ಕನ್ನಡ ಸುದ್ದಿ  /  Astrology  /  Tomorrow Horoscope Astrological Prediction For 2nd March 2024 Horoscope Kundali News In Kannada Sts

Tomorrow Horoscope: ಒಳ್ಳೆಯ ನಡವಳಿಕೆಯಿಂದ ವಿದ್ಯಾರ್ಥಿಗಳು ಶಿಕ್ಷಕರ ಪ್ರೀತಿ ಸಂಪಾದಿಸುತ್ತಾರೆ; ನಾಳೆಯ ದಿನ ಭವಿಷ್ಯ

2nd March 2024 Horoscope: ಪ್ರತಿಯೊಂದು ರಾಶಿಗೂ ಅದರದ್ದೇ ಆದ ಅಧಿಪತಿಗಳಿರುತ್ತಾರೆ. ಪಾಪ-ಪುಣ್ಯಗಳಿಗೆ ಅನುಸಾರವಾಗಿ ಗ್ರಹಗತಿಗಳು ನಿಮಗೆ ಫಲಾಫಲಗಳನ್ನು ನೀಡುತ್ತವೆ. ನಾಳೆ ಯಾವ ರಾಶಿಯವರಿಗೆ ಶುಭ..? ಯಾರಿಗೆ ಅಶುಭ..? ಎಂಬುದನ್ನು ನೋಡೋಣ, ನಾಳೆಯ ದಿನ ಭವಿಷ್ಯ ಹೀಗಿದೆ.

ನಾಳೆಯ ದಿನ ಭವಿಷ್ಯ
ನಾಳೆಯ ದಿನ ಭವಿಷ್ಯ (PC: Manjunath kotagunasi)

ನಾಳೆಯ ದಿನ ಭವಿಷ್ಯ: 'ನಾಳೆ ಏನಾಗುವುದೋ ಬಲ್ಲವರು ಯಾರು' ಎನ್ನುವುದು ತತ್ವಶಾಸ್ತ್ರದ ದೊಡ್ಡ ಮಾತು. ಜನಪ್ರಿಯ ಭಕ್ತಿಗೀತೆಯ ಸಾಲೂ ಹೌದು. ಎಷ್ಟೋ ಜನರು ದಿನ ಆರಂಭಿಸುವ ಮೊದಲು, ಏನಾದರೂ ಮಹತ್ವದ ಕೆಲಸಗಳನ್ನು ಆರಂಭಿಸುವ ಮೊದಲು 'ದಿನ ಭವಿಷ್ಯ' ಹೇಗಿದೆ ಎಂದು ನೋಡಿಕೊಳ್ಳುವ ರೂಢಿ ಇರಿಸಿಕೊಂಡಿದ್ದಾರೆ. ಅಂಥವರಿಗೆ ಕೈದೀವಿಗೆಯಾಗುವ ಬರಹ ಇದು. ಜ್ಯೋತಿಷ್ಯ ಶಾಸ್ತ್ರವನ್ನು ಸಾಂಪ್ರದಾಯಿಕವಾಗಿ ಅಭ್ಯಾಸ ಮಾಡಿರುವ ಹಿರಿಯ ಜ್ಯೋತಿಷಿ ಎಚ್. ಸತೀಶ್ ಎಲ್ಲ ರಾಶಿಗಳ ಭವಿಷ್ಯವನ್ನು ಶ್ರದ್ಧೆಯಿಂದ ಬರೆಯುತ್ತಾರೆ. ಈ ಮಾತನ್ನು ಒತ್ತಿ ಹೇಳಲು ಕಾರಣವಿದೆ. ಇದು ಜ್ಯೋತಿಷಿಯೇ ಬರೆಯುವ ರಾಶಿ ಭವಿಷ್ಯ. ನಿಮ್ಮ ನಂಬಿಕೆಗಳನ್ನು ನಾವು ಗೌರವಿಸುತ್ತೇವೆ. (2nd March 2024 Horoscope).

ನಾಳೆಯ ಪಂಚಾಂಗ

ಶ್ರೀ ಶೋಭಕೃತುನಾಮ ಸಂವತ್ಸರ-ಉತ್ತರಾಯಣ-ಶಿಶಿರ ಋತು-ಫಾಲ್ಗುಣ ಮಾಸ-ಕೃಷ್ಣಪಕ್ಷ-ಶನಿವಾರ

ತಿಥಿ : ಸಪ್ತಮಿ ರಾತ್ರಿ 03.20 ವರೆಗೂ ಇದ್ದು ನಂತರ ಅಷ್ಟಮಿ ಆರಂಭವಾಗುತ್ತದೆ.

ನಕ್ಷತ್ರ: ವಿಶಾಖ ನಕ್ಷತ್ರವು 10.19 ರವರೆಗೆ ಇರುತ್ತದೆ ನಂತರ ಅನೂರಾಧಾ ನಕ್ಷತ್ರ ಆರಂಭವಾಗುತ್ತದೆ.

ಸೂರ್ಯೋದಯ: ಬೆಳಗ್ಗೆ 06.34

ಸೂರ್ಯಾಸ್ತ: ಸಂಜೆ 06.27

ರಾಹುಕಾಲ : ಬೆಳಗ್ಗೆ09.00 ರಿಂದ 10.30

ರಾಶಿ ಫಲ

ಮೇಷ

ಭೂ ವ್ಯವಹಾರದಲ್ಲಿ ಆತುರ ಬೇಡ. ದ್ರವವರೂಪದ ಆಹಾರದ ಸೇವನೆಯಿಂದ ಆರೋಗ್ಯದಲ್ಲಿ ತೊಂದರೆ. ನಿಮ್ಮ ದುಡುಕಿನ ಮಾತಿನಿಂದ ಕುಟುಂಬದಲ್ಲಿ ಬೇಸರ ಉಂಟಾಗಬಹುದು. ಉದ್ಯೋಗದಲ್ಲಿ ಉನ್ನತ ಮಟ್ಟ ತಲುಪಿವಿರಿ. ಏಕಾಂಗಿಯಾಗಿ ಇರಲು ಬಯಸುವಿರಿ. ಶಾಂತಿ ಸಹನೆಯಿಂದ ವರ್ತಿಸಿದಲ್ಲಿ ನಿರೀಕ್ಷಿತ ಯಶಸ್ಸು ದೊರೆಯುತ್ತದೆ. ವಿದ್ಯಾರ್ಥಿಗಳು ಒಳ್ಳೆಯ ನಡವಳಿಕೆಯಿಂದ ಶಿಕ್ಷಕರ ಪ್ರೀತಿಯನ್ನು ಸಂಪಾದಿಸುತ್ತಾರೆ. ವ್ಯಾಪಾರ ವ್ಯವಹಾರಗಳಲ್ಲಿ ಲಾಭವಿದೆ. ಉಂಟಾಗಲಿದೆ.

ಪರಿಹಾರ : ಪೂರ್ವಿಕರ ಮನೆಯಲ್ಲಿ ನೀರಿನ ವ್ಯವಸ್ಥೆಯನ್ನು ಮಾಡಿ ದಿನದ ಕೆಲಸ ಆರಂಭಿಸಿ.

ಅದೃಷ್ಟದ ಸಂಖ್ಯೆ : 10

ಅದೃಷ್ಟದ ದಿಕ್ಕು : ಈಶಾನ್ಯ

ಅದೃಷ್ಟದ ಬಣ್ಣ: ಕಪ್ಪು

ವೃಷಭ

ಜೀವನದಲ್ಲಿ ಯಶಸ್ಸಿನ ಜೊತೆ ವಿರೋಧಿಗಳು ಹೆಚ್ಚುತ್ತಾರೆ. ಹಟ ಮತ್ತು ಛಲದ ಗುಣದಿಂದ ಕೆಲಸ ಕಾರ್ಯಗಳಲ್ಲಿ ಯಶಸ್ಸಸ್ಸು ಗಳಿಸುವಿರಿ. ಉದ್ಯೋಗದಲ್ಲಿ ಉನ್ನತ ಸ್ಥಾನ ಲಭಿಸುತ್ತದೆ. ವಿದ್ಯಾರ್ಥಿಗಳು ಆತ್ಮವಿಶ್ವಾಸ ಹೆಚ್ಚಿಸಿಕೊಳ್ಳಬೇಕು. ಹೆಚ್ಚಿನ ವಿದ್ಯಾಭ್ಯಾಸಕ್ಕಾಗಿ ದೂರದ ಊರಿಗೆ ತೆರಳಬೇಕಾಗುತ್ತದೆ. ಹೃದಯದ ಸಮಸ್ಯೆ ಇರುವವರು ವೈದ್ಯರನ್ನು ಭೇಟಿ ಮಾಡಬೇಕು. ಮೌನದಿಂದ ವರ್ತಿಸುವುದು ಒಳಿತು.

ಪರಿಹಾರ : ಧಾರ್ಮಿಕ ಕೇಂದ್ರಕ್ಕೆ ಎಳನೀರು ಮತ್ತು ದೀಪದ ಎಣ್ಣೆಯನ್ನು ನೀಡಿ ದಿನದ ಕೆಲಸವನ್ನು ಆರಂಭಿಸಿರಿ.

ಅದೃಷ್ಟದ ಸಂಖ್ಯೆ : 1

ಅದೃಷ್ಟದ ದಿಕ್ಕು : ಪೂರ್ವ

ಅದೃಷ್ಟದ ಬಣ್ಣ : ತಿಳಿ ಹಸಿರು

ಮಿಥುನ

ವಿವಾಹದ ವಿಚಾರದಲ್ಲಿ ಒಮ್ಮತ ಕಾಣುವುದಿಲ್ಲ. ವ್ಯಾಪಾರ ಮತ್ತು ಹಣದ ವ್ಯವಹಾರಗಳಲ್ಲಿ ಲಾಭವಿರುತ್ತದೆ. ಕಂತು ವ್ಯಾಪಾರದಲ್ಲಿ ಹಿನ್ನೆಡೆ ಇರುತ್ತದೆ. ಉದ್ಯೋಗದಲ್ಲಿ ಹಿರಿಯ ಅಧಿಕಾರಿಗಳ ಪ್ರಶಂಸೆ ಲಭಿಸುತ್ತದೆ. ವಾದ ಉಂಟಾದಲ್ಲಿ ಸಹನೆ ಕಳೆದುಕೊಳ್ಳುವಿರಿ. ದಾಂಪತ್ಯದಲ್ಲಿ ಬಿನಾಭಿಪ್ರಾಯ ಇರುತ್ತದೆ. ವಿದ್ಯಾರ್ಥಿಗಳು ಹೊಣೆಯನ್ನು ಅರಿತು ಅಧ್ಯಯನ ಮುಂದುವರಿಸುವರು.

ಪರಿಹಾರ : ತಾಯಿಯ ಆಶೀರ್ವಾದ ಪಡೆದು ದಿನದ ಕೆಲಸವನ್ನು ಆರಂಭಿಸಿರಿ.

ಅದೃಷ್ಟದ ಸಂಖ್ಯೆ : 4

ಅದೃಷ್ಟದ ದಿಕ್ಕು : ನೈರುತ್ಯ

ಅದೃಷ್ಟದ ಬಣ್ಣ: ನಸುಗೆಂಪು

ಕಟಕ

ಹುಟ್ಟೂರಿನಲ್ಲಿ ಇರುವ ಧಾರ್ಮಿಕ ಕೇಂದ್ರವೊಂದರ ದುರಸ್ತಿಯ ಕಾರ್ಯಭಾರ ನಿಮದಾಗುತ್ತದೆ. ಉದ್ಯೋಗದಲ್ಲಿ ಸಹೋದ್ಯೋಗಿಗಳ ಸಹಾಯ ಇರುತ್ತದೆ. ಸೊಗಸಾದ ಮಾತಿನಿಂದ ಎಲ್ಲರ ಮನ ಗೆಲ್ಲುವಿರಿ. ವಿದ್ಯಾರ್ಥಿಗಳು ಹೆಚ್ಚಿನ ಅಧ್ಯಯನ ಮಾಡುವ ಸಲುವಾಗಿ ವಿದೇಶಕ್ಕೆ ತೆರಳುವರು. ಸಹಾಯ ಅರಸಿ ಬಂದವರಿಗೆ ನಿರಾಶೆ ಮಾಡುವುದಿಲ್ಲ. ವ್ಯಾಪಾರ ವ್ಯವಹಾರಗಳಲ್ಲಿ ಲಾಭವಿರುತ್ತದೆ.

ಪರಿಹಾರ : ಕುಟುಂಬದ ಹಿರಿಯರ ಮಾರ್ಗದರ್ಶನದಲ್ಲಿ ದಿನದ ಕೆಲಸ ಆರಂಭಿಸಿರಿ.

ಅದೃಷ್ಟದ ಸಂಖ್ಯೆ : 11

ಅದೃಷ್ಟದ ದಿಕ್ಕು : ಪಶ್ಚಿಮ

ಅದೃಷ್ಟದ ಬಣ್ಣ: ನೀಲಿ ಮಿಶ್ರಿತ ಬಿಳಿ

ಸಿಂಹ

ಸಮಾಜದ ಗಣ್ಯವ್ಯಕ್ತಿಗಳ ಸಹವಾಸ ದೊರೆಯುತ್ತದೆ. ರಾಜಕೀಯ ಸೇರುವ ಹಂಬಲವಿದ್ದಲ್ಲಿ ಸಾಧ್ಯವಾಗಲಿದೆ. ವಿದ್ಯಾರ್ಥಿಗಳು ಗೌರವಯುತ ಮಟ್ಟ ತಲುಪಲಿದ್ದಾರೆ. ಕುಟುಂಬದ ಹಿರಿಯರೊಬ್ಬರ ಪಾಲುಗಾರಿಕೆಯಲ್ಲಿ ವ್ಯಾಪಾರ ಆರಂಭಿಸುವಿರಿ. ಸೋದರನ ದಾಂಪತ್ಯದ ತೊಂದರೆ ದೂರವಾಗಲು ಕಾರಣರಾಗುವಿರಿ.

ಪರಿಹಾರ : ಕಣ್ಣಿನ ತೊಂದರೆ ಇರುವವರಿಗೆ ಸಹಾಯ ಮಾಡಿ ದಿನದ ಕೆಲಸವನ್ನು ಆರಂಭಿಸಿರಿ.

ಅದೃಷ್ಟದ ಸಂಖ್ಯೆ : 2

ಅದೃಷ್ಟದ ದಿಕ್ಕು : ಉತ್ತರ

ಅದೃಷ್ಟದ ಬಣ್ಣ: ಬಿಳಿ

ಕನ್ಯಾ

ಉದ್ಯೋಗ ಬದಲಿಸುವಿರಿ. ಕೃಷಿಯಾಧಾರಿತ ವೃತ್ತಿಯಲ್ಲಿ ನೆಮ್ಮದಿ ಇರುತ್ತದೆ. ವಿದ್ಯಾರ್ಥಿಗಳು ಏಕಾಂಗಿಯಾಗಿ ಉತ್ತಮ ಸಾಧನೆ ಮಾಡುವರು. ಭೂವ್ಯವಹಾರದಲ್ಲಿ ಅನಾವಶ್ಯಕ ವಿವಾದ ಎದುರಾಗುತ್ತದೆ. ಮಾಡಿದ ತಪ್ಪನ್ನು ಒಪ್ಪಿಕೊಳ್ಳುವ ಪರಸ್ಥಿತಿ ಎದುರಾಗುತ್ತದೆ. ಹೊಸ ವ್ಯಾಪಾರ ಆರಂಭಿಸದಿರಿ. ಅನಗತ್ಯವಾಗಿ ಬೇರೆಯವರ ಪ್ರಭಾವಕ್ಕೆ ಒಳಗಾಗುವಿರಿ.

ಪರಿಹಾರ : ಹಳದಿ ಬಣ್ಣದ ಬಟ್ಟೆಗಳನ್ನು ದಾನ ನೀಡಿ ದಿನದ ಕೆಲಸಗಳನ್ನು ಆರಂಭಿಸಿರಿ

ಅದೃಷ್ಟದ ಸಂಖ್ಯೆ : 5

ಅದೃಷ್ಟದ ದಿಕ್ಕು : ಈಶಾನ್ಯ

ಅದೃಷ್ಟದ ಬಣ್ಣ: ಬೂದು ಬಣ್ಣ

ತುಲಾ

ಹಣ್ಣುಗಳ ರಫ್ತು ವ್ಯಾಪಾರದಲ್ಲಿ ಉತ್ತಮ ಆದಾಯ ದೊರೆಯುತ್ತದೆ. ಉದ್ಯೋಗ ಕ್ಷೇತ್ರದಲ್ಲಿ ವಿಶೇಷವಾದ ಅನುಕೂಲತೆ ದೊರೆಯುತ್ತದೆ. ಭೂ ವಿವಾದವೊಂದು ಎದುರಾಗುತ್ತದೆ. ಲೇಖಕರಿಗೆ ಸಮಾಜದಲ್ಲಿ ಗೌರವಯುತ ಸ್ಥಾನ ಪಡೆಯಲಿದ್ದಾರೆ. ಆದಾಯದಲ್ಲಿ ಹೆಚ್ಚಳ ಕಂಡುಬರುತ್ತದೆ. ಕುಟುಂಬದಲ್ಲಿ ಪರಸ್ಪರ ಅನ್ಯೋನ್ಯತೆ ಇರುತ್ತದೆ. ಮನಶಾಸ್ತ್ರಜ್ಞರಿಗೆ ವಿಶೇಷ ಉದ್ಯೋಗಾವಕಾಶ ದೊರೆಯುತ್ತದೆ.

ಪರಿಹಾರ : ಕೆಂಪು ಬೆಲ್ಲದಿಂದ ಮಾಡಿದ ದ್ರವಾಹಾರವನ್ನು ಸೇವಿಸಿ ದಿನದ ಕೆಲಸವನ್ನು ಆರಂಭಿಸಿ.

ಅದೃಷ್ಟದ ಸಂಖ್ಯೆ : 12

ಅದೃಷ್ಟದ ದಿಕ್ಕು : ಪೂರ್ವ

ಅದೃಷ್ಟದ ಬಣ್ಣ: ಆಕಾಶ ನೀಲಿ

ವೃಶ್ಚಿಕ

ಕಲಾವಿದರಿಗೆ ಉತ್ತಮ ಅವಕಾಶಗಳು ದೊರೆಯುತ್ತವೆ. ಹಣಕಾಸಿನ ವ್ಯವಹಾರದಲ್ಲಿ ಉನ್ನತಿ ಇರುತ್ತದೆ. ಆದಾಯಕ್ಕೆ ತಕ್ಕಂತೆ ಖರ್ಚು ವೆಚ್ಚಗಳು ಇರುತ್ತವೆ. ಸಂಗೀತ ನಾಟ್ಯ ಬಲ್ಲವರಿಗೆ ಹೆಚ್ಚಿನ ಅವಕಾಶಗಳು ದೊರೆಯಲಿದೆ. ರಕ್ತ ಸಂಬಂಧಿಕರ ಜೊತೆ ಉತ್ತಮ ಬಾಂಧವ್ಯ ಇರದು. ಆತ್ಮೀಯರೊಂದಿಗೆ ವಿವಾದ ಉಂಟಾಗಬಹುದು.

ಪರಿಹಾರ : ಸೋದರರಿಗೆ ಸಹಾಯ ಮಾಡಿ ದಿನದ ಕೆಲಸವನ್ನು ಆರಂಭಿಸಿರಿ.

ಅದೃಷ್ಟದ ಸಂಖ್ಯೆ : 3

ಅದೃಷ್ಟದ ದಿಕ್ಕು : ದಕ್ಷಿಣ

ಅದೃಷ್ಟದ ಬಣ್ಣ: ಕೆಂಪು ಬಣ್ಣ

ಧನಸ್ಸು

ಹೊಸ ಮನೆಯನ್ನು ಕೊಳ್ಳುವ ಮಾತುಕತೆ ನಡೆಯುತ್ತದೆ. ಸುಲಭವಾಗಿ ಹಣ ಖರ್ಚು ಮಾಡುವುದಿಲ್ಲ. ಕುಟುಂದಲ್ಲಿ ನೆಮ್ಮದಿ ಇರುತ್ತದೆ. ಸಂಗೀತ ನಾಟ್ಯದಲ್ಲಿ ಉತ್ತಮ ಅಭಿಋಚಿ ಇರುತ್ತದೆ. ಉದ್ಯೋಗದಲ್ಲಿ ಎದುರಾಗುವ ಸಮಸ್ಯೆಯನ್ನು ಬಗೆಹರಿಸುವಿರಿ. ಆತುರದ ನಿರ್ಧಾರಗಳಿಂದ ತೊಂದರೆ ಇರಲಿದೆ. ನಿಮ್ಮಿಂದ ಸಹಾಯ ಪಡೆದವರೊಬ್ಬರು ವಿರೋಧಿಗಳಾಗುತ್ತಾರೆ.

ಪರಿಹಾರ : ಮಕ್ಕಳಿಗೆ ಗೋಧಿ ಮತ್ತು ಬೆಲ್ಲದಿಂದ ತಯಾರಿಸಿದ ಸಿಹಿ ತಿಂಡಿಯನ್ನು ನೀಡಿ ದಿನದ ಕೆಲಸವನ್ನು ಆರಂಭಿಸಿರಿ.

ಅದೃಷ್ಟದ ಸಂಖ್ಯೆ : 6

ಅದೃಷ್ಟದ ದಿಕ್ಕು : ನೈರುತ್ಯ

ಅದೃಷ್ಟದ ಬಣ್ಣ: ಎಲೆ ಹಸಿರು

ಮಕರ

ಸಹನೆ ಮತ್ತು ಬುದ್ದಿವಂತಿಕೆಯಿಂದ ಕುಟುಂಬದ ಸಮಸ್ಯೆಯನ್ನು ಬಗೆಹರಿಸುವಿರಿ. ಉದ್ಯೋಗದಲ್ಲಿ ಸ್ನೇಹದಿಂದ ವರ್ತಿಸಿದರೆ ಉನ್ನತ ಸ್ಥಾನ ದೊರೆಯುತ್ತದೆ. ಸಂಗಾತಿಯ ನಡುವೆ ಹಣಕಾಸಿನ ವಿಚಾರವಾಗಿ ಮನಸ್ತಾಪ ಇರುತ್ತದೆ. ವಿದ್ಯಾರ್ಥಿಗಳು ಆರಂಭದಲ್ಲಿ ಆತಂಕದ ಪರಿಸ್ಥಿತಿಯನ್ನು ಎದುರಿಸಿದರೂ ತದನಂತರ ಶುಭಫಲಗಳನ್ನು ಪಡೆಯುತ್ತಾರೆ.

ಪರಿಹಾರ : ಇರುವೆಗಳಿಗೆ ಆಹಾರ ಧಾನ್ಯವನ್ನು ಹಾಕಿ ದಿನದ ಕೆಲಸವನ್ನು ಆರಂಭಿಸಿರಿ.

ಅದೃಷ್ಟದ ಸಂಖ್ಯೆ : 1

ಅದೃಷ್ಟದ ದಿಕ್ಕು : ಪಶ್ಚಿಮ

ಅದೃಷ್ಟದ ಬಣ್ಣ: ಕೇಸರಿ

ಕುಂಭ

ಮೌನವಾಗಿದ್ದುಕೊಂಡು ಎಲ್ಲವನ್ನೂ ಸಾಧಿಸಬಲ್ಲಿರಿ. ಕುಟುಂಬದಲ್ಲಿ ಉತ್ತಮ ಪರಿವರ್ತನೆ ಕಂಡು ಬರುತ್ತದೆ. ಉದ್ಯೋಗದಲ್ಲಿ ಬೇಸರವುಂಟಾಗಿ ಉದ್ಯೋಗ ಬದಲಾವಣೆ ಮಾಡುವಿರಿ. ವ್ಯಾಪಾರ ವ್ಯವಹಾರದಲ್ಲಿ ಆಸಕ್ತಿ ಇರುವುದಿಲ್ಲ. ಜನಸೇವೆಗೆ ಪೂರಕವಾದ ವ್ಯಾಪಾರ ಮಾಡುವಿರಿ. ಸಂಗಾತಿಯೊಂದಿಗೆ ವಿದೇಶದಕ್ಕೆ ತೆರಳುವ ಯೋಗವಿದೆ. ವಂಶದಿಂದ ಬಂದಿರುವ ಆಸ್ತಿಯನ್ನು ವಿಲೇವಾರಿ ಮಾಡುವಿರಿ. ವಯೋವೃದ್ದರಿಗೆ ನೆರವಾಗುವಿರಿ.

ಪರಿಹಾರ : ತಾಯಿಯವರಿಗೆ ಸಿಹಿತಿಂಡಿ ನೀಡಿ ದಿನದ ಕೆಲಸವನ್ನು ಆರಂಭಿಸಿರಿ

ಅದೃಷ್ಟದ ಸಂಖ್ಯೆ : 4

ಅದೃಷ್ಟದ ದಿಕ್ಕು : ಉತ್ತರ

ಅದೃಷ್ಟದ ಬಣ್ಣ: ಕೆಂಪು

ಮೀನ

ಎಚ್ಚರಿಕೆಯಿಂದ ಕೆಲಸ ಕಾರ್ಯಗಳಲ್ಲಿ ಮುಂದುವರಿಯುವಿರಿ. ಕುಟುಂಬದ ಹಣದ ಕೊರತೆ ಬಗೆಹರಿಯುತ್ತದೆ. ಸ್ಟಾಕ್ ಮತ್ತು ಷೇರಿನ ವ್ಯವಹಾರದಲ್ಲಿ ಲಾಭವಿದೆ. ಸ್ವಂತ ಉದ್ಯಮ ಆರಂಭಿಸುವಿರಿ. ಉದ್ಯೋಗದಲ್ಲಿ ಸಹೋದ್ಯೋಗಿಗಳ ಸಹಕಾರ ದೊರೆಯ್ಕುತ್ತದೆ. ವೃತ್ತಿ ಬದಲಾವಣೆಯ ಸೂಚನೆಗಳಿವೆ. ವಿದ್ಯಾರ್ಥಿಗಳು ಏಕಾಂಗಿಯಾಗಿ ಕಲಿಕೆಯಲ್ಲಿ ಮುಂದುವರೆಯುತ್ತಾರೆ.

ಪರಿಹಾರ: ಪಕ್ಷಿಗಳಿಗೆ ಆಹಾರ ನೀಡಿ ದಿನದ ಕೆಲಸ ಆರಂಭಿಸಿ.

ಅದೃಷ್ಟದ ಸಂಖ್ಯೆ : 7

ಅದೃಷ್ಟದ ದಿಕ್ಕು : ಈಶಾನ್ಯ

ಅದೃಷ್ಟದ ಬಣ್ಣ: ಕಂದು

 

ಬರಹ: ಎಚ್‌. ಸತೀಶ್, ಜ್ಯೋತಿಷಿ

ಮೊಬೈಲ್:‌ 8546865832

(ಗಮನಿಸಿ: ಜ್ಯೋತಿಷ್ಯ ಶಾಸ್ತ್ರದ ಲೆಕ್ಕಾಚಾರಕ್ಕೆ ಹಲವು ಸೂತ್ರಗಳಿವೆ. ನಿರ್ದಿಷ್ಟ ರೀತಿಯಲ್ಲಿ ಕ್ರಮಬದ್ಧವಾಗಿ ಈ ರಾಶಿ ಭವಿಷ್ಯ ನೀಡಲಾಗಿದೆ. ಆದರೆ ಒಟ್ಟಾರೆಯಾಗಿ ಜ್ಯೋತಿಷ್ಯ ಎನ್ನುವುದು ನಂಬಿಕೆಯ ಮಾತು. ಓದುಗರ ನಂಬಿಕೆಯನ್ನು ‘ಹಿಂದೂಸ್ತಾನ್ ಟೈಮ್ಸ್ ಕನ್ನಡ’ ಗೌರವಿಸುತ್ತದೆ. ಇಲ್ಲಿರುವ ಯಾವುದೇ ಶಿಫಾರಸು ಅಥವಾ ಸಲಹೆಗಳನ್ನು ಪಾಲಿಸುವುದು ಓದುಗರ ವಿವೇಚನೆ, ನಂಬಿಕೆಗೆ ಬಿಟ್ಟ ವಿಷಯವಾಗಿರುತ್ತದೆ).