ಕನ್ನಡ ಸುದ್ದಿ  /  ಮನರಂಜನೆ  /  Dingri Nagaraj Controversy:ಅಶ್ಲೀಲ ವಿಡಿಯೋ ಕಳಿಸಿದ್ದಾರೆಂದು ಆರೋಪಿಸಿದ ಪೋಷಕ ನಟಿ...ಹಾಸ್ಯನಟ ಡಿಂಗ್ರಿ ನಾಗರಾಜ್‌ ಹೇಳಿದ್ದೇನು..?

Dingri Nagaraj Controversy:ಅಶ್ಲೀಲ ವಿಡಿಯೋ ಕಳಿಸಿದ್ದಾರೆಂದು ಆರೋಪಿಸಿದ ಪೋಷಕ ನಟಿ...ಹಾಸ್ಯನಟ ಡಿಂಗ್ರಿ ನಾಗರಾಜ್‌ ಹೇಳಿದ್ದೇನು..?

ನಾನು ಬಹಳ ವರ್ಷಗಳಿಂದ ಬಟನ್‌ ಮೊಬೈಲ್‌ ಬಳಸುತ್ತಿದ್ದೇನೆ. ಇದರಲ್ಲಿ ವಾಟ್ಸಾಪ್‌ ಇಲ್ಲ, ಹಾಗೇ ವಿಡಿಯೋ ಕೂಡಾ ಕಳಿಸಲು ಆಗುವುದಿಲ್ಲ. ರಾಣಿ ಹಾಗೂ ಅವರ ಜೊತೆಗಿರುವವರನ್ನು ಸಂಘದಿಂದ ತೆಗೆದಿದ್ದೇವೆ ಎಂಬ ಕೋಪಕ್ಕೆ ನಮ್ಮ ವಿರುದ್ದ ಇಲ್ಲಸಲ್ಲದ ಆರೋಪ ಮಾಡುತ್ತಿದ್ದಾರೆ ಎಂದು ಡಿಂಗ್ರಿ ನಾಗರಾಜ್ ಹೇಳಿದ್ದಾರೆ.

ಡಿಂಗ್ರಿ ನಾಗರಾಜ್‌ ವಿರುದ್ಧ ಪೋಷಕ ನಟಿ ರಾಣಿ ಆರೋಪ
ಡಿಂಗ್ರಿ ನಾಗರಾಜ್‌ ವಿರುದ್ಧ ಪೋಷಕ ನಟಿ ರಾಣಿ ಆರೋಪ

ಕನ್ನಡ ಚಿತ್ರರಂಗದ ನಟಿಯೊಬ್ಬರಿಗೆ ಹಿರಿಯ ನಟರೊಬ್ಬರು ಅಶ್ಲೀಲ ವಿಡಿಯೋ ಕಳಿಸಿರುವ ಆರೋಪ ಕೇಳಿಬಂದಿದೆ. ಕನ್ನಡ ಸಿನಿಮಾಗಳಲ್ಲಿ ಪೋಷಕ ಪಾತ್ರದಲ್ಲಿ ನಟಿಸುತ್ತಿರುವ ರಾಣಿ ಎಂಬುವವರು ಹಿರಿಯ ನಟ, ಹಾಸ್ಯ ಕಲಾವಿದ ಡಿಂಗ್ರಿ ನಾಗರಾಜ್‌ ವಿರುದ್ದ ಆರೋಪ ಮಾಡಿದ್ದಾರೆ. ಈ ಪ್ರಕರಣ ಈಗ ಸ್ಯಾಂಡಲ್‌ವುಡ್‌ನಲ್ಲಿ ಹಾಟ್‌ ಟಾಪಿಕ್‌ ಆಗಿದೆ.

ಟ್ರೆಂಡಿಂಗ್​ ಸುದ್ದಿ

ಹಿರಿಯ ಹಾಸ್ಯ ನಟ ಡಿಂಗ್ರಿ ನಾಗರಾಜ್‌, ಕನ್ನಡ ಪೋಷಕ ಕಲಾವಿದರ ಸಂಘದ ಅಧ್ಯಕ್ಷರಾಗಿದ್ದಾರೆ. ಜೊತೆಗೆ ಆಡುಗೋಡಿ ಶ್ರೀನಿವಾಸ್‌, ಪ್ರಧಾನ ಕಾರ್ಯದರ್ಶಿಯಾಗಿದ್ದಾರೆ. ಡಿಂಗ್ರಿ ನಾಗರಾಜ್‌ ಹಾಗೂ ಶ್ರೀನಿವಾಸ್‌ ಇಬ್ಬರೂ ಸಂಘದ ಮಹಿಳಾ ಸದಸ್ಯರ ಮೊಬೈಲ್‌ಗಳಿಗೆ ಅಶ್ಲೀಲ ವಿಡಿಯೋಗಳನ್ನು ಕಳಿಸುತ್ತಾರೆ ಎಂದು ಪೋಷಕ ನಟಿ ರಾಣಿ ಆರೋಪಿಸಿದ್ದಾರೆ. ಆದರೆ ಡಿಂಗ್ರಿ ನಾಗರಾಜ್‌ ಹಾಗೂ ಶ್ರೀನಿವಾಸ್‌ ತಮ್ಮ ವಿರುದ್ದದ ಆರೋಪಗಳನ್ನು ನಿರಾಕರಿಸಿದ್ದಾರೆ.

''ಪೋಷಕ ಕಲಾವಿದರ ಸಂಘಕ್ಕೆ ಸಂಬಂಧಿಸಿದಂತೆ ನಾವು ಏನೇ ಪ್ರಶ್ನೆಗಳನ್ನು ಕೇಳಿದರೂ ಡಿಂಗ್ರಿ ನಾಗರಾಜ್‌ ಹಾಗೂ ಶೀನಿವಾಸ್‌ ಇಬ್ಬರೂ ತಮಗೆ ಇಷ್ಟ ಬಂದಂತೆ ಉತ್ತರ ನೀಡುತ್ತಾರೆ. ಸಂಘದಲ್ಲಿ ಎಲ್ಲವನ್ನೂ ಮುಚ್ಚು ಮರೆ ಮಾಡಲಾಗುತ್ತದೆ. ಏನಾದರೂ ಕೇಳಿದರೆ ಏಕವಚನದಲ್ಲಿ ನಿಂದಿಸುತ್ತಾರೆ. ಸಂಘದ ಮಹಿಳೆಯರ ಬಗ್ಗೆಯೂ ಅವರು ಕೆಟ್ಟದಾಗಿ ಮಾತನಾಡುತ್ತಾರೆ. ಇದರ ಬಗ್ಗೆ ನನ್ನ ಬಳಿ ದಾಖಲೆ ಇವೆ. ಪೋಷಕ ಕಲಾವಿದರ ಸಂಘದ ಹಣವನ್ನು ದುರುಪಯೋಗ ಮಾಡಿಕೊಳ್ಳಲಾಗಿದೆ. ನಾನು ಸಂಘದ ವಿರುದ್ಧ ಯಾವುದೇ ಆರೋಪ ಮಾಡುತ್ತಿಲ್ಲ. ಆದರೆ ಸಂಘದ ಅಧ್ಯಕ್ಷ ಡಿಂಗ್ರಿ ನಾಗರಾಜ್‌ ಹಾಗೂ ಪ್ರಧಾನ ಕಾರ್ಯದರ್ಶಿ ಆಡುಗೋಡಿ ಶ್ರೀನಿವಾಸ್‌ ಅವರ ಬಗ್ಗೆ ಮಾತನಾಡುತ್ತಿದ್ದೇನೆ, ಹಣದ ವಿಚಾರವಾಗಿ ಪ್ರಶ್ನೆ ಮಾಡಿದ್ದಕ್ಕೆ ನನ್ನನ್ನೂ ಸೇರಿಸಿ ಮೂವರನ್ನು ಸಂಘದಿಂದ ತೆಗೆದಿದ್ದಾರೆ'' ಎಂದು ಪೋಷಕ ನಟಿ ರಾಣಿ ಆರೋಪಿಸಿದ್ದಾರೆ.

ಆದರೆ ಆಡುಗೋಡಿ ಶ್ರೀನಿವಾಸ್‌ ಹಾಗೂ ಡಿಂಗ್ರಿ ನಾಗರಾಜ್‌ ಇಬ್ಬರೂ ತಮ್ಮ ಮೇಲಿನ ಆರೋಪವನ್ನು ನಿರಾಕರಿಸಿದ್ದಾರೆ. ''ರಾಣಿ ಅವರು ನಮ್ಮ ವಿರುದ್ಧ ಮಾಡಿರುವ ಆರೋಪಗಳು ಸುಳ್ಳು, ಆಧಾರರಹಿತವಾಗಿದೆ. ನಾನು ಬಹಳ ವರ್ಷಗಳಿಂದ ಬಟನ್‌ ಮೊಬೈಲ್‌ ಬಳಸುತ್ತಿದ್ದೇನೆ. ಇದರಲ್ಲಿ ವಾಟ್ಸಾಪ್‌ ಇಲ್ಲ, ಹಾಗೇ ವಿಡಿಯೋ ಕೂಡಾ ಕಳಿಸಲು ಆಗುವುದಿಲ್ಲ. ರಾಣಿ ಹಾಗೂ ಅವರ ಜೊತೆಗಿರುವವರನ್ನು ಸಂಘದಿಂದ ತೆಗೆದಿದ್ದೇವೆ ಎಂಬ ಕೋಪಕ್ಕೆ ನಮ್ಮ ವಿರುದ್ದ ಇಲ್ಲಸಲ್ಲದ ಆರೋಪ ಮಾಡುತ್ತಿದ್ದಾರೆ. ಸಂಘದ ಸದಸ್ಯರಿಗೆ ಅಶ್ಲೀಲ ಪದ ಬಳಸಿದರೆ ಸದಸ್ಯತ್ವದಿಂದ ತೆಗೆಯುವುದಾಗಿ ನಾವು ಬೈಲಾ ಮಾಡಿಕೊಂಡಿದ್ದೇವೆ. ಅದರಂತೆ ರಾಣಿ ಹಾಗೂ ಇಬ್ಬರನ್ನು ತೆಗೆದಿದ್ದೇವೆ. ಅವರು ಯಾವ ಕೋರ್ಟಿಗಾದರೂ ಹೋಗಲಿ, ನಾವೂ ಹೋರಾಡಲು ಸಿದ್ಧರಿದ್ದೇವೆ.''

'',ನಾನು 5 ವರ್ಷದವನಿರುವಾಗ ರಂಗಭೂಮಿಗೆ ಬಂದೆ. ಸಾವಿರಾರು ನಾಟಕಗಳನ್ನು ಮಾಡಿಕೊಂಡು ಬಂದಿದ್ದೇನೆ. ಈ 70 ವರ್ಷಗಳಲ್ಲಿ ಅನೇಕ ನಾಟಕ ಕಂಪನಿಗಳಲ್ಲಿ ಕೆಲಸ ಮಾಡಿದ್ದೇನೆ. ನೀವು ಎಲ್ಲಿಯಾದರೂ ಹೋಗಿ ಕೇಳಿ. ನನ್ನ ಬಗ್ಗೆ ಯಾರಾದರೂ ನೆಗೆಟಿವ್‌ ಆಗಿ ಮಾತನಾಡಿದರೆ, ನೀವು ಹೇಳಿದಂತೆ ಕೇಳುತ್ತೇನೆ. ಈ ಪೋಷಕ ಕಲಾವಿದ ಸಂಘ ಕಟ್ಟಿದ್ದು ನಾನೇ, ಅಂತದರಲ್ಲಿ ಇದನ್ನು ನಾನು ಹೇಗೆ ದುರುಪಯೋಗ ಮಾಡಿಕೊಳ್ಳಲು ಸಾಧ್ಯ..? ಸಂಘಕ್ಕಾಗಿ ಬಹಳ ಶ್ರಮ ಪಟ್ಟಿದ್ದೇನೆ. ನನ್ನ ವಿರುದ್ದ ರಾಣಿಯವರು ಮಾಡಿರುವ ಆರೋಪ ಸುಳ್ಳು. ಇದರ ಬಗ್ಗೆ ನಾನು ಪೊಲೀಸರಿಗೆ ದೂರು ನೀಡಿದ್ದೇನೆ, ನಮ್ಮ ಲಾಯರ್‌ ಜೊತೆ ಮಾತನಾಡಿ ಆಕೆ ವಿರುದ್ದ ಮಾನನಷ್ಟ ಮೊಕದ್ದಮೆ ಹೂಡುತ್ತೇನೆ'' ಎಂದು ಡಿಂಗ್ರಿ ನಾಗರಾಜ್ ಹೇಳಿದ್ದಾರೆ.

IPL_Entry_Point