ಕಿವೀಸ್ ವಿರುದ್ಧದ 2ನೇ ಟೆಸ್ಟ್‌ನಲ್ಲೂ ಆಸ್ಟ್ರೇಲಿಯಾಗೆ 3 ವಿಕೆಟ್‌ಗಳ ರೋಚಕ ಜಯ; ಸರಣಿ ಕ್ಲೀನ್ ಸ್ವೀಪ್-australia beat new zealand by 3 wickets in 2nd test to sweep series alex carey pat cummins nz vs aus matt henry jra ,ಕ್ರಿಕೆಟ್ ಸುದ್ದಿ
ಕನ್ನಡ ಸುದ್ದಿ  /  ಕ್ರಿಕೆಟ್  /  ಕಿವೀಸ್ ವಿರುದ್ಧದ 2ನೇ ಟೆಸ್ಟ್‌ನಲ್ಲೂ ಆಸ್ಟ್ರೇಲಿಯಾಗೆ 3 ವಿಕೆಟ್‌ಗಳ ರೋಚಕ ಜಯ; ಸರಣಿ ಕ್ಲೀನ್ ಸ್ವೀಪ್

ಕಿವೀಸ್ ವಿರುದ್ಧದ 2ನೇ ಟೆಸ್ಟ್‌ನಲ್ಲೂ ಆಸ್ಟ್ರೇಲಿಯಾಗೆ 3 ವಿಕೆಟ್‌ಗಳ ರೋಚಕ ಜಯ; ಸರಣಿ ಕ್ಲೀನ್ ಸ್ವೀಪ್

New Zealand vs Australia: ಆತಿಥೇಯ ನ್ಯೂಜಿಲ್ಯಾಂಡ್ ವಿರುದ್ಧದ ಎರಡನೇ ಟೆಸ್ಟ್ ‌ಪಂದ್ಯದಲ್ಲಿ ಆಸ್ಟ್ರೇಲಿಯಾ ತಂಡ ರೋಚಕ ಜಯ ಸಾಧಿಸಿದೆ. ಆ ಮೂಲಕ ಟಿ20 ಬಳಿಕ ಟೆಸ್ಟ್‌ ಸರಣಿಯನ್ನು ಕೂಡಾ ಕ್ಲೀನ್‌ ಸ್ವೀಪ್‌ ಮಾಡಿದೆ. ತನ್ನದೇ ತವರಿನಲ್ಲಿ ಕಿವೀಸ್‌ಗೆ ಆಸೀಸ್‌ ವಿರುದ್ಧ ಜಯ ಮರೀಚಿಕೆಯಾಗಿದೆ.

2ನೇ ಟೆಸ್ಟ್‌ನಲ್ಲೂ ಆಸ್ಟ್ರೇಲಿಯಾಗೆ 3 ವಿಕೆಟ್‌ಗಳ ರೋಚಕ ಜಯ
2ನೇ ಟೆಸ್ಟ್‌ನಲ್ಲೂ ಆಸ್ಟ್ರೇಲಿಯಾಗೆ 3 ವಿಕೆಟ್‌ಗಳ ರೋಚಕ ಜಯ (AP)

ನ್ಯೂಜಿಲ್ಯಾಂಡ್ ವಿರುದ್ಧದ ಎರಡನೇ ಟೆಸ್ಟ್‌ (New Zealand vs Australia 2nd Test) ಪಂದ್ಯದಲ್ಲಿ ಆಸ್ಟ್ರೇಲಿಯಾ ತಂಡ 4 ವಿಕೆಟ್‌ಗಳ ರೋಚಕ ಜಯ ಸಾಧಿಸಿದೆ. ಆ ಮೂಲಕ ಸರಣಿಯನ್ನು 2-0 ಅಂತರದಿಂದ ಕ್ಲೀನ್‌ ಸ್ವೀಪ್‌ ಮಾಡಿದೆ. ಎರಡನೇ ಇನ್ನಿಂಗ್ಸ್‌ನಲ್ಲಿ ವಿಕೆಟ್ ಕೀಪರ್ ಅಲೆಕ್ಸ್ ಕ್ಯಾರಿ ಸಿಡಿಸಿದ ಅಜೇಯ 98 ರನ್, ಕಾಂಗರೂಗಳ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿತು. ಅಲ್ಲದೆ ಮಿಚೆಲ್ ಮಾರ್ಷ್ ಅವರೊಂದಿಗೆ ಒಟ್ಟುಗೂಡಿಸಿದ 140 ರನ್‌ಗಳ ಜೊತೆಯಾಟವು ಪಂದ್ಯವನ್ನು ಕಾಂಗರೂಗಳತ್ತ ತಿರುಗಿಸಿತು. ಗೆಲುವಿನ ರನ್‌ ಬಾರಿಸಿದ ನಾಯಕ ಪ್ಯಾಟ್‌ ಕಮಿನ್ಸ್‌, ತಮ್ಮದೇ ಶೈಲಿಯಲ್ಲಿ ಸರಣಿ ವಶಪಡಿಸಿಕೊಂಡರು.

ನ್ಯೂಜಿಲ್ಯಾಂಡ್‌ ತಂಡವು 31 ವರ್ಷಗಳ ನಂತರ ತನ್ನದೇ ತವರಿನಲ್ಲಿ ಆಸ್ಟ್ರೇಲಿಯಾ ವಿರುದ್ಧ ಮೊದಲ ಟೆಸ್ಟ್ ಗೆಲುವು ಸಾಧಿಸುವ ಅವಕಾಶವನ್ನು ಕೈಚೆಲ್ಲಿತು. 13 ವರ್ಷಗಳ ಹಿಂದೆ ಆಸ್ಟ್ರೇಲಿಯಾದ ಹೋಬರ್ಟ್‌ನಲ್ಲಿ ಆಸೀಸ್‌ ವಿರುದ್ಧ ಕಿವೀಸ್‌ ಕೊನೆಯ ಬಾರಿಗೆ ಗೆಲುವು ಸಾಧಿಸಿತ್ತು. ತವರಿನಲ್ಲಿ 1993ರಲ್ಲಿ ಕೊನೆಯ ಬಾರಿಗೆ ಆಸೀಸ್‌ ವಿರುದ್ಧ ಗೆಲವು ಸಾಧಿಸಿತ್ತು.

ಪಂದ್ಯದಲ್ಲಿ ಮೊದಲು ಬ್ಯಾಟ್‌ ಮಾಡಿದ ಕಿವೀಸ್‌, ಮೊದಲ ಇನ್ನಿಂಗ್ಸ್‌ನಲ್ಲಿ 162 ರನ್‌ ಗಳಿಸಿತು. ಇದಕ್ಕೆ ಪ್ರತಿಯಾಗಿ ಆಸ್ಟ್ರೇಲಿಯಾ 256 ರನ್‌ ಗಳಿಸಿತು. ಎರಡನೇ ಇನ್ನಿಂಗ್ಸ್‌ನಲ್ಲಿ ಉತ್ತಮ ಪ್ರದರ್ಶನ ನೀಡಿದ ಆತಿಥೇಯರು, 372 ರನ್‌ ಗಳಿಸುವ ಮೂಲಕ ಕಾಂಗರೂಗಳಿಗೆ ಸ್ಪರ್ಧಾತ್ಮಕ ಗುರಿ ನೀಡಿದರು. ಆದರೆ, ಆಸೀಸ್‌ ತಂಡವು 7 ವಿಕೆಟ್‌ ಮಾತ್ರ ಕಳೆದುಕೊಂಡು 281 ರನ್‌ ಗಳಿಸಿ ಗೆದ್ದು ಬೀಗಿತು.

ಇದನ್ನೂ ಓದಿ | Photos: ಮೈದಾನದಲ್ಲೇ ಬಿಕ್ಕಿ ಬಿಕ್ಕಿ ಅತ್ತ ರಿಚಾ-ಶ್ರೇಯಾಂಕ; ಅಭಿಮಾನಿಗಳ ಮನಗೆದ್ದ ಡೆಲ್ಲಿ ಕ್ಯಾಪಿಟಲ್ಸ್‌ ಆಟಗಾರ್ತಿಯರ ನಡೆ

ಚೇಸಿಂಗ್‌ ವೇಳೆ ಮಿಚೆಲ್‌ ಮಾರ್ಷ್ ಔಟಾದಾಗ, ಆಸ್ಟ್ರೇಲಿಯಾ ಗೆಲುವಿಗೆ 59 ರನ್‌ಗಳ ಅಗತ್ಯವಿತ್ತು. ಕೈಯಲ್ಲಿ ನಾಲ್ಕು ವಿಕೆಟ್‌ಗಳು ಮಾತ್ರ ಇದ್ದವು. ಮಿಚೆಲ್ ಸ್ಟಾರ್ಕ್ ಮುಂದಿನ ಎಸೆತದಲ್ಲಿ ಔಟಾಗುತ್ತಿಂದತೆಯೇ ಮೂರು ವಿಕೆಟ್‌ಗಳೊಂದಿಗೆ 59 ರನ್‌ ಗಳಿಸುವ ಅಗತ್ಯವಿತ್ತು. ಈ ಸಮಯದಲ್ಲಿ ನ್ಯೂಜಿಲ್ಯಾಂಡ್‌ ಗೆಲುವಿಗೆ ಅವಕಾಶವಿತ್ತು. ಈ ವೇಳೆ ಕ್ಯಾರಿ ಆಸ್ಟ್ರೇಲಿಯಾ ತಂಡವನ್ನು ಗೆಲುವಿನ ಹಳಿಗೆ ತಂದರು. ಅವರಿಗೆ ಜೊತೆಯಾದ ನಾಯಕ ಪ್ಯಾಟ್ ಕಮಿನ್ಸ್ ಉತ್ತಮ ಸಾಥ್‌ ನೀಡಿದರು. ಉಭಯ ಆಟಗಾರರು ಅಜೇಯ 61 ರನ್ ಗಳಿಸಿದರು. ಅಜೇಯ 32 ರನ್ ಗಳಿಸಿದ ಕಮಿನ್ಸ್‌, ಬೌಂಡರಿಯೊಂದಿಗೆ ತಂಡವನ್ನು ಗೆಲ್ಲಿಸಿದರು.

ಶತಕ ವಂಚಿತ ಅಲೆಕ್ಸ್‌ ಕ್ಯಾರಿ

ಕ್ಯಾರಿ 98 ರನ್ ಗಳಿಸಿ ಅಜೇಯರಾಗಿ ಉಳಿದರು. ಕೇವಲ 2 ರನ್‌ಗಳಿಂದ ಶತಕ ವಂಚಿತರಾದರು. ಈ ಪಂದ್ಯದಲ್ಲಿ ಒಂದೇ ಒಂದು ಶತಕ ಸಿಡಿದಿಲ್ಲ. ಹೀಗಾಗಿ ಕ್ಯಾರಿಗೆ ಶತಕ ಪೂರ್ಣಗೊಳಿಸುವ ಅವಕಾಶವಿತ್ತು. ಆದರೆ, ಕಮಿನ್ಸ್ ಬೌಂಡರಿ ಬಾರಿಸಿ ಚೇಸಿಂಗ್‌ ಪೂರಣಗೊಳಿಸಿದರು.

ಮೊದಲ ಇನ್ನಿಂಗ್ಸ್‌ ಬಳಿಕ ಆಸ್ಟ್ರೇಲಿಯಾ 94 ರನ್‌ಗಳ ಮುನ್ನಡೆ ಸಾಧಿಸಿತ್ತು. ನ್ಯೂಜಿಲೆಂಡ್ 162 ರನ್‌ಗಳಿಗೆ ಆಲೌಟ್ ಆದಾಗ ಆಸೀಸ್‌ 256 ರನ್ ಗಳಿಸಿತ್ತು. ಮಾರ್ನಸ್ ಲಬುಶೇನ್ 90 ರನ್ ಗಳಿಸಿ ತಂಡದ ಅಧಿಕ ರನ್‌ ಸ್ಕೋರರ್‌ ಆದರು. ನ್ಯೂಜಿಲ್ಯಾಂಡ್‌ ತನ್ನ ಎರಡನೇ ಇನ್ನಿಂಗ್ಸ್‌ನಲ್ಲಿ 372 ರನ್ ಗಳಿಸಿ, ಒಟ್ಟಾರೆ 279 ರನ್‌ಗಳ ಮುನ್ನಡೆ ಸಾಧಿಸಿತ್ತು. ಅಂತಿಮ ಇನ್ನಿಂಗ್ಸ್‌ನಲ್ಲಿ ಆಸ್ಟ್ರೇಲಿಯಾ ಒಂದು ಹಂತದಲ್ಲಿ 80 ರನ್‌ ವೇಳೆಗೆ 5 ವಿಕೆಟ್‌ ಕಳೆದುಕೊಂಡಿತ್ತು. ಆದರೆ, ಕೊನೆಗೆ ಪಂದ್ಯ ಗೆಲ್ಲುವಲ್ಲಿ ಯಶಸ್ವಿಯಾಯ್ತು.

ಉಭಯ ತಂಡಗಳ ನಡುವಿನ ಮೊದಲ ಟೆಸ್ಟ್‌ನಲ್ಲಿ ಆಸೀಸ್‌ 172 ರನ್‌ಗಳಿಂದ ಭರ್ಜರಿ ಜಯ ಸಾಧಿಸಿತ್ತು. ಅದಕ್ಕೂ ಮೊದಲು ನಡೆದ ಟಿ20 ಸರಣಿಯಲ್ಲೂ ಕಿವೀಸ್‌ ವೈಟ್‌ವಾಶ್‌ ಆಗಿತ್ತು. ಎಲ್ಲಾ ಮೂರು ಪಂದ್ಯ ಗೆದ್ದ ಆಸೀಸ್‌ ಸರಣಿ ಕ್ಲೀನ್‌ ಸ್ವೀಪ್‌ ಸಾಧಿಸಿತ್ತು. ಇದೀಗ ಟೆಸ್ಟ್‌ ಸರಣಿಯಲ್ಲೂ ಕ್ಲೀನ್‌ ಸ್ವೀಪ್‌ ಸಾಧನೆ ಮಾಡಿ ತವರಿಗೆ ಮರಳುತ್ತಿದೆ.

ಇದನ್ನೂ ಓದಿ | ಚಿರತೆಯಂತೆ ಹಾರಿ ಒಂದೇ ಕೈಯಲ್ಲಿ ಸ್ಟನ್ನಿಂಗ್ ಕ್ಯಾಚ್ ಹಿಡಿದ ಗ್ಲೆನ್‌ ಫಿಲಿಪ್ಸ್; ಗಾಳಿಯಲ್ಲಿ ಅತ್ಯದ್ಭುತ ಕ್ಯಾಚ್ ಪಡೆದ ವಿಡಿಯೋ ವೈರಲ್

ಕ್ರಿಕೆಟ್‌ ಕುರಿತ ಇನ್ನಷ್ಟು ಸುದ್ದಿಗಳಿಗೆ ಇಲ್ಲಿ ಕ್ಲಿಕ್‌ ಮಾಡಿ

(This copy first appeared in Hindustan Times Kannada website. To read more like this please logon to kannada.hindustantimes.com)

mysore-dasara_Entry_Point