ಕನ್ನಡ ಸುದ್ದಿ  /  ರಾಶಿ ಭವಿಷ್ಯ  /  Vastu Tips: ನವಿಲುಗರಿಯನ್ನು ಶೋಕೇಸ್‌ನಲ್ಲಿಟ್ಟಿದ್ದೀರಾ? ಒಮ್ಮೆ ಅದಕ್ಕೆ ಸಂಬಂಧಿಸಿದ ವಾಸ್ತು ತಿಳಿಯಿರಿ

Vastu Tips: ನವಿಲುಗರಿಯನ್ನು ಶೋಕೇಸ್‌ನಲ್ಲಿಟ್ಟಿದ್ದೀರಾ? ಒಮ್ಮೆ ಅದಕ್ಕೆ ಸಂಬಂಧಿಸಿದ ವಾಸ್ತು ತಿಳಿಯಿರಿ

Vastu Tips: ನವಿಲಗರಿಯನ್ನು ಮನೆಯಲ್ಲಿಟ್ಟುಕೊಳ್ಳುವುದು ಶುಭ. ಅದು ಮನೆಯಲ್ಲಿ ಸಂಪತ್ತು, ಸುಖ, ಸಮೃದ್ಧಿಯನ್ನು ತರುತ್ತದೆ. ಆದರೆ ನವಿಲುಗರಿ ವಿಚಾರದಲ್ಲಿ ಕೆಲವೊಂದು ವಾಸ್ತುಗಳನ್ನು ಅನುಸರಿಸುವುದು ಮನೆಗೆ ಬಹಳ ಒಳ್ಳೆಯದು. ಇಲ್ಲವಾದರೆ ಸಮಸ್ಯೆ ಉಂಟಾಗಬಹುದು.

ನವಿಲುಗರಿಗೆ ಸಂಬಂಧಿಸಿದ ವಾಸ್ತು
ನವಿಲುಗರಿಗೆ ಸಂಬಂಧಿಸಿದ ವಾಸ್ತು (PC: Pixaby)

ವಾಸ್ತು ಸಲಹೆ: ಹೊರಗೆ ಸಿಕ್ಕಿದ್ದೆಂದೋ, ಅಂಗಡಿಯಲ್ಲಿ ಕಂಡಿಂತೆಂದೋ ಎಷ್ಟೋ ಜನರು ಸುಂದರವಾದ ನವಿಲುಗರಿಯನ್ನು ಮನೆಗೆ ತಂದು ಇಡುತ್ತಾರೆ. ಶ್ರೀಕೃಷ್ಣನ ಕಿರೀಟದಲ್ಲಿ ಕಂಗೊಳಿಸಿದ ನವಿಲುಗರಿಗೆ ಕೃಷ್ಣನಷ್ಟೇ ಪ್ರಾಮುಖ್ಯತೆ ಇದೆ. ನವಿಲುಗರಿಯನ್ನು ಮನೆಯಲ್ಲಿಟ್ಟುಕೊಂಡರೆ ಬಹಳಷ್ಟು ಸಮಸ್ಯೆಗಳು ನಿವಾರಣೆ ಆಗುತ್ತದೆ ಎನ್ನಲಾಗಿದೆ.

ಬಾಲ್ಯದಲ್ಲಿ ಅನೇಕರು ನವಿಲು ಗರಿಗಳನ್ನು ನೋಟ್‌ಬುಕ್‌ಗಳಲ್ಲಿ ಇಡುತ್ತಿದ್ದೆವು. ಈ ರೀತಿ ಪುಸ್ತಕಗಳಲ್ಲಿ ನವಿಲು ಗರಿಗಳನ್ನು ಹಾಕಿಟ್ಟರೆ ಸರಸ್ವತಿ ದೇವಿಯ ಆಶೀರ್ವಾದ ಸಿಗುತ್ತದೆ ಎಂಬ ನಂಬಿಕೆ ಇದೆ. ಮನೆಯಲ್ಲಿ ನವಿಲುಗರಿ ಇಟ್ಟುಕೊಂಡರೆ ಕೂಡಾ ಒಳ್ಳೆಯದು, ಅದು ನಮಗೆ ಆರ್ಥಿಕ ಲಾಭ ತರಲಿದೆ ಎಂಬ ನಂಬಿಕೆ ಇದೆ. ಆದರೆ ವಾಸ್ತುಪ್ರಕಾರ ಮನೆಯಲ್ಲಿ ನವಿಲು ಗರಿಗಳನ್ನು ಸರಿಯಾದ ದಿಕ್ಕಿನಲ್ಲಿ ಇಡುವುದು ಬಹಳ ಮುಖ್ಯ. ಆಗ ಮಾತ್ರ ನೀವು ಇದರ ಪ್ರಯೋಜನ ಪಡೆಯುವಿರಿ. ವಾಸ್ತು ಶಾಸ್ತ್ರದ ಪ್ರಕಾರ ಮನೆಯಲ್ಲಿ ನವಿಲುಗರಿ ಇಡುವಾಗ ಯಾವೆಲ್ಲಾ ವಾಸ್ತು ನಿಯಮಗಳನ್ನು ಪಾಲಿಸಬೇಕು ನೋಡೋಣ.

ಮನೆಯ ನೈಋತ್ಯ ದಿಕ್ಕಿನಲ್ಲಿ ನವಿಲು ಗರಿ ಇಡಬೇಕು

ವಾಸ್ತು ಶಾಸ್ತ್ರದ ಪ್ರಕಾರ, ಮನೆಯಲ್ಲಿ ನವಿಲು ಗರಿಗಳನ್ನು ಇಡಲು ಉತ್ತಮ ಸ್ಥಳವೆಂದರೆ ನೈಋತ್ಯ ಮತ್ತು ಪೂರ್ವ ದಿಕ್ಕು. ನೀವು ಯಾವ ದಿಕ್ಕಿನಲ್ಲಿ ಮಲಗಿದರೂ ನವಿಲು ಗರಿಯನ್ನು ನೈಋತ್ಯ ಪೂರ್ವ ದಿಕ್ಕಿನಲ್ಲಿ ಮಾತ್ರ ಇಡಬೇಕು. ಈ ದಿಕ್ಕಿಗೆ ನವಿಲು ಗರಿ ಇಟ್ಟರೆ ಪತಿ ಪತ್ನಿಯರ ಬಾಂಧವ್ಯ ಚೆನ್ನಾಗಿರುತ್ತದೆ.

ನವಿಲು ಗರಿಗಳನ್ನು ಕಾಲುಗಳ ಬಳಿ ಇಡಬೇಡಿ

ಯಾವುದೇ ಕಾರಣಕ್ಕೂ ನವಿಲುಗರಿಗಳನ್ನು ನಿಮ್ಮ ಕಾಲಿನ ಕೆಳಗೆ ಇಟ್ಟುಕೊಂಡು ಮಲಗಬೇಡಿ. ಹೀಗೆ ಮಾಡುವುದರಿಂದ ನಿಮ್ಮ ಆರೋಗ್ಯ ಕೆಡುತ್ತದೆ. ಇದು ನಿಮ್ಮ ಮನೆಯಲ್ಲಿ ಕಲಹಕ್ಕೆ ಕಾರಣವಾಗುತ್ತದೆ. ಅದರ ಬದಲಿಗೆ ನಿಮ್ಮ ದಿಂಬಿನ ಕೆಳಗೆ ನವಿಲು ಗರಿಗಳನ್ನು ಇಟ್ಟುಕೊಂಡು ಮಲಗಬಹುದು. ಆದರೆ ಪ್ರತಿದಿನ ದಿಂಬಿನ ಕೆಳಗೆ ಶುಚಿಗೊಳಿಸಿದ ನಂತರವೇ ನವಿಲು ಗರಿಗಳನ್ನು ಇಡಿ.

ಅಲಂಕಾರಿಕ ವಸ್ತುಗಳೊಂದಿಗೆ ನವಿಲುಗರಿಗಳನ್ನು ಇಡಬೇಡಿ

ಅನೇಕ ಜನರು ನವಿಲು ಗರಿಗಳನ್ನು ಮನೆಯಲ್ಲಿ ಅಲಂಕಾರವಾಗಿ ಇಡುತ್ತಾರೆ. ಆದರೆ ನೀವು ಈ ರೀತಿ ಇಟ್ಟರೆ ವಾಸ್ತು ಶಾಸ್ತ್ರದ ಪ್ರಕಾರ ನವಿಲುಗರಿಗಳಲ್ಲಿರುವ ಧನಾತ್ಮಕ ಶಕ್ತಿ ನಾಶವಾಗುತ್ತದೆ. ಆದ್ದರಿಂದ ನವಿಲು ಗರಿಯನ್ನು ವಿಶೇಷ ಸ್ಥಳದಲ್ಲಿ ಇಡಬೇಕು. ನವಿಲು ಗರಿಗಳನ್ನು ಆಟಿಕೆಗಳು, ಅಲಂಕಾರಿಕ ವಸ್ತುಗಳು ಅಥವಾ ಮುರಿದ ವಸ್ತುಗಳಿಂದ ದೂರವಿಡಬೇಕು.

ನವಿಲು ಗರಿಗಳ ಮೇಲೆ ಇತರ ಬಣ್ಣಗಳನ್ನು ಬಳಸಬೇಡಿ

ಅನೇಕ ಜನರು ತಮ್ಮ ಕಲೆ ಮತ್ತು ಸೃಜನಶೀಲತೆಯನ್ನು ತೋರ್ಪಡಿಸಲು ನವಿಲು ಗರಿಗಳಿಗೆ ಬೇರೆ ಬಣ್ಣಗಳನ್ನು ಬಳಸುತ್ತಾರೆ. ಆದರೆ ಹೀಗೆ ಮಾಡುವುದರಿಂದ ನವಿಲು ಗರಿಗಳು ಕೇವಲ ಅಲಂಕಾರಿಕ ವಸ್ತುಗಳಾಗುತ್ತವೆ. ಅದರ ಸಕಾರಾತ್ಮಕ ಶಕ್ತಿ ಕಳೆದುಹೋಗುತ್ತದೆ. ನೀವು ನವಿಲು ಗರಿಯನ್ನು ಅದರ ನೈಸರ್ಗಿಕ ರೂಪದಲ್ಲಿ ಬಿಡಬೇಕು. ಅದರ ಮೇಲೆ ಎಂದಿಗೂ ಇತರ ಬಣ್ಣಗಳನ್ನು ಬಳಸಬೇಡಿ.

ನವಿಲು ಗರಿಗಳನ್ನು ಯಾರಿಗೂ ಉಡುಗೊರೆಯಾಗಿ ಕೊಡಬೇಡಿ

ಅನೇಕ ಜನರು ತಮ್ಮ ಆತ್ಮೀಯರಿಗೆ ನವಿಲು ಗರಿಗಳನ್ನು ಉಡುಗೊರೆಯಾಗಿ ನೀಡುತ್ತಾರೆ. ಆದರೆ ಹಾಗೆ ಮಾಡುವುದನ್ನು ತಪ್ಪಿಸಿ. ಅದೃಷ್ಟ ಮತ್ತು ಸಕಾರಾತ್ಮಕ ಶಕ್ತಿಗೆ ಸಂಬಂಧಿಸಿದ ಯಾವುದೇ ಉಡುಗೊರೆ ಕೊಡುವುದನ್ನು ನಿಲ್ಲಿಸಿ. ನೀವು ನಿಮ್ಮ ಮನೆಯಲ್ಲಿ ಇಟ್ಟುಕೊಂಡಿರುವ ನವಿಲುಗರಿಯನ್ನು ಬೇರೆಯವರಿಗೆ ಉಡುಗೊರೆಯಾಗಿ ನೀಡಿದರೆ, ಅದು ನಿಮ್ಮ ಮನೆಯಿಂದ ಧನಾತ್ಮಕ ಶಕ್ತಿಯನ್ನು ಹೊರ ಹಾಕುತ್ತದೆ. ನಿಮಗೆ ಸಮಸ್ಯೆಗಳು ಹೆಚ್ಚಾಗುತ್ತದೆ.

ನವಿಲುಗಳಿಗೆ ತೊಂದರೆ ಮಾಡಬೇಡಿ

ಅನೇಕ ಜನರು ನವಿಲುಗರಿಯನ್ನು ಪಡೆಯಲು ನವಿಲಿಗೆ ತೊಂದರೆ ಮಾಡುತ್ತಾರೆ. ಆದರೆ ರೀತಿ ಮಾಡುವುದು ಅಶುಭ. ನವಿಲು ನರ್ತಿಸಿದಾಗ ಅಥವಾ ಹಾರಿ ಬೇರೆಡೆ ಕುಳಿತಾಗ ಅದರ ಗರಿ ತಾನಾಗಿಯೇ ಕೆಳಗಿಳಿಯುತ್ತದೆ. ಈ ರೀತಿ ನೀವು ನವಿಲು ಗರಿಗಳನ್ನು ಸಂಗ್ರಹಿಸಬಹುದು. ಅಥವಾ ಅಂಗಡಿಯಲ್ಲಿ ಡುಡ್ಡುಕೊಟ್ಟು ತರಬಹುದು. ವಾಸ್ತು ಶಾಸ್ತ್ರದ ಪ್ರಕಾರ ನವಿಲು ಗರಿ ಎಲ್ಲೋ ಬಿದ್ದಿರುವುದನ್ನು ಕಂಡರೆ ಅದು ನಿಮ್ಮ ಅದೃಷ್ಟದ ಸೂಚಕವೂ ಹೌದು.

ಗಮನಿಸಿ: ಇದು ನಂಬಿಕೆ ಮತ್ತು ಶಾಸ್ತ್ರವನ್ನು ಆಧರಿಸಿದ ಬರಹ. ಇದರಲ್ಲಿರುವ ಎಲ್ಲ ಅಂಶಗಳನ್ನೂ "ಹಿಂದೂಸ್ತಾನ್ ಟೈಮ್ಸ್ ಕನ್ನಡ" ಪುಷ್ಟೀಕರಿಸುವುದಿಲ್ಲ. ನಿಮ್ಮ ಸ್ವಂತ ವಿವೇಚನೆ ಬಳಸಿ ನಿರ್ಧಾರಗಳನ್ನು ತೆಗೆದುಕೊಳ್ಳಿ.