ಭಗವದ್ಗೀತೆ: ಆಧ್ಯಾತ್ಮಿಕ ಕರ್ತವ್ಯಗಳನ್ನು ಭಕ್ತಿಯಿಂದ ನಿರ್ವಹಿಸುವ ಸನ್ಯಾಸಿಗಳು ಸುಖಿಗಳಾಗಿರುತ್ತಾರೆ; ಗೀತೆಯ ಸಾರಾಂಶ ತಿಳಿಯಿರಿ
ಕನ್ನಡ ಸುದ್ದಿ  /  ರಾಶಿ ಭವಿಷ್ಯ  /  ಭಗವದ್ಗೀತೆ: ಆಧ್ಯಾತ್ಮಿಕ ಕರ್ತವ್ಯಗಳನ್ನು ಭಕ್ತಿಯಿಂದ ನಿರ್ವಹಿಸುವ ಸನ್ಯಾಸಿಗಳು ಸುಖಿಗಳಾಗಿರುತ್ತಾರೆ; ಗೀತೆಯ ಸಾರಾಂಶ ತಿಳಿಯಿರಿ

ಭಗವದ್ಗೀತೆ: ಆಧ್ಯಾತ್ಮಿಕ ಕರ್ತವ್ಯಗಳನ್ನು ಭಕ್ತಿಯಿಂದ ನಿರ್ವಹಿಸುವ ಸನ್ಯಾಸಿಗಳು ಸುಖಿಗಳಾಗಿರುತ್ತಾರೆ; ಗೀತೆಯ ಸಾರಾಂಶ ತಿಳಿಯಿರಿ

ಕುರುಕ್ಷೇತ್ರದ ಯುದ್ಧದಲ್ಲಿ ಕೃಷ್ಣನು ಅರ್ಜುನನಿಗೆ ನೀಡಿದ ಧರ್ಮೋಪದೇಶದ ಸಾರವೇ ಭಗವದ್ಗೀತೆಯಾಗಿದೆ. ಸತ್ಯದ ಮಾರ್ಗವನ್ನು ಅನುಸರಿಸುವುದು ಗೀತೆಯ ಅರ್ಥವಾಗಿದೆ.

ಶ್ರೀಕೃಷ್ಣನು ಅರ್ಜುನನಿಗೆ ನೀಡಿದ ಧರ್ಮೋಪದೇಶದ ಸಾರವೇ ಭಗವದ್ಗೀತೆಯಾಗಿದೆ. ಎದುರಾಳಿ ಬಣದಿಂದ ತನ್ನ ಬಂಧುಗಳೊಂದಿಗೆ ಹೋರಾಡಲು ಅರ್ಜುನ ನಿರಾಕರಿಸಿದಾಗ ಶ್ರೀಕೃಷ್ಣ ಪಾಂಡವರಲ್ಲಿ ಒಬ್ಬನಾದ ಅರ್ಜುನನಿಗೆ ಈ ರೀತಿಯ ಉಪದೇಶ ನೀಡುತ್ತಾನೆ.
ಶ್ರೀಕೃಷ್ಣನು ಅರ್ಜುನನಿಗೆ ನೀಡಿದ ಧರ್ಮೋಪದೇಶದ ಸಾರವೇ ಭಗವದ್ಗೀತೆಯಾಗಿದೆ. ಎದುರಾಳಿ ಬಣದಿಂದ ತನ್ನ ಬಂಧುಗಳೊಂದಿಗೆ ಹೋರಾಡಲು ಅರ್ಜುನ ನಿರಾಕರಿಸಿದಾಗ ಶ್ರೀಕೃಷ್ಣ ಪಾಂಡವರಲ್ಲಿ ಒಬ್ಬನಾದ ಅರ್ಜುನನಿಗೆ ಈ ರೀತಿಯ ಉಪದೇಶ ನೀಡುತ್ತಾನೆ.

ಯತ್ ಸಾನ್ಖ್ಯೈ ಪ್ರಾಪ್ಯತೇ ಸ್ಥಾನಂ ತದ್ ಯೋಗೈರಪಿ ಗಮ್ಯತೇ |

ಏಕಂ ಸಾನ್ಖ್ಯೈ ಚ ಯೋಗಂ ಚ ಯಃ ಪಶ್ಯತಿ ಸ ಪಶ್ಯತಿ ||5||

ಸಾಂಖ್ಯದಿಂದ ಯಾವ ಸ್ಥಾನವನ್ನು ಪಡೆಯಬಹುದೋ ಅದೇ ಸ್ಥಾನವನ್ನು ಭಕ್ತಿಸೇವೆಯಿಂದ ಪಡೆಯಬಹುದು ಎಂದು ತಿಳಿದುಕೊಂಡು, ಸಾಂಖ್ಯವೂ ಭಕ್ತಿಸೇವೆಯೂ ಒಂದೇ ಮಟ್ಟದಲ್ಲಿವೆ ಎನ್ನುವುದನ್ನು ಕಂಡುಕೊಳ್ಳುವವನು ವಿಷಯಗಳನ್ನು ಯಥಾವತ್ತಾಗಿ ಕಾಣುತ್ತಾನೆ.

ತತ್ವಶಾಸ್ತ್ರದ ಸಂಶೋದನೆಯ ನಿಜವಾದ ಉದ್ದೇಶವು ಬದುಕಿನ ಅಂತಿಮ ಗುರಿಯನ್ನು ಕಂಡುಕೊಳ್ಳವುದು. ಆತ್ಮಸಾಕ್ಷಾತ್ಮಾರವೇ ಬದುಕಿನ ಅಂತಿಮಗುರಿಯಾದದ್ದರಿಂದ ಈ ಎರಡು ಪ್ರಕ್ರಿಯೆಗಳ ನಿರ್ಣಯಗಳಲ್ಲಿ ವ್ಯತ್ಯಾಸವಿಲ್ಲ. ಸಾಂಖ್ಯ ಸಿದ್ಧಾಂತದ ಸಂಶೋಧನೆಯ ಫಲವಾಗಿ ಜೀವಿಯು ಐಹಿಕ ಜಗತ್ತಿನ ವಿಭಿನ್ನಾಂಶವಲ್ಲ, ಆದರೆ ಪೂರ್ಣ ಪರಮ ಚೇತನದ ಭಾಗ ಎನ್ನುವ ನಿರ್ಣಯಕ್ಕೆ ಬರುತ್ತೇವೆ. ಆದ್ದರಿಂದ ಆತ್ಮಕ್ಕೂ ಐಹಿಕ ಜಗತ್ತಿಗೂ ಸಂಬಂಧವಿಲ್ಲ. ಆತ್ಮನ ಕ್ರಿಯೆಗಳು ಪರಮ ಚೇತನದೊಂದಿಗೆ ಯಾವುದಾದರೂ ಸಂಬಂಧ ಹೊಂದಿರಬೇಕು.

ಆತ್ಮನು ಕೃಷ್ಣಪ್ರಜ್ಞೆಯಲ್ಲಿ ಕರ್ಮಮಾಡಿದಾಗ ಅವನು ವಾಸ್ತವವಾಗಿ ತನ್ನ ನಿಜಸ್ವರೂಪದಲ್ಲಿರುತ್ತಾನೆ. ಮೊದಲನೆಯ ಪ್ರಕ್ರಿಯೆಯಾದ ಸಾಂಖ್ಯದಲ್ಲಿ ಮನುಷ್ಯನು ಜಡವಸ್ತುವಿನಿಂದ ಬೇರೆಯಾಗಬೇಕು. ಭಕ್ತಿಯೋಗದ ಪ್ರಕ್ರಿಯೆಯಲ್ಲಿ ಅವನು ಕೃಷ್ಣಪ್ರಜ್ಞೆಯ ಕಾರ್ಯದಲ್ಲಿ ಆಸಕ್ತನಾಗಬೇಕು. ಒಂದು ಪ್ರಕ್ರಿಯೆಯಲ್ಲಿ ನಿರಾಸಕ್ತಿಯೂ ಇನ್ನೊಂದು ಪ್ರಕ್ರಿಯೆಯಲ್ಲಿ ಆಸಕ್ತಿಯೂ ಅಗತ್ಯವಾಗಿರುವಂತೆ ಮೇಲ್ನೋಟಕ್ಕೆ ತೋರಿದರೂ ವಾಸ್ತವವಾಗಿ ಎರಡು ಪ್ರಕ್ರಿಯೆಗಳೂ ಒಂದೇ. ಜಡವಸ್ತುವಿನಲ್ಲಿ ನಿರಾಸಕ್ತಿ ಮತ್ತು ಕೃಷ್ಣನಲ್ಲಿ ಆಸಕ್ತಿ ಎರಡೂ ಒಂದೇ. ಇದನ್ನು ಕಾಣಬಲ್ಲ ವ್ಯಕ್ತಿ. ವಿಷಯಗಳನ್ನು ಯಥಾವತ್ತಾಗಿ ಕಾಣುತ್ತಾನೆ.

ಸನ್ನ್ಯಾಸಸ್ತು ಮಹಾಬಾಹೋ ದುಃಖಮಾಫ್ತುಮಯೋಗತಃ |

ಯೋದಗಯುಕ್ತೋ ಮುನಿರ್ಬ್ರಹ್ಮ ನ ಚಿರೇಣಾಧಿಗಚ್ಛತಿ ||6||

ಭಗವಂತನ ಭಕ್ತಿ ಪೂರ್ವಕ ಸೇವೆಯಲ್ಲಿ ತೊಡಗದೆ ಎಲ್ಲ ಬಗೆಯ ಕರ್ಮಗಳನ್ನು ತ್ಯಜಿಸಿದ ಮಾತ್ರಕ್ಕೆ ಮನುಷ್ಯನು ಸುಖಿಯಾಗಲಾರ. ಆದರೆ ಭಕ್ತಿ ಸೇವೆಯಲ್ಲಿ ನಿರತನಾದ ವಿಚಾರವಂತನು ಶೀಘ್ರವಾಗಿ ಪರಮ ಪ್ರಭವನ್ನು ಪಡೆಯುತ್ತಾನೆ.

ಸನ್ಯಾಸಿಗಳಲ್ಲಿ ಎರಡು ವರ್ಗಗಳಿವೆ. ಮಾಯಾವಾದಿ ಸನ್ಯಾಸಿಗಳು ಸಾಂಖ್ಯ ಸಿದ್ಧಾಂತದ ಅಧ್ಯಯನದಲ್ಲಿ ತೊಡಗಿರುತ್ತಾರೆ. ವೈಷ್ಣವ ಸನ್ಯಾಸಿಗಳಾದರೋ ಭಾಗವತದ ಸಿದ್ಧಾಂತದ ಅಧ್ಯಯನದಲ್ಲಿ ತೊಡಗಿರುತ್ತಾರೆ. ಭಾಗವತವು ವೇದಾಂತಸೂತ್ರಗಳಿಗೆ ಸರಿಯಾದ ಭಾಷ್ಯವನ್ನು ನೀಡುತ್ತದೆ. ಮಾಯಾವಾದಿ ಸನ್ಯಾಸಿಗಳೂ ವೇದಾಂತ ಸೂತ್ರಗಳನ್ನು ಅಧ್ಯಯನ ಮಾಡುತ್ತಾರೆ. ಆದರೆ ಅವರು ಶಂಕರಾಚಾರ್ಯರು ಬರೆದ ಶಾರೀರಕಭಾಷ್ಯ ಎನ್ನುವ ತಮ್ಮದೇ ಆದ ಭಾಷ್ಯವನ್ನು ಉಪಯೋಗಿಸುತ್ತಾರೆ. ಭಾಗವತ ಪಂಥದ ವಿದ್ಯಾರ್ಥಿಗಳು ಪಾಂಚರಾತ್ರಿಕೀ ನಿಯಮಗಳಿಗೆ ಅನುಗುಣವಾಗಿ ಭಗವಂತನ ಭಕ್ತಿಸೇವೆಯಲ್ಲಿ ನಿರತರಾಗಿರುತ್ತಾರೆ. ಆದುದರಿಂದ ವೈಷ್ಣವ ಸನ್ಯಾಸಿಗಳಿಗೆ ಅನುಗುಣವಾಗಿ ಭಗವಂತನ ಭಕ್ತಿಸೇವೆಯಲ್ಲಿ ನಿರತರಾಗಿರುತ್ತಾರೆ. ಆದುದರಿಂದ ವೈಷ್ಣವ ಸನ್ಯಾಸಿಗಳಿಗೆ ಭಗವಂತನ ದಿವ್ಯ ಸೇವೆಯಲ್ಲಿ ಹಲವು ಬಗೆಯ ಕೆಲಸಗಳಿರುತ್ತವೆ.

ವೈಷ್ಣವ ಸನ್ಯಾಸಿಗೂ ಐಹಿಕ ಕಾರ್ಯಕಗಳಿಗೂ ಯಾವುದೇ ಸಂಬಂಧವಿಲ್ಲ. ಆದರೂ ಭಗವಂತನ ಭಕ್ತಿಸೇವೆಯಲ್ಲಿ ಅವನು ಹಲವಾರು ಕೆಲಸಕಾರ್ಯಗಳನ್ನು ಮಾಡುತ್ತಾನೆ. ಆದರೆ ಸಾಂಖ್ಯ ಮತ್ತು ವೇದಾಂತಿಕ ಅಧ್ಯಯನದಲ್ಲಿ ಹಾಗೂ ಊಹಾತ್ಮಕ ಚಿಂತನೆಯಲ್ಲಿ ಮಗ್ನರಾದ ಮಾಯಾವಾದಿ ಸನ್ಯಾಸಿಗಳಿಗೆ ಭಗವಂತನ ದಿವ್ಯಸೇವೆಯು ರುಚಿಸುವುದಿಲ್ಲ. ಅವರ ಅಧ್ಯಯನವು ನೀರಸವಾಗುವುದರಿಂದ ಅವರು ಕೆಲವೊಮ್ಮೆ ಬ್ರಹ್ಮನ್ ಕುರಿತು ಊಹಾತ್ಮಕ ಚಿಂತನೆ ಮಾಡುವುದರಲ್ಲಿ ಬೇಸರಗೊಳ್ಳುತ್ತಾರೆ. ಆದುದರಿಂದ ಅದನ್ನು ಸರಿಯಾಗಿ ಅರ್ಥಮಾಡಿಕೊಳ್ಳದೆ ಭಾಗವತವನ್ನು ಆಶ್ರಯಿಸುತ್ತಾರೆ. ಇದರ ಪರಿಣಾಮವಾಗಿ ಅವರ ಶ್ರೀಮದ್ಭಾಗವತದ ಅಧ್ಯಯನವು ಕಷ್ಟದಾಯಕವಾಗುತ್ತದೆ.

ಒಣಚಿಂತನೆಗಳೂ ಕೃತಕವಾಗಿ ಮಾಡಿದ ನಿರಾಕಾರದ ವ್ಯಾಖ್ಯಾನಗಳೂ ಮಾಯಾವಾದಿ ಸನ್ಯಾಸಿಗಳಿಗೆ ನಿಷ್ಪ್ರಯೋಜಕವಾಗುತ್ತವೆ. ಭಕ್ತಿಪೂರ್ವಕ ಸೇವೆಯಲ್ಲಿ ನಿರತರಾಗಿರುವ ವೈಷ್ಣವ ಸನ್ಯಾಸಿಗಳು ತಮ್ಮ ಆಧ್ಯಾತ್ಮಿಕ ಕರ್ತವ್ಯಗಳ ನಿರ್ವಹಣೆಯಲ್ಲಿ ಸುಖಿಗಳಾಗಿರುತ್ತಾರೆ. ಅವರಿಗೆ ಅಂತಿಮವಾಗಿ ಭಗವಂತನ ಸಾಮ್ರಾಜ್ಯವನ್ನು ಪ್ರವೇಶಿಸುವ ದೃಢ ಭರವಸೆ ಇರುತ್ತದೆ. ಮಾಯಾವಾದಿ ಸನ್ಯಾಸಿಗಳು ಒಮ್ಮೊಮ್ಮೆ ಆತ್ಮಸಾಕ್ಷಾತ್ಕಾರದ ಮಾರ್ಗದಿಂದ ಪತನಹೊಂದುತ್ತಾರೆ ಮತ್ತು ಪರೋಪಕಾರದ ಮತ್ತು ನಿಸ್ವಾರ್ಥವಾದ ಲೌಕಿಕ ಕಾರ್ಯಗಳಲ್ಲಿ ತೊಡಗುತ್ತಾರೆ. ಇವು ಐಹಿಕ ಕಾರ್ಯಗಳಲ್ಲದೆ ಬೇರೇನೂ ಅಲ್ಲ. ಆದುದರಿಂದ ನಿರ್ಯಣವು ಹೀಗಿದೆ. ಬ್ರಹ್ಮನ್ ಯಾವುದು, ಬ್ರಹ್ಮನ್ ಯಾವುದಲ್ಲ ಎನ್ನುವ ಚಿಂತನೆಯಲ್ಲಿ ಮಾತ್ರ ನಿರತರಾಗಿರುವ ಸನ್ಯಾಸಿಗಳಿಗಿಂತ ಕೃಷ್ಣಪ್ರಜ್ಞೆಯಲ್ಲಿ ಕೆಲಸಕಾರ್ಯಗಳಲ್ಲಿ ತೊಡಗಿರುವವರು ಉತ್ತಮ ಸ್ಥಿತಿಯಲ್ಲಿರುತ್ತಾರೆ. ಈ ಸನ್ಯಾಸಿಗಳೂ ಸಹ ಅನೇಕ ಜನ್ಮಗಳನಂತರ ಕೃಷ್ಣಪ್ರಜ್ಞೆಗೆ ಬರುತ್ತಾರೆ.

Whats_app_banner

ವಿಭಾಗ

ದೇವಾಲಯಗಳು, ಅಧ್ಯಾತ್ಮ, ದಿನ ಭವಿಷ್ಯ, ಗ್ರಹಗಳ ಸಂಚಾರ, ವಾಸ್ತು ಶಾಸ್ತ್ರ, ಪೂಜಾ ವಿಧಾನ, ವ್ರತ ವಿಧಾನ, ಹಬ್ಬ, ಸಂಸ್ಕೃತಿ, ಭಗವದ್ಗೀತೆ ಸೇರಿದಂತೆ ಜ್ಯೋತಿಷ್ಯಕ್ಕೆ ಸಂಬಂಧಿಸಿದ ಸಮಗ್ರ ಮಾಹಿತಿಗಾಗಿ 'ಹಿಂದೂಸ್ತಾನ್ ಟೈಮ್ಸ್ ಕನ್ನಡ' ರಾಶಿ ಭವಿಷ್ಯ ವಿಭಾಗ ನೋಡಿ.