Shakti Peethas: ನೀವು ದೇವಿ ಆರಾಧಕರಾಗಿದ್ದರೆ 51 ಶಕ್ತಿಪೀಠಗಳ ಹೆಸರು ನಿಮಗೆ ತಿಳಿದಿರಲೇಬೇಕು, ಇಲ್ಲಿದೆ ಮಾಹಿತಿ
ಹಿಂದೂಗಳು ಶಕ್ತಿ ಎಂದು ಆರಾಧಿಸುವುದು ದೇವಿಯನ್ನು. ಹಾಗಾಗಿ ಶಕ್ತಿ ಪೀಠಗಳು ದೇವಿಯನ್ನು ಆರಾಧಿಸುವ ಆಲಯಗಳಾಗಿ ಮಹತ್ವ ಪಡೆದುಕೊಂಡಿವೆ. ಶಕ್ತಿ ಪೀಠಗಳಲ್ಲಿ ಆದಿ ಶಕ್ತಿಯನ್ನು ಪೂಜಿಸಲಾಗುತ್ತದೆ. ದೇವಿಯ ಆರಾಧಕರು ತಪ್ಪದೇ ತಿಳಿದುಕೊಳ್ಳಬೇಕಾದ 51 ಶಕ್ತಿಪೀಠಗಳ ಕುರಿತು ಮಾಹಿತಿ ಇಲ್ಲಿದೆ. (ಬರಹ: ಅರ್ಚನಾ ವಿ. ಭಟ್)
ಹಿಂದೂ ಧರ್ಮದಲ್ಲಿ ದೇವಿ ಆರಾಧನೆಗೂ ಬಹಳ ಮಹತ್ವವಿದೆ. ಆ ಕಾರಣಕ್ಕೆ ಶಕ್ತಿ ಪೀಠಗಳು ಮಹತ್ವಪೂರ್ಣ ತೀರ್ಥ ಕ್ಷೇತ್ರಗಳಾಗಿವೆ. ಅಲ್ಲಿ ಆದಿ ಶಕ್ತಿಯನ್ನು ಬೇರೆ ಬೇರೆ ರೂಪಗಳಲ್ಲಿ ಪೂಜಿಸಲಾಗುತ್ತದೆ. ಶಕ್ತಿ ಪೀಠಗಳಲ್ಲಿ ಶಿವನ ಪತ್ನಿಯಾದ ಸತಿಯನ್ನು ಆರಾಧಿಸಲಾಗುತ್ತದೆ. ಪ್ರಪಂಚದಲ್ಲಿ ಒಟ್ಟು 51 ಶಕ್ತಿಪೀಠಗಳಿದ್ದು, ಎಲ್ಲಾ ಶಕ್ತಿ ಪೀಠಗಳನ್ನು ಪುಣ್ಯ ಕ್ಷೇತ್ರಗಳೆಂದು ಪರಿಗಣಿಸಲಾಗಿದೆ. ಅವುಗಳಲ್ಲಿ ಹೆಚ್ಚಿನವು ಭಾರತದಲ್ಲಿದ್ದರೆ ಉಳಿದವುಗಳು ಟಿಬೆಟ್, ಶ್ರೀಲಂಕಾ, ಭೂತಾನ್, ಬ್ಲಾಂಗಾದೇಶ, ನೇಪಾಳ ಮತ್ತು ಪಾಕಿಸ್ಥಾನಗಳಲ್ಲಿವೆ. ಹಿಂದೂಗಳು ಶಕ್ತಿ ಎಂದು ಆರಾಧಿಸುವುದು ದೇವಿಯನ್ನು. ಹಾಗಾಗಿ ಶಕ್ತಿ ಪೀಠಗಳು ದೇವಿಯನ್ನು ಆರಾಧಿಸುವ ದೇವಸ್ಥಾನಗಳಾಗಿ ಮಹತ್ವವನ್ನು ಪಡೆದುಕೊಂಡಿದೆ. ಅಲ್ಲಿ ಆದಿ ಶಕ್ತಿಯ ಪೂಜೆಗೆ ಮಹತ್ವ ನೀಡಲಾಗುತ್ತದೆ. ಶಕ್ತಿ ಪೀಠಗಳ ಬಗ್ಗೆ ಹಲವಾರು ಕಥೆಗಳಿವೆ. ಎಲ್ಲಾ ಕಥೆಗಳು ಶಿವನ ಪತ್ನಿ ಸತಿಯ ಮರಣದ ನಂತರ ನಡೆದ ಘಟನೆಗಳ ಮೇಲೆ ಕೇಂದ್ರೀಕೃತವಾಗಿದೆ.
ಹಿಂದೂಗಳು ಭೇಟಿ ನೀಡುವ ಪುಣ್ಯ ಕ್ಷೇತ್ರಗಳಾದ ಶಕ್ತಿ ಪೀಠಗಳು ಪುರಾಣ ಪ್ರಸಿದ್ಧ ದೇವಸ್ಥಾನಗಳಷ್ಟೇ ಅಲ್ಲ, ಭಕ್ತರ ಇಷ್ಟಾರ್ಥಗಳನ್ನು ಈಡೇರಿಸುವ ಕೇಂದ್ರಗಳು ಆಗಿವೆ. ಆ ಶಕ್ತಿ ಪೀಠಗಳು ಆದಿ ಶಕ್ತಿಯ ದೇಹದ ವಿವಿಧ ಭಾಗಗಳಿಗೆ ಸಮರ್ಪಿತವಾಗಿದೆ. ಶಿವನು ಸತಿಯ ಮರಣದ ನಂತರ ಅವಳ ದೇಹವನ್ನು ಕೈಲಾಸಕ್ಕೆ ತೆಗೆದುಕೊಂಡು ಬರುತ್ತಾನೆ. ದುಃಖತಪ್ತನಾದ ಪರಶಿವನು ಸತಿಯ ದೇಹವನ್ನು ಹಿಡಿದು ಇಡೀ ಬ್ರಹ್ಮಾಂಡವನ್ನು ಅಲೆಯುತ್ತಾನೆ. ಅವನ ವೇದನೆಯನ್ನು ಸಹಿಸದ ವಿಷ್ಣುವು ತನ್ನ ಸುದರ್ಶನ ಚಕ್ರವನ್ನು ಉಪಯೋಗಿಸಿ ಸತಿಯ ದೇಹವನ್ನು 51 ಭಾಗಗಳಾಗಿ ಬೇರ್ಪಡಿಸಿದನು. ಅದನ್ನು ಭೂಮಿಯ ಮೇಲೆ ಎಸೆಯುತ್ತಾನೆ. ಹೀಗೆ ಸತಿಯ ದೇಹದ ಭಾಗಗಳು ಬಿದ್ದ ಸ್ಥಳಗಳೇ ಶಕ್ತಿ ಪೀಠಗಳಾಗಿ ಇಂದು ಪೂಜಿಸಲ್ಪಡುತ್ತಿದೆ. ಭಾರತದ ಮಾತ್ರವಲ್ಲದೇ ಬಾಂಗ್ಲಾದೇಶದಲ್ಲಿ 7, ನೇಪಾಳದಲ್ಲಿ 4, ಪಾಕಿಸ್ಥಾನದಲ್ಲಿ 3 ಮತ್ತು ಟಿಬೆಟ್, ಶ್ರೀಲಂಕಾ ಮತ್ತು ಭೂತಾನ್‌ನಲ್ಲಿ ತಲಾ ಒಂದೊಂದು ಶಕ್ತಿಪೀಠಗಳಿವೆ. ಹೆಚ್ಚಿನ ಶಕ್ತಿ ಪೀಠಗಳನ್ನು ನಾವು ಭಾರತದಲ್ಲಿಯೇ ಕಾಣಬಹುದಾಗಿದೆ.
ಶಕ್ತಿ ಪೀಠಗಳಲ್ಲಿ ಸತಿ ಅಂದರೆ ದೇವಿಯ ಜೊತೆಗೆ ಶಿವನಿಗೂ ಪೂಜೆ ಸಲ್ಲುತ್ತದೆ. ಅಲ್ಲಿ ಶಿವನು ಸತಿಯನ್ನು ರಕ್ಷಿಸುತ್ತಾನೆ ಎಂಬ ನಂಬಿಕೆ ಇದೆ. ಸತಿಯ ದೇಹದ ಭಾಗಗಳಿಂದಾದ ಶಕ್ತಿಪೀಠಗಳು ಹೀಗಿವೆ.
51 ಶಕ್ತಿ ಪೀಠಗಳ ಹೆಸರು, ಸ್ಥಳ ಹಾಗೂ ಸತಿಯ ದೇಹದ ಭಾಗ
1. ಅಮರನಾಥ, ಜಮ್ಮು ಮತ್ತು ಕಾಶ್ಮೀರ (ಗಂಟಲು)
2. ಕಾತ್ಯಾಯನಿ, ಮಥುರಾ ಉತ್ತರ ಪ್ರದೇಶ (ಕೂದಲು)
3. ವಿಶಾಲಾಕ್ಷೀ, ವಾರಣಾಸಿ ಉತ್ತರ ಪ್ರದೇಶ (ಕಿವಿಯೋಲೆ)
4. ಲಿಲತಾ, ಅಲಹಾಬಾದ್ ಉತ್ತರ ಪ್ರದೇಶ (ಬೆರಳುಗಳು)
5. ಜ್ವಾಲಾ ದೇವಿ, ಕಾಂಗ್ರಾ ಹಿಮಾಚಲ ಪ್ರದೇಶ (ನಾಲಿಗೆ)
6. ತ್ರಿಪುರಮಾಲಿನಿ, ಜಲಂಧರ ಪಂಜಾಬ್ (ಎಡ ಸ್ಥನ)
7. ಸಾವಿತ್ರಿ, ಕುರುಕ್ಷೇತ್ರ ಹರಿಯಾಣ (ಬಲ ಪಾದದ ಮೇಲ್ಭಾಗ)
8. ಮಗಧಾ, ಪಟ್ನಾ ಬಿಹಾರ್, (ದೇಹದ ಬಲಭಾಗ)
9. ದಾಕ್ಷಾಯಣಿ, ಬುರಾಂಗ್ ಟಿಬೆಟ್ (ಬಲ ಅಂಗೈ)
10. ಮಹಿಷಾಸುರಮರ್ಧಿನಿ, ಕೊಲ್ಹಾಪುರ ಮಹಾರಾಷ್ಟ್ರ (ಮೂರನೇ ಕಣ್ಣು)
11. ಭ್ರಮರಿ, ನಾಸಿಕ್ ಮಹಾರಾಷ್ಟ್ರ (ಗಲ್ಲ)
12. ಅಂಬಾಜಿ, ಅಂಬಾಜಿ ಗುಜರಾತ್ (ಹೃದಯ)
13. ಗಾಯತ್ರಿ, ಪುಷ್ಕರ ರಾಜಸ್ಥಾನ (ಮುಂಗೈ)
14. ಅಂಬಿಕಾ, ಭರತಪುರ (ಎಡ ಪಾದ)
15. ಶ್ರೀಶೈಲ, ಪೂರ್ವ ಗೋದಾವರಿ ಆಂಧ್ರಪ್ರದೇಶ (ಎಡ ಗಲ್ಲ)
16. ಶ್ರಾವಣಿ, ಕನ್ಯಾಕುಮಾರಿ ತಮಿಳುನಾಡು (ಬೆನ್ನು ಮತ್ತು ಬೆನ್ನು ಹುರಿ)
17. ಭ್ರಮರಾಂಭ, ಕರ್ನೂಲ್ ಆಂಧ್ರ ಪ್ರದೇಶ (ಬಲ ಪಾದದ ಮೇಲ್ಭಾಗ)
18. ನಾರಾಯಣಿ, ಕನ್ಯಾಕುಮಾರಿ ತಮಿಳುನಾಡು (ಮೇಲಿನ ಹಲ್ಲು)
19. ಫುಲ್ಲಾರ, ಪಶ್ಚಿಮ ಬಂಗಾಳ (ಕೆಳ ತುಟಿ)
20. ಬಹುಳಾ, ಪಶ್ಚಿಮ ಬಂಗಾಳ (ಎಡ ತೋಳು)
21. ಮಹಿಶಮರ್ಧಿನಿ, ಬಿರ್‌ಭೂಮ್ ಪಶ್ಚಿಮ ಬಂಗಾಳ, (ಹುಬ್ಬಿನ ಮಧ್ಯದಲ್ಲಿರುವ ತಲೆಯ ಭಾಗ)
22. ದಕ್ಷಿಣ ಕಾಳಿ, ಕೋಲ್ಕತ್ತಾ ಪಶ್ಚಿಮ ಬಂಗಾಳ (ಬಲಗಡೆಯ ಕಾಲಿನ ಬೆರಳು)
23. ದೇವಗರ್ಭ, ಬಿರ್‌ಭೂಮ್ ಪಶ್ಚಿಮ ಬಂಗಾಳ (ಮೂಳೆ)
24. ವಿಮಲಾ, ಮುರ್ಷಿದಾಬಾದ್ ಪಶ್ಚಿಮ ಬಂಗಾಳ (ಕಿರೀಟ)
25. ಕುಮಾರಿ ಶಕ್ತಿ, ಹೂಗ್ಲಿ ಪಶ್ಚಿಮ ಬಂಗಾಳ (ಬಲ ಭುಜ)
26. ಭ್ರಾಮ್ರಿ, ಜಲಪಾಯ್‌ಗುರಿ ಪಶ್ಚಿಮ ಬಂಗಾಳ (ಎಡ ಕಾಲು)
27. ನಂದಿನಿ, ಬಿರ್‌ಬೂಮ್ ಪಶ್ಚಿಮ ಬಂಗಾಳ (ನೆಕ್ಲೇಸ್)
28. ಮಂಗಲ ಚಂಡಿಕಾ, ಪೂರ್ಬಾ ಭದ್ರಮಾನ್ ಪಶ್ಚಿಮ ಬಂಗಾಳ (ಬಲ ಮುಂಗೈ)
29. ಕಪಾಲಿನಿ ಪುರ್ಬಾ, ಮೇದಿನಿಪರ ಪಶ್ಚಿಮ ಬಂಗಾಳ (ಎಡ ಕಾಲಿನ ಮೇಲ್ಭಾಗ)
30. ಕಾಮಾಕ್ಯ, ಗುವಾಹಟಿ ಆಸ್ಸಾಂ (ಯೋನಿ)
31. ಜಯಂತಿ, ಪಶ್ಚಿಮ ಜೈಂತಿಯಾ ಬೆಟ್ಟ (ಎಡ ತೊಡೆ)
32. ತ್ರಿಪುರ ಸುಂದರಿ, ಗೋಮತಿ ತ್ರಿಪುರಾ (ಬಲ ಪಾದ)
33. ಬಿರಜಾ, ಜೈಪುರ ಓಡಿಶಾ (ನಾಭಿ)
34. ಜೈ ದುರ್ಗಾ, ಡಿಯೋಗಢ ಜಾರ್ಖಂಡ (ಕಿವಿ)
35. ಅವಂತಿ, ಉಜ್ಜಯನಿ ಮಧ್ಯಪ್ರದೇಶ (ಮೇಲಿನ ತುಟಿ)
36. ನರ್ಮಾದಾ, ಅಮರಕಂಟಕ ಮಧ್ಯ ಪ್ರದೇಶ (ಬಲ ಪೃಷ್ಠ)
37. ನಾಗಪೋಷಿಣಿ, ಉತ್ತರ ಶ್ರೀಲಂಕಾ (ಪಾದದ ಮೇಲ್ಭಾಗ)
38. ಗಂಡಕಿ ಚಂಡಿ, ಮುಸ್ತಾಂಗ್ ನೇಪಾಳ (ಕೆನ್ನೆ)
39. ಮಹಾಶಿರಾ, ಕಠ್ಮಂಡು ನೇಪಾಳ (ಸೊಂಟ)
40. ಹಿಂಗ್ಲಾಜ, ಪಾಕಿಸ್ಥಾನ (ತಲೆ)
41. ಸುಗಂಧಾ, ಬಾರಿಶಲ್ ಬಾಂಗ್ಲಾದೇಶ (ಮೂಗು)
42. ಅಪರ್ಣಾ, ಬೊಗ್ರಾ ಬಾಂಗ್ಲಾದೇಶ (ಎದೆಯ ಬಲಭಾಗ/ ಬಲ ಕಣ್ಣು/ ಕಾಲಿನ ಮೇಲ್ಭಾಗ)
43. ಜೆಸೊರೇಶ್ವರಿ, ಖುಲ್ನಾ ಬಾಂಗ್ಲಾದೇಶ (ಅಂಗೈ)
44. ಭವಾನಿ, ಚಿತ್ತಗಾಂಗ್ ಬಾಂಗ್ಲಾದೇಶ (ಬಲ ತೋಳು)
45. ಮಹಾಲಕ್ಷ್ಮಿ, ಬಾಂಗ್ಲಾದೇಶ (ಕುತ್ತಿಗೆ)
46. ಶ್ರೀ ಪರ್ವತ
47. ಪಂಚ ಸಾಗರ
48. ಮಿಥಿಲಾ
49. ರತ್ನವಲ್ಲಿ, ಚೆನ್ನೈ ತಮಿಳುನಾಡು
50. ಕಲ್ಮಾಧವ, ಅನ್ನುಪುರ, ಮಧ್ಯಪ್ರದೇಶ (ಎಡ ಪೃಷ್ಠ)
51. ರಾಮಗಿರಿ