿಮಾ ನೋಡಲು ಬಂದ ತಾಯಿ ಮಗುವಿನ ಬಗ್ಗೆ ಕನಿಕರ ತೋರಿದ್ದಾರೆ. ಅಷ್ಟೇ ಅಲ್ಲ ಈ ವಿಚಾರವಾಗಿ ನನ್ನ ಚಾರಿತ್ಯಹರಣವಾಗುತ್ತಿದೆ ಎಂದಿದ್ದಾರೆ. ಈ ಬಗ್ಗೆ ಹೆಚ್ಚಿನ ವಿವರ ಇಲ್ಲಿದೆ.
Sat, 21 Dec 202403:05 PM IST
- Lakshmi Baramma Serial: ಲಕ್ಷ್ಮೀ ಬಾರಮ್ಮ ಧಾರಾವಾಹಿಯಲ್ಲಿ ವೈಷ್ಣವ್ ಮತ್ತು ಕೀರ್ತಿ ಕಾರ್‌ನಲ್ಲಿ ಲಾಂಗ್ ಡ್ರೈವ್ ಹೋಗಿದ್ದಾರೆ. ಆದರೆ ಅವರು ಹಾಗೆ ಲಾಂಗ್ ಡ್ರೈವ್ ಹೋಗಲು ಬೇರೆಯದ್ದೇ ಕಾರಣ ಇದೆ.
Sat, 21 Dec 202401:13 PM IST
- ಜೀಬ್ರಾ ಚಿತ್ರದ ಪ್ರಚಾರ ಕಾರ್ಯಕ್ರಮಗಳಲ್ಲೂ ಚಿತ್ರತಂಡ ಬಹಳ ಶ್ರಮಪಟ್ಟಿತ್ತು. ಮೆಗಾಸ್ಟಾರ್ ಚಿರಂಜೀವಿ ಕೂಡ ಚಿತ್ರದ ಪ್ರೀ ರಿಲೀಸ್ ಸಮಾರಂಭದಲ್ಲಿ ಭಾಗವಹಿಸಿದ್ದರು ಎಂಬುದು ಉಲ್ಲೇಖನೀಯ.
Sat, 21 Dec 202410:57 AM IST
- Bigg Boss Kannada 11: ಬಿಗ್ ಬಾಸ್‌ನ ಈ ವಾರದ ಕಿಚ್ಚನ ಪಂಚಾಯ್ತಿಯಲ್ಲಿ ಯಾವ ವಿಷಯ ಚರ್ಚೆ ಆಗಬಹುದು ಎಂದು ಕಾದು ಕುಳಿತ ಪ್ರೇಕ್ಷಕರಿಗೆ ಇದೀಗ ಉತ್ತರ ಸಿಕ್ಕಿದೆ. ಈ ವಾರ ಚೈತ್ರಾ ಕುಂದಾಪುರ ಅವರ ಉಸ್ತುವಾರಿ ಬಗ್ಗೆ ಚರ್ಚೆ ನಡೆಯಲಿದೆ.
Sat, 21 Dec 202409:12 AM IST
- Amruthdhaare Serial Actress: ಹದಿಮೂರು ವರ್ಷಗಳ ಹಿಂದೆ ಕನ್ನಡ ಕಿರುತೆರೆಗೆ ಕಾಲಿಟ್ಟ ನಟಿ ಸ್ವಾತಿ ರಾಯಲ್ ಅವರು ಅಮೃತವರ್ಷಿಣಿ ಧಾರಾವಾಹಿಯ ವರ್ಷಾ ಎಂದೇ ಖ್ಯಾತಿ ಪಡೆದಿದ್ದಾರೆ. ಸ್ವಾತಿ ರಾಯಲ್ ಅವರು ಇಂದು ಅಮೃತಧಾರೆ ಧಾರಾವಾಹಿಯಲ್ಲಿ ನಟಿಸುತ್ತಿದ್ದು, ಇಷ್ಟು ವರ್ಷದ ನಟನಾ ಜರ್ನಿ, ಅಮೃತವರ್ಷಿಣಿಯ ದಿನಗಳನ್ನು ಮೆಲುಕು ಹಾಕಿದ್ದಾರೆ.
Sat, 21 Dec 202408:11 AM IST
- Ramachari Serial: ರಾಮಾಚಾರಿ ಧಾರಾವಾಹಿಯಲ್ಲಿ ಚಾರು ಈಗ ಮತ್ತೆ ವೈಶಾಖಾಳನ್ನು ಮನೆಗೆ ತರಲು ನಾನೂ ಪ್ರಯತ್ನ ಮಾಡುತ್ತೇನೆ ಎಂದು ಹೇಳುತ್ತಿದ್ದಾಳೆ. ಇತ್ತ ರುಕ್ಕು ನಾಟಕ ಹೆಚ್ಚಾಗಿದೆ. ಜಾನಕಿ ಕೂಡ ಮಗನ ಬಗ್ಗೆ ಯೋಚನೆ ಮಾಡುತ್ತಿದ್ದಾಳೆ.
Sat, 21 Dec 202408:09 AM IST
- Year End 2024: ಈ ವರ್ಷ ಬಿಡುಗಡೆಯಾದ ಬಹಳಷ್ಟು ಚಿತ್ರಗಳಲ್ಲಿ ನಾಯಕಿಯರು ಆಟಕ್ಕುಂಟು ಲೆಕ್ಕಕ್ಕಿಲ್ಲ ಎಂಬಂತಿದ್ದರು. ಈ ನಡುವೆ ನಾಯಕಿಯರೆಂದರೆ ಬರೀ ಮರ ಸುತ್ತುವುದಕ್ಕಷ್ಟೇ ಸೀಮಿತ ಎಂಬ ಅಪವಾದದ ನಡುವೆಯೇ ಒಂದಿಷ್ಟು ನಟಿಯರು ಈ ವರ್ಷ ತಮ್ಮ ಅಭಿನಯ ಮತ್ತು ಚೆಲುವಿನಿಂದ ಗಮನಸೆಳೆದರು.
Sat, 21 Dec 202407:26 AM IST
- ಅಣ್ಣಯ್ಯ ಧಾರಾವಾಹಿಯಲ್ಲಿ ಪಾರು ಎದುರು ಅಣ್ಣಯ್ಯ ಪ್ರೀತಿಯ ಮಾತುಗಳನ್ನಾಡಿದ್ದಾನೆ. ಪಾರು ಕೂಡ ಅಣ್ಣಯ್ಯನ ಬಗ್ಗೆ ಕನಿಕರ ಹೊಂದಿದ್ದಾಳೆ. ರಾಣಿ ಆಡಿದ ಒಂದು ಮಾತು ಇನ್ನೂ ಅವಳ ಕಿವಿಯಲ್ಲಿ ಗುನುಗುತ್ತಿದೆ.
Sat, 21 Dec 202407:25 AM IST
- ಪುಟ್ಟಕ್ಕನ ಮಕ್ಕಳು ಧಾರಾವಾಹಿಯಲ್ಲಿ ವಿಲನ್ ಪಾತ್ರದಲ್ಲಿ ಮೆರೆಯುತ್ತಿರುವ ರಾಧಾಗೆ ಕಂಠಿಯನ್ನು ಮದುವೆ ಆಗುವ ಯೋಚನೆ ಬಿಟ್ಟು ಬೇರೆ ಏನೂ ಉದ್ದೇಶ ಇದ್ದಂತಿಲ್ಲ. ಈ ರಾಧಾ ಪಾತ್ರ ಮಾಡ್ತಿರುವ ನಟಿ ರಮ್ಯಾ ರಾಜು ಅವರಿಗೆ ರಿಯಲ್ ಲೈಫ್‌ನಲ್ಲಿ ಮದುವೆ ಅಂದ್ರೆ ಇಷ್ಟ ಇಲ್ಲ. ಯಾವ ಕಾರಣಕ್ಕೆ ಅವರು ಮದುವೆ ಬೇಡ ಎನ್ನುವ ನಿರ್ಧಾರಕ್ಕೆ ಬಂದಿದ್ದಾರೆ? ಹೀಗಿದೆ ಉತ್ತರ.
Sat, 21 Dec 202406:29 AM IST
Lakshmi Nivasa Serial: ಜೀ ಕನ್ನಡದಲ್ಲಿ ಪ್ರಸಾರವಾಗುತ್ತಿರುವ ಲಕ್ಷ್ಮೀ ನಿವಾಸ ಧಾರಾವಾಹಿ ಡಿಸೆಂಬರ್ 20ರ ಎಪಿಸೋಡ್‌ನಲ್ಲಿ ಪೇರೆಂಟ್ಸ್ ಮೀಟಿಂಗ್‌ಗೆ ಇಬ್ಬರೂ ಬರುವಂತೆ ಸಿದ್ದು ಹಾಗೂ ಭಾವನಾಗೆ ಖುಷಿ ಹೇಳುತ್ತಾಳೆ. ನಾನು ಬರುತ್ತೇನೆ ಎಂದು ಸಿದ್ದು ಒಪ್ಪಿಕೊಳ್ಳುತ್ತಾನೆ. ನಾನು ಅಪ್ಪ ಆಗಿಬಿಟ್ಟೆ ಎಂದು ಖುಷಿಯಿಂದ ಸ್ನೇಹಿತರ ಬಳಿ ಹೇಳಿಕೊಳ್ಳುತ್ತಾನೆ.
Sat, 21 Dec 202406:07 AM IST
ವಿಜಯ್ ಸೇತುಪತಿ ಕ್ರೈಮ್ ಥ್ರಿಲ್ಲರ್ ವಿಡುದಲೈ 2 ಸಿನಿಮಾ ಡಿಸೆಂಬರ್ 20 ರಂದು ಬಿಡುಗಡೆಯಾಗಿದೆ. ಸಾಕಷ್ಟು ಹೈಪ್ ಸೃಷ್ಟಿಸಿಕೊಂಡಿದ್ದ ಈ ಸಿನಿಮಾ, ಮೊದಲ ದಿನ ಬಾಕ್ಸ್ ಆಫೀಸ್‌ನಲ್ಲಿ ಹೇಳಿಕೊಳ್ಳುವಂಥ ಕಲೆಕ್ಷನ್ ಮಾಡಿಲ್ಲ.
Sat, 21 Dec 202404:46 AM IST
Bhagyalakshmi Serial: ಭಾಗ್ಯಲಕ್ಷ್ಮೀ ಧಾರಾವಾಹಿ ಡಿಸೆಂಬರ್ 20ರ ಎಪಿಸೋಡ್‌ನಲ್ಲಿ ಭಾಗ್ಯಾ ಕಂಡಿಷನ್ ಮಾಡಿದಂತೆ ತಾಂಡವ್ ಶ್ರೇಷ್ಠಾಳನ್ನು ಮನೆಯಿಂದ ಹೊರ ಹಾಕುತ್ತಾನೆ. ಅಪ್ಪ, ಅಮ್ಮನ ಕಾಲು ತೊಳೆದು ಮಕ್ಕಳ ಸಹಿತ ಎಲ್ಲರಿಗೂ ಆರತಿ ಮಾಡಿ ಮನೆ ಒಳಗೆ ಬರಮಾಡಿಕೊಳ್ಳುತ್ತಾನೆ. ಇದೆಲ್ಲವನ್ನೂ ನೋಡುವ ಶ್ರೇಷ್ಠಾ ಕೋಪದಿಂದ ಅಲ್ಲಿಂದ ವಾಪಸ್ ಹೊರಡುತ್ತಾಳೆ.
Sat, 21 Dec 202404:07 AM IST
Pushpa 2 OTT Release Date: ಕಲೆಕ್ಷನ್ ವಿಚಾರದಲ್ಲಿ ಹಲವು ದಾಖಲೆ ಬರೆದ ಪುಷ್ಪ 2 ದಿ ರೂಲ್ ಸಿನಿಮಾ ಇದೀಗ ಒಟಿಟಿ ವಿಚಾರವಾಗಿ ಸುದ್ದಿಯಲ್ಲಿದೆ. ಅಷ್ಟಕ್ಕೂ ಈ ಸಿನಿಮಾ ಯಾವಾಗ ಒಟಿಟಿ ಅಂಗಳ ಪ್ರವೇಶಿಸಲಿದೆ. ಅದಕ್ಕೆ ಸ್ವತಃ ಮೈತ್ರಿ ಮೂವಿ ಮೇಕರ್ಸ್ ಉತ್ತರ ನೀಡಿದೆ.
Sat, 21 Dec 202401:37 AM IST
- ಉಪೇಂದ್ರ ಅವರ ಯುಐ ಸಿನಿಮಾ ಡಿಸೆಂಬರ್ 20ರಂದು ವಿಶ್ವದಾದ್ಯಂತ ಬಿಡುಗಡೆ ಆಗಿದೆ. ಕಲೆಕ್ಷನ್ ವಿಚಾರದಲ್ಲಿಯೂ ಈ ಸಿನಿಮಾ ಹಿಂದೆ ಬಿದ್ದಿಲ್ಲ. ಕ್ರೇಜ್‌ಗೆ ತಕ್ಕಂತೆ ಕರ್ನಾಟಕದಲ್ಲಿ ಮುಂದಡಿ ಇರಿಸಿದೆ. ಪರಭಾಷೆಗಳಲ್ಲಿ ಇನ್ನು ಮುಂದೆ ಕುದುರಿಕೊಳ್ಳಬೇಕಿದೆ. ಹಾಗಾದರೆ ಉಪ್ಪಿಯ ಯುಐ ಸಿನಿಮಾ ಮೊದಲ ದಿನ ಗಳಿಸಿದ್ದೆಷ್ಟು?