ಕನ್ನಡ ಸುದ್ದಿ  /  Entertainment  /  Bollywood News Actress Kangana Ranaut Calls Rahul Gandhi, Priyanka Nepo Babies, Weird As Landed From Mars Pcp

Kangana Ranaut: ರಾಹುಲ್ ಗಾಂಧಿ, ಪ್ರಿಯಾಂಕಾ ಗಾಂಧಿ ನೆಪೋ ಬೇಬಿಗಳು; ಮಂಗಳ ಗ್ರಹದಿಂದ ಬಂದಂತೆ ವಿಲಕ್ಷಣವಾಗಿದ್ದಾರೆ ಎಂದ ಕಂಗನಾ ರಣಾವತ್‌

Kangana Ranaut: ಲೋಕಸಭಾ ಚುನಾವಣೆಗೆ ಬಿಜೆಪಿ ಅಭ್ಯರ್ಥಿಯಾಗಿ ಸ್ಪರ್ಧಿಸುತ್ತಿರುವ ಕಂಗನಾ ರಣಾವತ್‌ ಕಾಂಗ್ರೆಸ್‌ ವಿರುದ್ಧ ಹರಿಹಾಯ್ದಿದ್ದಾರೆ. ಕಾಂಗ್ರೆಸ್‌ ಸ್ವಜನಪಕ್ಷಪಾತದ ಪಕ್ಷ. ರಾಹುಲ್ ಗಾಂಧಿ, ಪ್ರಿಯಾಂಕಾ ಗಾಂಧಿ ನೆಪೋ ಬೇಬಿಗಳು, ಮಂಗಳ ಗ್ರಹದಿಂದ ಬಂದವರಂತೆ ವಿಲಕ್ಷಣರು ಎಂದು ಬಾಲಿವುಡ್‌ ನಟಿ ಕಂಗನಾ ಹೇಳಿದ್ದಾರೆ

ರಾಹುಲ್ ಗಾಂಧಿ, ಪ್ರಿಯಾಂಕಾ ಗಾಂಧಿ ನೆಪೋ ಬೇಬಿಗಳು ಎಂದ ಕಂಗನಾ ರಣಾವತ್‌
ರಾಹುಲ್ ಗಾಂಧಿ, ಪ್ರಿಯಾಂಕಾ ಗಾಂಧಿ ನೆಪೋ ಬೇಬಿಗಳು ಎಂದ ಕಂಗನಾ ರಣಾವತ್‌

ಬೆಂಗಳೂರು: ಕೇಂದ್ರ ಲೋಕಸಭಾ ಚುನಾವಣೆ 2024ಕ್ಕೆ ಬಿಜೆಪಿ ಅಭ್ಯರ್ಥಿಯಾಗಿ ಸ್ಪರ್ಧಿಸುತ್ತಿರುವ ಬಾಲಿವುಡ್‌ ನಟಿ ಕಂಗನಾ ರಣಾವತ್‌ ಇದೀಗ ಕಾಂಗ್ರೆಸ್‌ ವಿರುದ್ಧ ಹರಿಹಾಯ್ದಿದ್ದಾರೆ. ರಾಹುಲ್‌ ಗಾಂಧಿ, ಪ್ರಿಯಾಂಕಾ ಗಾಂಧಿ ವಿರುದ್ಧ ಬಹಿರಂಗವಾಗಿಯೇ ತನ್ನ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ತನ್ನ ಚಲನಚಿತ್ರ ವೃತ್ತಿಜೀವನದಲ್ಲಿ ದೀರ್ಘಕಾಲದಿಂದ ಹೋರಾಡಿರುವ ಸ್ವಜನಪಕ್ಷಪಾತವನ್ನು ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ಪ್ರತಿನಿಧಿಸುತ್ತದೆ ಎಂದು ಕಂಗನಾ ರಣಾವತ್‌ ಹೇಳಿದ್ದಾರೆ. ಟೌಮ್ಸ್‌ ನೌ ಸಂದರ್ಶನದಲ್ಲಿ ಕಂಗನಾ ರಣಾವತ್‌ ಅವರು ಕಾಂಗ್ರೆಸ್‌ ಮುಖಂಡರಾದ ರಾಹುಲ್‌ ಗಾಂಧಿ ಮತ್ತು ಪ್ರಿಯಾಂಕಾ ಗಾಂಧಿಯನ್ನು ನೆಪೋ ಬೇಬಿಗಳು ಎಂದು ಜರೆದಿದ್ದಾರೆ. ಕಂಗನಾ ರಣಾವತ್‌ ಅವರು ಲೋಕಸಭಾ ಚುನಾವಣೆಗೆ ಹಿಮಾಚಲ ಪ್ರದೇಶದ ಮಂಡಿ ಕ್ಷೇತ್ರದಿಂದ ಕಂಗನಾ ಸ್ಪರ್ಧಿಸುತ್ತಿದ್ದಾರೆ.

ಕಾಂಗ್ರೆಸ್‌ ಬಗ್ಗೆ ಕಂಗನಾ ರಣಾವತ್‌ ಹೇಳಿದ್ದೇನು?

"ನನಗೆ ಯಾವಾಗಲೂ ಕಾಂಗ್ರೆಸ್‌ ಭಯಾನಕ ಪಕ್ಷವಾಗಿದೆ. ಆ ಪಕ್ಷದ ಸ್ವಜನಪಕ್ಷಪಾತವು ನನಗೆ ಭಾರೀ ಸಮಸ್ಯೆಯಾಗಿದೆ. ನನ್ನ ಉದ್ಯಮದಲ್ಲಿಯೂ ಅದೇ ರೀತಿಯ ವ್ಯವಸ್ಥೆಗೆ ನಾನು ಗುರಿಯಾಗಿದ್ದೆ. ಅದನ್ನು ನಾನು ಬಹಿರಂಗವಾಗಿ ಖಂಡಿಸಿದ್ದೆ. ಅದರ ವಿರುದ್ಧ ಹೋರಾಟ ಮಾಡಿದ್ದೇನೆ. ಸ್ವಜನಪಕ್ಷಪಾತವು ನನ್ನನ್ನು ಶೋಷಿಸುತ್ತಿತ್ತು. ಸ್ವಜನಪಕ್ಷಪಾತ, ಗುಂಪುಗಾರಿಕೆ, ವಂಶಪಾರಂಪರ್ಯ, ರಾಜಕೀಯ... ನಾನು ಈ ಪಕ್ಷವನ್ನು ತಿರಸ್ಕರಿಸುತ್ತೇನೆ" ಎಂದು ಬಾಲಿವುಡ್‌ ನಟಿ ಕಂಗನಾ ರಣಾವತ್‌ ಹೇಳಿದ್ದಾರೆ.

ಗಾಂಧಿ ಒಡಹುಟ್ಟಿದವರನ್ನು ಒಂದೇ ಸಾಲಿನಲ್ಲಿ ವಿವರಿಸಿ ಎಂದು ಕಂಗನಾ ರಣಾವತ್‌ ಅವರನ್ನು ಪ್ರಶ್ನಿಸಲಾಯಿತು. ಅದಕ್ಕೆ ಅವರು "ನೆಪೋ ಮಕ್ಕಳು" ಎಂದು ಹೇಳಿದ್ದಾರೆ. ಅವರು ಮಂಗಳ ಗ್ರಹದಿಂದ ಇಳಿದುಬಂದವರಂತೆ ವಿಲಕ್ಷಣವಾಗಿದ್ದಾರೆ ಎಂದು ಕಂಗನಾ ಅಭಿಪ್ರಾಯಪಟ್ಟಿದ್ದಾರೆ. 2016 ರಲ್ಲಿ ಕಾಫಿ ವಿತ್ ಕರಣ್ ಸೀಸನ್ 5 ರ ಸಂಚಿಕೆಯಲ್ಲಿ ಚಲನಚಿತ್ರ ನಿರ್ಮಾಪಕ ಕರಣ್ ಜೋಹರ್ ಅವರನ್ನು "ಸ್ವಜನಪಕ್ಷಪಾತದ ಧ್ವಜಧಾರಿ" ಎಂದು ಕರೆದರು. ಈ ಮೂಲಕ ಕಂಗನಾ ಬಾಲಿವುಡ್‌ನಲ್ಲಿ ಸ್ವಜನಪಕ್ಷಪಾತದ ವಿರುದ್ಧ ತಮ್ಮ ನಿಲುವನ್ನು ಬಹಿರಂಗವಾಗಿಯೇ ಘೋಷಿಸಿದ್ದರು.

ಈ ವಾರದ ಆರಂಭದಲ್ಲಿ ಬಿಜೆಪಿಯು ಕಂಗನಾ ರಣಾವತ್‌ ಅವರನ್ನು ಲೋಕಸಭೆ ಚುನಾವಣೆಯ ಅಭ್ಯರ್ಥಿಯಾಗಿ ಘೋಷಿಸಿತ್ತು. ಆ ಸಂದರ್ಭದಲ್ಲಿ ಕಾಂಗ್ರೆಸ್‌ ನಾಯಕಿ ಸುಪ್ರಿಯಾ ಶ್ರೀನಾಟೆ ಅವರು ಸೋಷಿಯಲ್‌ ಮೀಡಿಯಾದಲ್ಲಿ "ಮಂಡಿಯಲ್ಲಿ ಈಗಿನ ರೇಟ್‌ ಎಷ್ಟು?" ಎಂದು ಪೋಸ್ಟ್‌ ಮಾಡಿದ್ದರು. "ಮಂಡಿ ಮೇ ಆಜ್ಕಲ್ ಭಾವ್ ಕ್ಯಾ ಚಲ್ ರಹಾ ಹೈ?" ಎಂಬ ಪೋಸ್ಟ್‌ ವಿವಾದಕ್ಕೆ ಈಡಾಗಿತ್ತು. ಮಂಡಿ ಎಂಬ ಕ್ಷೇತ್ರವನ್ನು ಸಂತೆಗೆ ಹೋಲಿಸಿದ ಕಾಂಗ್ರೆಸ್‌ ಮುಖಂಡೆ ಸಾಕಷ್ಟು ಟೀಕೆಗಳನ್ನು ಎದುರಿಸಿದ್ದರು. ನಾನು ಈ ಪೋಸ್ಟ್‌ ಮಾಡಿಲ್ಲ. ಆದರೆ, ನನ್ನ ಖಾತೆಯನ್ನು ಬೇರೊಬ್ಬರು ನಿರ್ವಹಿಸುತ್ತಾರೆ, ಅವರಿಂದ ಈ ತಪ್ಪು ನಡೆದಿದೆ ಎಂದು ಒಪ್ಪಿಕೊಂಡಿದ್ದರು.

ಬಿಜೆಪಿ ನಾಯಕಿ ಬಾನ್ಸುರಿ ಸ್ವರಾಜ್ ಅವರು ಲೆಫ್ಟಿನೆಂಟ್ ಗವರ್ನರ್‌ಗೆ ದೂರು ಸುಪ್ರಿಯಾ ವಿರುದ್ಧ ತನಿಖೆ ನಡೆಸುವಂತೆ ಮತ್ತು ಮಹಿಳೆಯ ಗೌರವಕ್ಕೆ ಧಕ್ಕೆ ತಂದಿದ್ದಕ್ಕಾಗಿ ಎಫ್ಐಆರ್ ದಾಖಲಿಸುವಂತೆ ಒತ್ತಾಯಿಸಿದ್ದರು. ಕಾಂಗ್ರೆಸ್‌ ನಾಯಕಿ ಮಾಡಿರುವ ಪೋಸ್ಟ್‌ ಹಿಂದೆ ಯಾರು ಇದ್ದಾರೆ? ಯಾವ ಕಾರಣಕ್ಕಾಗಿ ಈ ರೀತಿ ಪೋಸ್ಟ್‌ ಮಾಡಿದ್ದಾರೆ ಎಂದು ದೆಹಲಿ ಪೊಲೀಸರು ತನಿಖೆ ನಡೆಸಲಿದ್ದಾರೆ.

ಕಂಗನಾ ರಣಾವತ್‌ ಅವರು ಎಮರ್ಜೆನ್ಸಿ ಎಂಬ ಸಿನಿಮಾದಲ್ಲಿ ನಟಿಸಲಿದ್ದಾರೆ. ಮಾಜಿ ಪ್ರಧಾನಿ ಇಂದಿರಾ ಗಾಂಧಿ, ರಾಹುಲ್ ಮತ್ತು ಪ್ರಿಯಾಂಕಾ ಗಾಂಧಿ ಅವರ ಅಜ್ಜಿಯಾಗಿ ನಟಿಸಲಿದ್ದಾರೆ.

IPL_Entry_Point