Seetha Rama Serial: ಸಹಾಯ ಬೇಡ ಅಂತ ಹೇಳೋ ರೀತಿಯಲ್ಲೂ ರಾಮನ ಮನಸ್ಸು ಗೆದ್ದ ಸೀತಾ; ಹಿರಿ ಜೀವಗಳ ಮುಂದೆ ರುದ್ರಪ್ರತಾಪನ ಮೋಸದಾಟ
ಕನ್ನಡ ಸುದ್ದಿ  /  ಮನರಂಜನೆ  /  Seetha Rama Serial: ಸಹಾಯ ಬೇಡ ಅಂತ ಹೇಳೋ ರೀತಿಯಲ್ಲೂ ರಾಮನ ಮನಸ್ಸು ಗೆದ್ದ ಸೀತಾ; ಹಿರಿ ಜೀವಗಳ ಮುಂದೆ ರುದ್ರಪ್ರತಾಪನ ಮೋಸದಾಟ

Seetha Rama Serial: ಸಹಾಯ ಬೇಡ ಅಂತ ಹೇಳೋ ರೀತಿಯಲ್ಲೂ ರಾಮನ ಮನಸ್ಸು ಗೆದ್ದ ಸೀತಾ; ಹಿರಿ ಜೀವಗಳ ಮುಂದೆ ರುದ್ರಪ್ರತಾಪನ ಮೋಸದಾಟ

Seetha Rama Serial Today Episode: ಜೀ ಕನ್ನಡ ಚಾನೆಲ್‌ನಲ್ಲಿ ಪ್ರಸಾರವಾಗುವ ಧಾರಾವಾಹಿ 'ಸೀತಾ ರಾಮ' ಇದೀಗ ನೋಡುಗರ ಗಮನ ಸೆಳೆಯುವುದರ ಜತೆಗೆ ರೋಚಕತೆ ಹೆಚ್ಚಿಸುತ್ತಿದೆ. ಅಕ್ಟೋಬರ್ 12ರ ಸಂಚಿಕೆಯಲ್ಲಿ ಏನೆಲ್ಲಾ ಆಯಿತು ಇಲ್ಲಿದೆ ವಿವರ. ಅಜ್ಜಿ ತಾತನ ಮುಂದೆ ಸಾಚಾ ಅಂತ ತೋರಿಸಿಕೊಂಡಿದ್ದಾನೆ ರುದ್ರಪ್ರತಾಪ್‌, ಹಣ ನೀಡಲು ಬಂದ ರಾಮ್‌ಗೆ ಬೇಡ ಎಂದಿದ್ದಾಳೆ ಸೀತಾ.

Seetha Rama Kannada Serial October 12h Episode: ಜೀ ಕನ್ನಡ ಚಾನೆಲ್‌ನಲ್ಲಿ ಪ್ರಸಾರವಾಗುವ ಸೀತಾ ರಾಮ ಧಾರಾವಾಹಿಯ ದೃಶ್ಯ
Seetha Rama Kannada Serial October 12h Episode: ಜೀ ಕನ್ನಡ ಚಾನೆಲ್‌ನಲ್ಲಿ ಪ್ರಸಾರವಾಗುವ ಸೀತಾ ರಾಮ ಧಾರಾವಾಹಿಯ ದೃಶ್ಯ

ಸೀತಾ ರಾಮ ಧಾರಾವಾಹಿ ಅಕ್ಟೋಬರ್ 12ರ ಸಂಚಿಕೆ: ಅಮ್ಮನ ಬಳಿ ಸುಳ್ಳು ಹೇಳಬಾರದು, ಚಿಕ್ಕ ಮಕ್ಕಳು ಮನಸ್ಸಲ್ಲಿ ಏನೂ ಇಟ್ಕೋಬಾರದು. ಮಕ್ಕಳ ಮನಸ್ಸಿಗೆ ಭಾರವಾಗುತ್ತೆ. ಸಿಹಿ ಏನೇ ಹೇಳಿದರೂ ಸಿಹಿಯಾಗಿರುತ್ತೆ ಅಂತ ಸಿಹಿಯ ಕೋಪವನ್ನು ಕರಗಿಸಿದ್ದಾಳೆ. ಇತ್ತ ರಾಮ್‌ ಮನೆಯಲ್ಲಿ ಸಾಧನಾ, ಸತ್ಯನ ಮುಂದೆ ರಾಮ್‌ ಪ್ರೀತಿಯಲ್ಲಿ ಬಿದ್ದಿದ್ದಾನೆ ಎಂದು ಹೇಳಿಕೊಂಡಿದ್ದಾಳೆ.

ಮತ್ತೊಂದು ಕಡೆ ಲಾಯರ್‌ ಸೀತಾಳನ್ನು ಹುಡುಕಿಕೊಂಡು ಶಾಂತಮ್ಮನ ವಠಾರಕ್ಕೆ ಬಂದಿದ್ದಾನೆ. ಸೀತಾ ಈಗಲೂ ಆಫೀಸ್‌ಗೆ ಹೋಗ್ತಿದ್ದಾರಾ? ಆಫೀಸ್‌ನಲ್ಲಿ ಅಷ್ಟೆಲ್ಲ ಆದರೂ ಈಗಲೂ ಹೋಗ್ತಿದ್ದಾರಾ ಅನ್ನೋ ಮಾತನ್ನ ಅಜ್ಜಿ ಮುಂದೆ ಹೇಳಿಕೊಂಡಿದ್ದಾನೆ. ಅರೇ ಏನಾಯ್ತಪ್ಪ ಅಂತ ಅಜ್ಜಿಯೂ ಕೊಂಚ ಗಾಬರಿಯಾಗಿದ್ದಾಳೆ.

ಬ್ಯಾಂಕ್‌ನವರು ಸೀತಾಳ ಆಫೀಸ್‌ಗೆ ಹೋಗಿ ಗಲಾಟೆ ಮಾಡಿದ್ದಾರೆ. ನಾನೇ ಬ್ಯಾಂಕ್‌ನವರಿಗೆ ಫೋನ್‌ ಮಾಡಿ, ಕ್ಲಾಸ್‌ ತೆಗೆದುಕೊಂಡಿದ್ದೇನೆ. ಸಾಲ ತೀರಿಸಲು ಟೈಮ್‌ ಸಿಕ್ಕಿದೆ. ಸೀತಾ ಮನಸ್ಸು ಮಾಡಿದ್ದರೆ, ನಾನೇ ಸಾಲ ತೀರಿಸುತ್ತಿದೆ. ಅವರ್ಯಾಕೋ ಮನಸು ಮಾಡ್ತಿಲ್ಲ. ಹೋಗ್ಲಿ ಬಿಡಿ ಎಂದು ಅಜ್ಜಿ ತಾತನ ಮುಂದೆ ನಾಟಕವಾಡಿದ್ದಾನೆ ರುದ್ರಪ್ರತಾಪ್‌.

ಸೀತಾ ಒಬ್ಬಳೇ, ನಾನೂ ಒಬ್ಬನೇ ಮದುವೆ ಆದರೆ ಹೇಗೆ ಎಂದು ಅಜ್ಜಿ ತಾತನ ಮುಂದೆ ಹೇಳಿಕೊಂಡಿದ್ದಾನೆ ರುದ್ರಪ್ರತಾಪ್‌. ಸೀತಾ ಕಷ್ಟಪಡೋದನ್ನು ನೋಡಲು ಆಗ್ತಿಲ್ಲ. ನಾನೇ ಮನೆ ಮಾರಿ ಅವರ ಸಾಲ ತೀರಿಸಿಕೊಳ್ಳಬೇಕೆಂದುಕೊಂಡಿದ್ದೆ. ನೀವೇ ನನಗೆ ಅಪ್ಪ, ಅಮ್ಮ.‌ ಇಬ್ಬರ ಆಶೀರ್ವಾದ ಪಡೆದು, ಅತೀ ವಿನಯ ಪ್ರದರ್ಶಿಸಿದ್ದಾನೆ. ಈತನ ಈ ವರ್ತನೆಗೆ ಹಿರಿ ಜೀವಗಳು ಕರಗಿ ನೀರಾಗಿವೆ. ಒಟ್ಟಿನಲ್ಲಿ ತಾನೊಬ್ಬ ಸಾಚಾ ಅಂತ ತೋರಿಸಿದ್ದಾನೆ ರುದ್ರಪ್ರತಾಪ್.

ಸೀತಾಳ ಸಮಸ್ಯೆ ಪರಿಹಾರಕ್ಕೆ ಅಂತ ತನ್ನ ಕೈಲಾದ ಮಟ್ಟಿಗೆ ಸಹಾಯ ಮಾಡಬೇಕೆಂದು ರಾಮ್‌ ಹಣಕಾಸಿನ ನೆರವು ನೀಡಲು ಮುಂದಾಗಿದ್ದಾನೆ. ಸೀತಾಳಿಗೆ ಡ್ರಾಯಿಂಗ್‌ ಬುಕ್‌ ಕೊಡುವ ನೆಪದಲ್ಲಿ 2 ಲಕ್ಷ ಹಣ ನೀಡಲು ಮುಂದಾಗಿದ್ದಾನೆ. ನಿಮಗೂ ಸಹಾಯ ಆಗಬಹುದು ಎಂದಿದ್ದಾನೆ. ಆದರೆ, ರಾಮನ ಹಣವನ್ನು ಸೀತಾ ಪಡೆಯಲು ನಿರಾಕರಿಸಿದ್ದಾಳೆ.

ಮದುವೆಗೆ ಸೇವ್‌ ಮಾಡಿಟ್ಟ ಹಣವಿದು ಎನ್ನುತ್ತಿದ್ದಂತೆ, ನೀವೇ ಮದುವೆ ಆಗಿ ಎಂದಿದ್ದಾಳೆ ಸೀತಾ. ನನ್ನ ಲೈಫ್‌ನಲ್ಲಿ ಮದುವೆಗೆ ಜಾಗ ಇಲ್ಲ ಎಂದಿದ್ದಾನೆ ರಾಮ್. ಪ್ರೀತಿಯ ಬಗ್ಗೆಯೇ ರಾಮನಿಗೆ ಪಾಠ ಮಾಡಿದ್ದಾಳೆ ಸೀತಾ. ಲವ್‌ ಜಸ್ಟ್‌ ಹ್ಯಾಪನ್‌. ಪ್ರೀತಿ ಆಗಿದೆ ಅಂತ ಗೊತ್ತಿಲ್ಲದೇ ಆಗೋದೆ ನಿಜವಾದ ಪ್ರೀತಿ ಎಂದಿದ್ದಾಳೆ. ಅಲ್ಲಿಗೆ ರಾಮ್‌ ತಂದಿದ್ದ ಹಣ ಪಡೆಯದೇ, ಅದಕ್ಕೆ ಹೆಚ್ಚುವರಿ 5 ರೂಪಾಯಿ ಸೇರಿಸಿ ರಾಮ್‌ಗೆ ಮರಳಿಸಿದ್ದಾಳೆ ಸೀತಾ.

(Seetha Rama Serial October 12th Episode Popular Kannada serials ಸೀತಾ ರಾಮ ಸೇರಿದಂತೆ ಕನ್ನಡ ಧಾರಾವಾಹಿಗಳ ತಾಜಾ ಮಾಹಿತಿಗಾಗಿ 'ಹಿಂದೂಸ್ತಾನ್ ಟೈಮ್ಸ್ ಕನ್ನಡ' kannada.hindustantimes.com ವೆಬ್‌ಸೈಟ್ ನೋಡಿ)

Whats_app_banner