ಕನ್ನಡ ಸುದ್ದಿ  /  ಕ್ರಿಕೆಟ್  /  Timed Out Controversy: ಬಾಂಗ್ಲಾಗೆ ಹಸ್ತಲಾಘವ ಮಾಡದೆ ಮೈದಾನ ತೊರೆದ ಶ್ರೀಲಂಕಾ ಆಟಗಾರರು; ದಂಡದ ಭೀತಿ

Timed Out Controversy: ಬಾಂಗ್ಲಾಗೆ ಹಸ್ತಲಾಘವ ಮಾಡದೆ ಮೈದಾನ ತೊರೆದ ಶ್ರೀಲಂಕಾ ಆಟಗಾರರು; ದಂಡದ ಭೀತಿ

Timed Out Controversy: ವಿಶ್ವಕಪ್​ನಲ್ಲಿ ಬಾಂಗ್ಲಾದೇಶದ ವಿರುದ್ಧ ಶ್ರೀಲಂಕಾ ಸೋಲು ಕಂಡಿತು. ಆದರೆ ಪಂದ್ಯದ ನಂತರ ಲಂಕಾ ಆಟಗಾರರು, ಬಾಂಗ್ಲಾ ಆಟಗಾರರಿಗೆ ಹಸ್ತಲಾಘವ ಮಾಡದೆ ಮೈದಾನ ತೊರೆದರು.

ಬಾಂಗ್ಲಾಗೆ ಹಸ್ತಲಾಘವ ಮಾಡದೆ ಮೈದಾನ ತೊರೆದ ಶ್ರೀಲಂಕಾ ಆಟಗಾರರು.
ಬಾಂಗ್ಲಾಗೆ ಹಸ್ತಲಾಘವ ಮಾಡದೆ ಮೈದಾನ ತೊರೆದ ಶ್ರೀಲಂಕಾ ಆಟಗಾರರು.

ದೆಹಲಿಯ ಅರುಣ್ ಜೇಟ್ಲಿ ಮೈದಾನದಲ್ಲಿ ನಡೆದ ಐಸಿಸಿ ವಿಶ್ವಕಪ್ ಟೂರ್ನಿಯ 38ನೇ ಪಂದ್ಯದಲ್ಲಿ ಶ್ರೀಲಂಕಾ ವಿರುದ್ಧ ಬಾಂಗ್ಲಾದೇಶ 3 ವಿಕೆಟ್​ಗಳ ಭರ್ಜರಿ ಜಯ ಸಾಧಿಸಿತು. ಸೆಮಿಫೈನಲ್​ಗೇರುವ ವಿಶ್ವಾಸ ಹೊಂದಿದ್ದ ಲಂಕಾಗೆ ಭಾರಿ ನಿರಾಸೆಯಾಯಿತು. ಮತ್ತೊಂದೆಡೆ ಲಂಕಾ ಆಟಗಾರರು, ಬಾಂಗ್ಲಾ ಆಟಗಾರರಿಗೆ ಹಸ್ತಲಾಘವ ಮಾಡದೆ ಮೈದಾನ ತೊರೆದಿದ್ದಾರೆ. ಇದು ಚರ್ಚೆಯ ಮತ್ತೊಂದು ಅಧ್ಯಾಯವಾಗಿ ಮಾರ್ಪಟ್ಟಿದೆ.

ಟ್ರೆಂಡಿಂಗ್​ ಸುದ್ದಿ

ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ನಡೆಸಿದ ಶ್ರೀಲಂಕಾ 49.3 ಓವರ್​​​ಗಳಲ್ಲಿ ತನ್ನೆಲ್ಲಾ ವಿಕೆಟ್ ಕಳೆದುಕೊಂಡು 279 ರನ್ ಗಳಿಸಿತು. ಚರಿತ್ ಅಸಲಂಕಾ ಭರ್ಜರಿ 108 ರನ್ ಸಿಡಿಸಿದರು. ಈ ಗುರಿ ಬೆನ್ನಟ್ಟಿದ ಬಾಂಗ್ಲಾ 41.1 ಓವರ್​​​ಗಳಲ್ಲಿ 7 ವಿಕೆಟ್​ ಕಳೆದುಕೊಂಡು ಜಯದ ನಗೆ ಬೀರಿತು. ಆದರೆ ಪಂದ್ಯ ಗೆದ್ದ ನಂತರ ಬಾಂಗ್ಲಾ ಬ್ಯಾಟ್ಸ್​ಮನ್​ಗಳು ಹಸ್ತಲಾಘವ ಮಾಡಲು ಯತ್ನಿಸಿದರು. ಆದರೆ, ಲಂಕಾ ಹಸ್ತಲಾಘವ ಮಾಡದೆ ಮೈದಾನ ತೊರೆದರು.

ಪಂದ್ಯದುದ್ದಕ್ಕೂ ಸ್ಲೆಡ್ಜ್​

ಇದಕ್ಕೆ ಕಾರಣ ಏಂಜಲೊ ಮ್ಯಾಥ್ಯೂಸ್​ ಅವರನ್ನು ಬಾಂಗ್ಲಾದೇಶ ಆಟಗಾರರು ಕ್ರೀಡಾಸ್ಫೂರ್ತಿ ಮರೆತು ಔಟ್ ಮಾಡಿದ್ದು. ಟೈಮ್ಡ್​ ಔಟ್ ಎಂದು ಮನವಿ ಸಲ್ಲಿಸಿ, ಮ್ಯಾಥ್ಯೂಸ್​ರನ್ನು ಔಟ್ ಮಾಡಿದ ನಂತರ ಉಭಯ ತಂಡಗಳ ನಡುವೆ ಪಂದ್ಯದ ಅಂತಿಮ ಹಂತದವರೆಗೂ ಮುಸುಕಿನ ಗುದ್ದಾಟದ ಮೂಲಕವೇ ಸಾಗಿತು. ಬಾಂಗ್ಲಾ ಬ್ಯಾಟ್ಸ್​​ಮನ್​ಗಳು ಆಡುತ್ತಿದ್ದಾಗ ಲಂಕಾ ಆಟಗಾರರು ಸ್ಲೆಡ್ಜ್ ಮಾಡುತ್ತಲೇ ಇದ್ದರು.

ಉಭಯ ತಂಡಗಳ ಆಟಗಾರರ ನಡುವೆ ವಾಗ್ದಾದಗಳಿಗೂ ಈ ಪಂದ್ಯ ಸಾಕ್ಷಿಯಾಯಿತು. ಹಾಗಾಗಿ ಪಂದ್ಯ ರೋಚಕತೆ ಪಡೆದುಕೊಂಡಿತು. ಶ್ರೀಲಂಕಾ ನಾಯಕ ಕುಸಾಲ್ ಮೆಂಡಿಸ್ ಮತ್ತು ಬಾಂಗ್ಲಾದೇಶದ ವೇಗಿ ತಂಜಿಮ್ ಹಸನ್ ಸಾಕಿಬ್ ನಡುವಿನ ಮಾತಿನ ಸಮರ ನಡೆಯಿತು. ಆದರೆ ಆಟಗಾರರ ವಾಗ್ವಾದವನ್ನು ಪದೆಪದೇ ಬಿಡಿಸಿ ಸುಸ್ತುಗೊಂಡರು. ಈ ಕುರಿತ ವಿಡಿಯೋಗಳು ವೈರಲ್ ಆಗುತ್ತಿವೆ.

ಕಾರಣ ಇಲ್ಲಿದೆ

ಮೊದಲು ಬ್ಯಾಟಿಂಗ್ ಲಂಕಾ 24.2 ಓವರ್​​​ನಲ್ಲಿ ತನ್ನ 4ನೇ ವಿಕೆಟ್ ಕಳೆದುಕೊಂಡಿತು. ಆಗ ಸದೀರ ಸಮರವಿಕ್ರಮ ಔಟಾಗಿ ಹೊರ ನಡೆದರು. ಬಳಿಕ ಕಣಕ್ಕಿಳಿದ ಏಂಜೆಲೊ ಮ್ಯಾಥ್ಯೂಸ್ ಕ್ರೀಸ್​ಗೆ ಬಂದ ನಂತರ ಹೆಲ್ಮೆಟ್ ಸಮಸ್ಯೆ ಎದುರಾಯಿತು. ಕೂಡ ಡಗೌಟ್​ನಲ್ಲಿದ್ದ ಸಹ ಆಟಗಾರನಿಗೆ ಮತ್ತೊಂದು ಹೆಲ್ಮೆಟ್ ತರುವಂತೆ ಸೂಚಿಸಿದರು. ಆದರೆ ಹೊಸ ಹೆಲ್ಮೆಟ್ ತರುವಲ್ಲಿ ಸ್ವಲ್ಪ ವಿಳಂಬವಾಯಿತು.

ಈ ಸಂದರ್ಭದಲ್ಲಿ ಬಾಂಗ್ಲಾ ಆಟಗಾರರು ಅಂಪೈರ್​​ ಬಳಿಕ ಟೈಮ್ಡ್​ ಔಟ್ ಮನವಿ ಮಾಡಿದರು. ಬಳಿಕ ಆನ್​ ಫೀಲ್ಡ್ ಅಂಪೈರ್​, ಆಟಗಾರರ ಮನವಿಯನ್ನು ಮಾನ್ಯ ಮಾಡಿ ಮ್ಯಾಥ್ಯೂಸ್ ಔಟ್ ಎಂದು ಪ್ರಕಟಿಸಿದರು. ಹೆಲ್ಮೆಟ್ ಸಮಸ್ಯೆಯನ್ನು ತೋರಿಸಿ ಘಟನೆ ವಿವರಿಸಿದರು. ಆದರೆ ಅಂಪೈರ್​ ನಿಯಮವನ್ನು ಪಾಲಿಸುವುದು ಹೊರತುಪಡಿಸಿ ಬೇರೆ ಆಯ್ಕೆ ಇರಲಿಲ್ಲ.

ಎದುರಾಳಿ ತಂಡದ ನಾಯಕನಿಗೂ ವಿವರಿಸಿದರು. ಆದರೆ ಶಕೀಬ್ ಮನವಿ ಹಿಂಪಡೆಯಲಿಲ್ಲ. ಇದು ಮ್ಯಾಥ್ಯೂಸ್ ಕೋಪಕ್ಕೆ ಕಾರಣವಾಯಿತು. ಮೈದಾನ ತೊರೆದ ನಂತರ ಮ್ಯಾಥ್ಯೂಸ್​ ಡಗೌಡ್​ನಲ್ಲಿ ಹೆಲ್ಮೆಟ್​ ಅನ್ನು ಬಿಸಾಡಿದರು. ಮ್ಯಾಥ್ಯೂಸ್‌ ಅವರು ಒಂದೂ ಎಸೆತ ಎದುರಿಸಿದೆ ಟೈಮ್ಡ್​ ಔಟ್​ಗೆ ಬಲಿಯಾದ ವಿಶ್ವದ ಮೊದಲ ಕ್ರಿಕೆಟಿಗ ಎನಿಸಿದರು.

ಲಂಕಾಗೆ ದಂಡದ ಭೀತಿ

ಕ್ರೀಡಾಸ್ಫೂರ್ತಿ ಮರೆತ ಬಾಂಗ್ಲಾದೇಶ ತಂಡದ ಆಟಗಾರರನ್ನು ಬ್ಯಾಟಿಂಗ್​ ವೇಳೆ ಪಂದ್ಯದುದ್ದಕೂ ಸ್ಲೆಡ್ಜ್ ಮಾಡುತ್ತಲೇ ಇದ್ದರು. ಅದರಲ್ಲೂ ಶಕೀಬ್​ ವಿಕೆಟ್​​ ಅನ್ನು​ ಮ್ಯಾಥ್ಯೂಸ್​ ಅವರೇ ಪಡೆದು ಸೇಡು ತೀರಿಸಿಕೊಂಡರು. ಅಲ್ಲದೆ, ಶ್ರೀಲಂಕಾ ಆಟಗಾರರು ಪಂದ್ಯದ ಮುಕ್ತಾಯದ ನಂತರ ಹಸ್ತಲಾಘವ ಮಾಡದೆ ತಮ್ಮ ಪಾಡಿಗೆ ಮೈದಾನ ತೊರೆದರು. ದ್ವೀಪರಾಷ್ಟ್ರದ ಆಟಗಾರರ ಈ ವರ್ತನೆಗೆ ಐಸಿಸಿ ದಂಡ ವಿಧಿಸುವ ಸಾಧ್ಯತೆ ಇದೆ.

IPL_Entry_Point