ಕನ್ನಡ ಸುದ್ದಿ  /  ರಾಶಿ ಭವಿಷ್ಯ  /  ಸೀತಾ ಸ್ವಯಂವರದಲ್ಲಿ ಶ್ರೀರಾಮ ಮುರಿದ ಶಿವಧನಸ್ಸಿನಿಂದ ಗಾಂಡೀವದವರೆಗೆ; ಪುರಾಣಗಳಲ್ಲಿ ಬರುವ ಶಕ್ತಿಶಾಲಿ ಬಿಲ್ಲುಗಳ ಮಹತ್ವ ತಿಳಿಯಿರಿ

ಸೀತಾ ಸ್ವಯಂವರದಲ್ಲಿ ಶ್ರೀರಾಮ ಮುರಿದ ಶಿವಧನಸ್ಸಿನಿಂದ ಗಾಂಡೀವದವರೆಗೆ; ಪುರಾಣಗಳಲ್ಲಿ ಬರುವ ಶಕ್ತಿಶಾಲಿ ಬಿಲ್ಲುಗಳ ಮಹತ್ವ ತಿಳಿಯಿರಿ

ಪುರಾಣಗಳಲ್ಲಿ ಶ್ರೀರಾಮ, ಅರ್ಜುನ, ಪರಶುರಾಮರು ಬಳಸಿದ ಬಿಲ್ಲುಗಳಿಗೆ ವಿಶೇಷ ಮಹತ್ವವಿತ್ತು, ಇವು ಜಗತ್ತನ್ನೇ ನಾಶ ಮಾಡುವ ಶಕ್ತಿ ಹೊಂದಿದ್ದವು. ಶಿವಧನಸ್ಸಿನಿಂದ ಗಾಂಡೀವದವರೆಗೆ ಪುರಾಣಗಳಲ್ಲಿ ಬರುವ 4 ಅತ್ಯಂತ ಪ್ರಭಾವ ಶಾಲಿ ಬಿಲ್ಲುಗಳ ಬಗ್ಗೆ ನೀವು ತಿಳಿಯಬೇಕಾದ ಮಾಹಿತಿ ಇಲ್ಲಿದೆ.

ಶಿವಧನಸ್ಸು ಮುರಿಯುತ್ತಿರುವ ಶ್ರೀರಾಮ
ಶಿವಧನಸ್ಸು ಮುರಿಯುತ್ತಿರುವ ಶ್ರೀರಾಮ

ಜನಕ ಮಹಾರಾಜ ಸೀತಾದೇವಿಗೆ ಸ್ವಯಂವರ ಏರ್ಪಡಿಸುತ್ತಾನೆ. ಯಾರು ಶಿವ ಧನಸ್ಸನ್ನು ಮುರಿಯುತ್ತಾರೋ ಅವರು ಸೀತೆಯನ್ನು ವರಿಸಲು ಅರ್ಹರು ಎಂದು ಘೋಷಿಸುತ್ತಾನೆ. ಆ ಸಂದರ್ಭ ಭಗವಾನ್‌ ಶ್ರೀರಾಮ ಶಿವ ಧನಸ್ಸನ್ನು ಮುರಿಯಲು ಯಶಸ್ವಿಯಾಗುತ್ತಾನೆ, ಜೊತೆಗೆ ಸೀತೆಯನ್ನು ಮದುವೆಯಾಗುತ್ತಾನೆ. ಈ ವಿಚಾರ ಬಹುತೇಕ ಎಲ್ಲರಿಗೂ ತಿಳಿದಿದೆ. ಆದರೆ ಈ ಶಿವಧನಸ್ಸು ಅಥವಾ ಬಿಲ್ಲಿನ ಬಗ್ಗೆ ಹಲವರಿಗೆ ತಿಳಿದಿಲ್ಲ. ಶಿವಧನಸ್ಸು ತುಂಬಾ ಪ್ರಬಲ ಹಾಗೂ ಶಕ್ತಿಶಾಲಿಯಾಗಿದೆ. ಪೌರಾಣಿಕ ನಂಬಿಕೆಗಳ ಪ್ರಕಾರ ಪರಮೇಶ್ವರನ ಈ ಬಿಲ್ಲುನಲ್ಲಿ ಅವನ ಶಕ್ತಿ ಅಡಗಿದೆ. ಶಿವ ಧನಸ್ಸು ಮುರಿಯುವುದು ನಿಜಕ್ಕೂ ಸಾಮಾನ್ಯ ಸಂಗತಿಯಲ್ಲ, ಅಸಮಾನ್ಯರಿಗಷ್ಟೇ ಸಾಧ್ಯವಾಗುವ ಈ ಕೆಲಸದಿಂದಾಗಿ ಜನಕ ಮಹಾರಾಜನು ಸೀತೆಯನ್ನು ಶ್ರೀರಾಮನಿಗೆ ಮದುವೆ ಮಾಡಿಕೊಡುತ್ತಾನೆ.

ಪುರಾಣಗಳಲ್ಲಿ ಆಯುಧಗಳು ಎಂದರೆ ಬಿಲ್ಲು ಮತ್ತು ಬಾಣ. ಸಾಮಾನ್ಯವಾಗಿ ದೇವರುಗಳು ಹಾಗೂ ದೇವತೆಗಳ ಕೈಯಲ್ಲಿ ಇವನ್ನು ಕಾಡಬಹುದು. ಶ್ರೀರಾಮನಿಂದ ಹಿಡಿದು ಪರಶುರಾಮನವರೆಗೆ ಎಲ್ಲರೂ ಆಯುಧವಾಗಿ ಧನುಸ್ಸನ್ನು ಹೊಂದಿದ್ದರು. ಇವರೆಲ್ಲರೂ ಬಳಸಿದ ಈ ಆಯುಧಕ್ಕೆ ವಿಶೇಷ ಮಹತ್ವವಿದೆ, ಜೊತೆಗೆ ಅವುಗಳಿಗೆ ವಿಶಿಷ್ಠ ಶಕ್ತಿಯೂ ಇತ್ತು. ಪುರಾಣಗಳ ಪ್ರಕಾರ ಈ ವಿಶೇಷ ಆಯುಧಗಳನ್ನು ದೈವಿಕ ವಾಸ್ತುಶಿಲ್ಪಿ ವಿಶ್ವಕರ್ಮ ವಿನ್ಯಾಸಗೊಳಿಸಿದ್ದಾರೆ ಎನ್ನಲಾಗುತ್ತದೆ. ಈ ಆಯುಧಗಳನ್ನು ಶಕ್ತಿ, ಶೌರ್ಯ ಮತ್ತು ದೈವತ್ವದ ಸಂಕೇತವೆಂದು ಪರಿಗಣಿಸಲಾಗುತ್ತದೆ. ಪುರಾಣಗಳಲ್ಲಿ ಬರುವ 4 ಶಕ್ತಿಶಾಲಿ ಬಿಲ್ಲುಗಳಿವು.

ಗಾಂಡೀವ

ಹಿಂದೂ ಪುರಾಣಗಳಲ್ಲಿ ಗಾಂಡೀವ ಅತ್ಯಂತ ಪ್ರಸಿದ್ಧವಾದ ಶಕ್ತಿಶಾಲಿ ಬಿಲ್ಲುಗಳಲ್ಲಿ ಒಂದಾಗಿದೆ. ಗಾಂಡೀವವು ಮಹಾಭಾರತ ಮಹಾಕಾವ್ಯದಲ್ಲಿ ಕೃಷ್ಣ ಮತ್ತು ಅರ್ಜುನನ ನಡುವಿನ ಸಂಪರ್ಕದ ಸಂಕೇತವಾಗಿದೆ. ಇದು ಅರ್ಜುನನಿಗೆ ಕುರುಕ್ಷೇತ್ರ ಯುದ್ಧ ಗೆಲ್ಲಲು ಸಹಾಯ ಮಾಡಿತು. ಈ ಧನುಸ್ಸನ್ನು ವಿಶ್ವಕರ್ಮರು ವಿನ್ಯಾಸಗೊಳಿಸಿದ್ದಾರೆ. ಇದರಿಂದ ಜಳಪಿಸುವ ಬಾಣಗಳನ್ನು ಬಿಡಬಹುದಿತ್ತು. ಅಸಾಧ್ಯವಾದ ಒಟ್ಟು 108 ತಂತಿಗಳನ್ನು ಹೊಂದಿದ್ದ ಈ ಬಿಲ್ಲನ್ನು ಮುರಿಯುಲು ಸಾಧ್ಯವಿರಲಿಲ್ಲ. ಗಾಂಡೀವವನ್ನು ಅರ್ಜುನನು ಬಹಳ ಕೌಶಲದಿಂದ ಬಳಸಿದ್ದನು. ಕುರುಕ್ಷೇತ್ರ ಯುದ್ಧದಲ್ಲಿ ಇದು ಮಹತ್ತರವಾದ ಪಾತ್ರವನ್ನು ವಹಿಸಿದೆ ಎಂದು ಪುರಾಣಗಳು ಹೇಳುತ್ತವೆ.

ಸಾರಂಗ

ಸಾರಂಗ ಹಿಂದೂ ಪುರಾಣಗಳಲ್ಲಿ ಉಲ್ಲೇಖಿಸಲಾದ ಮತ್ತೊಂದು ಶಕ್ತಿಶಾಲಿ ಬಿಲ್ಲು. ರಾಮಾಯಣದಲ್ಲಿ ರಾಮನು ಈ ಬಿಲ್ಲನ್ನು ಬಳಸಿದ್ದಾನೆ. ಇದು ಅಪಾರ ಶಕ್ತಿ ಹೊಂದಿತ್ತು ಎಂದು ಹೇಳಲಾಗುತ್ತದೆ. ಸೀತಾದೇವಿಯನ್ನು ರಕ್ಷಿಸುವ ಹೋರಾಟದಲ್ಲಿ ರಾಕ್ಷಸರನ್ನು ಕೊಲ್ಲುವಲ್ಲಿ ಸಾರಂಗ ಬಿಲ್ಲು ಪ್ರಮುಖ ಪಾತ್ರ ವಹಿಸಿತ್ತು. ಹತ್ತು ತಲೆಯ ರಾಕ್ಷಸ ರಾವಣಾಸುರನನ್ನು ಕೊಲ್ಲಲು ರಾಮನು ಸಾರಂಗದಿಂದ ಬಾಣವನ್ನು ಹೊಡೆದನು. ಈ ಬಿಲ್ಲು ಕೆಟ್ಟದ್ದರ ಮೇಲೆ ಒಳ್ಳೆಯದ ವಿಜಯವನ್ನು ಪ್ರತಿನಿಧಿಸುತ್ತದೆ.

ಪಿನಾಕ

ಪಿನಾಕ ಬಿಲ್ಲು ಎಂದರೆ ಯಾರಿಗೂ ಅರ್ಥವಾಗುವುದಿಲ್ಲ. ಆದರೆ ಸೀತಾ ಸ್ವಯಂವರದಲ್ಲಿ ಶ್ರೀರಾಮ ಮುರಿದ ಶಿವನ ಧನುಸ್ಸು ಎಲ್ಲರಿಗೂ ಗೊತ್ತು. ಈ ಬಿಲ್ಲು ಮುರಾ ಎಂಬ ರಾಕ್ಷಸನ ಕೊಂಬಿನಿಂದ ರೂಪುಗೊಂಡಿತು. ಇದನ್ನು ಶಿವಧನಸ್ಸು ಎನ್ನುತ್ತಾರೆ. ಶಿವನ ಆಯುಧ. ದಕ್ಷ ಪ್ರಜಾಪತಿ ಪಿನಾಕ ವಿನಾಶದ ಸಂಕೇತವಿದು. ಶ್ರೀರಾಮನು ಈ ಶಿವ ಭರ್ಜಿಯನ್ನು ಸುಲಭವಾಗಿ ಮುರಿದನು. ನಂತರ ಶ್ರೀರಾಮನು ಸೀತಾದೇವಿಯನ್ನು ವಿವಾಹವಾದನು. ಪಿನಾಕವು ಇಡೀ ಮಾನವಕುಲ ಮತ್ತು ಜಗತ್ತನ್ನು ನಾಶ ಮಾಡುವ ಶಕ್ತಿಯನ್ನು ಹೊಂದಿತ್ತು.

ವಿಜಯ

ವಿಜಯ ಎಂಬುದು ವಿಷ್ಣುವಿನ ಆರನೇ ಅವತಾರವಾದ ಪರಶುರಾಮ ಬಳಸಿದ ಬಿಲ್ಲಿನ ಹೆಸರು. ಪರಶುರಾಮನು ಜನರ ಮೇಲೆ ದಬ್ಬಾಳಿಕೆ ಮಾಡುತ್ತಿದ್ದ ರಾಜರನ್ನು ಕೊಲ್ಲಲು ಈ ಆಯುಧವನ್ನು ಹಿಡಿದನು. ಪುರಾಣಗಳ ಪ್ರಕಾರ, ಈ ಧನುಸ್ಸನ್ನು ಪರಶುರಾಮನಿಗೆ ಸ್ವತಃ ಶಿವನೇ ಉಡುಗೊರೆಯಾಗಿ ನೀಡಿದ್ದಾನೆ ಎಂದು ಹೇಳಲಾಗುತ್ತದೆ. ಇದು ದೈವಿಕ ಶಕ್ತಿಗಳ ಒಕ್ಕೂಟವನ್ನು ಸಂಕೇತಿಸುತ್ತದೆ ಎಂಬ ಮಾತು ಇದೆ. ಶತ್ರುಗಳನ್ನು ಕೊಲ್ಲುವಲ್ಲಿ ಇದು ಪ್ರಮುಖ ಪಾತ್ರ ವಹಿಸಿದೆ. ಮಹಾಕಾವ್ಯಗಳಲ್ಲಿ ಧರ್ಮವನ್ನು ಎತ್ತಿಹಿಡಿಯುವಲ್ಲಿ ವಿಜಯ ವಿಲ್ಲು ಪ್ರಮುಖ ಪಾತ್ರ ವಹಿಸಿದೆ.