Bengaluru 69 Release Date: ಅಂತಾರಾಷ್ಟ್ರೀಯ ಕೈಂ ಥ್ರಿಲ್ಲರ್ ಕಥೆ ಹೊಂದಿರುವ 'ಬೆಂಗಳೂರು 69' ರಿಲೀಸ್‌ಗೆ ದಿನಾಂಕ ಫಿಕ್ಸ್
ನಾನು ತಂದೆ-ತಾಯಿಯಷ್ಟೇ ಕನ್ನಡ ಭಾಷೆಯನ್ನು ಗೌರವಿಸುತ್ತೇನೆ. ಕನ್ನಡಕ್ಕಾಗಿ ಏನಾದರೂ ಮಾಡಬೇಕೆಂದು ಈ ಸಿನಿಮಾ ನಿರ್ಮಾಣ ಮಾಡಿದ್ದೇನೆ. ಕಳೆದ ವರ್ಷ ತೆರೆಕಂಡ ಕೆಲವು ಚಿತ್ರಗಳು ಅಂತರಾಷ್ಟ್ರೀಯ ಮಟ್ಟದಲ್ಲಿ ಗುರುತಿಸಿಕೊಂಡಿದೆ. ನಮ್ಮ ಸಿನಿಮಾ ಕೂಡಾ ಅದೇ ರೀತಿ ಯಶಸ್ವಿಯಾಗಲಿ ಎಂದು ನೀವು ಹಾರೈಸಿ.
ಕ್ರಾಂತಿ ಚೈತನ್ಯ ನಿರ್ದೇಶನದಲ್ಲಿ ಅನಿತಾ ಭಟ್ ಪ್ರಮುಖ ಪಾತ್ರದಲ್ಲಿ ನಟಿಸಿರುವ 'ಬೆಂಗಳೂರು 69' ಸಿನಿಮಾ ಬಿಡುಗಡೆಗೆ ಸಿದ್ಧವಾಗಿದೆ. ಸಿನಿಮಾ ಆರಂಭವಾಗಿ 3 ವರ್ಷಗಳು ಕಳೆದಿತ್ತು. ಕೊರೊನಾ ಲಾಕ್‌ಡೌನ್ ಹಾಗೂ ಇನ್ನಿತರ ಕಾರಣಗಳಿಂದ ಸಿನಿಮಾ ಬಿಡುಗಡೆ ತಡವಾಗಿತ್ತು. ಕೊನೆಗೂ ಸಿನಿಮಾ ರಿಲೀಸ್‌ಗೆ ದಿನಾಂಕ ಫಿಕ್ಸ್ ಆಗಿದ್ದು ಇದೇ ವಾರ ತೆರೆ ಕಾಣುತ್ತಿದೆ.
ಟ್ರೆಂಡಿಂಗ್ ಸುದ್ದಿ
ಚಿತ್ರತಂಡ ಇತ್ತೀಚೆಗೆ ಬೆಂಗಳೂರಿನ ಖಾಸಗಿ ಹೋಟೆಲ್ ಒಂದರಲ್ಲಿ ಪ್ರೀ ರಿಲೀಸ್ ಕಾರ್ಯಕ್ರಮವನ್ನು ಆಯೋಜಿಸಿತ್ತು. ಕನ್ನಡ ಚಿತ್ರರಂಗದ ಹಿರಿಯ ನಟರಾದ ಎಂ.ಎಸ್. ಉಮೇಶ್, ಬೆಂಗಳೂರು ನಾಗೇಶ್, ಹೊನ್ನವಳ್ಳಿ ಕೃಷ್ಣ, ಶೈಲಶ್ರೀ ಹಾಗೂ ಜಯಲಕ್ಷ್ಮಿ ಪಾಟೀಲ್ ಹಾಗೂ ಇನ್ನಿತರನ್ನು ನಿರ್ಮಾಪಕ ನಿರ್ಮಾಪಕ ಗುಲ್ಜರ್ ಜಾಕೀರ್ ಸನ್ಮಾನ ಮಾಡಿದರು. ಗೌರವ ಸ್ವೀಕರಿಸಿ ಮಾತನಾಡಿದ ಹಿರಿಯ ನಟ ಉಮೇಶ್, ಚಿತ್ರತಂಡಕ್ಕೆ ಶುಭ ಕೋರಿದರು.
ನಿರ್ಮಾಪಕ ಗುಲ್ಜರ್ ಜಾಕೀರ್ ಮಾತನಾಡಿ, ''ನಾನು ತಂದೆ-ತಾಯಿಯಷ್ಟೇ ಕನ್ನಡ ಭಾಷೆಯನ್ನು ಗೌರವಿಸುತ್ತೇನೆ. ಕನ್ನಡಕ್ಕಾಗಿ ಏನಾದರೂ ಮಾಡಬೇಕೆಂದು ಈ ಸಿನಿಮಾ ನಿರ್ಮಾಣ ಮಾಡಿದ್ದೇನೆ. ಕಳೆದ ವರ್ಷ ತೆರೆಕಂಡ ಕೆಲವು ಚಿತ್ರಗಳು ಅಂತರಾಷ್ಟ್ರೀಯ ಮಟ್ಟದಲ್ಲಿ ಗುರುತಿಸಿಕೊಂಡಿದೆ. ನಮ್ಮ ಸಿನಿಮಾ ಕೂಡಾ ಅದೇ ರೀತಿ ಯಶಸ್ವಿಯಾಗಲಿ ಎಂದು ನೀವು ಹಾರೈಸಿ. ಫೆಬ್ರವರಿ 10 ರಂದು ಸಿನಿಮಾ ಬಿಡುಗಡೆಯಾಗುತ್ತಿದೆ. ಅದಕ್ಕೂ ಮುನ್ನ ನನಗೆ ಈ ಹಿರಿಯ ಕಲಾವಿದರನ್ನು ಗೌರವಿಸಬೇಕೆಂಬ ಆಸೆಯಿತ್ತು. ಆ ಕನಸು ಇಂದು ಈಡೇರಿದೆ. ಅವರ ಆಶೀರ್ವಾದ ನಮಗೆ ಸದಾ ಇರಲಿ. ನನಗೆ ಸಲಹೆ ನೀಡಿದ ಉಮೇಶ್ ಬಣಕಾರ್ ಹಾಗೂ ನನ್ನ ಚಿತ್ರತಂಡಕ್ಕೆ ಧನ್ಯವಾದ ತಿಳಿಸುತ್ತೇನೆ'' ಎಂದರು.
''ಬೆಂಗಳೂರು 69, ಇಂಟರ್ ನ್ಯಾಷನಲ್ ಕ್ರೈಮ್ ಥ್ರಿಲ್ಲರ್ ಕಥಾಹಂದರ ಹೊಂದಿರುವ ಸಿನಿಮಾ. ಅದರ ಜೊತೆಗೆ ಲವ್ , ಸೆಂಟಿಮೆಂಟ್ ಎಲ್ಲವೂ ಇದೆ. ಚಿತ್ರ ನೋಡಿ ನಮ್ಮನ್ನು ಪ್ರೋತ್ಸಾಹಿಸಿ'' ಎಂದು ನಿರ್ದೇಶಕ ಕ್ರಾಂತಿ ಚೈತನ್ಯ ಮನವಿ ಮಾಡಿದರು. ನಟಿ ಅನಿತಾ ಭಟ್ ಮಾತನಾಡಿ, ''ನಮ್ಮ ಚಿತ್ರ ಫೆಬ್ರವರಿ 10 ರಂದು ತೆರೆಗೆ ಬರುತ್ತಿದೆ. ಈಗಾಗಲೇ ಚಿತ್ರ ನೋಡಿರುವವರಿಂದ ಉತ್ತಮ ಪ್ರತಿಕ್ರಿಯೆ ದೊರೆತಿದೆ'' ಎಂದು ನಟಿ ಅನಿತಾ ಭಟ್ ಮಾಹಿತಿ ನೀಡಿದರು. ಬೆಂಗಳೂರು 69 ಚಿತ್ರಕ್ಕೆ ಪವನ್ ಶೆಟ್ಟಿ ಸಂಗೀತ ನೀಡಿದ್ದಾರೆ. ಕರ್ನಾಟಕ ಚಲನಚಿತ್ರ ನಿರ್ಮಾಪಕರ ಸಂಘದ ಅಧ್ಯಕ್ಷ ಉಮೇಶ್ ಬಣಕಾರ್ ಕೂಡಾ ಕಾರ್ಯಕ್ರಮದಲ್ಲಿ ಹಾಜರಿದ್ದು ಚಿತ್ರತಂಡಕ್ಕೆ ಶುಭ ಕೋರಿದರು. ಚಿತ್ರದಲ್ಲಿ ಶಫಿ, ಅನಿತಾ ಭಟ್, ಪವನ್ ಶೆಟ್ಟಿ, ಜೈದೇವ್ ಮೋಹನ್ ಹಾಗೂ ಇನ್ನಿತರರು ನಟಿಸಿದ್ದಾರೆ.