ಕನ್ನಡ ಸುದ್ದಿ  /  ಮನರಂಜನೆ  /  Dr Rajkumar: ಆಧುನಿಕ ತಂತ್ರಜ್ಞಾನದೊಂದಿಗೆ ಮರು ಬಿಡುಗಡೆ ಆಗಲಿದೆ ಡಾ. ರಾಜ್‌ಕುಮಾರ್‌ "ಭಾಗ್ಯವಂತರು"

Dr Rajkumar: ಆಧುನಿಕ ತಂತ್ರಜ್ಞಾನದೊಂದಿಗೆ ಮರು ಬಿಡುಗಡೆ ಆಗಲಿದೆ ಡಾ. ರಾಜ್‌ಕುಮಾರ್‌ "ಭಾಗ್ಯವಂತರು"

ಡಾ. ರಾಜ್‌ಕುಮಾರ್‌ ನಟನೆಯ ಬ್ಲಾಕ್‌ ಅಂಡ್‌ ವೈಟ್‌ ಸಿನಿಮಾಗಳಿಗೆ ಆಧುನಿಕತೆಯ ಟಚ್‌ ನೀಡಿ, ಕಲರ್‌ಫುಲ್‌ ಆಗಿಯೇ ಬಿಡುಗಡೆ ಮಾಡಲಾಗಿದೆ. "ಕಸ್ತೂರಿ ನಿವಾಸ" ಸೇರಿ ಹಲವು ಚಿತ್ರಗಳು ತೆರೆಕಂಡಿವೆ. ಇದೀಗ ಭಾಗ್ಯವಂತರು ಚಿತ್ರ ಸಹ ಹೊಸ ತಂತ್ರಜ್ಞಾನದ ಮೆರುಗಿನೊಂದಿಗೆ ಬಿಡುಗಡೆ ಆಗಲಿದೆ

ಭಾಗ್ಯವಂತರು ಚಿತ್ರ ಮರು ಬಿಡುಗಡೆ
ಭಾಗ್ಯವಂತರು ಚಿತ್ರ ಮರು ಬಿಡುಗಡೆ

ಬೆಂಗಳೂರು: ಡಾ. ರಾಜಕುಮಾರ್‌ ಸಿನಿಮಾಗಳೆಂದರೆ, ಅವು ಎಂದಿಗೂ ಎವರ್‌ಗ್ರೀನ್!‌ ಈಗಲೂ ಟಿವಿ ಪರದೆ ಮೇಲೆ ಅವರ ಸಿನಿಮಾ ಬಿತ್ತರವಾದರೆ, ನೋಡದೆ ಇರಲಾರರು. ವಯಸ್ಸಿನ ಅಂತರವಿಲ್ಲದೆ ಎಲ್ಲ ವರ್ಗದವರಿಗೂ ಅವರ ಸಿನಿಮಾಗಳೆಂದರೆ ಇಷ್ಟ. ಈ ನಡುವೆ ಅವರ ಹಳೇ ಸಿನಿಮಾಗಳನ್ನೇ ಮತ್ತೆ ತೆರೆಮೇಲೆ ತರುವ ಕೆಲಸಗಳಾಗಿವೆ. ಈಗಲೂ ಅದು ಮುಂದುವರಿದಿವೆ.

ಟ್ರೆಂಡಿಂಗ್​ ಸುದ್ದಿ

ಹೌದು, ಡಾ. ರಾಜ್‌ಕುಮಾರ್‌ ನಟನೆಯ ಬ್ಲಾಕ್‌ ಅಂಡ್‌ ವೈಟ್‌ ಸಿನಿಮಾಗಳಿಗೆ ಆಧುನಿಕತೆಯ ಟಚ್‌ ನೀಡಿ, ಕಲರ್‌ಫುಲ್‌ ಆಗಿಯೇ ಬಿಡುಗಡೆ ಮಾಡಲಾಗಿದೆ. "ಕಸ್ತೂರಿ ನಿವಾಸ" ಸೇರಿ ಹಲವು ಚಿತ್ರಗಳು ತೆರೆಕಂಡಿವೆ. ಇದೀಗ ಭಾಗ್ಯವಂತರು ಚಿತ್ರ ಸಹ ಹೊಸ ತಂತ್ರಜ್ಞಾನದ ಮೆರುಗಿನೊಂದಿಗೆ ಬಿಡುಗಡೆ ಆಗಲಿದೆ. ಜುಲೈ 8ಕ್ಕೆ ರಿಲೀಸ್‌ ಆಗಲಿದೆ.

"ಭಾಗ್ಯವಂತರು" ಡಾ. ರಾಜ್‌ಕುಮಾರ್‌ ನಟನೆಯ ಸೂಪರ್‌ ಹಿಟ್‌ ಸಿನಿಮಾಗಳಲ್ಲಿ ಒಂದು. 1974ರಲ್ಲಿ ತೆರೆಕಂಡಿದ್ದ ಈ ಚಿತ್ರವನ್ನು ಭಾರ್ಗವ ನಿರ್ದೇಶನ ಮಾಡಿದ್ದರು. ಈ ಚಿತ್ರವನ್ನು ದ್ವಾರಕೀಶ್‌ ನಿರ್ಮಾಣ ಮಾಡಿದ್ದರು. ಇದೀಗ ಬರೋಬ್ಬರಿ 48 ಗಂಟೆಗಳ ಬಳಿಕ ಚಿತ್ರ ಮರು ಬಿಡುಗಡೆ ಆಗುತ್ತಿದೆ. 50ಕ್ಕೂ ಅಧಿಕ ಚಿತ್ರಮಂದಿರಗಳಲ್ಲಿ ಈ ಚಿತ್ರವನ್ನು ಬಿಡುಗಡೆ ಮಾಡುವ ಬಗ್ಗೆ ಮುನಿರಾಜು ಎಂ. ತಿಳಿಸಿದ್ದಾರೆ.

7.1 ಡಿಜಿಟಲ್ ಸೌಂಡ್, ಕಲರಿಂಗ್, ಡಿಟಿಎಸ್ ಮುಂತಾದ ಆಧುನಿಕ ಸೌಲಭ್ಯಗಳೊಂದಿಗೆ ಈ ಚಿತ್ರ ತೆರೆಗೆ ಬರಲು ಸಿದ್ದವಾಗಿದೆ. ಡಾ. ರಾಜಕುಮಾರ್ ಅವರ ಅಪಟ್ಟ ಅಭಿಮಾನಿಯಾಗಿರುವ ಮುನಿರಾಜು, ಈ ಹಿಂದೆ "ಆಪರೇಷನ್ ಡೈಮೆಂಡ್ ರಾಕೇಟ್", " ನಾನೊಬ್ಬ ಕಳ್ಳ", "ದಾರಿ ತಪ್ಪಿದ ಮಗ" ಸೇರಿ ಕೆಲವು ಚಿತ್ರಗಳನ್ನು ಹೊಸ ತಂತ್ರಜ್ಞಾನದೊಂದಿಗೆ ಬಿಡುಗಡೆ ಮಾಡಿದ್ದಾರೆ. ಈಗ "ಭಾಗ್ಯವಂತರು" ಚಿತ್ರವನ್ನು ತೆರೆಗೆ ತರುತ್ತಿದ್ದಾರೆ. ಮುಂದೆ "ಹುಲಿ ಹಾಲಿನ ಮೇವು" ಸೇರಿ ಅಣ್ಣವ್ರ ಇನ್ನಷ್ಟು ಚಿತ್ರಗಳನ್ನು ಹೊಸ ತಂತ್ರಜ್ಞಾನದೊಂದಿಗೆ ಬಿಡುಗಡೆ ಮಾಡುವ ಯೋಜನೆಯನ್ನು ಹಾಕಿಕೊಂಡಿದ್ದಾರೆ.

IPL_Entry_Point