ಭಗವದ್ಗೀತೆ: ಭಗವಂತನಲ್ಲಿ ಸಂಪೂರ್ಣವಾಗಿ ತೊಡಗಿಸಿಕೊಳ್ಳುವ ವ್ಯಕ್ತಿ ಯಾವುದಕ್ಕೂ ಆಸೆ ಪಡುವುದಿಲ್ಲ; ಗೀತೆಯ ಅರ್ಥ ಹೀಗಿದೆ
ಕನ್ನಡ ಸುದ್ದಿ  /  ರಾಶಿ ಭವಿಷ್ಯ  /  ಭಗವದ್ಗೀತೆ: ಭಗವಂತನಲ್ಲಿ ಸಂಪೂರ್ಣವಾಗಿ ತೊಡಗಿಸಿಕೊಳ್ಳುವ ವ್ಯಕ್ತಿ ಯಾವುದಕ್ಕೂ ಆಸೆ ಪಡುವುದಿಲ್ಲ; ಗೀತೆಯ ಅರ್ಥ ಹೀಗಿದೆ

ಭಗವದ್ಗೀತೆ: ಭಗವಂತನಲ್ಲಿ ಸಂಪೂರ್ಣವಾಗಿ ತೊಡಗಿಸಿಕೊಳ್ಳುವ ವ್ಯಕ್ತಿ ಯಾವುದಕ್ಕೂ ಆಸೆ ಪಡುವುದಿಲ್ಲ; ಗೀತೆಯ ಅರ್ಥ ಹೀಗಿದೆ

ಕುರುಕ್ಷೇತ್ರದ ಯುದ್ಧದಲ್ಲಿ ಕೃಷ್ಣನು ಅರ್ಜುನನಿಗೆ ನೀಡಿದ ಧರ್ಮೋಪದೇಶದ ಸಾರವೇ ಭಗವದ್ಗೀತೆಯಾಗಿದೆ. ಭಗವಂತನಲ್ಲಿರುವ ವ್ಯಕ್ತಿ ಯಾವುದಕ್ಕೂ ಆಸೆ ಪಡುವುದಿಲ್ಲ ಎಂಬುದರ ಅರ್ಥ ತಿಳಿಯಿರಿ.

ಶ್ರೀಕೃಷ್ಣನು ಅರ್ಜುನನಿಗೆ ನೀಡಿದ ಧರ್ಮೋಪದೇಶದ ಸಾರವೇ ಭಗವದ್ಗೀತೆಯಾಗಿದೆ. ಎದುರಾಳಿ ಬಣದಿಂದ ತನ್ನ ಬಂಧುಗಳೊಂದಿಗೆ ಹೋರಾಡಲು ಅರ್ಜುನ ನಿರಾಕರಿಸಿದಾಗ ಶ್ರೀಕೃಷ್ಣ ಪಾಂಡವರಲ್ಲಿ ಒಬ್ಬನಾದ ಅರ್ಜುನನಿಗೆ ಈ ರೀತಿಯ ಉಪದೇಶ ನೀಡುತ್ತಾನೆ.
ಶ್ರೀಕೃಷ್ಣನು ಅರ್ಜುನನಿಗೆ ನೀಡಿದ ಧರ್ಮೋಪದೇಶದ ಸಾರವೇ ಭಗವದ್ಗೀತೆಯಾಗಿದೆ. ಎದುರಾಳಿ ಬಣದಿಂದ ತನ್ನ ಬಂಧುಗಳೊಂದಿಗೆ ಹೋರಾಡಲು ಅರ್ಜುನ ನಿರಾಕರಿಸಿದಾಗ ಶ್ರೀಕೃಷ್ಣ ಪಾಂಡವರಲ್ಲಿ ಒಬ್ಬನಾದ ಅರ್ಜುನನಿಗೆ ಈ ರೀತಿಯ ಉಪದೇಶ ನೀಡುತ್ತಾನೆ.

ಜ್ಲೇಯಃ ಸ ನಿತ್ಯಸನ್ನ್ಯಾಸೀ ಯೋ ನ ದ್ವೇಷ್ಟಿ ನ ಕಾನ್ಕ್ಷತಿ |

ನಿರ್ದ್ವನ್ದೋ ಹಿ ಮಹಾಬಾಹೋ ಸುಖಂ ಬನ್ಧಾತ್ ಪ್ರಮುಚ್ಯತೇ ||3||

ಕರ್ಮಫಲದಲ್ಲಿ ತಿರಸ್ಕಾರವಾಗಲೀ ಅಪೇಕ್ಷೆಯಾಗಲೀ ಇಲ್ಲದವನನ್ನು ನಿತ್ಯ ಸನ್ಯಾಸಿ ಎಂದು ತಿಳಿಯಬೇಕು. ಮಹಾಬಾಹುವಾದ ಅರ್ಜುನನೇ, ದ್ವಂದ್ವಗಳಿಂದ ಮುಕ್ತನಾದ ಇಂತಹ ಮನುಷ್ಯನು ಸುಲಭವಾಗಿ ಐಹಿಕ ಬಂಧನದಿಂದ ಪಾರಾಗುತ್ತಾನೆ ಮತ್ತು ಸಂಪೂರ್ಣವಾಗಿ ಮುಕ್ತನಾಗುತ್ತಾನೆ.

ಸಂಪೂರ್ಣವಾಗಿ ಕೃಷ್ಣಪ್ರಜ್ಞೆಯಲ್ಲಿರುವ ವ್ಯಕ್ತಿಯು ಸದಾ ಸನ್ಯಾಸಿ. ಏಕೆಂದರೆ ಅವನಿಗೆ ಕರ್ಮಫಲದಲ್ಲಿ ತಿರಸ್ಕಾರವೂ ಇಲ್ಲ, ಅಪೇಕ್ಷೆಯೂ ಇಲ್ಲ, ಭಗವಂತನ ದಿವ್ಯ ಪ್ರೀತಿಪೂರ್ವಕ ಸೇವೆಗೆ ಮುಡಿಪಾದ ಇಂತಹ ತ್ಯಾಗಿಯು ಸಂಪೂರ್ಣ ಜ್ಞಾನವುಳ್ಳವನು. ಏಕೆಂದರೆ ಅವನಿಗೆ ಕೃಷ್ಣನೊಡನೆ ತನ್ನ ಸಂಬಂಧದ ನಿಜಸ್ವರೂಪದ ಅರಿವಿರುತ್ತದೆ. ಕೃಷ್ಣನು ಪೂರ್ಣನು, ತಾನು ಕೃಷ್ಣನ ವಿಭಿನ್ನಾಂಶ ಎಂದು ಅವನಿಗೆ ಸಂಪೂರ್ಣವಾಗಿ ತಿಳಿದಿರುತ್ತದೆ. ಇಂತಹ ಜ್ಞಾನವು ಗುಣಾತ್ಮಕವಾಗಿ ಮತ್ತು ಪರಿಮಾಣಾತ್ಮಕವಾಗಿ ಸರಿಯಾಗಿರುತ್ತದೆ. ಆದುದರಿಂದ ಅದು ಪರಿಪೂರ್ಣ.

ಕೃಷ್ಣನೊಂದಿಗೆ ಒಂದಾಗಿರುವ ಪರಿಕಲ್ಪನೆಯು ಸರಿಯಲ್ಲ. ಏಕೆಂದರೆ ಭಾಗವು ಪೂರ್ಣಕ್ಕೆ ಸಮನಾಗಲು ಸಾಧ್ಯವಿಲ್ಲ. ಗುಣದಲ್ಲಿ ಒಂದೇ ಆದರೂ ಪರಿಮಾಣದಲ್ಲಿ ಬೇರೆ ಎನ್ನುವ ತಿಳುವಳಿಕೆಯು ಸರಿಯಾದ ಆಧ್ಯಾತ್ಮಿಕ ಜ್ಞಾನ. ಇದರಿಂದ ಮನುಷ್ಯನು ತನ್ನಲ್ಲಿಯೇ ಪೂರ್ಣವಾಗುತ್ತಾನೆ. ಆಗ ಅವನು ಯಾವುದಕ್ಕಾಗಿಯೂ ಆಸೆಪಡಬೇಕಾಗಿಯೂ ಇಲ್ಲ, ವಿಷಾಧಿಸಬೇಕಾಗಿಯೂ ಇಲ್ಲ. ಅವನ ಮನಸ್ಸಿನಲ್ಲಿ ದ್ವಂದ್ವವಿಲ್ಲ. ಏಕೆಂದರೆ ಅವನು ಏನು ಮಾಡಿದರೂ ಅದು ಕೃಷ್ಣನಿಗಾಗಿ. ಹೀಗೆ ದ್ವಂದ್ವಗಳ ನೆಲೆಯಿಂದ ಬಿಡುಗಡೆ ಹೊಂದಿ ಅವನು ಈ ಐಹಿಕ ಜಗತ್ತಿನಲ್ಲಿರುವಂತೆಯೇ ಮುಕ್ತನಾಗುತ್ತಾನೆ.

ಸಾನ್ಖ್ಯಯೋಗೌ ಪೃಥಗ್ ಬಾಲಾಃ ಪ್ರವದನ್ತಿ ನ ಪಣ್ಡಿತಾಃ |

ಏಕಮಪ್ಯಾಸ್ಥಿತಃ ಸಮ್ಯಗುಭಯೋರ್ವಿನ್ದತೇ ಫಲಮ್ ||4||

ಭಕ್ತಿಸೇವೆಯು (ಕ್ರಮಯೋಗ) ಐಹಿಕ ಜಗತ್ತಿನ ವಿಶ್ಲೇಷಣಾತ್ಮಕ ಅಧ್ಯಯನ (ಸಾಂಖ್ಯ)ದಿಂದ ಭಿನ್ನವಾದದ್ದು ಎಂದು ಅಜ್ಞಾನಿಗಳು ಮಾತ್ರ ಹೇಳುತ್ತಾರೆ. ಇವರೆಡರಲ್ಲಿ ಯಾವುದನ್ನಾದರೂ ಮನಃಪೂರ್ವಕವಾಗಿ ಅನುಷ್ಛಾನ ಮಾಡಿದವನು ಎರಡು ಮಾರ್ಗಗಳ ಫಲವನ್ನೂ ಹೊಂದುತ್ತಾನೆ ಎಂದು ನಿಜವಾದ ವಿದ್ವಾಂಸರು ಹೇಳುತ್ತಾರೆ.

ಸಾಂಖ್ಯದ (ಎಂದರೆ ಐಹಿಕ ಜಗತ್ತಿನ ವಿಶ್ಲೇಷಣಾತ್ಮಕ ಅಧ್ಯಯನ) ಗುರಿಯು ಜಗತ್ತಿನ ಆತ್ಮವನ್ನು ಕಂಡುಕೊಳ್ಳುವುದು. ಐಹಿಕ ಜಗತ್ತಿನ ಆತ್ಮವು ವಿಷ್ಣು ಅಥವಾ ಪರಮಾತ್ಮ. ಭಗವಂತನ ಭಕ್ತಿಪೂರ್ವಕ ಸೇವೆ ಎಂದರೆ ಪರಮಾತ್ಮನ ಸೇವೆ. ಒಂದು ಪ್ರಕ್ರಿಯೆಯು ಮರದ ಬೇರನ್ನು ಹುಡುಕುವುದಾಗಿದೆ. ಮತ್ತೊಂದು, ಬೇರಿಗೆ ನೀರೆರೆಯುವುದಾಗಿದೆ. ಸಾಂಖ್ಯದ ಸಿದ್ಧಾಂತದ ನಿಜವಾದ ವಿದ್ಯಾರ್ಥಿಯು ಐಹಿಕ ಜಗತ್ತಿನ ಬೇರಾದ ವಿಷ್ಣುವನ್ನು ಕಾಣುತ್ತಾನೆ. ಅನಂತರ ಸಂಪೂರ್ಣಜ್ಞಾನದಲ್ಲಿ ಭಗವಂತನ ಸೇವೆಗೆ ಮುಡಿಪಾಗುತ್ತಾನೆ. ಆದುದರಿಂದ ಇವರೆಡರ ಸಾರದಲ್ಲಿಯೂ ವ್ಯತ್ಯಾಸವಿಲ್ಲ. ಏಕೆಂದರೆ ಎರಡರ ಗುರಿಯೂ ವಿಷ್ಣುವೇ. ಕಟ್ಟಕಡೆಯ ಗುರಿಯನ್ನು ತಿಳಿಯದವರು ಸಾಂಖ್ಯ ಮತ್ತು ಕರ್ಮಯೋಗಗಳ ಉದ್ದೇಶಗಳು ಒಂದೇ ಅಲ್ಲ ಎನ್ನುತ್ತಾರೆ. ಆದರೆ ವಿದ್ವಾಂಸನು ಈ ಭಿನ್ನಪ್ರಕ್ರಿಯೆಗಳ ಗುರಿಯು ಒಂದೇ ಎಂಬುದನ್ನು ತಿಳಿದಿರುತ್ತಾನೆ.

Whats_app_banner

ವಿಭಾಗ

ದೇವಾಲಯಗಳು, ಅಧ್ಯಾತ್ಮ, ದಿನ ಭವಿಷ್ಯ, ಗ್ರಹಗಳ ಸಂಚಾರ, ವಾಸ್ತು ಶಾಸ್ತ್ರ, ಪೂಜಾ ವಿಧಾನ, ವ್ರತ ವಿಧಾನ, ಹಬ್ಬ, ಸಂಸ್ಕೃತಿ, ಭಗವದ್ಗೀತೆ ಸೇರಿದಂತೆ ಜ್ಯೋತಿಷ್ಯಕ್ಕೆ ಸಂಬಂಧಿಸಿದ ಸಮಗ್ರ ಮಾಹಿತಿಗಾಗಿ 'ಹಿಂದೂಸ್ತಾನ್ ಟೈಮ್ಸ್ ಕನ್ನಡ' ರಾಶಿ ಭವಿಷ್ಯ ವಿಭಾಗ ನೋಡಿ.