ಕನ್ನಡ ಸುದ್ದಿ  /  ರಾಶಿ ಭವಿಷ್ಯ  /  Mercury Transit: ಮೇ 10 ರಂದು ಮೇಷ ರಾಶಿಗೆ ಬುಧನ ಪ್ರವೇಶ; ಈ 4 ರಾಶಿಗಳ ಜನರಿಗೆ ಎಲ್ಲಾ ಕ್ಷೇತ್ರಗಳನ್ನೂ ಗೆಲುವು

Mercury Transit: ಮೇ 10 ರಂದು ಮೇಷ ರಾಶಿಗೆ ಬುಧನ ಪ್ರವೇಶ; ಈ 4 ರಾಶಿಗಳ ಜನರಿಗೆ ಎಲ್ಲಾ ಕ್ಷೇತ್ರಗಳನ್ನೂ ಗೆಲುವು

Mercury Transit: ಮೇ 10 ರಂದು ಬುಧನು ಮೇಷ ರಾಶಿಗೆ ಪ್ರವೇಶಿಸಲಿದ್ದಾನೆ. ಇದರ ಪರಿಣಾಮವಾಗಿ 4 ರಾಶಿಚಕ್ರದ ಜನರಿಗೆ ಉತ್ತಮ ದಿನಗಳು ಆರಂಭವಾಗಲಿದೆ. ಬುಧನ ಮೇಷ ಸಂಕ್ರಮಣವು ಮೇ 30 ರವರೆಗೆ ಇರಲಿದೆ. ಈ ಸಮಯದಲ್ಲಿ ಈ ರಾಶಿಯವರ ಜೀವನದಲ್ಲಿ ಸಾಕಷ್ಟು ಬದಲಾಣೆಗಳಾಗಲಿವೆ.

ಮೇಷ ರಾಶಿಯಲ್ಲಿ ಬುಧನ ಸಂಚಾರ
ಮೇಷ ರಾಶಿಯಲ್ಲಿ ಬುಧನ ಸಂಚಾರ

ಮೇಷ ರಾಶಿಯಲ್ಲಿ ಬುಧ ಸಂಕ್ರಮಣ: ಮೇ ತಿಂಗಳ ಆರಂಭದಲ್ಲಿ ಬುಧನು ತನ್ನ ರಾಶಿಚಕ್ರವನ್ನು ಮೇಷ ರಾಶಿಯಲ್ಲಿ ಬದಲಾಯಿಸಲಿದ್ದಾನೆ. ಬುಧಗ್ರಹದ ಶುಭಸ್ಥಾನವು ರಾಶಿಚಕ್ರದವರ ವೃತ್ತಿಜೀವನದಲ್ಲಿ ಪ್ರಗತಿಯನ್ನು ತರುವುದು ಮಾತ್ರವಲ್ಲದೆ ಹಣಕ್ಕೆ ಸಂಬಂಧಿಸಿದ ಸಮಸ್ಯೆಗಳನ್ನು ಕೂಡಾ ಪರಿಹರಿಸುತ್ತದೆ.

ಬುಧನು ಶೀಘ್ರದಲ್ಲೇ ತನ್ನ ಚಲನೆಯನ್ನು ಬದಲಾಯಿಸಲಿದ್ದಾನೆ. ಇನ್ನು ಕೆಲವೇ ದಿನಗಳಲ್ಲಿ ಬುಧನು ಮೀನ ರಾಶಿಯಿಂದ ಮೇಷ ರಾಶಿಗೆ ತೆರಳುತ್ತಾನೆ. ಮೇ ತಿಂಗಳ ಆರಂಭದಲ್ಲಿಯೇ ಬುಧವು ಮೇಷ ರಾಶಿಯಲ್ಲಿ ಸಾಗಲಿದೆ. ಬುಧಗ್ರಹದ ಶುಭ ಸ್ಥಾನವು ದ್ವಾದಶ ರಾಶಿಗಳ ವೃತ್ತಿಯಲ್ಲಿ ಪ್ರಗತಿಯನ್ನು ತರಬಹುದು. ಜ್ಯೋತಿಷ್ಯಶಾಸ್ತ್ರದ ಲೆಕ್ಕಾಚಾರಗಳ ಪ್ರಕಾರ, ಬುಧ ಮೇ 10 ರಂದು ಮೇಷ ರಾಶಿಗೆ ಸಾಗಲಿದೆ. ಬುಧನ ಮೇಷ ಸಂಕ್ರಮಣವು ಮೇ 30 ರವರೆಗೆ ಇರುತ್ತದೆ, ಈ ಕಾರಣದಿಂದಾಗಿ ಕೆಲವು ರಾಶಿಚಕ್ರ ಚಿಹ್ನೆಗಳಿಗೆ ಉತ್ತಮ ದಿನಗಳು ಪ್ರಾರಂಭವಾಗಬಹುದು.

ಬುಧ ಸಂಕ್ರಮಣದಿಂದ ಯಾವ ರಾಶಿಚಕ್ರದವರ ಅದೃಷ್ಟ ಸುಧಾರಿಸಬಹುದು ಎಂದು ತಿಳಿಯೋಣ

ತುಲಾ ರಾಶಿ

ಮೇಷ ರಾಶಿಯಲ್ಲಿ ಬುಧದ ಸಂಚಾರವು ತುಲಾ ರಾಶಿಯವರಿಗೆ ಬಹಳ ಪ್ರಯೋಜನಕಾರಿ ಎನ್ನಲಾಗಿದೆ. ವ್ಯಾಪಾರ ಕ್ಷೇತ್ರದಲ್ಲಿ ನೀವು ವಿದೇಶಿ ವ್ಯವಹಾರವನ್ನು ಪಡೆಯಬಹುದು. ನಿಮ್ಮ ಜೀವನ ಸಂಗಾತಿಯೊಂದಿಗೆ ನಡೆಯುತ್ತಿರುವ ತೊಂದರೆಗಳು ಕ್ರಮೇಣ ಕೊನೆಗೊಳ್ಳುತ್ತವೆ. ಬುಧಗ್ರಹದ ಶುಭ ಪ್ರಭಾವದಿಂದಾಗಿ ನಿಮ್ಮ ಆರ್ಥಿಕ ಸ್ಥಿತಿಯೂ ಸುಧಾರಿಸುತ್ತದೆ. ಕುಟುಂಬದಲ್ಲಿ ಸಂತಸದ ವಾತಾವರಣ ಇರುತ್ತದೆ. ವೃತ್ತಿ ಜೀವನ ಕೂಡಾ ಸುಧಾರಿಸುತ್ತದೆ.

ಸಿಂಹ ರಾಶಿ

ಸಿಂಹ ರಾಶಿಯವರಿಗೆ ಮೇಷ ರಾಶಿಯಲ್ಲಿ ಬುಧ ಪ್ರವೇಶದಿಂದ ಲಾಭವಾಗಲಿದೆ. ಬಹಳ ದಿನಗಳಿಂದ ನೀವು ಸ್ಥಗಿತಗೊಂಡ ಕೆಲಸಗಳು ಆರಂಭವಾಗಿ ಯಶಸ್ವಿಯಾಗಿ ಪೂರ್ಣಗೊಳ್ಳುತ್ತದೆ. ವೃತ್ತಿಯಲ್ಲಿ ಬಡ್ತಿ ಪಡೆಯುವುದರೊಂದಿಗೆ ನೀವು ಅನೇಕ ಪ್ರಮುಖ ಜವಾಬ್ದಾರಿಗಳನ್ನು ವಹಿಸಿಕೊಳ್ಳಲಿದ್ದೀರಿ. ಅದನ್ನು ನೀವು ಉತ್ತಮವಾಗಿ ನಿರ್ವಹಿಸಿದರೆ ಮುಂದಿನ ದಿನಗಳಲ್ಲಿ ಇನ್ನಷ್ಟು ಯಶಸ್ಸು ಲಭಿಸಲಿದೆ. ಸಮೃದ್ಧಿ ಆಗಮಿಸಲಿದೆ. ಕೆಲಸದ ನಿಮಿತ್ತ ವಿದೇಶ ಪ್ರಯಾಣ ಮಾಡುವ ಸಂಭವವಿದೆ. ಮಕ್ಕಳ ಕಡೆಯಿಂದ ಒಳ್ಳೆಯ ಸುದ್ದಿಯೂ ಸಿಗಲಿದೆ.

ಮಿಥುನ ರಾಶಿ

ಮಿಥುನ ರಾಶಿಯವರಿಗೆ ಕೂಡಾ ಬುಧನ ಸಂಚಾರ ಅನೇಕ ರೀತಿಯ ಪ್ರಯೋಜನಗಳನ್ನು ನೀಡಲಿದೆ. ನಿಮ್ಮ ಆರ್ಥಿಕ ಸ್ಥಿತಿ ಉತ್ತಮವಾಗಿ ಸುಧಾರಿಸುತ್ತದೆ. ಖರ್ಚು ಹೆಚ್ಚಾದರೂ ಎಲ್ಲವನ್ನೂ ಸುಸೂತ್ರವಾಗಿ ನಿಭಾಯಿಸುವಿರಿ. ಈ ಅವಧಿಯಲ್ಲಿ, ಹೊಸ ಕೆಲಸವನ್ನು ಪ್ರಾರಂಭಿಸುವುದು ನಿಮಗೆ ಉತ್ತಮ ಫಲಿತಾಂಶ, ಲಾಭ ತಂದು ನೀಡುತ್ತದೆ. ನಿಮ್ಮ ದಾಂಪತ್ಯ ಜೀವನವೂ ಸುಖಮಯವಾಗಿರುತ್ತದೆ.

ಧನಸ್ಸು ರಾಶಿ

ಈ ರಾಶಿಯವರು ಇದುವರೆಗೂ ಅನುಭವಿಸುತ್ತಿದ್ದ ಸಮಸ್ಯೆಗಳಿಂದ ಹೊರ ಬರುತ್ತಾರೆ. ಕೆಲಸದಲ್ಲಿ ಪ್ರಗತಿ ಕಾಣಲಿದೆ. ಬಡ್ತಿ ದೊರೆತು ವೇತನ ಹೆಚ್ಚಾಗಲಿದೆ. ಸಂಗಾತಿಯೊಂದಿಗಿನ ಬಂಧ ಇನ್ನಷ್ಟು ಹೆಚ್ಚಾಗಲಿದೆ. ಕಂಕಣ ಭಾಗ್ಯ ಕೂಡಿ ಬರಲಿದೆ.

ಗಮನಿಸಿ: ಇದು ನಂಬಿಕೆ ಮತ್ತು ಶಾಸ್ತ್ರವನ್ನು ಆಧರಿಸಿದ ಬರಹ. ಇದರಲ್ಲಿರುವ ಎಲ್ಲ ಅಂಶಗಳನ್ನೂ "ಹಿಂದೂಸ್ತಾನ್ ಟೈಮ್ಸ್ ಕನ್ನಡ" ಪುಷ್ಟೀಕರಿಸುವುದಿಲ್ಲ. ನಿಮ್ಮ ಸ್ವಂತ ವಿವೇಚನೆ ಬಳಸಿ ನಿರ್ಧಾರಗಳನ್ನು ತೆಗೆದುಕೊಳ್ಳಿ.