ಸಂಖ್ಯಾಶಾಸ್ತ್ರ; ಈ ರಾಡಿಕ್ಸ್‌ ನಂಬರ್‌ನವರು ಇಂದು ಶುಭ ಸುದ್ದಿ ಕೇಳಲಿದ್ದಾರೆ, ನಿಮ್ಮ ಖಜಾನೆ ತುಂಬಲಿದೆ-numerology daily astrology based on radix number date of birth astrology in kannada rsm ,ರಾಶಿ ಭವಿಷ್ಯ ಸುದ್ದಿ
ಕನ್ನಡ ಸುದ್ದಿ  /  ರಾಶಿ ಭವಿಷ್ಯ  /  ಸಂಖ್ಯಾಶಾಸ್ತ್ರ; ಈ ರಾಡಿಕ್ಸ್‌ ನಂಬರ್‌ನವರು ಇಂದು ಶುಭ ಸುದ್ದಿ ಕೇಳಲಿದ್ದಾರೆ, ನಿಮ್ಮ ಖಜಾನೆ ತುಂಬಲಿದೆ

ಸಂಖ್ಯಾಶಾಸ್ತ್ರ; ಈ ರಾಡಿಕ್ಸ್‌ ನಂಬರ್‌ನವರು ಇಂದು ಶುಭ ಸುದ್ದಿ ಕೇಳಲಿದ್ದಾರೆ, ನಿಮ್ಮ ಖಜಾನೆ ತುಂಬಲಿದೆ

ಜ್ಯೋತಿಷ್ಯ ಶಾಸ್ತ್ರದಂತೆ, ಸಂಖ್ಯಾಶಾಸ್ತ್ರ ಕೂಡಾ ವ್ಯಕ್ತಿಯ ಭವಿಷ್ಯ, ಸ್ವಭಾವ ಮತ್ತು ವ್ಯಕ್ತಿತ್ವವನ್ನು ಬಹಿರಂಗಪಡಿಸುತ್ತದೆ. ಪ್ರತಿ ಹೆಸರಿನ ಪ್ರಕಾರ ರಾಶಿಚಕ್ರ ಚಿಹ್ನೆ ಇರುವಂತೆಯೇ, ಸಂಖ್ಯಾಶಾಸ್ತ್ರದಲ್ಲಿ ಪ್ರತಿ ಸಂಖ್ಯೆಗೆ ಅನುಗುಣವಾಗಿ ಸಂಖ್ಯೆಗಳಿವೆ. ಸಂಖ್ಯಾಶಾಸ್ತ್ರದ ಪ್ರಕಾರ ಈ ದಿನ ನಿಮ್ಮ ದಿನ ಹೇಗಿರಲಿದೆ ನೋಡೋಣ.

ಸಂಖ್ಯಾಶಾಸ್ತ್ರ; ಈ ರಾಡಿಕ್ಸ್‌ ನಂಬರ್‌ನವರು ಇಂದು ಶುಭ ಸುದ್ದಿ ಕೇಳಲಿದ್ದಾರೆ, ನಿಮ್ಮ ಖಜಾನೆ ತುಂಬಲಿದೆ
ಸಂಖ್ಯಾಶಾಸ್ತ್ರ; ಈ ರಾಡಿಕ್ಸ್‌ ನಂಬರ್‌ನವರು ಇಂದು ಶುಭ ಸುದ್ದಿ ಕೇಳಲಿದ್ದಾರೆ, ನಿಮ್ಮ ಖಜಾನೆ ತುಂಬಲಿದೆ

ಸಂಖ್ಯಾಶಾಸ್ತ್ರದ ಪ್ರಕಾರ, ನಿಮ್ಮ ಸಂಖ್ಯೆಯನ್ನುಕಂಡು ಹಿಡಿಯಲು, ನಿಮ್ಮ ಜನ್ಮ ದಿನಾಂಕ, ತಿಂಗಳು ಮತ್ತು ವರ್ಷವನ್ನು ಯುನಿಟ್ ಅಂಕೆಗೆ ಸೇರಿಸಿದರೆ ಮತ್ತು ಬರುವ ಸಂಖ್ಯೆ ನಿಮ್ಮ ಅದೃಷ್ಟದ ಸಂಖ್ಯೆಯಾಗಿದೆ. ಉದಾಹರಣೆಗೆ ಯಾವುದೇ ತಿಂಗಳ 5, 14 ಮತ್ತು 23 ರಂದು ಜನಿಸಿದ ಜನರು ರಾಡಿಕ್ಸ್ ಸಂಖ್ಯೆ 5 ಅನ್ನು ಹೊಂದಿರುತ್ತಾರೆ. ಜುಲೈ 13 ರಂದು ನಿಮ್ಮ ದಿನ ಹೇಗಿರುತ್ತದೆ? ಯಾವ ರಾಡಿಕ್ಸ್‌ ನಂಬರ್‌ನವರಿಗೆ ಏನು ಫಲ ನೋಡಿ

ರಾಡಿಕ್ಸ್ 1

ಇಂದು ರಾಡಿಕ್ಸ್ 1 ಹೊಂದಿರುವ ಜನರು ತಮ್ಮ ಆಹಾರ ಪದ್ಧತಿಯನ್ನು ನಿಯಂತ್ರಿಸಬೇಕು. ಸಂಜೆ ವೇಳೆಗೆ ನಿಮ್ಮ ಬ್ಯಾಂಕ್ ಬ್ಯಾಲೆನ್ಸ್ ಹೆಚ್ಚಾಗುವ ಸಾಧ್ಯತೆ ಇದೆ. ಕೆಲಸದಲ್ಲಿ ಅಥವಾ ಶೈಕ್ಷಣಿಕ ಕ್ಷೇತ್ರದಲ್ಲಿ ನೀವು ಅಂದುಕೊಂಡಿದ್ದನ್ನು ಸಾಧಿಸಲು ಎಲ್ಲಾ ಪ್ರಯತ್ನ ಅಗತ್ಯ.

ರಾಡಿಕ್ಸ್ 2

ಇಂದು, ರಾಡಿಕ್ಸ್ 2 ಜನರ ಕುಟುಂಬದಲ್ಲಿ ಅಶಾಂತಿ ನೆಲೆಸಿರಬಹುದು. ಕುಟುಂಬದ ಸದಸ್ಯರೊಂದಿಗೆ ಮನಸ್ತಾಪ ಉಂಟಾಗಬಹುದು. ವೃತ್ತಿಗೆ ಸಂಬಂಧಿಸಿದಂತೆ ಕೆಲವು ಪ್ರಮುಖ ನಿರ್ಧಾರಗಳನ್ನು ತೆಗೆದುಕೊಳ್ಳಲು ಇದು ಉತ್ತಮ ಸಮಯ. ಹಣಕಾಸಿನ ವಿಚಾರಕ್ಕೆ ನೀವು ಯೋಚಿಸುವ ಅಗತ್ಯವಿಲ್ಲ. ಏಕೆಂದರೆ ನಿಮಗೆ ವಿವಿಧ ಮೂಲಗಳಿಂದ ಹಣ ಹರಿದು ಬರಲಿದೆ.

ರಾಡಿಕ್ಸ್ 3

ರಾಡಿಕ್ಸ್‌ 3 ಜನರಿಗೆ ಇಂದು ಉತ್ತಮ ದಿನ. ಆಸ್ತಿ ವಿಚಾರಕ್ಕೆ ಸಂಬಂಧಿಸಿದಂತೆ ಇಂದು ಸಕಾರಾತ್ಮಕ ಬೆಳವಣಿಗೆ ಉಂಟಾಗಲಿದೆ. ನೀವು ಕಾಯುತ್ತಿರುವ ಅವಕಾಶ ಶೀಘ್ರದಲ್ಲೇ ಬರಲಿದೆ, ಆದ್ದರಿಂದ ಅದರ ಲಾಭ ಪಡೆಯಲು ಸಿದ್ಧರಾಗಿ. ವೃತ್ತಿಗೆ ಸಂಬಂಧಿಸಿದಂತೆ ನೀವು ಪ್ರಮುಖ ವಿಚಾರಗಳನ್ನು ಕೈಗೊಳ್ಳಲಿದ್ದೀರಿ. ಇದು ನಿಮಗೆ ಭವಿಷ್ಯದಲ್ಲಿ ಲಾಭ ತರಲಿದೆ.

ರಾಡಿಕ್ಸ್ 4

ಹಣಕಾಸಿನ ವಿಚಾರಕ್ಕೆ ಸಂಬಂಧಿಸಿದಂತೆ ಬಹಳ ಪ್ರಗತಿ ಹೊಂದಲಿದ್ದೀರಿ. ಆರೋಗ್ಯ ಸುಧಾರಿಸಲಿದೆ. ನೀವು ಶೀಘ್ರದಲ್ಲೇ ವೃತ್ತಿಪರ ರಂಗದಲ್ಲಿ ಅವಕಾಶವನ್ನು ಪಡೆಯಬಹುದು. ನಿಮ್ಮ ಭವಿಷ್ಯಕ್ಕೆ ಸಂಬಂಧಿಸಿದಂತೆ ಪ್ರಮುಖ ನಿರ್ಧಾರವೊಂದನ್ನು ಕೈಗೊಳ್ಳುವಿರಿ.

ರಾಡಿಕ್ಸ್ 5

ನಿಮ್ಮ ವೃತ್ತಿಪರ ಜೀವನವನ್ನು ನಿಮಗೆ ಶೀಘ್ರದಲ್ಲೇ ಹೊಸ ಜೀವನ ತಂದುಕೊಂಡಲಿದೆ. ಅಸಾಧ್ಯವಾದುದನ್ನು ಸಾಧಿಸುವ ಮೂಲಕ ನಿಮ್ಮ ಕುಟುಂಬವನ್ನು ಹೆಮ್ಮೆ ಪಡಿಸಬಹುದು. ಹಣಕಾಸಿನ ಪರಿಸ್ಥಿತಿ ಉತ್ತಮವಾಗಿರಲಿದೆ. ಸಂಗಾತಿಯೊಂದಿಗೆ ದೀರ್ಘ ಪ್ರಯಾಣ ಕೈಗೊಳ್ಳುವಿರಿ. ಆಸ್ತಿ ಖರೀದಿಗೆ ಇದು ಉತ್ತಮ ದಿನ.

ರಾಡಿಕ್ಸ್ 6

ಇಂದು ಕೆಲವರು ಶಿಕ್ಷಣ ಕ್ಷೇತ್ರದಲ್ಲಿ ಉತ್ತಮ ಸಾಧನೆ ಮಾಡಬಹುದು. ನಿಮ್ಮ ಆತ್ಮೀಯರು ಇಂದು ನಿಮಗೆ ಆಶ್ಚರ್ಯ ಉಂಟು ಮಾಡುತ್ತಾರೆ. ಇಡೀ ದಿನ ಸಂತೋಷದಿಂದ ಇರುವಿರಿ. ಆರ್ಥಿಕ ಲಾಭದ ಸಾಧ್ಯತೆಗಳಿವೆ. ಹೂಡಿಕೆ ಮಾಡಲು ಸಾಕಷ್ಟು ಹಣ ಇರುತ್ತದೆ. ನೀವು ಕೇಳುವ ಮೊದಲು ಮನೆಯವರಿಗೆ ಸಹಾಯ ಮಾಡಲಿದ್ದೀರಿ. ಇದು ಕುಟುಂಬದ ಸದಸ್ಯರ ನಡುವೆ ಉತ್ತಮ ಬಾಂಧವ್ಯ ಉಂಟು ಮಾಡಲಿದೆ. ಸ್ನೇಹಿತರನ್ನು ಭೇಟಿ ಮಾಡಲಿದ್ದೀರಿ.

ರಾಡಿಕ್ಸ್ 7

ಯಶಸ್ಸಿಗಾಗಿ ಎಲ್ಲವನ್ನೂ ಮೊದಲಿನಿಂದ ಆರಂಭಿಸುವಿರಿ. ಆತ್ಮೀಯರೊಂದಿಗಿನ ನಿಮ್ಮ ಸಂಬಂಧ ಸುಧಾರಿಸಲಿದೆ. ನಿಮ್ಮ ಪ್ರೀತಿಪಾತ್ರರೊಂದಿಗೆ ನೀವು ಪ್ರವಾಸಕ್ಕೆ ತೆರಳಬಹುದು. ಆಸ್ತಿ ವಿಚಾರ ನಿಮ್ಮ ಪರ ಇರಲಿದೆ. ದೊಡ್ಡ ಹೂಡಿಕೆಗಳಿಗೂ ಮುನ್ನ ನೀವು ತಜ್ಞರ ಸಲಹೆ ಪಡೆಯುವುದು ಅವಶ್ಯಕ.

ರಾಡಿಕ್ಸ್ 8

ಇಂದು ನಿಮ್ಮ ವೃತ್ತಿ ಜೀವನದಲ್ಲಿ ಯಶಸ್ಸು ಪಡೆಯಲಿದ್ದೀರಿ. ಕುಟುಂಬದವರೊಂದಿಗೆ ನಿಮ್ಮ ಸಂಬಂಧ ಸುಧಾರಿಸಲಿದೆ. ಆರ್ಥಿಕ ಲಾಭ ಉಂಟಾಗಬಹುದು. ನಿಮ್ಮ ಆರೋಗ್ಯ ಚೆನ್ನಾಗಿರುತ್ತದೆ. ಈಗ ಮಾಡಿಕೊಂಡ ಒಪ್ಪಂದ ಮುಂದಿನ ದಿನಗಳಲ್ಲಿ ಉತ್ತಮ ಫಲ ನೀಡಲಿದೆ. ಕಚೇರಿ ಕೆಲಸಕ್ಕಾಗಿ ಪ್ರವಾಸ ಹೋಗಲಿದ್ದೀರಿ.

ರಾಡಿಕ್ಸ್ 9

ವಿವಿಧ ಮೂಲಗಳಿಂದ ಹಣ ಹರಿದು ಬರಲಿದೆ. ಆಸ್ತಿ ವಿಚಾರ ಕಾನೂನಿನ ಮೂಲಕ ಇತ್ಯರ್ಥವಾಗಲಿದೆ. ನಿಮ್ಮ ಪರಿಸ್ಥಿತಿ ಸುಧಾರಿಸಲಿದೆ. ವೃತ್ತಿ ಕ್ಷೇತ್ರದಲ್ಲಿ ನಿಮಗೆ ಹೊಸ ಅವಕಾಶಗಳು ಉಂಟಾಗಲಿವೆ.

ಗಮನಿಸಿ: ಇದು ನಂಬಿಕೆ ಮತ್ತು ಶಾಸ್ತ್ರವನ್ನು ಆಧರಿಸಿದ ಬರಹ. ಇದರಲ್ಲಿರುವ ಎಲ್ಲ ಅಂಶಗಳನ್ನೂ "ಹಿಂದೂಸ್ತಾನ್ ಟೈಮ್ಸ್ ಕನ್ನಡ" ಪುಷ್ಟೀಕರಿಸುವುದಿಲ್ಲ. ನಿಮ್ಮ ಸ್ವಂತ ವಿವೇಚನೆ ಬಳಸಿ ನಿರ್ಧಾರಗಳನ್ನು ತೆಗೆದುಕೊಳ್ಳಿ.

mysore-dasara_Entry_Point
ದೇವಾಲಯಗಳು, ಅಧ್ಯಾತ್ಮ, ದಿನ ಭವಿಷ್ಯ, ಗ್ರಹಗಳ ಸಂಚಾರ, ವಾಸ್ತು ಶಾಸ್ತ್ರ, ಪೂಜಾ ವಿಧಾನ, ವ್ರತ ವಿಧಾನ, ಹಬ್ಬ, ಸಂಸ್ಕೃತಿ, ಭಗವದ್ಗೀತೆ ಸೇರಿದಂತೆ ಜ್ಯೋತಿಷ್ಯಕ್ಕೆ ಸಂಬಂಧಿಸಿದ ಸಮಗ್ರ ಮಾಹಿತಿಗಾಗಿ 'ಹಿಂದೂಸ್ತಾನ್ ಟೈಮ್ಸ್ ಕನ್ನಡ' ರಾಶಿ ಭವಿಷ್ಯ ವಿಭಾಗ ನೋಡಿ.