ಕನ್ನಡ ಸುದ್ದಿ  /  ಮನರಂಜನೆ  /  Chaos Release Update: ಅಕ್ಷಿತ್-‌ ಅದಿತಿ ಕಾಂಬಿನೇಷನ್‌ನ ‘ಖೆಯೊಸ್’ ಚಿತ್ರದ ಬಿಡುಗಡೆ ದಿನಾಂಕ ಘೋಷಣೆ

Chaos Release Update: ಅಕ್ಷಿತ್-‌ ಅದಿತಿ ಕಾಂಬಿನೇಷನ್‌ನ ‘ಖೆಯೊಸ್’ ಚಿತ್ರದ ಬಿಡುಗಡೆ ದಿನಾಂಕ ಘೋಷಣೆ

ಅಕ್ಷಿತ್‌ ಶಶಿಕುಮಾರ್‌ ಮತ್ತು ಅದಿತಿ ಪ್ರಭುದೇವ ನಟನೆಯ ‘ಖೆಯೊಸ್’ ಚಿತ್ರ ಇನ್ನೇನು ಇದೇ ತಿಂಗಳು ತೆರೆಗೆ ಅಪ್ಪಳಿಸಲಿದೆ.

ಅಕ್ಷಿತ್-‌ ಅದಿತಿ ಕಾಂಬಿನೇಷನ್‌ನ ‘ಖೆಯೊಸ್’ ಚಿತ್ರದ ಬಿಡುಗಡೆ ದಿನಾಂಕ ಘೋಷಣೆ
ಅಕ್ಷಿತ್-‌ ಅದಿತಿ ಕಾಂಬಿನೇಷನ್‌ನ ‘ಖೆಯೊಸ್’ ಚಿತ್ರದ ಬಿಡುಗಡೆ ದಿನಾಂಕ ಘೋಷಣೆ

chaos Release Update: ಸ್ಯಾಂಡಲ್‌ವುಡ್‌ ನಟ ಶಶಿಕುಮಾರ್‌ ಪುತ್ರ ಅಕ್ಷಿತ್‌ ಶಶಿಕುಮಾರ್‌ ಈಗಾಗಲೇ ಕನ್ನಡದಲ್ಲಿ ಹಲವು ಸಿನಿಮಾಗಳಲ್ಲಿ ನಟಿಸಿದ್ದಾರೆ. ಹೊಸ ಹೊಸ ಚಿತ್ರಗಳ ಅವಕಾಶಗಳನ್ನೂ ಅವರು ಪಡೆಯುತ್ತಿದ್ದಾರೆ. ಇದೀಗ 2023ರರ ಅವರ ಮೊದಲ ಸಿನಿಮಾ ಇದೀಗ ಬಿಡುಗಡೆಯ ಹೊಸ್ತಿಲಿಗೆ ಬಂದು ನಿಂತಿದೆ. ‘ಖೆಯೊಸ್’ ಶೀರ್ಷಿಕೆಯ ಸಿನಿಮಾ ಇದೇ ಫೆಬ್ರವರಿ 17ರಂದು ತೆರೆಗೆ ಬರಲಿದ್ದು, ಈ ಚಿತ್ರದಲ್ಲಿ ಅಕ್ಷಿತ್‌ಗೆ ನಾಯಕಿಯಾಗಿ ಅದಿತಿ ಪ್ರಭುದೇವ ನಟಿಸಿದ್ದಾರೆ.

ಟ್ರೆಂಡಿಂಗ್​ ಸುದ್ದಿ

ಆಕ್ಷನ್, ಸಸ್ಪೆನ್ಸ್, ಥ್ರಿಲ್ಲರ್ ಶೈಲಿಯ ಈ ಸಿನಿಮಾದ ಬಿಡುಗಡೆ ದಿನಾಂಕವನ್ನು ಹೇಳಿಕೊಳ್ಳಲೆಂದೇ ಇಡೀ ತಂಡ ಮಾಧ್ಯಮದ ಮುಂದೆ ಬಂದಿತ್ತು. ಈ ವೇಳೆ ಚಿತ್ರದ ಬಗ್ಗೆ ಮಾಹಿತಿ ನೀಡುವ ನಿರ್ದೇಶಕ ಜಿ.ವಿ ಪ್ರಸಾದ್‌ ಹೀಗೆ ಹೇಳುತ್ತಾರೆ. "ನಾನು ವೈದ್ಯನಾಗಿ ಕಾರ್ಯ ನಿರ್ವಹಿಸುತ್ತಿದ್ದೇನೆ. ‘ಖೆಯೊಸ್’ ಅಂದರೆ ಮನುಷ್ಯನ ಮನಸ್ಸಿನಲ್ಲಾಗುವ ಗೊಂದಲ. ಇದು ವೈದ್ಯಕೀಯ ಕಾಲೇಜೊಂದರಲ್ಲಿ ನಡೆಯುವ ಕಥೆ. ನಾಯಕ ಅನಿರೀಕ್ಷಿತವಾಗಿ ಒಂದು ಸಮಸ್ಯೆಗೆ ಸಿಲುಕಿಕೊಳ್ಳುತ್ತಾನೆ. ಆತ ತನ್ನ ಜಾಣ್ಮೆಯಿಂದ ಹೇಗೆ ಆ ಸಮಸ್ಯೆಯಿಂದ ಹೇಗೆ ಪಾರಾಗುತ್ತಾನೆ ಎಂಬುದು ಕಥಾಹಂದರ" ಎಂದು ಕಥೆಯ ಎಳೆಯನ್ನು ಬಿಚ್ಚಿಟ್ಟರು.

ಮುಂದುವರಿದು ಮಾತನಾಡುವ ನಿರ್ದೇಶಕರು, "ಈ ಚಿತ್ರದಲ್ಲಿ ನಾಯಕನಾಗಿ ಅಕ್ಷಿತ್ ಶಶಿಕುಮಾರ್, ನಾಯಕಿಯಾಗಿ ಅದಿತಿ ಪ್ರಭುದೇವ ಅಭಿನಯಿಸಿದ್ದಾರೆ. ದಿ ಬ್ಲಾಕ್‌ ಪೆಡಲ್ ಎಂಟರ್ಟೈನ್ಮೆಂಟ್ ಬ್ಯಾನರ್‌ನಲ್ಲಿ ಪಾರುಲ್ ಅಗರವಾಲ್ ಹಾಗೂ ಹೇಮಚಂದ್ರ ರೆಡ್ಡಿ ಈ ಚಿತ್ರ ನಿರ್ಮಾಣ ಮಾಡಿದ್ದಾರೆ. ಇದೇ 17ರಂದು ಚಿತ್ರ ಬಿಡುಗಡೆಯಾಗುತ್ತಿದೆ" ಎಂದು ನಿರ್ದೇಶಕ ಜಿ.ವಿ.ಪ್ರಸಾದ್ ಮಾಹಿತಿ ನೀಡಿದರು.

ಈ ಚಿತ್ರದಲ್ಲಿ ವೈದ್ಯಕೀಯ ವಿದ್ಯಾರ್ಥಿ ಪಾತ್ರದಲ್ಲಿ ಕಾಣಿಸಿಕೊಂಡಿರುವ ಅಕ್ಷಿತ್‌ ಪಾತ್ರದ ಬಗ್ಗೆ ಹೇಳಿಕೊಂಡರು. "ನಿರ್ದೇಶಕ ಪ್ರಸಾದ್ ಹೇಳಿದ ಕಥೆ ಇಷ್ಟವಾಯಿತು. ಅವರು ಕಥೆ ಹೇಳುವಾಗ ನಾನು ಗಡ್ಡ ಬಿಟ್ಡಿದೆ. ನಮ್ಮ ಪಾತ್ರಕ್ಕೆ ಈ ರೀತಿಯ ಗೆಟಪ್ ಬೇಕಿತ್ತು ಎಂದರು.‌ ಎಂಬಿಬಿಎಸ್ ಓದುತ್ತಿರುವ ಹುಡುಗನ ಪಾತ್ರ ನನ್ನದು. ಅದಿತಿ ಪ್ರಭುದೇವ ಸೇರಿದಂತೆ ಎಲ್ಲರೂ ಚೆನ್ನಾಗಿ ಅಭಿನಯಿಸಿದ್ದಾರೆ. ನಮ್ಮ ತಂದೆ ಕೂಡ ಇದರಲ್ಲಿ ನಟಿಸಿದ್ದಾರೆ" ಎಂದು ಅಕ್ಷಿತ್ ಶಶಿಕುಮಾರ್ ತಿಳಿಸಿದರು.

ನಾಯಕಿ ಅದಿತಿ ಶೀರ್ಷಿಕೆಯ ಅರ್ಥ ಹೇಳಿದರು. "ಖೆಯೊಸ್" ಎಂದರೆ ಮನಸ್ಸಿನಲ್ಲಾಗುವ ಅಸ್ತವ್ಯಸ್ತ, ಗೊಂದಲ ಇತ್ಯಾದಿ. ನಾನು ಕೂಡ ವೈದ್ಯಕೀಯ ವಿದ್ಯಾರ್ಥಿಯಾಗಿ ಕಾಣಿಸಿಕೊಂಡಿದ್ದೇನೆ. ಅಕ್ಷಿತ್ ಅವರು ದೊಡ್ಡ ಹೀರೊ ಮಗ ಅಂತ ಏನು ಇಲ್ಲದೆ, ಎಲ್ಲರೊಂದಿಗೆ ಬೆರೆಯುವ ಗುಣ ಇಷ್ಟವಾಯಿತು" ಎಂದು ನಾಯಕಿ ಅದಿತಿ ಪ್ರಭುದೇವ ಹೇಳಿದರು.

ನಿರ್ಮಾಪಕರಾದ ಪಾರುಲ್ ಅಗರವಾಲ್ ಹಾಗೂ ಡಾ. ಹೇಮಚಂದ್ರ ರೆಡ್ಡಿ ಸಿನಿಮಾ ಬಗ್ಗೆ ಮಾತನಾಡಿದರು. ಚಿತ್ರದಲ್ಲಿ ಆರ್.ಕೆ. ಚಂದನ್, ಶಿವಾನಂದ್ ಸೇರಿ ಹಲವರು ನಟಿಸಿದ್ದಾರೆ. ವಿಜಯ್ ಹರಿತ್ಸ ಈ ಚಿತ್ರಕ್ಕೆ ಸಂಗೀತ ನೀಡಿದ್ದಾರೆ. ಬೆಂಗಳೂರು ಕುಮಾರ್ ಈ ಚಿತ್ರವನ್ನು ರಾಜ್ಯಾದ್ಯಂತ ವಿತರಣೆ ಮಾಡುತ್ತಿದ್ದಾರೆ.

ಈ ಸಿನಿಮಾ ಸುದ್ದಿಗಳನ್ನೂ ಓದಿ

Kabzaa Hyderabad Event: 'ಕಬ್ಜ' ಚಿತ್ರದ ಕಾರ್ಯಕ್ರಮಕ್ಕೆ ಚಿರಂಜೀವಿ, ರಾಜಮೌಳಿ ಗೈರು!; ಕಾರಣ ತಿಳಿಸಿದ ನಿರ್ದೇಶಕ ಆರ್‌. ಚಂದ್ರು..

Kabzaa Hyderabad Event: ರಿಯಲ್‌ ಸ್ಟಾರ್‌ ಉಪೇಂದ್ರ ನಟಿಸಿರುವ 'ಕಬ್ಜ' ಸಿನಿಮಾ ಮಾರ್ಚ್‌ 17 ರಂದು ತೆರೆ ಕಾಣುತ್ತಿದೆ. ಪವರ್‌ ಸ್ಟಾರ್‌ ಪುನೀತ್‌ ರಾಜ್‌ಕುಮಾರ್‌ ಹುಟ್ಟುಹಬ್ಬದಂದೇ ಈ ಸಿನಿಮಾ ತೆರೆ ಕಾಣುತ್ತಿರುವುದು ಅವರ ಅಭಿಮಾನಿಗಳಿಗೆ ಖುಷಿ ನೀಡಿದೆ. ಈಗಾಗಲೇ ದೊಡ್ಡ ಮಟ್ಟದ ಪ್ರಚಾರ ಪ್ಲಾನ್‌ ಮಾಡಿರುವ ತಂಡಕ್ಕೆ ಆರಂಭಿಕ ಸಮಸ್ಯೆ ಎದುರಾಗಿದೆ. ಹೈದರಾಬಾದ್‌ನಲ್ಲಿ ನಡೆಯಬೇಕಿದ್ದ ಅದ್ದೂರಿ ಕಾರ್ಯಕ್ರಮಕ್ಕೀಗ ಪ್ರಮುಖ ಅತಿಥಿಗಳೇ ಗೈರಾಗಲಿದ್ದಾರೆ! ಸುದ್ದಿಯ ಪೂರ್ಣ ವಿವರಕ್ಕೆ ಇಲ್ಲಿ ಕ್ಲಿಕ್‌ ಮಾಡಿ

IPL_Entry_Point