ಕನ್ನಡ ಸುದ್ದಿ  /  ರಾಶಿ ಭವಿಷ್ಯ  /  ಭಗವದ್ಗೀತೆ: ಮನುಷ್ಯ ಈ 4 ವಿಷಯಗಳಲ್ಲಿ ಬಲವಾಗಿ ನಿಂತಾಗ ಪರಿಶುದ್ಧವಾದ ಜೀವನ ನಡೆಸುತ್ತಾನೆ; ಗೀತೆಯ ಸಾರಾಂಶ ತಿಳಿಯಿರಿ

ಭಗವದ್ಗೀತೆ: ಮನುಷ್ಯ ಈ 4 ವಿಷಯಗಳಲ್ಲಿ ಬಲವಾಗಿ ನಿಂತಾಗ ಪರಿಶುದ್ಧವಾದ ಜೀವನ ನಡೆಸುತ್ತಾನೆ; ಗೀತೆಯ ಸಾರಾಂಶ ತಿಳಿಯಿರಿ

Bhagavad Gita in Kannada: ಕುರುಕ್ಷೇತ್ರದ ಯುದ್ಧದಲ್ಲಿ ಕೃಷ್ಣನು ಅರ್ಜುನನಿಗೆ ನೀಡಿದ ಧರ್ಮೋಪದೇಶದ ಸಾರವೇ ಭಗವದ್ಗೀತೆಯಾಗಿದೆ. ಮನುಷ್ಯ ಈ 4 ವಿಷಯಗಳಲ್ಲಿ ಬಲವಾಗಿ ನಿಂತಾಗ ಪರಿಶುದ್ಧವಾದ ಜೀವನ ನಡೆಸುತ್ತಾನೆ ಎಂಬುದರ ಅರ್ಥ ಹೀಗಿದೆ.

ಶ್ರೀಕೃಷ್ಣನು ಅರ್ಜುನನಿಗೆ ನೀಡಿದ ಧರ್ಮೋಪದೇಶದ ಸಾರವೇ ಭಗವದ್ಗೀತೆಯಾಗಿದೆ. ಎದುರಾಳಿ ಬಣದಿಂದ ತನ್ನ ಬಂಧುಗಳೊಂದಿಗೆ ಹೋರಾಡಲು ಅರ್ಜುನ ನಿರಾಕರಿಸಿದಾಗ ಶ್ರೀಕೃಷ್ಣ ಪಾಂಡವರಲ್ಲಿ ಒಬ್ಬನಾದ ಅರ್ಜುನನಿಗೆ ಈ ರೀತಿಯ ಉಪದೇಶ ನೀಡುತ್ತಾನೆ.
ಶ್ರೀಕೃಷ್ಣನು ಅರ್ಜುನನಿಗೆ ನೀಡಿದ ಧರ್ಮೋಪದೇಶದ ಸಾರವೇ ಭಗವದ್ಗೀತೆಯಾಗಿದೆ. ಎದುರಾಳಿ ಬಣದಿಂದ ತನ್ನ ಬಂಧುಗಳೊಂದಿಗೆ ಹೋರಾಡಲು ಅರ್ಜುನ ನಿರಾಕರಿಸಿದಾಗ ಶ್ರೀಕೃಷ್ಣ ಪಾಂಡವರಲ್ಲಿ ಒಬ್ಬನಾದ ಅರ್ಜುನನಿಗೆ ಈ ರೀತಿಯ ಉಪದೇಶ ನೀಡುತ್ತಾನೆ.

ತದ್ಬುದ್ಧಯಸ್ತದಾತ್ಮಾನಸ್ತನ್ನಿಷ್ಠಾಸ್ತತ್ಪರಾಯಣಾಃ |

ಗಚ್ಯನ್ತ್ಯಪುರಾವೃತ್ತಿಂ ಜ್ಞಾನನಿರ್ಧೂತಕಲ್ಮಷಾಃ ||17||

Bhagavad Gita in Kannada: ಮನುಷ್ಯನ ಬುದ್ಧಿ, ಮನಸ್ಸು, ಶ್ರದ್ಧೆ ಮತ್ತು ಆಶ್ರಯ ಎಲ್ಲವೂ ಪರಮ ಪ್ರಭುವಿನಲ್ಲಿ ನೆಲೆನಿಂತಾಗ ಪೂರ್ಣಜ್ಞಾನವು ಆತನ ಸಂಶಯಗಳೆಲ್ಲವನ್ನೂ ತೊಳೆದು ಅವನನ್ನು ಪರಿಶುದ್ಧನನ್ನಾಗಿ ಮಾಡುತ್ತದೆ. ಹೀಗೆ ಆತನು ಮುಕ್ತಿಮಾರ್ಗದಲ್ಲಿ ನೇರವಾಗಿ ಮುನ್ನಡೆಯುತ್ತಾನೆ.

ಪರ ದಿವ್ಯ ಸತ್ಯವು ಶ್ರೀಕೃಷ್ಣನೇ. ಇಡೀ ಭಗವದ್ಗೀತೆಯು ಕೃಷ್ಣನು ದೇವೋತ್ತಮ ಪರಮ ಪುರುಷ ಎನ್ನುವ ದೃಢವಾದ ಹೇಳಿಕೆಯ ಸುತ್ತ ಕೇಂದ್ರೀಕೃತವಾಗಿದೆ. ಎಲ್ಲ ವೈದಿಕ ಸಾಹಿತ್ಯವೂ ಇದನ್ನೇ ಹೇಳುತ್ತದೆ. ಪರತತ್ತ್ವ ಎಂದರೆ ಪರಮಸತ್ಯ. ಪರಮಸತ್ಯವನ್ನು ತಿಳಿದವರು ಅದನ್ನು ಬ್ರಹ್ಮನ್, ಪರಮಾತ್ಮ ಮತ್ತು ಭಗವಾನ್ ಎಂದು ತಿಳಿಯುತ್ತಾರೆ. ಭಗವಾನ್ ಅಥವಾ ದೇವೋತ್ತಮ ಪರಮ ಪುರುಷನು ಪರಮಸತ್ಯದ ಅಂತಿಮ ಸಿದ್ಧಾಂತ. ಇದಕ್ಕಿಂತ ಮಿಗಿಲಾದುದು ಏನೂ ಇಲ್ಲ. ಭಗವಂತನು ಮತ್ತಃ ಪರತರಂ ನಾನ್ಯತ್ ಕಂಚಿದಸ್ತಿ ಧನಂಜಯ ಎಂದು ಹೇಳುತ್ತಾನೆ.

ಕೃಷ್ಣನು ನಿರಾಕಾರ ಬ್ರಹ್ಮನನ್ನು ಸಮರ್ಥಿಸುತ್ತಾನೆ. ಬ್ರಹ್ಮಣೋ ಹಿ ಪ್ರತಿಷ್ಠಾಹಮ್. ಆದುದರಿಂದ ಎಲ್ಲ ರೀತಿಗಳಲ್ಲಿ ಕೃಷ್ಣನು ಪರಮಸತ್ಯ. ಯಾರ ಮನಸ್ಸು, ಬುದ್ಧಿ, ಶ್ರದ್ಧೆ ಮತ್ತು ಆಶ್ರಯಗಳು ಯಾವಾಗಲೂ ಕೃಷ್ಣನಲ್ಲಿರುತ್ತೆವೆಯೋ, ಅಥವಾ ಬೇರೆ ಮಾತುಗಳಲ್ಲಿ ಹೇಳವುದಾದರೆ ಯಾರು ಸಂಪೂರ್ಣವಾಗಿ ಕೃಷ್ಣಪ್ರಜ್ಞೆಯಲ್ಲಿರುವರೋ ಅವರ ಎಲ್ಲಾ ಸಂದೇಹಗಳು ನಿಶ್ಚಯವಾಗಿಯೂ ಸಂಪೂರ್ಣವಾಗಿ ತೊಡೆದುಹೋಗುತ್ತದೆ. ಆತನಿಗೆ ಅಧ್ಯಾತ್ಮವನ್ನು ಕುರಿತ ಪ್ರತಿಯೊಂದು ಸಂಗತಿಯೂ ಪರಿಪೂರ್ಣವಾಗಿ ತಿಳಿಯುತ್ತದೆ. ಕೃಷ್ಣಪ್ರಜ್ಞೆ ಇರುವ ಮನುಷ್ಯನು ಕೃಷ್ಣನಲ್ಲಿ ದ್ವಂದ್ವ (ಒಂದೇ ಕಾಲದಲ್ಲಿ ಏಕತೆ ಮತ್ತು ಪ್ರತ್ಯೇಕತೆ) ಇದೆ ಎನ್ನುವುದನ್ನು ಚೆನ್ನಾಗಿ ಅರ್ಥಮಾಡಿಕೊಳ್ಳಬಲ್ಲ. ಇಂತಹ ಆಧ್ಯಾತ್ಮಿಕ ಜ್ಞಾನಬಲದಿಂದ ಆತನು ಮುಕ್ತಿಮಾರ್ಗದಲ್ಲಿ ದೃಢವಾಗಿ ಮುನ್ನಡೆಯಬಲ್ಲ.

ವಿದ್ಯಾವಿನಯಸಮ್ಪನ್ನೇ ಬ್ರಾಹ್ಮಣೇ ಗವಿ ಹಸ್ತಿನಿ |

ಶುನಿ ಚೈವ ಶ್ವಪಾಕೇ ಚ ಪಣ್ಡಿತಾಃ ಸಮದರ್ಶಿನಃ ||18||

ನಮ್ರರಾದ ಜ್ಞಾನಿಗಳು, ನಿಜವಾದ ಜ್ಞಾನವನ್ನು ಪಡೆದವರಾದುದರಿಂದ, ವಿದ್ಯಾವಿನಯ ಸಂಪನ್ನನಾದ ಬ್ರಾಹ್ಮಣನನ್ನೂ, ಹಸುವನ್ನೂ, ಆನೆಯನ್ನೂ, ನಾಯಿಯನ್ನೂ, ನಾಯಿಯ ಮಾಂಸವನ್ನು ತಿನ್ನುವವನನ್ನೂ (ಅಂತ್ಯಜನನ್ನೂ) ಒಂದೇ ರೀತಿ ಕಾಣುತ್ತಾರೆ.

ಕೃಷ್ಣಪ್ರಜ್ಞೆ ಇರುವ ಮನುಷ್ಯನು ಯಾವುದೇ ವರ್ಗಗಳಲ್ಲಿ ಅಥವಾ ಜಾತಿಗಳಲ್ಲಿ ವ್ಯತ್ಯಾಸವನ್ನು ಮಾಡುವುದಿಲ್ಲ. ಸಾಮಾಜಿಕ ದೃಷ್ಟಿಯಿಂದ ಬ್ರಾಹ್ಮಣನೂ, ಅಂತ್ಯಜನೂ ಬೇರೆಬೇರೆ ಇರಬಹುದು. ನಾಯಿ, ಹಸು ಮತ್ತು ಆನೆಗಳು ಪ್ರಾಣಿವರ್ಗದ ದೃಷ್ಟಿಯಿಂದ ಬೇರೆಬೇರೆ ಇರಬಹುದು. ಆದರೆ ದೇಹದ ಈ ವ್ಯತ್ಯಾಸಗಳು ವಿದ್ಯಾಂಸನಾದ ಅಧ್ಯಾತ್ಮವಾದಿಯ ದೃಷ್ಟಿಯಿಂದ ಅರ್ಥವಿಲ್ಲದವು. ಇದಕ್ಕೆ ಪರಮ ಪ್ರಭುವಿನೊಂದಿಗೆ ಅವುಗಳ ಸಂಬಂಧವೇ ಕಾರಣ. ಏಕೆಂದರೆ ಭಗವಂತನು ಸ್ವಾಂಶವಾದ ಪರಮಾತ್ಮನಾಗಿ ಎಲ್ಲರ ಹೃದಯಗಳಲ್ಲಿದ್ದಾನೆ. ಪರಮ ಸತ್ಯವನ್ನು ಹೀಗೆ ಅರ್ಥಮಾಡಿಕೊಳ್ಳುವುದೇ ನಿಜವಾದ ವಿದ್ವತ್ತು.

ದೇಹದೊಳಗಿರುವ ಆತ್ಮನೂ ಪರಮಾತ್ಮನೂ ಒಂದೇ ಅಧ್ಯಾತ್ಮಿಕ ಗುಣದವರು

ಬೇರೆಬೇರೆ ಜಾತಿಗಳ ಅಥವಾ ಬೇರೆ ಬೇರೆ ಜೀವವರ್ಗಗಳ ದೇಹಗಳ ಮಟ್ಟಿಗೆ ಹೇಳುವುದಾದರೆ ಭಗವಂತನು ಎಲ್ಲರ ವಿಷಯದಲ್ಲಿಯೂ ಒಂದೇ ರೀತಿ ದಯೆಯನ್ನು ತೋರಿಸುತ್ತಾನೆ. ಏಕೆಂದರೆ ಅವನು ಪ್ರತಿಯೊಂದು ಜೀವಿಯನ್ನೂ ಸ್ನೇಹಿತನೆಂದೇ ಕಾಣುತ್ತಾನೆ. ಜೀವಿಗಳ ಸನ್ನಿವೇಶಗಳು ಏನೇ ಇರಲಿ ತಾನು ಪರಮಾತ್ಮನಾಗಿಯೇ ಇರುತ್ತಾನೆ. ಬ್ರಾಹ್ಮಣನ ದೇಹವೂ ಅಂತ್ಯಜನ ದೇಹವೂ ಒಂದೇ ಅಲ್ಲ. ಆದರೂ ಪರಮಾತ್ಮನಾಗಿ ಭಗವಂತನು ಅಂತ್ಯಜನಲ್ಲಿಯೂ ಬ್ರಾಹ್ಮಣನಲ್ಲಿಯೂ ಇದ್ದಾನೆ. ದೇಹಗಳು ಐಹಿಕ ಪ್ರಕೃತಿಯ ಬೇರೆಬೇರೆ ಗುಣಗಳಿಂದಾದ ಜಡವಸ್ತುವಿನ ಉತ್ಪನ್ನಗಳು. ಆದರೆ ದೇಹದೊಳಗಿರುವ ಆತ್ಮನೂ ಪರಮಾತ್ಮನೂ ಒಂದೇ ಅಧ್ಯಾತ್ಮಿಕ ಗುಣದವರು.

ಆತ್ಮನೂ ಪರಮಾತ್ಮನೂ ಗುಣದಲ್ಲಿ ಒಂದೇ ಆಗಿದ್ದರೂ ಪ್ರಮಾಣದಲ್ಲಿ ಒಂದೇ ಅಲ್ಲ. ಏಕೆಂದರೆ ಜೀವಾತ್ಮನು ಆ ನಿರ್ದಿಷ್ಟ ದೇಹದಲ್ಲಿ ಮಾತ್ರ ಇದ್ದಾನೆ. ಆದರೆ ಪರಮಾತ್ಮನು ಪ್ರತಿಯೊಂದು ದೇಹದಲ್ಲಿಯೂ ಇದ್ದಾನೆ. ಕೃಷ್ಣಪ್ರಜ್ಞೆ ಇರುವ ಮನುಷ್ಯನಿಗೆ ಇದರ ಸಂಪೂರ್ಣ ತಿಳುವಳಿಕೆ ಇದೆ. ಆದುದರಿಂದ ಅವನು ನಿಜವಾದ ಪಂಡಿತ ಮತ್ತು ಸಮದರ್ಶಿ. ಆತ್ಮ ಮತ್ತು ಪರಮಾತ್ಮರ ಸದೃಶ ಲಕ್ಷಣಗಳೆಂದರೆ ಅವರಿಬ್ಬರಿಗೂ ಪ್ರಜ್ಞೆಯುಂಟು. ಇಬ್ಬರೂ ನಿತ್ಯರು ಮತ್ತು ಆನಂದಮಯರು. ಆದರೆ ವ್ಯತ್ಯಾಸವೆಂದರೆ ಜೀವಾತ್ಮನ ಪ್ರಜ್ಞೆಯು ದೇಹದ ವ್ಯಾಪ್ತಿಗೆ ಸೀಮಿತವಾಗಿದೆ. ಆದರೆ ಪರಮಾತ್ಮನಿಗೆ ಎಲ್ಲ ದೇಹಗಳ ಪ್ರಜ್ಞೆ ಇದೆ. ಪರಮಾತ್ಮನು ವ್ಯತ್ಯಾಸ ಮಾಡದೆ ಎಲ್ಲ ಶರೀರಗಳಲ್ಲೂ ಇದ್ದಾನೆ. (This copy first appeared in Hindustan Times Kannada website. To read more like this please logon to kannada.hindustantime.com).

ವಿಭಾಗ