ಭಗವದ್ಗೀತೆ: ಈಶ್ವರನು ಎಲ್ಲ ಜೀವಿಗಳ ಹೃದಯಗಳಲ್ಲಿ ನೆಲೆಸಿದ್ದಾನೆ; ಈ ಸಾರಾಂಶದ ಅರ್ಥ ತಿಳಿಯಿರಿ
ಕುರುಕ್ಷೇತ್ರದ ಯುದ್ಧದಲ್ಲಿ ಕೃಷ್ಣನು ಅರ್ಜುನನಿಗೆ ನೀಡಿದ ಧರ್ಮೋಪದೇಶದ ಸಾರವೇ ಭಗವದ್ಗೀತೆಯಾಗಿದೆ. ದೇವರ ಗೀತೆ ಎಂಬ ಅರ್ಥ ಬರುವ ಭಗವದ್ಗೀತೆ ವಿಶ್ವದಲ್ಲಿರುವ ಧರ್ಮಗ್ರಂಥಗಳಲ್ಲಿ ಒಂದಾಗಿದೆ. ಸತ್ಯದ ಮಾರ್ಗವನ್ನು ಅನುಸರಿಸುವುದು ಗೀತೆಯ ಅರ್ಥವಾಗಿದೆ.
ಭಗವದ್ಗೀತೆಯಲ್ಲಿ ಹೀಗೆ ಹೇಳಲಾಗಿದೆ. ಈಶ್ವರನ ಸ್ಥಾನ ಪರಮ ಪ್ರಜ್ಞೆಯದು. ಜೀವಿಗಳು ಈಶ್ವರನ ವಿಭಿನ್ನಾಂಶಗಳಾದದ್ದರಿಂದ ಅವರಿಗೂ ಪ್ರಜ್ಞೆಯುಂಟು. ಜೀವಿಯನ್ನೂ ಭೌತಿಕ ನಿಸರ್ಗವನ್ನೂ ಪ್ರಕೃತಿ ಅಥವಾ ಈಶ್ವರನ ಶಕ್ತಿ ಎಂದು ವಿವರಿಸಿದೆ. ಆದರೆ ಇವರೆಡರಲ್ಲಿ ಒಂದು, ಜೀವ; ಪ್ರಜ್ಞೆಯನ್ನು ಪಡೆದಿದ್ದಾನೆ. ಇನ್ನೊಂದು ಪ್ರಕೃತಿ; ಪ್ರಜ್ಞೆಯನ್ನು ಪಡೆದಿಲ್ಲ. ಇದೇ ವ್ಯತ್ಯಾಸ.
ಈಶ್ವರನ ಪ್ರಜ್ಞೆಯನ್ನು ಹೋಲುವಂತಹ ಪ್ರಜ್ಞೆಯು ಇರುವ ಜೀವಿಯನ್ನು ಪರಾ ಎಂದು ಹೇಳಲಾಗದು. ಜೀವಿಯು ತನ್ನ ಪರಿಪೂರ್ಣತೆಯ ಯಾವುದೇ ಘಟ್ಟದಲ್ಲಿ ಪರಮ ಪ್ರಜ್ಞೆಯನ್ನು ಹೊಂದಿರಲಾರ; ಅವನು ಹಾಗಿರಬಲ್ಲ ಎನ್ನುವುದು ತಪ್ಪುದಾರಿಗೆ ಎಳೆಯುವ ಊಹೆ. ಅವನಿಗೆ ಪ್ರಜ್ಞೆಯು ಇರಬಹುದು. ಆದರೆ ಅವನಿಗೆ ಪರಿಪೂರ್ಣ ಪ್ರಜ್ಞೆಯಾಗಲೀ, ಪರಮ ಪ್ರಜ್ಞೆಯಾಗಲೀ ಇಲ್ಲ.
ಜೀವಿಗೆ ತನ್ನ ನಿರ್ದಿಷ್ಟ ದೇಹದ ಪ್ರಜ್ಞೆಯುಂಟು
ಜೀವಿಗೂ ಈಶ್ವರನಿಗೂ ಇರುವ ವ್ಯತ್ಯಾಸವನ್ನು ಭಗವದ್ಗೀತೆಯ ಹದಿಮೂರನೆಯ ಅಧ್ಯಾಯದಲ್ಲಿ ಹೇಳಿದೆ. ಈಶ್ವರನು ಕ್ಷೇತ್ರಜ್ಞ; ಪ್ರಜ್ಞೆ ಇರುವವನು. ಜೀವಿಗೂ ಪ್ರಜ್ಞೆಯುಂಟು; ಆದರೆ ಜೀವಿಗೆ ತನ್ನ ನಿರ್ದಿಷ್ಟ ದೇಹದ ಪ್ರಜ್ಞೆಯುಂಟು; ಈಶ್ವರನಿಗೋ ಎಲ್ಲ ದೇಹಗಳ ಪ್ರಜ್ಞೆಯುಂಟು; ಈಶ್ವರನು ಎಲ್ಲ ಜೀವಿಗಳ ಹೃದಯಗಳಲ್ಲಿ ನೆಲೆಸಿದ್ದಾನೆ. ಆದುದರಿಂದ ಬೇರೆ ಬೇರೆ ಜೀವಿಗಳ ಮಾನಸಿಕ ವ್ಯಾಪಾರಗಳ ಅರಿವು ಆತನಿಗಿದೆ. ಇದನ್ನು ನಾವು ಮರೆಯಬಾರದು. ‘
ದೇವೋತ್ತಮ ಪರಮ ಪುರುಷನಾದ ಪರಮಾತ್ಮನು ಎಲ್ಲರ ಹೃದಯಗಳಲ್ಲಿ ಈಶ್ವರನಾಗಿ, ನಿಯಾಮಕನಾಗಿ ವಾಸಿಸುತ್ತಿದ್ದಾನೆ; ತಾನು ಅಪೇಕ್ಷಿಸಿದಂತೆ ಕೆಲಸ ಮಾಡಲು ಆತ ನಿರ್ದೇಶನ ಮಾಡುತ್ತಿದ್ದಾನೆ ಎಂದೂ ವಿವರಿಸಿದೆ. ಜೀವಿಯು ಏನು ಮಾಡಬೇಕೆಂಬುದನ್ನು ಮರೆತುಬಿಡುತ್ತಾನೆ. ಯಾವುದೋ ಎಂದೂ ವಿವರಸಿದೆ. ಜೀವಿಯು ಏನು ಏನು ಮಾಡಬೇಕೆಂಬುದನ್ನು ಮರೆತುಬಿಡುತ್ತಾನೆ. ಯಾವುದೋ ಒಂದು ರೀತಿಯಲ್ಲಿ ಕಾರ್ಯೋನ್ಮುಖನಾಗಲು ನಿರ್ಧರಿಸುತ್ತಾನೆ. ಅನಂತರ ಅವನು ತನ್ನದೇ ಕ್ರಮದ ಕ್ರಿಯೆ-ಪ್ರತಿಕ್ರಿಯೆಗಳ ಗೊಂದಲದಲ್ಲಿ ಸಿಕ್ಕಿಬೀಳುತ್ತಾನೆ.
ನಾವು ಉಡುಪನ್ನುಹಾಕಿಕೊಂಡು ಕಳಚಿಹಾಕುವಂತೆ, ಒಂದು ಬಗೆಯ ದೇಹವನ್ನು ಬಿಟ್ಟು ಇನ್ನೊಂದು ಬಗೆಯ ದೇಹವನ್ನು ಪ್ರವೇಶಿಸುತ್ತಾನೆ; ಹೀಗೆ ಆತ್ಮನು ದೇಹದಿಂದ ದೇಹಕ್ಕೆ ಸಾಗುತ್ತಿರುವಾಗ ಅವನು ತನ್ನ ಹಿಂದಿನ ಕರ್ಮಗಳ ಕ್ರಿಯೆ ಮತ್ತು ಪ್ರತಿಕ್ರಿಯೆಗಳನ್ನು ಅನುಭವಿಸುತ್ತಾನೆ.
ಕರ್ಮವು ನಿತ್ಯವಲ್ಲ; ಅದು ಹೇಗೆ?
ಆತ್ಮನು ಸತ್ವಗುಣದಲ್ಲಿದ್ದಾಗ ಮತ್ತು ತಿಳಿಯಾದ ಬುದ್ಧಿಯಲ್ಲಿದ್ದಾಗ ತಾನು ಯಾವ ಬಗೆಯ ಕರ್ಮಗಳನ್ನು ಮಾಡಬೇಕು ಎಂದು ಅರ್ಥಮಾಡಿಕೊಂಡು ಈ ಚಟುವಟಿಕೆಗಳನ್ನು ಬದಲಾಯಿಸಬಹುದು. ಅವನು ಹಾಗೆ ಮಾಡಿದಾಗ ಅವನ ಹಿಂದಿನ ಕರ್ಮಗಳ ಕ್ರಿಯೆಗಳನ್ನು ಮತ್ತು ಪ್ರತಿಕ್ರಿಯೆಗಳನ್ನು ಬದಲಾಯಿಸಬಹುದು. ಕರ್ಮವು ನಿತ್ಯವಲ್ಲ. ಆದುದರಿಂದಲೇ, (ಈಶ್ವರ, ಜೀವಿ, ಪ್ರಕೃತಿ, ಕಾಲ ಮತ್ತು ಕರ್ಮ ಎನ್ನುವ ಐದು ಅಂಶಗಳಲ್ಲಿ) ನಾಲ್ಕು ನಿತ್ಯವಾದವು, ಕರ್ಮ ನಿತ್ಯವಲ್ಲ ಎಂದು ನಾವು ಹೇಳಿದೆವು.
ಪರಮ ಪ್ರಜ್ಞೆಯ ಈಶ್ವರನು ಜೀವಿಯನ್ನು ಈ ರೀತಿಯಲ್ಲಿ ಹೋಲುತ್ತಾನೆ. ಈಶ್ವರನ ಪ್ರಜ್ಞೆ ಮತ್ತು ಜೀವಿಯ ಪ್ರಜ್ಞೆ ಎರಡೂ ಅಲೌಕಿಕವಾದವು. ಜಡದೊಡನೆ ಸೇರುವುದರಿಂದ ಪ್ರಜ್ಞೆಯು ಹುಟ್ಟುತ್ತದೆ ಎಂದೇನೂ ಅಲ್ಲ. ಇದೊಂದು ತಪ್ಪು ಭಾವನೆ. ಕೆಲವೆವೂಂದು ಸನ್ನಿವೇಶಗಳಲ್ಲಿ ಭೌತಿಕ ಸಂಯೋಜನೆಯಿಂದ ಪ್ರಜ್ಞೆಯು ಉತ್ಪಿತ್ತಿಯಾಗುತ್ತದೆ ಎನ್ನುವ ಊಹೆಯನ್ನು ಭಗವದ್ಗೀತೆಯು ಒಪ್ಪುವುದಿಲ್ಲ.
ಒಣ್ಣದ ಗಾಜಿನಲ್ಲಿ ಬೆಳಕು ಪ್ರತಿಫಲತವಾದಾಗ ಅದಕ್ಕೆ ಯಾವುದೋ ಬಣ್ಣವಿದ್ದಂತೆ ತೋರಬಹುದು. ಹಾಗೆಯೇ ಪ್ರಜ್ಞೆಯು ಭೌತಿಕ ಸನ್ನಿವೇಶಗಳ ಆಚ್ಛಾದನೆಯಿಂದ ವಿಕೃತವಾಗಿ ಪ್ರತಿಫಲಿತವಾಗಬಹುದು. ಆದರೆ ಈಶ್ವರನ ಪ್ರಜ್ಞೆಯು ಭೌತಿಕ ಪ್ರಭಾವಕ್ಕೆ ಒಳಗಾಗುವುದಿಲ್ಲ. ಶ್ರೀಕೃಷ್ಣನು ಮಯಾಧ್ಯಕ್ಷೇಣ ಪ್ರಕೃತಿಃ ಎಂದು ಹೇಳುತ್ತಾನೆ. ಆತನು ಐಹಿಕ ವಿಶ್ವಕ್ಕೆ ಇಳಿದು ಬಂದಾಗ ಅವನ ಪ್ರಜ್ಞೆಗೆ ಐಹಿಕ ಲೇಪವು ಉಂಟಾಗುವುದಿಲ್ಲ. ಹಾಗೆ ಲೇಪವಾಗುವುದಾರೆ ಆತನು ಭಗವದ್ಗೀತೆಯಲ್ಲಿ ಮಾತನಾಡುವಂತೆ ಅಲೌಕಿಕ ವಿಷಯಗಳನ್ನು ಕುರಿತು ಮಾತನಾಡಲು ಅನರ್ಹವಾಗುತ್ತಾನೆ.
ಅಲೌಕಿಕ ಜಗತ್ತನ್ನು ಕುರಿತು ಏನನ್ನೂ ಹೇಳಲಾರ
ಭೌತಿಕವಾಗಿ ಕಲ್ಮಷಗೊಂಡ ಪ್ರಜ್ಞೆಯಿಂದ ಬಿಡುಗಡೆಯಾಗದವನು ಅಲೌಕಿಕ ಜಗತ್ತನ್ನು ಕುರಿತು ಏನನ್ನೂ ಹೇಳಲಾರ. ಆದುದರಿಂದ ಈಶ್ವರನಿಗೆ ಭೌತಿಕ ಕಲ್ಮಷವಿಲ್ಲ. ಆದರೆ ನಮ್ಮ ಪ್ರಜ್ಞೆಗೆ ಭೌತಿಕ ಕಲ್ಮಷ ಉಂಟಾಗಿದೆ. ಭೌತಿಕ ಕಲ್ಮಷವಿರುವ ಈ ಪ್ರಜ್ಞೆಯನ್ನು ನಾವು ಪರಿಶುದ್ಧಗೊಳಿಸಬೇಕು ಎಂದು ಭಗವದ್ಗೀತೆಯು ಉಪದೇಶಿಸುತ್ತದೆ. ಪರಿಶುದ್ಧ ಪ್ರಜ್ಞೆಯಲ್ಲಿ ನಮ್ಮ ಕಾರ್ಯಗಳು ಈಶ್ವರ ಸಂಕಲ್ಪಕ್ಕೆ ಸರಿಯಾಗಿ ಹೊಂದಿಕೆಯಾಗುತ್ತದೆ. ಅದರಿಂದ ನಮಗೆ ಸುಖವಾಗುತ್ತದೆ. ಎಂದರೆ ನಾವು ಕರ್ಮಗಳನ್ನು ಬಿಟ್ಟು ಬಿಡುತ್ತೇವೆ ಎಂದಲ್ಲ. ನಮ್ಮ ಕರ್ಮಗಳು ಪರಿಶುದ್ದವಾಗುತ್ತವೆ, ಅಷ್ಟೆ.
ಪರಿಶುದ್ಧವಾದ ಕರ್ಮವನ್ನು ಭಕ್ತಿ ಎಂದು ಕರೆಯುತ್ತಾರೆ. ಭಕ್ತಿ ಸ್ಥಿತಿಯಲ್ಲಿನ ಕರ್ಮಗಳು ಸಾಧಾರಣ ಕರ್ಮಗಳಂತೆಯೇ ತೋರುತ್ತವೆ. ಆದರೆ ಅವು ಕಶ್ಮಲರಹಿತವಾಗಿರುತ್ತವೆ. ಭಕ್ತನು ಸಾಮಾನ್ಯ ಮನುಷ್ಯರಂತೆಯೇ ಕರ್ಮ ಮಾಡುತ್ತಾನೆ. ಅಥವಾ ಕೆಲಸ ಮಾಡುತ್ತಾನೆ ಎಂದು ಅಜ್ಞಾನಿಯಾದವನಿಗೆ ತೋರಬಹುದು. ಆದರೆ ಹೆಚ್ಚು ತಿಳುವಳಿಕೆಯಿಲ್ಲದ ಭಕ್ತನ ಕ್ರಿಯೆಗಳಾಗಲೀ ಈಶ್ವರನ ಕ್ರಿಯೆಗಳಾಗಲೀ ಅಶುದ್ಧ ಪ್ರಜ್ಞೆಯಿಂದ ಅಥವಾ ಜಡದ ಸಂಪರ್ಕದಿಂದ ಕಲುಷಿತವಾಗಿಲ್ಲ ಎಂದು ಗೊತ್ತಾಗುವುದಿಲ್ಲ. ಅವು ಪ್ರಕೃತಿಯ ಮೂರು ಗುಣಗಳನ್ನೂ ಮೀರಿದವು. ಈಗಿರುವಂತೆ ನಮ್ಮ ಪ್ರಜ್ಞೆಯು ಕಲುಷಿತಗೊಂಡಿದೆ ಎನ್ನುವುದನ್ನು ನಾವು ತಿಳಿಯಬೇಕು ಎಂದು ಭಗವದ್ಗೀತೆಯಲ್ಲಿ ಬರೆಯಲಾಗಿದೆ.