ನಿಮ್ಮ ಮಕ್ಕಳು ಧೈರ್ಯವಂತರು, ಸಂಸ್ಕಾರವಂತರಾಗಬೇಕಾ; ಗಾಯತ್ರಿ ಮಂತ್ರ ಸೇರಿದಂತೆ ಈ ಶಕ್ತಿಶಾಲಿ ಶ್ಲೋಕಗಳನ್ನು ಅವರಿಗೆ ಕಲಿಸಿ
ಮಕ್ಕಳಿಗೆ ಚಿಕ್ಕ ವಯಸ್ಸಿನಿಂದಲೇ ಸಂಸ್ಕಾರ ಕಲಿಸಿದರೆ ಅವರು ಬೆಳೆದು ದೊಡ್ಡವರಾದ ನಂತರ ಸತ್ಪ್ರಜೆಗಳಾಗುತ್ತಾರೆ. ಆದ್ದರಿಂದ ಅವರಿಗೆ ಚಿಕ್ಕ ವಯಸ್ಸಿನಿಂದಲೇ ದೇವರ ಬಗ್ಗೆ ಭಕ್ತಿ, ಶ್ಲೋಕಗಳನ್ನು ಕಲಿಸಬೇಕು. ಮಕ್ಕಳಿಗೆ ಕಲಿಸಬಹುದಾದ ಸುಲಭವಾದ ಶ್ಲೋಕಗಳು ಹೀಗಿವೆ.
ಬೆಳೆಯುವ ಸಿರಿ ಮೊಳಕೆಯಲ್ಲಿ ಎಂಬ ಮಾತಿನಂತೆ ಮಕ್ಕಳಿಗೆ ಬಾಲ್ಯದಿಂದಲೇ ಉತ್ತಮ ಸಂಸ್ಕಾರ ಕಲಿಸಬೇಕು. ಮಕ್ಕಳಿಗೆ ಬಾಲ್ಯದಿಂದಲೇ ದೇವರಲ್ಲಿ ಭಯ ಭಕ್ತಿ ಇರುವಂತೆ ಪೋಷಕರು ನೋಡಿಕೊಳ್ಳಬೇಕು. ಆಗ ಮಾತ್ರ ನೀವು ದೇವರೊಂದಿಗೆ ಸಂಪರ್ಕ ಹೊಂದಬಹುದು. ಶ್ಲೋಕಗಳನ್ನು ಕಲಿಸುವುದರಿಂದ ಮಕ್ಕಳಿಗೆ ದೇವರು, ಹಿರಿಯರ ಮೇಲಿನ ಭಕ್ತಿ ಹೆಚ್ಚಾಗುತ್ತದೆ. ಜೀವನದ ಸವಾಲುಗಳನ್ನು ಎದುರಿಸಲು ನಿಯಮಿತವಾಗಿ ಶ್ಲೋಕಗಳು ಮತ್ತು ಮಂತ್ರಗಳನ್ನು ಓದುವುದು ತುಂಬಾ ಒಳ್ಳೆಯದು.
ನಿಮ್ಮ ಚಿಕ್ಕ ಮಕ್ಕಳಿಗೆ ಈ ಚಿಕ್ಕ ಶ್ಲೋಕಗಳನ್ನು ಕಲಿಸುವುದು ಅವರಿಗೆ ಬಲವಾದ ಮಾನಸಿಕ ಆರೋಗ್ಯವನ್ನು ನೀಡುತ್ತದೆ. ಶಕ್ತಿಶಾಲಿಯಾಗುತ್ತಾರೆ. ಅವರು ಧೈರ್ಯ ತುಂಬಿದವರಾಗಿರುತ್ತಾರೆ.
ಗಾಯತ್ರಿ ಮಂತ್ರ
ಓಂ ಭೂರ್ ಭುವಃ ಸ್ವಾಹಾ, ತತ್ಸವಿತುರ್ ವರೇಣ್ಯಂ, ಭರ್ಗೋ ದೇವಸ್ಯ ಧೀಮಹಿ, ಧಿಯೋ ಯೋ ನಃ ಪ್ರಚೋದಯಾತ್ ॥
ಇದು ಅತ್ಯಂತ ಶಕ್ತಿಶಾಲಿ ಗಾಯತ್ರಿ ಮಂತ್ರ. ಇದು ಪ್ರಬಲ ಸೂರ್ಯ ಭಗವಂತನ ಮಂತ್ರ. ಇದು ಬೌದ್ಧಿಕ ಮತ್ತು ಆಧ್ಯಾತ್ಮಿಕ ಬೆಳವಣಿಗೆಯನ್ನು ಉತ್ತೇಜಿಸುತ್ತದೆ. ಓಂಕಾರದಿಂದ ಪ್ರಾರಂಭವಾಗುವ ಈ ಸ್ತೋತ್ರವು ಅವರ ಸುತ್ತಲಿನ ವಾತಾವರಣದಲ್ಲಿ ಸಕಾರಾತ್ಮಕ ಶಕ್ತಿಯನ್ನು ತುಂಬುತ್ತದೆ. ದಿನವಿಡೀ ಚಟುವಟಿಕೆಯಿಂದ ಇರಲು ಸಹಾಯ ಮಾಡುತ್ತದೆ.
ಗುರು ಮಂತ್ರ
ಗುರು ಬ್ರಹ್ಮ, ಗುರು ವಿಷ್ಣು, ಗುರು ದೇವೋ ಮಹೇಶ್ವರಃ, ಗುರು ಸಾಕ್ಷಾತ್ ಪರಬ್ರಹ್ಮ, ತಸ್ಮೈ ಶ್ರೀ ಗುರ್ವೇ ನಮಃ
ಪಾಲಕರು ಮಕ್ಕಳಿಗೆ ಬಾಲ್ಯದಿಂದಲೇ ಹಿರಿಯರು ಮತ್ತು ಶಿಕ್ಷಕರನ್ನು ಗೌರವಿಸುವುದನ್ನು ಕಲಿಸಬೇಕು. ಈ ಗುರು ಮಂತ್ರವು ಮಕ್ಕಳಿಗೆ ಶಿಕ್ಷಕರು ಮತ್ತು ಮಾರ್ಗದರ್ಶಕರು ಎಷ್ಟು ಮುಖ್ಯ ಎಂಬುದನ್ನು ತಿಳಿಸುತ್ತದೆ. ಮಕ್ಕಳಿಗೆ ಶಿಕ್ಷಣ ನೀಡುವಲ್ಲಿ ಪಾಲಕರ ನಂತರ ಶಿಕ್ಷಕರ ಪಾತ್ರ ಪ್ರಮುಖವಾಗಿದೆ. ಅವರು ಕೂಡಾ ದೇವರ ಸಮ ಎಂಬುದನ್ನು ತಿಳಿಸುತ್ತದೆ.
ಮಹಾ ಮೃತ್ಯುಂಜಯ ಮಂತ್ರ
ಓಂ ತ್ರ್ಯಂಬಕಂ ವಜಯಾಮಹೇ ಸುಗಂಧಿಂ ಪುಷ್ಟಿ ವರ್ಧನಂ, ಉರ್ವಾರುಕಮಿವ ಬಂಧನಾ, ಮೃತ್ಯೋ ಮುಕ್ಷೀಯ ಮಾಮೃತಾತ್
ಸರ್ವಶಕ್ತ ಮಹಾ ಮೃತ್ಯುಂಜಯ ಮಂತ್ರವು ಶಿವನ ಪ್ರಾರ್ಥನೆಯಾಗಿದೆ. ಆರೋಗ್ಯ, ದೀರ್ಘಾಯುಷ್ಯ, ಸಾವು ಮತ್ತು ಸಾವಿನ ಭಯದಿಂದ ಮುಕ್ತಿ ಮತ್ತು ಪರಮಾತ್ಮನ ಆಶೀರ್ವಾದವನ್ನು ಪಡೆಯಲು ಈ ಮಂತ್ರವನ್ನು ಪಠಿಸಲಾಗುತ್ತದೆ. ಭಯ ಪಡದಂತೆ ಧೈರ್ಯ ನೀಡುತ್ತದೆ. ನಕಾರಾತ್ಮಕತೆಯನ್ನು ತೆಗೆದುಹಾಕುತ್ತದೆ.
ಸರಸ್ವತಿ ಮಂತ್ರ
ಯಾ ದೇವಿ ಸರ್ವಭೂತೇಷು, ಮಾತೃರೂಪೇಣ ಸಂಸ್ಥಿತಾ । ನಮಸ್ತಸ್ಯೈ ನಮಸ್ತಸ್ಯೈ ನಮಸ್ತಸ್ಯೈ ನಮೋ ನಮಃ
ಇದು ವಿದ್ಯೆಗೆ ಅಧಿದೇವತೆ ಸರಸ್ವತಿ ದೇವಿಗೆ ಸಮರ್ಪಿತವಾದ ಮಂತ್ರವಾಗಿದೆ. ಈ ಮಂತ್ರವು ಪ್ರತಿಯೊಬ್ಬ ವಿದ್ಯಾರ್ಥಿ ಜೀವನದಲ್ಲಿ ಉತ್ತಮ ಸಾಧನೆ ಮಾಡಲು ಸಹಾಯ ಮಾಡುತ್ತದೆ. ಸರಸ್ವತಿ ಮಂತ್ರವು ಮಕ್ಕಳಲ್ಲಿ ಬುದ್ಧಿವಂತಿಕೆಯನ್ನು ಹೆಚ್ಚಿಸುತ್ತದೆ. ಈ ಮಂತ್ರವನ್ನು ಪಠಿಸುವುದರಿಂದ ಮಕ್ಕಳು ಸರಸ್ವತಿ ದೇವಿಯ ಅನುಗ್ರಹವನ್ನು ಪಡೆಯುತ್ತಾರೆ.
ಮಹಾಲಕ್ಷ್ಮಿ ಮಂತ್ರ
ನಮಸ್ತೇಸ್ತು ಮಹಾಮಾಯೆ, ಶ್ರೀಪೀಠ ಸುರ ಪೂಜಿತೇ, ಶಂಖ ಚಕ್ರ ಗದಾ ಹಸ್ತೇ, ಮಹಾಲಕ್ಷ್ಮಿ ನಮೋಸ್ತುತೇ
ಈ ಮಹಾಲಕ್ಷ್ಮಿ ಮಂತ್ರವು ಸಂಪತ್ತು ಮತ್ತು ಯಶಸ್ಸನ್ನು ನೀಡುತ್ತದೆ. ಮಕ್ಕಳು ತಮ್ಮ ಮುಂದಿನ ಪ್ರಯತ್ನಗಳಲ್ಲಿ ಯಶಸ್ವಿಯಾಗಲು ದೇವಿಯ ಜೊತೆಗೆ ಆಳವಾದ ಸಂಪರ್ಕವನ್ನು ಬೆಳೆಸಿಕೊಳ್ಳಲು ಇದು ಸಹಾಯ ಮಾಡುತ್ತದೆ. ಈ ಶ್ಲೋಕವು ಮಕ್ಕಳಿಗೆ ಆರ್ಥಿಕ ಸಮೃದ್ಧಿಯನ್ನು ತರುತ್ತದೆ.
ಗಣೇಶ ಮಂತ್ರ
ವಕ್ರತುಂಡ ಮಹಾಕಾಯ, ಸೂರ್ಯಕೋಟಿ ಸಂಪ್ರಭ, ನಿರ್ವಿಘ್ನಂ ಕುರು ಮೇ ದೇವ, ಸರ್ವ ಕಾರ್ಯೇಷು ಸರ್ವದಾ
ತಮ್ಮ ಎಲ್ಲಾ ಕಾರ್ಯಗಳಲ್ಲಿ ಸಹಾಯ ಮಾಡಲು ಮತ್ತು ಅಡೆತಡೆಗಳನ್ನು ನಿವಾರಿಸಲು ಗಣೇಶನ ಈ ಮಂತ್ರ ಬಹಳ ಸಹಕಾರಿ. ಕೆಲಸದಲ್ಲಿ ಅಡೆತಡೆಗಳನ್ನು ನಿವಾರಿಸಲು ಈ ಮಂತ್ರವು ಉಪಯುಕ್ತವಾಗಿದೆ.
ಹರೇ ಕೃಷ್ಣ ಮಂತ್ರ
ಹರೇ ಕೃಷ್ಣ, ಹರೇ ಕೃಷ್ಣ, ಕೃಷ್ಣ ಕೃಷ್ಣ, ಹರೇ ಹರೇ, ಹರೇ ರಾಮ, ಹರೇ ರಾಮ, ರಾಮ ರಾಮ, ಹರೇ ಹರೇ
ದಿನದ ಯಾವುದೇ ಸಮಯದಲ್ಲಿ ಪಠಿಸಬಹುದಾದ ಸರಳ ಮಂತ್ರ ಇದಾಗಿದೆ. ಇದು ಬಹಳ ಶಕ್ತಿಶಾಲಿ ಮಂತ್ರವಾಗಿದೆ. ವಿಷ್ಣು, ಕೃಷ್ಣ ಮತ್ತು ರಾಮನಿಗೆ ಸಂಬಂಧಿಸಿದ ದೈವಿಕ ಶಕ್ತಿಗಳನ್ನು ಆಹ್ವಾನಿಸುತ್ತದೆ. ಮಕ್ಕಳ ಆಧ್ಯಾತ್ಮಿಕ ಬೆಳವಣಿಗೆಗೆ ಸಹಾಯ ಮಾಡುತ್ತದೆ.
ರುದ್ರ ಮಂತ್ರ
ಓಂ ನಮೋ ಭಗವತೇ ರುದ್ರಯೇ
ಓಂ ಪಠಣದಿಂದ ಪ್ರಾರಂಭವಾಗುವ ಈ ಶಕ್ತಿಯುತ ಮಂತ್ರವು ಶಿವನಿಗೆ ಸಮರ್ಪಿತವಾಗಿದೆ. ರುದ್ರನ ಆಶೀರ್ವಾದ ಪಡೆಯಲು ಮಕ್ಕಳು ಜಪ ಮಾಡಬೇಕು. ನಿರ್ಣಯ, ಅನುಗ್ರಹ ಮತ್ತು ಶಕ್ತಿಯನ್ನು ಹೊಂದಲು ಸಹಾಯ ಮಾಡುತ್ತದೆ. ಇದು ಮಕ್ಕಳ ಸುತ್ತಲೂ ಅಡಗಿರುವ ದುಷ್ಟ ಶಕ್ತಿಗಳಿಂದ ಅವರನ್ನು ರಕ್ಷಿಸುತ್ತದೆ.
ಗಮನಿಸಿ: ಇದು ನಂಬಿಕೆ ಮತ್ತು ಶಾಸ್ತ್ರವನ್ನು ಆಧರಿಸಿದ ಬರಹ. ಇದರಲ್ಲಿರುವ ಎಲ್ಲ ಅಂಶಗಳನ್ನೂ "ಹಿಂದೂಸ್ತಾನ್ ಟೈಮ್ಸ್ ಕನ್ನಡ" ಪುಷ್ಟೀಕರಿಸುವುದಿಲ್ಲ. ನಿಮ್ಮ ಸ್ವಂತ ವಿವೇಚನೆ ಬಳಸಿ ನಿರ್ಧಾರಗಳನ್ನು ತೆಗೆದುಕೊಳ್ಳಿ.