ಚಿರತೆಯಂತೆ ಹಾರಿ ಒಂದೇ ಕೈಯಲ್ಲಿ ಸ್ಟನ್ನಿಂಗ್ ಕ್ಯಾಚ್ ಹಿಡಿದ ಗ್ಲೆನ್‌ ಫಿಲಿಪ್ಸ್; ಗಾಳಿಯಲ್ಲಿ ಅತ್ಯದ್ಭುತ ಕ್ಯಾಚ್ ಪಡೆದ ವಿಡಿಯೋ ವೈರಲ್
ಕನ್ನಡ ಸುದ್ದಿ  /  ಕ್ರಿಕೆಟ್  /  ಚಿರತೆಯಂತೆ ಹಾರಿ ಒಂದೇ ಕೈಯಲ್ಲಿ ಸ್ಟನ್ನಿಂಗ್ ಕ್ಯಾಚ್ ಹಿಡಿದ ಗ್ಲೆನ್‌ ಫಿಲಿಪ್ಸ್; ಗಾಳಿಯಲ್ಲಿ ಅತ್ಯದ್ಭುತ ಕ್ಯಾಚ್ ಪಡೆದ ವಿಡಿಯೋ ವೈರಲ್

ಚಿರತೆಯಂತೆ ಹಾರಿ ಒಂದೇ ಕೈಯಲ್ಲಿ ಸ್ಟನ್ನಿಂಗ್ ಕ್ಯಾಚ್ ಹಿಡಿದ ಗ್ಲೆನ್‌ ಫಿಲಿಪ್ಸ್; ಗಾಳಿಯಲ್ಲಿ ಅತ್ಯದ್ಭುತ ಕ್ಯಾಚ್ ಪಡೆದ ವಿಡಿಯೋ ವೈರಲ್

Glenn Phillips: ನ್ಯೂಜಿಲೆಂಡ್​ ತಂಡದ ಫ್ಲೈಯಿಂಗ್ ಬರ್ಡ್ ಎಂದೇ ಕರೆಸಿಕೊಳ್ಳುವ ಗ್ಲೆನ್ ಫಿಲಿಪ್ಸ್ ಅವರು ಮತ್ತೊಂದು ಸಾರ್ವಕಾಲಿಕ ಅತ್ಯುತ್ತಮ ಕ್ಯಾಚ್​ ಅನ್ನು ಹಿಡಿದಿದ್ದಾರೆ. ಅದರ ವಿಡಿಯೋ ವೈರಲ್ ಆಗುತ್ತಿದೆ.

ಚಿರತೆಯಂತೆ ಹಾರಿ ಒಂದೇ ಕೈಯಲ್ಲಿ ಸ್ಟನ್ನಿಂಗ್ ಕ್ಯಾಚ್ ಹಿಡಿದ ಗ್ಲೆನ್‌ ಫಿಲಿಪ್ಸ್
ಚಿರತೆಯಂತೆ ಹಾರಿ ಒಂದೇ ಕೈಯಲ್ಲಿ ಸ್ಟನ್ನಿಂಗ್ ಕ್ಯಾಚ್ ಹಿಡಿದ ಗ್ಲೆನ್‌ ಫಿಲಿಪ್ಸ್

ನ್ಯೂಜಿಲೆಂಡ್ ತಂಡದ ಗ್ಲೆನ್ ಫಿಲಿಪ್ಸ್ (Glenn Phillips) ಹಿಡಿದ ಕ್ಯಾಚ್​ಗೆ ಕ್ರಿಕೆಟ್ ಲೋಕವೇ ಸ್ಟನ್ ಆಗಿದೆ. ಆಸ್ಟ್ರೇಲಿಯಾ ವಿರುದ್ಧ ಎರಡನೇ ಟೆಸ್ಟ್ ಪಂದ್ಯದಲ್ಲಿ ಬ್ಯಾಟರ್ ಮಾರ್ನಸ್ ಲಬುಶೇನ್ ಅವರ ಕ್ಯಾಚನ್ನು ಚಿರತೆಯಂತೆ ಹಾರಿ ಹಿಡಿದಿದ್ದು, ನಂಬಲಾಗದ ಅಸಾಧ್ಯವಾದ ಕ್ಯಾಚ್ ಪಡೆದಿದ್ದನ್ನು ನೋಡಿ ಲಬುಶೇನ್ ಕಕ್ಕಾಬಿಕ್ಕಿಯಾದರು. ದಿಗ್ಭ್ರಮೆಗೊಂಡು ಫಿಲಿಪ್ಸ್ ಅವರನ್ನೇ ನೋಡುತ್ತಾ ನಿಂತು ಬಿಟ್ಟರು ಆಸೀಸ್ ಆಟಗಾರ.

ಆಸ್ಟ್ರೇಲಿಯಾ ಮತ್ತು ನ್ಯೂಜಿಲೆಂಡ್ ನಡುವಿನ ಎರಡನೇ ಟೆಸ್ಟ್ ಪಂದ್ಯವು ಪ್ರಸ್ತುತ ಕ್ರೈಸ್ಟ್ ಚರ್ಚ್ ನ ಹ್ಯಾಗ್ಲಿ ಓವಲ್ ನಲ್ಲಿ ನಡೆಯುತ್ತಿದೆ. ಸಂಕಷ್ಟಕ್ಕೆ ಸಿಲುಕಿದ ಆಸೀಸ್ ತಂಡವನ್ನು ಕಾಪಾಡಿದ ಮಾರ್ನಸ್ ತನ್ನ 50ನೇ ಟೆಸ್ಟ್ ನಲ್ಲಿ 90 ರನ್ ಗಳಿಸಿ ನೆರವಾದರು. ಆದರೆ ತನ್ನ ಸ್ಮರಣೀಯ ಪಂದ್ಯದಲ್ಲಿ ಸ್ಮರಣೀಯ ಶತಕ ಪಡೆಯಲು ವಿಫಲರಾದರು. 147 ಎಸೆತಗಳನ್ನು ಎದುರಿಸಿದ ಬಲಗೈ ಬ್ಯಾಟರ್, 12 ಬೌಂಡರಿಗಳನ್ನು ಸಿಡಿಸಿದ್ದಾರೆ.

ನ್ಯೂಜಿಲೆಂಡ್ ತಂಡದ‌ ನಾಯಕ ಟಿಮ್‌ ಸೌಥಿ ಅವರು ಮಾಡಿದ 61ನೇ ಓವರ್ ನಲ್ಲಿ ಸಾರ್ವಕಾಲಿಕ ಅತ್ಯುತ್ತಮ ಕ್ಯಾಚ್ ದಾಖಲಾಗಿದೆ. ಮಾರ್ನಸ್ ಲಬುಶೇನ್ ಕಟ್ ಶಾಟ್ ಯತ್ನಿಸಿದರು. ಚೆಂಡು ಗ್ಯಾಪ್ ನಲ್ಲಿ ಬೌಂಡರಿ ಸೇರುತ್ತದೆ ಎಂದು ಎಲ್ಲರೂ ಭಾವಿಸಿದ್ದರು. ಆದರೆ ಆಗಿದ್ದೇ ಬೇರೆ. ಕಿವೀಸ್ ಸೂಪರ್ ಸ್ಟಾರ್ ಬಲಕ್ಕೆ ಡೈವ್ ಹೊಡೆದು ಒಂದೇ ಕೈಯಲ್ಲಿ ಕ್ಯಾಚ್ ಹಿಡಿದರು.‌ ಅವರು ಡೈವ್ ಹೊಡೆದ‌‌ ವೇಳೆ ಗಾಳಿಯಲ್ಲಿ ಚೆಂಡನ್ನು ಬಂಧಿಸಿದರು.

ಚೆಂಡನ್ನು ಕಟ್ ಮಾಡಿದ ವೇಳೆ‌ ಲಬುಶೇನ್ ಸಹ ಬೌಂಡರಿ ಹೋಗುತ್ತದೆ ಎಂದು ಭಾವಿಸಿದ್ದರು. ಆದರೆ ಗ್ಲೆನ್‌ ಫಿಲಿಪ್ಸ್ ಹಾರಿ ಹಿಡಿದ ಪರಿಗೆ ಆಸೀಸ್ ಆಟಗಾರರ ಒಂದು ಕ್ಷಣ ದಂಗಾಗಿ ಹೋದರು. ಈ ಕ್ಯಾಚ್​ ವಿಶ್ವಶ್ರೇಷ್ಠ ಕ್ಯಾಚ್​ಗಳಲ್ಲಿ ಒಂದು ಎಂದರೂ ತಪ್ಪಾಗಲ್ಲ. ಈ ಫೆಂಟಾಸ್ಟಿಕ್ ಕ್ಯಾಚ್​​ಗೆ ಸಾಮಾಜಿಕ ಜಾಲತಾಣಗಳಲ್ಲಿ ನೆಟ್ಟಿಗರಿಂದ ಭಾರಿ ಮೆಚ್ಚುಗೆ ವ್ಯಕ್ತವಾಗುತ್ತಿದೆ. ಕ್ರಿಕೆಟ್ ಪ್ರೇಮಿಗಳಂತೂ ಫಿಲಿಪ್ಸ್ ಅವರನ್ನು ನಿಜವಾದ ಸೂಪರ್​ಮ್ಯಾನ್ ಎನ್ನುತ್ತಿದ್ದಾರೆ.

ಮಾರ್ನಸ್ ಉತ್ತಮ ಇನ್ನಿಂಗ್ಸ್​

ಎರಡನೇ ಟೆಸ್ಟ್​​​ನಲ್ಲಿ ಮೊದಲು ಬ್ಯಾಟಿಂಗ್ ನಡೆಸಿದ ನ್ಯೂಜಿಲೆಂಡ್ 162 ರನ್​ಗಳಿಗೆ ಆಲೌಟ್ ಆಗಿದೆ. ವೇಗದ ಬೌಲರ್​ ಜೋಶ್ ಹೇಜಲ್​ವುಡ್ 5 ವಿಕೆಟ್ ಉರುಳಿಸಿ ಮಿಂಚಿದರು. ಈ ಸ್ಕೋರ್​ಗೆ ಪ್ರತ್ಯುತ್ತರವಾಗಿ ಬ್ಯಾಟ್ ಬೀಸಿದ ಆಸೀಸ್​ ಬ್ಯಾಟರ್ಸ್ ಕೂಡ ನಿರೀಕ್ಷಿತ ಪ್ರದರ್ಶನ ನೀಡಲಿಲ್ಲ. ಆದರೆ, ಮಾರ್ನಸ್ ಲಬುಶೇನು ಏಕಾಂಗಿ ಹೋರಾಟ ನಡೆಸಿದರು. 3ನೇ ಕ್ರಮಾಂಕದಲ್ಲಿ ಕ್ರೀಸ್​ಗೆ ಬಂದ ಲಬುಶೇನ್, 8ನೇ ವಿಕೆಟ್​​ವರೆಗೂ ಹೋರಾಡಿದರು.

ಪರಿಣಾಮ ಕಾಂಗರೂ ಪಡೆ 94 ರನ್​​ಗಳ ಮುನ್ನಡೆಗೆ ಕಾರಣರಾದರು. ಕಿವೀಸ್ ಪರ ಮ್ಯಾಟ್ ಹೆನ್ರಿ 7 ವಿಕೆಟ್ ಉರುಳಿಸಿದರು. ಪ್ಯಾಟ್ ಕಮಿನ್ಸ್ ಪಡೆ 256ಕ್ಕೆ ಆಲೌಟ್​ ಆಯಿತು. ಸದ್ಯ ಎರಡನೇ ಇನ್ನಿಂಗ್ಸ್​ ಆರಂಭಿಸಿದ ನ್ಯೂಜಿಲೆಂಡ್​​ 2ನೇ ದಿನದಾಟದ ಅಂತ್ಯಕ್ಕೆ 2 ವಿಕೆಟ್ ಕಳೆದುಕೊಂಡು 134 ರನ್ ಕಲೆ ಹಾಕಿದೆ. 40 ರನ್​ಗಳ ಮುನ್ನಡೆಯಲ್ಲಿದೆ. ಮೂರನೇ ದಿನದಾಟದಲ್ಲಿ ಆಸೀಸ್ ಬೌಲರ್ಸ್ ದಿಟ್ಟ ತಿರುಗೇಟು ನೀಡಲು ಸಜ್ಜಾಗಿದ್ದಾರೆ. ಈಗಾಗಲೇ ನ್ಯೂಜಿಲೆಂಡ್​ ಮೊದಲ ಟೆಸ್ಟ್​ ಪಂದ್ಯವನ್ನು ಕಳೆದುಕೊಂಡಿದೆ.

Whats_app_banner