ಭಗವದ್ಗೀತೆ: ಮನುಷ್ಯನೊಂದು ಬಗೆದರೆ ಭಗವಂತ ಮತ್ತೊಂದು ರೀತಿಯಲ್ಲಿ ತೀರ್ಮಾನಿಸುತ್ತಾನೆ; ಗೀತೆಯ ಸಾರಾಂಶ ತಿಳಿಯಿರಿ
ಕನ್ನಡ ಸುದ್ದಿ  /  ರಾಶಿ ಭವಿಷ್ಯ  /  ಭಗವದ್ಗೀತೆ: ಮನುಷ್ಯನೊಂದು ಬಗೆದರೆ ಭಗವಂತ ಮತ್ತೊಂದು ರೀತಿಯಲ್ಲಿ ತೀರ್ಮಾನಿಸುತ್ತಾನೆ; ಗೀತೆಯ ಸಾರಾಂಶ ತಿಳಿಯಿರಿ

ಭಗವದ್ಗೀತೆ: ಮನುಷ್ಯನೊಂದು ಬಗೆದರೆ ಭಗವಂತ ಮತ್ತೊಂದು ರೀತಿಯಲ್ಲಿ ತೀರ್ಮಾನಿಸುತ್ತಾನೆ; ಗೀತೆಯ ಸಾರಾಂಶ ತಿಳಿಯಿರಿ

ಕುರುಕ್ಷೇತ್ರದ ಯುದ್ಧದಲ್ಲಿ ಕೃಷ್ಣನು ಅರ್ಜುನನಿಗೆ ನೀಡಿದ ಧರ್ಮೋಪದೇಶದ ಸಾರವೇ ಭಗವದ್ಗೀತೆಯಾಗಿದೆ. ಸತ್ಯದ ಮಾರ್ಗವನ್ನು ಅನುಸರಿಸುವುದು ಗೀತೆಯ ಅರ್ಥವಾಗಿದೆ.

ಶ್ರೀಕೃಷ್ಣನು ಅರ್ಜುನನಿಗೆ ನೀಡಿದ ಧರ್ಮೋಪದೇಶದ ಸಾರವೇ ಭಗವದ್ಗೀತೆಯಾಗಿದೆ. ಎದುರಾಳಿ ಬಣದಿಂದ ತನ್ನ ಬಂಧುಗಳೊಂದಿಗೆ ಹೋರಾಡಲು ಅರ್ಜುನ ನಿರಾಕರಿಸಿದಾಗ ಶ್ರೀಕೃಷ್ಣ ಪಾಂಡವರಲ್ಲಿ ಒಬ್ಬನಾದ ಅರ್ಜುನನಿಗೆ ಈ ರೀತಿಯ ಉಪದೇಶ ನೀಡುತ್ತಾನೆ.
ಶ್ರೀಕೃಷ್ಣನು ಅರ್ಜುನನಿಗೆ ನೀಡಿದ ಧರ್ಮೋಪದೇಶದ ಸಾರವೇ ಭಗವದ್ಗೀತೆಯಾಗಿದೆ. ಎದುರಾಳಿ ಬಣದಿಂದ ತನ್ನ ಬಂಧುಗಳೊಂದಿಗೆ ಹೋರಾಡಲು ಅರ್ಜುನ ನಿರಾಕರಿಸಿದಾಗ ಶ್ರೀಕೃಷ್ಣ ಪಾಂಡವರಲ್ಲಿ ಒಬ್ಬನಾದ ಅರ್ಜುನನಿಗೆ ಈ ರೀತಿಯ ಉಪದೇಶ ನೀಡುತ್ತಾನೆ.

ನಾದತ್ತೇ ಕಸ್ಯಚಿತ್ ಪಾಪಂ ನ ಚೈವ ಸುಕೃತಂ ವಿಭುಃ |

ಅಜ್ಞಾನೇನಾವೃತಂ ಜ್ಞಾನಂ ತೇನ ಮುಹ್ಯನ್ತಿ ಜನ್ತವಃ ||15||

ಭಗವಂತನು ಯಾರ ಪಾಪವನ್ನಾಗಲೀ ಪುಣ್ಯವನ್ನಾಗಲೀ ಸ್ವೀಕರಿಸವುದಿಲ್ಲ. ದೇಹಸ್ಥ ಜೀವಿಗಳ ನಿಜವಾದ ಜ್ಞಾನವನ್ನು ಅಜ್ಞಾನವು ಮುಚ್ಚಿರುವುದಿರಂದ ಅವರು ದಿಗ್ಭ್ರಮೆಗೊಳ್ಳುತ್ತಾರೆ.

ಸಂಸ್ಕೃತದ ವಿಭು ಎನ್ನುವ ಪದಕ್ಕೆ ಭಗವಂತ ಎಂದು ಅರ್ಥ. ಅವನದ ಅಮಿತವಾದ ಜ್ಞಾನ, ಸಂಪತ್ತು, ಶಕ್ತಿ, ಕೀರ್ತಿ, ಸೌಂದರ್ಯ ಮತ್ತು ತ್ಯಾಗ. ಅವನು ಸದಾ ಆತ್ಮತೃಪ್ತ. ಪಾಪಕರ್ಮಗಳು ಅಥವಾ ಪುಣ್ಯಕರ್ಮಗಳು ಅವನನ್ನು ಕದಡುವುದಿಲ್ಲ. ಅವನು ಯಾವ ಜೀವಿಗೂ ಒಂದು ವಿಶಿಷ್ಟವಾದ ಸನ್ನಿವೇಶವನ್ನು ಸೃಷ್ಟಿಸುವುದಿಲ್ಲ. ಆದರೆ ಜೀವಿಯು ಅಜ್ಞಾನದಿಂದ ದಿಗ್ಭ್ರಮೆಗೊಳ್ಳುತ್ತಾನೆ ಮತ್ತು ಬದುಕಿನಲ್ಲಿ ಯಾವುದೋ ಒಂದು ಸ್ಥಿತಿಯಲ್ಲಿರುೃಲು ಬಯಸುತ್ತಾನೆ. ಇದರಿಂದ ಅವನ ಕ್ರಿಯೆ-ಪ್ರತಿಕ್ರಿಯೆಗಳ ಸರಪಳಿ ಪ್ರಾರಂಭವಾಗುತ್ತದೆ. ಜೀವಿಯು ಶ್ರೇಷ್ಠ ಸ್ವಭಾವದವನಾದದ್ದರಿಂದ ಅವನಲ್ಲಿ ಜ್ಞಾನವು ತುಂಬಿದೆ. ಆದರೂ ತನ್ನ ಮಿತವಾದ ಶಕ್ತಿಯ ದೆಸೆಯಿಂದ ಅಜ್ಞಾನದ ಪ್ರಭಾವಕ್ಕೆ ಒಳಗಾಗುತ್ತಾನೆ.

ಭಗವಂತನು ಸರ್ವಶಕ್ತನು. ಜೀವಿಯು ಸರ್ವಶಕ್ತನಲ್ಲ. ಭಗವಂತನು ವಿಭು ಅಥವಾ ಸರ್ವಜ್ಞ. ಜೀವಿಯು ಅಣು. ಅವನು ಜೀವಂತ ಆತ್ಮನಾದದ್ದರಿಂದ ಸ್ವತಂತ್ರ ಸಂಕಲ್ಪದಿಂದ ಏನನ್ನಾದರೂ ಅಪೇಕ್ಷಿಸುವ ಶಕ್ತಿ ಇದೆ. ಇಂತಹ ಅಪೇಕ್ಷಯನ್ನು ಸರ್ವಶಕ್ತನಾದ ಭಗವಂತನು ಮಾತ್ರ ಪೂರೈಸಬಲ್ಲ. ಆದುದರಿಂದ ಜೀವಿಯು ತನ್ನ ಬಯಕೆಗಳಿಂದ ದಿಗ್ಭ್ರಮೆಗೊಂಡಾಗ ಭಗವಂತನು ಆ ಬಯಕೆಗಳನ್ನು ಪೂರೈಸಿಕೊಳ್ಳಲು ಅವನಿಗೆ ಅವಕಾಶನ್ನು ನೀಡುತ್ತಾನೆ. ಆದರೆ ಜೀವಿಯು ಬಯಸಿದ ಆ ನಿರ್ದಿಷ್ಟ ಸನ್ನಿವೇಶದ ಕ್ರಿಯೆ ಮತ್ತು ಪ್ರತಿಕ್ರಿಯೆಗಳಿಗೆ ಭಗವಂತನು ಹೊಣೆಯಲ್ಲ. ಆದುದದರಿಂದ ದಿಗ್ಭ್ರಮೆಯ ಸ್ಥಿತಿಯಲ್ಲಿರುವಾಗ ದೇಹಸ್ಥ ಆತ್ಮನು ತನ್ನನ್ನು ಸಂದರ್ಭಾನುಸಾರವಾಗಿ ಒದಗಿದ ಐಹಿಕದೇಹದೊಂದಿಗೆ ಗುರುತಿಸಿಕೊಳ್ಳುತ್ತಾನೆ. ಇದರಿಂದ ಬದುಕಿನ ತಾತ್ಕಾಲಿಕ ಸುಖದುಃಖಗಳಿಗೆ ಒಳಗಾಗುತ್ತಾನೆ.

ಪರಮಾತ್ಮನಾಗಿ ಭಗವಂತನು ಜೀವಿಯ ನಿರಂತರ ಸಖ. ಹೂವಿನ ಹತ್ತಿರ ಇದ್ದಾಗ ಹೂವಿನ ಪರಿಮಗಳನ್ನು ಗ್ರಹಿಸುವುದು ಸಾಧ್ಯವಾಗುವಂತೆ ಭಗವಂತನು ಆತ್ಮದ ಆಸೆಗಳನ್ನು ಅರ್ಥಮಾಡಿಕೊಳ್ಳಬಲ್ಲ. ಆಸೆಯು ಜೀವಿಯ ಬದ್ಧತೆಯ ಒಂದು ಸೂಕ್ಷ್ಮರೂಪ. ಜೀವಿಯ ಯೋಗ್ಯತೆಗೆ ಅನುಗುಣವಾಗಿ ಭಗವಂತನು ಅವನ ಆಸೆಯನ್ನು ನೆರವೇರಿಸಿಕೊಡುತ್ತಾನೆ. ಮನುಷ್ಯನು ಒಂದು ರೀತಿಯಲ್ಲಿ ಬಗೆದರೆ ಭಗವಂತನು ಮತ್ತೊಂದು ರೀತಿಯಲ್ಲಿ ತೀರ್ಮಾನ ಮಾಡುತ್ತಾನೆ. ಆದುದರಿಂದ ವ್ಯಕ್ತಿಯು ತನ್ನ ಬಯಕೆಗಳನ್ನು ಪೂರೈಸಿಕೊಳ್ಳುಷ್ಟು ಶಕ್ತನಲ್ಲ. ಭಗವಂತನಾದರೋ ಎಲ್ಲ ಆಸೆಗಳನ್ನೂ ಪೂರೈಸಬಲ್ಲ. ಭಗವಂತನು ಎಲ್ಲರ ವಿಷಯದಲ್ಲಿಯೂ ತಟಸ್ಥನಾಗಿರುವುದರಿಂದ ಅತ್ಯಲ್ಪ ಸ್ವಾತಂತ್ರ್ಯವುಳ್ಳ ಜೀವಿಗಳ ಆಸೆಗಳಲ್ಲಿ ಕೈಹಾಕುವುುದಿಲ್ಲ. ಆದರೆ ಯಾವಾಗ ಮನುಷ್ಯನು ಕೃಷ್ಣನನ್ನು ಬಯಸುತ್ತಾನೋ ಆಗ ಭಗವಂತನು ಅವನನ್ನು ವಿಶೇಷ ರೀತಿಯಲ್ಲಿ ನೋಡಿಕೊಳ್ಳುತ್ತಾನೆ.

ಕೃಷ್ಣನನ್ನು ಪಡೆದು ನಿರಂತರವಾಗಿ ಸುಖವಾಗಿರುವ ರೀತಿಯಲ್ಲಿ ಬಯಸುವಂತೆ ಆ ಮನುಷ್ಯನನ್ನು ಪ್ರೋತ್ಸಾಹಿಸುತ್ತಾನೆ. ಆದ್ದರಿಂದ ವೇದಮಂತ್ರಗಳು ಏಷ ಉ ಹಿ ಏವ ಸಾಧು ಕರ್ಮ ಕಾರಯತಿ ತಂ ಯಮ್ ಏಭ್ಯೋ ಲೋಕೇಭ್ಯ ಉನ್ನಿನೀಷತೇ. ಏಷ ಉ ಏವಾಸಾಧು ಕರ್ಮ ಕಾರಯತಿ ಯಮ್ ಅದೋ ನಿನೀಷತೇ. ಜೀವಿಯು ಮೇಲೇರಲು ಸಾಧ್ಯವಾಗುವಂತೆ ಭಗವಂತನು ಅವನನ್ನು ಪುಣ್ಯಕಾರ್ಯಗಳಲ್ಲಿ ತೊಡಿಸುತ್ತಾನೆ. ಅವನು ನರಕಕ್ಕೆ ಹೋಗುವಂತೆ ಭಗವಂತನು ಅವನನ್ನು ಪಾಪ ಕಾರ್ಯಗಳಲ್ಲಿ ತೊಡಗಿಸುತ್ತಾನೆ ಎಂದು ಸ್ಪಷ್ಟವಾಗಿ ಹೇಳುತ್ತವೆ (ಕೌಷೀತಕೀ ಉಪನಿಷತ್ತು 3.8)

ಅಜ್ಞೋ ಜನ್ತುರನೀಶೋಯಮ್ ಆತ್ಮನಃ ಸುಖದುಃಖಯೋಃ |

ಈಶ್ವರಪ್ರೇರಿತೋ ಗಚ್ಛೇತೋ ಸ್ವರ್ಗಂ ವಾಶ್ವಭ್ರಮೇವ ಚ ||

ತನ್ನ ಸುಖದುಃಖಗಳಲ್ಲಿ ಜೀವಿಯು ಸಂಪೂರ್ಣವಾಗಿ ಅಸ್ವತಂತ್ರನು. ಗಾಳಿಯಿಂದ ಅಟ್ಟಲ್ಪಡುವ ಮೋಡದಂತೆ ಅವನು ಪ್ರಭುವಿನ ಪರಮ ಸಂಕಲ್ಪಕ್ಕನುಸಾರವಾಗಿ ಸ್ವರ್ಗಕ್ಕೆ ಅಥವಾ ನರಕಕ್ಕೆ ಹೋಗಬಹುದು. ಆದುದರಿಂದ ಕೃಷ್ಣಪ್ರಜ್ಞೆಯನ್ನು ತಪ್ಪಿಸಿಕೊಳ್ಳುವ ಅನಾದಿಕಾಲದ ಅಪೇಕ್ಷೆಯಿಂದ ದೇಹಸ್ಥ ಆತ್ಮನು ದಿಗ್ಭ್ರಮೆಯನ್ನು ಉಂಟುಮಾಡಿಕೊಳ್ಳುತ್ತಾನೆ. ಪರಿಣಾಮವಾಗಿ ಆತನು ನಿತ್ಯಾನಂದ ಜ್ಞಾನಸ್ವರೂಪನಾದರೂ ತನ್ನ ಅಸ್ತಿತ್ವದ ಸಣ್ಣತನದಿಂದ ಭಗವಂತನ ಸೇವಕನಾದ ತನ್ನ ನಿಜಸ್ವರೂಪವನ್ನು ಮರೆಯುತ್ತಾನೆ. ಇದರಿಂದ ಅಜ್ಞಾನದಲ್ಲಿ ಸಿಕ್ಕಿಕೊಳ್ಳುತ್ತಾನೆ. ಅಜ್ಞಾನದ ಪ್ರಭಾವದಿಂದ ಜೀವಿಯು ತನ್ನ ಬದ್ಧ ಅಸ್ತಿತ್ವಕ್ಕೆ ಭಗವಂತನೇ ಹೊಣೆ ಎಂದು ಸಾಧಿಸಲು ಪ್ರಯತ್ನಿಸುತ್ತಾನೆ. ವೇದಾಂತಸೂತ್ರಗಳು (2.1.34) ಇದನ್ನೇ ದೃಢಪಡಿಸುತ್ತವೆ. ವೈಷಮ್ಯನೈರ್ಘೃ ನ ಸಾಪೇಕ್ಷತ್ವಾತ್ ತಥಾ ಹಿ ದರ್ಶಯತಿ ಭಗವಂತನು ಹಾಗೆ ತೋರಿದರೂ ಯಾರನ್ನೂ ದ್ವೇಷಿಸುವುದಿಲ್ಲ ಮತ್ತು ಯಾರನ್ನೂ ಇಷ್ಟಪಡುವುದಿಲ್ಲ. (This copy first appeared in Hindustan Times Kannada website. To read more like this please logon to kannada.hindustantime.com).

Whats_app_banner

ವಿಭಾಗ

ದೇವಾಲಯಗಳು, ಅಧ್ಯಾತ್ಮ, ದಿನ ಭವಿಷ್ಯ, ಗ್ರಹಗಳ ಸಂಚಾರ, ವಾಸ್ತು ಶಾಸ್ತ್ರ, ಪೂಜಾ ವಿಧಾನ, ವ್ರತ ವಿಧಾನ, ಹಬ್ಬ, ಸಂಸ್ಕೃತಿ, ಭಗವದ್ಗೀತೆ ಸೇರಿದಂತೆ ಜ್ಯೋತಿಷ್ಯಕ್ಕೆ ಸಂಬಂಧಿಸಿದ ಸಮಗ್ರ ಮಾಹಿತಿಗಾಗಿ 'ಹಿಂದೂಸ್ತಾನ್ ಟೈಮ್ಸ್ ಕನ್ನಡ' ರಾಶಿ ಭವಿಷ್ಯ ವಿಭಾಗ ನೋಡಿ.