Bhagyalakshmi Serial: ಸೊಸೆ ಮಾತಿಗೆ ಕರಗಿ ಕೊನೆಗೂ ಮಗ ತಾಂಡವ್‌ಗಾಗಿ ಮನೆ ಬಾಗಿಲು ತೆರೆದ ಕುಸುಮಾ; ಆದರೆ ಇದು ಕೊನೆಯ ಅವಕಾಶ
ಕನ್ನಡ ಸುದ್ದಿ  /  ಮನರಂಜನೆ  /  Bhagyalakshmi Serial: ಸೊಸೆ ಮಾತಿಗೆ ಕರಗಿ ಕೊನೆಗೂ ಮಗ ತಾಂಡವ್‌ಗಾಗಿ ಮನೆ ಬಾಗಿಲು ತೆರೆದ ಕುಸುಮಾ; ಆದರೆ ಇದು ಕೊನೆಯ ಅವಕಾಶ

Bhagyalakshmi Serial: ಸೊಸೆ ಮಾತಿಗೆ ಕರಗಿ ಕೊನೆಗೂ ಮಗ ತಾಂಡವ್‌ಗಾಗಿ ಮನೆ ಬಾಗಿಲು ತೆರೆದ ಕುಸುಮಾ; ಆದರೆ ಇದು ಕೊನೆಯ ಅವಕಾಶ

Bhagyalakshmi Kannada Serial: ಕಲರ್ಸ್‌ ಕನ್ನಡದಲ್ಲಿ ಪ್ರಸಾರವಾಗುವ 'ಭಾಗ್ಯಲಕ್ಷ್ಮೀ' ಧಾರಾವಾಹಿ ಕುತೂಹಲಕಾರಿ ತಿರುವುಗಳನ್ನು ಪಡೆಯುತ್ತಿದೆ. ಅಕ್ಟೋಬರ್ 12 ರ ಸಂಚಿಕೆಯಲ್ಲಿ ಏನೆಲ್ಲಾ ಆಯಿತು ಎಂಬ ವಿವರ ಇಲ್ಲಿದೆ. 'ಮಗನನ್ನು ಮನೆಯಿಂದ ಹೊರ ಹಾಕುವ ಕುಸುಮಾ ಸೊಸೆ ಮಾತಿಗೆ ಕರಗಿ ಮಗನಿಗೆ ಬಾಗಿಲು ತೆರೆಯುತ್ತಾಳೆ. ಅವನಿಗೆ ಕೊನೆಯ ಅವಕಾಶ ನೀಡುತ್ತಾಳೆ'

ಭಾಗ್ಯಲಕ್ಷ್ಮೀ ಕನ್ನಡ ಧಾರಾವಾಹಿ 292ನೇ ಎಪಿಸೋಡ್‌
ಭಾಗ್ಯಲಕ್ಷ್ಮೀ ಕನ್ನಡ ಧಾರಾವಾಹಿ 292ನೇ ಎಪಿಸೋಡ್‌ (PC: Colors Kannada)

Bhagyalakshmi Kannada Serial: ಭಾಗ್ಯಲಕ್ಷ್ಮೀ ಧಾರಾವಾಹಿ ಅಕ್ಟೋಬರ್‌ 12ರ ಎಪಿಸೋಡ್‌

ಗಣೇಶ ಹಬ್ಬದಂದು ಮಗ ತಾಂಡವ್‌ ಮನೆಯಲ್ಲಿ ಇರದೆ, ಯಾರಿಗೂ ಹೇಳದೆ ಹೊರಗೆ ಹೋದ ಕಾರಣಕ್ಕೆ ಕುಸುಮಾ ಕೋಪಗೊಂಡು ಆತ ಮನೆಗೆ ಬಂದಾಗ ಹೊರ ತಳ್ಳಿ ಬಾಗಿಲು ಹಾಕಿಕೊಳ್ಳುತ್ತಾಳೆ. ತಾಂಡವ್‌ಗೆ ಹೀಗೇ ಆಗಬೇಕು ಎಂದು ಸುನಂದಾ ಹಾಗೂ ಪೂಜಾ ಖುಷಿ ಪಟ್ಟರೆ, ಭಾಗ್ಯ, ಧರ್ಮರಾಜ್‌ ಹಾಗೂ ಮಕ್ಕಳು ಬೇಸರ ವ್ಯಕ್ತಪಡಿಸುತ್ತಾರೆ.

ಮಕ್ಕಳ ಪಾಲಿಗೆ ತಂದೆ ಅಯೋಗ್ಯ

ಅಪ್ಪ ಬಹಳ ಸುಳ್ಳು ಹೇಳುತ್ತಾರೆ. ಅದಕ್ಕೆ ಅಜ್ಜಿಗೆ ಅವರ ಮೇಲೆ ಕೋಪ ಬಂದಿದೆ. ಇನ್ಮುಂದೆ ನಾನು ಅಪ್ಪನ ಮಾತು ಕೇಳುವುದಿಲ್ಲ ಎಂದು ತನ್ವಿ ಹಾಗೂ ತನ್ಮಯ್‌ ಮಾತನಾಡುವುದನ್ನು ಭಾಗ್ಯ ಕೇಳಿಸಿಕೊಳ್ಳುತ್ತಾಳೆ. ಅತ್ತೆ ಕುಸುಮಾ ಬಳಿ ಹೋಗಿ ಗಂಡನನ್ನು ಕ್ಷಮಿಸಿ ಬಾಗಿಲು ತೆಗೆಯುವಂತೆ ಮನವಿ ಮಾಡುತ್ತಾಳೆ. ಆದರೆ ಕುಸುಮಾ ಮಾತ್ರ ಯಾರಿಗೂ ಜಗ್ಗುವುದಿಲ್ಲ. ನಾಲಿಗೆ ಉದ್ದ ಮಾಡಬೇಡ, ಸ್ಕೂಲ್‌ನಲ್ಲಿ ನಿನಗೆ ಇದೆಲ್ಲಾ ಹೇಳಿಕೊಡುತ್ತಾರಾ? ನನಗೆ ಬುದ್ಧಿ ಹೇಳಲು ಬರಬೇಡ ಎಂದು ಕುಸುಮಾ ಸೊಸೆಗೆ ರೇಗುತ್ತಾಳೆ. ಸುನಂದಾ ಕೂಡಾ ಕುಸುಮಾ ಮಾಡುತ್ತಿರುವುದು ಸರಿ ಎನ್ನುತ್ತಾಳೆ. ಧರ್ಮರಾಜ್‌ ಸೊಸೆ ಕಡೆ ನಿಲ್ಲುತ್ತಾರೆ.

ಅತ್ತ ಊರಿನಿಂದ ಶ್ರೇಷ್ಠಾ, ತಾಂಡವ್‌ಗೆ ಕಾಲ್‌ ಮಾಡುತ್ತಾಳೆ. ಕಾಲ್‌ ರಿಸೀವ್‌ ಮಾಡದಿದ್ದರೂ ಪದೇ ಪದೆ ಕಾಲ್‌ ಮಾಡುವುದನ್ನು ನೋಡಿ ತಾಂಡವ್‌ ಫೋನ್‌ ರಿಸೀವ್‌ ಮಾಡುತ್ತಾನೆ. ನಿನ್ನ ಸಹವಾಸ ಸಾಕು, ನನ್ನ ನಿನ್ನ ನಡುವೆ ಏನೂ ಇಲ್ಲ ಎಂದು ಆಗಲೇ ಹೇಳಿದ್ದೇನೆ ಮತ್ತೇಕೆ ಕಾಲ್‌ ಮಾಡಿದ್ದೀಯ ಎಂದು ರೇಗುತ್ತಾನೆ. ನೀನು ದುರಹಂಕಾರದಿಂದ ವರ್ತಿಸಿದರೆ ಅದಕ್ಕೆ ತಕ್ಕ ಪ್ರತಿಫಲ ಅನುಭವಿಸುತ್ತೀಯ ಎನ್ನುತ್ತಾಳೆ ಶ್ರೇಷ್ಠಾ. ಈಗಾಗಲೇ ನಾನು ಅನುಭವಿಸಿದ್ದೇನೆ. ನಿನ್ನಿಂದ ನಾನು ಬೀದಿಗೆ ಬೀಳುವಂತಾಯ್ತು. ಮನೆಯಿಂದ ಹೊರಗಿದ್ದೇನೆ, ದಯವಿಟ್ಟು ನನ್ನ ಲೈಫ್‌ನಿಂದ ದೂರ ಹೋಗು ಎಂದು ತಾಂಡವ್‌ ಪೋನ್‌ ಇಡುತ್ತಾನೆ. ತಾಂಡವ್‌ ವರ್ತನೆ ಶ್ರೇಷ್ಠಾಗೆ ಇನ್ನಷ್ಟು ಕೋಪ ತರಿಸುತ್ತದೆ.

ಸೊಸೆ ಮಾತಿಗೆ ಕರಗುವ ಕುಸುಮಾ

ಭಾಗ್ಯ, ತನ್ನ ಪರ ಮಾತನಾಡುವುದನ್ನು ತಾಂಡವ್‌ ಮನೆಯ ಕಿಟಕಿಯಿಂದ ಕೇಳಿಸಿಕೊಳ್ಳುತ್ತಾನೆ. ಭಾಗ್ಯ ನನ್ನನ್ನು ಇಷ್ಟು ಪ್ರೀತಿಸುತ್ತಾಳಾ? ನಾನು ಇಷ್ಟೆಲ್ಲಾ ಮಾಡಿದ್ದರೂ ನನ್ನ ಪರ ಮಾತನಾಡುತ್ತಿದ್ದಾಳೆ ಎಂದುಕೊಳ್ಳುತ್ತಾನೆ. ಮಕ್ಕಳ ಮುಂದೆ ತಂದೆ ಕೆಟ್ಟವರಾಗುವುದು ಬೇಡ, ನೀವು ಹೀಗೇ ಅವರಿಗೆ ಶಿಕ್ಷೆ ನೀಡಿದರೆ ಮಕ್ಕಳು ಅವರನ್ನು ಅಯೋಗ್ಯ ಅಪ್ಪ ಎಂದುಕೊಳ್ಳುತ್ತಾರೆ. ದಯವಿಟ್ಟು ಇದೊಂದು ಬಾರಿ ಅವರನ್ನು ಕ್ಷಮಿಸಿ ಮನೆಯ ಒಳಗೆ ಕರೆಯಿರಿ ಎಂದಾಗ ಸೊಸೆ ಮಾತಿಗೆ ಕುಸುಮಾ ಕರಗುತ್ತಾಳೆ. ಮತ್ತೊಮ್ಮೆ ನೀನು ನನಗೆ ತಕ್ಕ ಸೊಸೆ ಎಂದು ಸಾಬೀತು ಮಾಡಿದ್ದೀಯ. ಮನೆ, ಗಂಡ, ಮಕ್ಕಳು ಎಂದರೆ ನಿನಗೆಷ್ಟು ಪ್ರೀತಿ ಎಂದು ಕುಸುಮಾ ಖುಷಿಯಾಗಿ ಬಾಗಿಲು ತೆಗೆಯಲು ಹೇಳುತ್ತಾಳೆ.

ಭಾಗ್ಯ ಖುಷಿಯಿಂದಲೇ ಬಾಗಿಲು ತೆಗೆದು ತಾಂಡವ್‌ನನ್ನು ಒಳಗೆ ಬರಲು ಹೇಳುತ್ತಾಳೆ. ಒಳಗೆ ಬರುತ್ತಲೇ ತಾಂಡವ್‌ ಅಮ್ಮನ ಕಾಲುಗಳ ಬಳಿ ಕೂತು ದಯವಿಟ್ಟು ನನ್ನನ್ನು ಕ್ಷಮಿಸಿ ಎಂದು ಮನವಿ ಮಾಡಿಕೊಳ್ಳುತ್ತಾನೆ. ಆದರೆ ಕುಸುಮಾ ಮಗನಿಗೆ ಷರತ್ತು ವಿಧಿಸುತ್ತಾಳೆ. ಇದು ನಿನಗೆ ಕೊನೆಯ ಅವಕಾಶ. ಇನ್ನೊಮ್ಮೆ ನೀನು ಮನೆ, ಮಕ್ಕಳು ನಮ್ಮನ್ನೆಲ್ಲಾ ಬಿಟ್ಟು ಮೂರು ಹೊತ್ತೂ ಕೆಲಸ ಎಂದರೆ ನಿನಗೆ ಕ್ಷಮೆಯೇ ಇರುವುದಿಲ್ಲ ಎಂದು ಕಂಡಿಷನ್‌ ಮಾಡುತ್ತಾಳೆ. ಎಲ್ಲರೂ ಮಾತನಾಡುವಾಗ ಪೂಜಾ ಹೊರಗೆ ಬಿದ್ದಿದ್ದ ಬಟ್ಟೆಗಳನ್ನು ಮನೆಯೊಳಗೆ ತರುತ್ತಾಳೆ. ಆದರೆ ಕುಸುಮಾ ಅದನ್ನು ಸ್ವೀಕರಿಸುವುದಿಲ್ಲ. ಪೂಜಾ ವರ್ತನೆ ನೋಡಿ ಭಾಗ್ಯ ಅನುಮಾನ ವ್ಯಕ್ತಪಡಿಸುತ್ತಾಳೆ. ಏನು ನಡೆಯಿತು ನಿಜ ಹೇಳು ಎಂದು ಕೇಳಿದರೂ ಪೂಜಾ ಸತ್ಯ ಮುಚ್ಚಿಡುತ್ತಾಳೆ.

ಅಪ್ಪ ಅಮ್ಮನಿಗಾಗಿ ರಘುವನ್ನು ಮದುವೆ ಆಗುತ್ತೇನೆ ಎಂದು ಒಪ್ಪಿಕೊಳ್ಳುವ ಶ್ರೇಷ್ಠಾ ನಿಜವಾಗಲೂ ಮದುವೆ ಆಗುತ್ತಾಳಾ? ಪೂಜಾ ನಿಜ ಹೇಳದೆ ಇದೇ ರೀತಿ ತಾಂಡವ್‌ನನ್ನು ಬ್ಲಾಕ್‌ಮೇಲ್‌ ಮಾಡುತ್ತಾಳಾ ಅನ್ನೋದು ಮುಂದಿನ ಎಪಿಸೋಡ್‌ಗಳಲ್ಲಿ ತಿಳಿಯಲಿದೆ.

Whats_app_banner