OTT Sci-Fi Movies: ಒಟಿಟಿಯಲ್ಲಿ ಸೈನ್ಸ್‌ ಫಿಕ್ಷನ್‌ ಸಿನಿಮಾ ನೋಡ್ತಿರಾ? ಲೂಸಿಯಾದಿಂದ ಟರ್ಮಿನೇಟರ್‌ವರೆಗೆ ಇಲ್ಲಿದೆ ಲಿಸ್ಟ್‌-ott movies sci fi movies list lucia kannada the matrix inception he terminator pcp ,ಮನರಂಜನೆ ಸುದ್ದಿ
ಕನ್ನಡ ಸುದ್ದಿ  /  ಮನರಂಜನೆ  /  Ott Sci-fi Movies: ಒಟಿಟಿಯಲ್ಲಿ ಸೈನ್ಸ್‌ ಫಿಕ್ಷನ್‌ ಸಿನಿಮಾ ನೋಡ್ತಿರಾ? ಲೂಸಿಯಾದಿಂದ ಟರ್ಮಿನೇಟರ್‌ವರೆಗೆ ಇಲ್ಲಿದೆ ಲಿಸ್ಟ್‌

OTT Sci-Fi Movies: ಒಟಿಟಿಯಲ್ಲಿ ಸೈನ್ಸ್‌ ಫಿಕ್ಷನ್‌ ಸಿನಿಮಾ ನೋಡ್ತಿರಾ? ಲೂಸಿಯಾದಿಂದ ಟರ್ಮಿನೇಟರ್‌ವರೆಗೆ ಇಲ್ಲಿದೆ ಲಿಸ್ಟ್‌

OTT Sci-Fi Movies List: ಒಟಿಟಿಯಲ್ಲಿ ಹಲವು ವೈಜ್ಞಾನಿಕ-ಕಾಲ್ಪನಿಕ ಸಿನಿಮಾಗಳಿವೆ. ಕೆಲವೊಂದು ಸಿನಿಮಾಗಳು ವಿಜ್ಞಾನ ಪ್ರಿಯರಿಗೆ ತುಂಬಾ ಇಷ್ಟವಾಗಿವೆ. ಒಟಿಟಿಯಲ್ಲಿ ನೋಡಬಹುದಾದ ಸೈನ್ಸ್‌ ಫಿಕ್ಷನ್‌ ಸಿನಿಮಾಗಳ ಲಿಸ್ಟ್‌ ಇಲ್ಲಿದೆ.

ಒಟಿಟಿಯಲ್ಲಿ ಸೈನ್ಸ್‌ ಫಿಕ್ಷನ್‌ ಸಿನಿಮಾ
ಒಟಿಟಿಯಲ್ಲಿ ಸೈನ್ಸ್‌ ಫಿಕ್ಷನ್‌ ಸಿನಿಮಾ

ಒಟಿಟಿಯಲ್ಲಿ ಕೆಲವರಿಗೆ ಕೆಲವು ಜಾನರ್‌ನ ಸಿನಿಮಾಗಳು ಇಷ್ಟವಾಗುತ್ತವೆ. ಕೆಲವರಿಗೆ ಕ್ರೈಮ್‌ ಸಿನಿಮಾ ಇಷ್ಟವಾಗಬಹುದು. ಇನ್ನು ಕೆಲವರಿಗೆ ರಾಜಕೀಯ, ಇನ್ನು ಕೆಲವರಿಗೆ ದೇಶಭಕ್ತಿಯ ಸಿನಿಮಾಗಳು ಇಷ್ಟವಾಗಬಹುದು. ಸೈನ್ಸ್‌ ಫಿಕ್ಷನ್‌ ಸಿನಿಮಾಗಳನ್ನು ಇಷ್ಟಪಡುವ ದೊಡ್ಡ ವರ್ಗವಿದೆ. ಇತ್ತೀಚೆಗೆ ಬ್ಲಿಂಕ್‌ ಎಂಬ ಕನ್ನಡ ಸಿನಿಮಾ ಬಿಡುಗಡೆಯಾಗಿತ್ತು. ಇದೇ ರೀತಿ ಹಲವು ಕನ್ನಡ ಸಿನಿಮಾಗಳು ಒಂದಿಷ್ಟು ಸೈನ್ಸ್‌ ಫಿಕ್ಷನ್‌ ಜಾನರ್‌ ಹೊಂದಿವೆ. ಇದೇ ರೀತಿ ಹಾಲಿವುಡ್‌, ಬಾಲಿವುಡ್‌ನಲ್ಲಿ ಹಲವು ಸೈನ್ಸ್‌ ಫಿಕ್ಷನ್‌ ಸಿನಿಮಾಗಳಿವೆ. ಅಮೆಜಾನ್‌ ಪ್ರೈಮ್‌ ವಿಡಿಯೋ, ನೆಟ್‌ಫ್ಲಿಕ್ಸ್‌, ಡಿಸ್ನಿ ಪ್ಲಸ್‌ ಹಾಟ್‌ಸ್ಟಾರ್‌, ಝೀ 5 ಸೇರಿದಂತೆ ವಿವಿಧ ಒಟಿಟಿಗಳಲ್ಲಿ ನೋಡಬಹುದಾದ ಕೆಲವು ಸಿನಿಮಾಗಳ ಪಟ್ಟಿ ಇಲ್ಲಿದೆ.

ಲೂಸಿಯಾ - ಸನ್‌ನೆಕ್ಸ್ಟ್‌

ಸ್ಯಾಂಡಲ್‌ವುಡ್‌ನಲ್ಲಿ ಒಂದಿಷ್ಟು ವರ್ಷಗಳ ಹಿಂದೆ ಲೂಸಿಯಾ ಎಂಬ ಸಿನಿಮಾ ಸಾಕಷ್ಟು ಸದ್ದು ಮಾಡಿತ್ತು. ಪವನ್‌ ಕುಮಾರ್‌ ನಿರ್ದೇಶನದ ಈ ಸಿನಿಮಾದಲ್ಲಿ ನೀನಾಸಂ ಸತೀಶ್‌ ಅವರು ಮಾತ್ರೆಯೊಂದನ್ನು ತಿಂದ ಬಳಿಕ ಹೊಸ ಜಗತ್ತಿಗೆ ಹೋಗುವ ಪರಿ ಸಿನಿಪ್ರೇಕ್ಷಕರಿಗೆ ಇಷ್ಟವಾಗಿತ್ತು. ಈ ಸಿನಿಮಾವನ್ನು ಈಗ ನೋಡಬೇಕೆನಿಸಿದರೆ ಸನ್‌ನೆಕ್ಸ್ಟ್‌ ಒಟಿಟಿಗೆ ಭೇಟಿ ನೀಡಬಹುದು.

ಒಕ ಒಕ ಜೀವಿತಂ- ಸೊನಿಲಿವ್‌

ತೆಲುಗಿನಲ್ಲಿ ಟೈಂ ಟ್ರಾವೆಲ್ ಕಥೆ ಇಟ್ಟುಕೊಂಡು ತಯಾರಾದ ಸಿನಿಮಾ ಒಕ ಒಕ ಜೀವಿತಂ. ಶರ್ವಾನಂದ್, ವೆನ್ನೆಲ ಕಿಶೋರ್, ಪ್ರಿಯದರ್ಶಿ ಮತ್ತು ಅಮಲಾ ಅಕ್ಕಿನೇನಿ ನಟಿಸಿರುವ ಈ ಚಿತ್ರಕ್ಕೆ ಉತ್ತಮ ಪ್ರತಿಕ್ರಿಯೆ ಸಿಕ್ಕಿದೆ. ಚಲನಚಿತ್ರವು ಈಗ ಸೋನಿ ಲೈವ್‌ನಲ್ಲಿ ಲಭ್ಯವಿದೆ.

ಸ್ಪೇಸ್ 9000 KMPH - ಪ್ರೈಮ್‌ ವಿಡಿಯೋ

ತೆಲುಗಿನ ವೈಜ್ಞಾನಿಕ ಕಾಲ್ಪನಿಕ ಸಿನಿಮಾವಾಗಿದೆ. ವರುಣ್ ತೇಜ್, ಅದಿತಿ ರಾವ್ ಮತ್ತು ಲಾವಣ್ಯ ತ್ರಿಪಾಠಿ ಅಭಿನಯದ ಈ ಚಿತ್ರವನ್ನು ಸಂಕಲ್ಪ್ ರೆಡ್ಡಿ ನಿರ್ದೇಶಿಸಿದ್ದಾರೆ. ಇದೊಂದು ಬಾಹ್ಯಾಕಾಶ ಸಾಹಸ ಚಿತ್ರ. ಚಿತ್ರವು ಪ್ರಸ್ತುತ ಪ್ರೈಮ್ ವಿಡಿಯೋದಲ್ಲಿದೆ.

ಯಶೋದಾ - ಪ್ರೈಮ್‌ ವಿಡಿಯೋ

ಯಶೋದಾ ಒಂದು ವೈಜ್ಞಾನಿಕ ಚಲನಚಿತ್ರವಾಗಿದ್ದು, ಬಾಡಿಗೆ ತಾಯ್ತನದ ಸುತ್ತ ಸುತ್ತುತ್ತದೆ. ಸಮಂತಾ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ. ಈ ಚಿತ್ರಕ್ಕೆ ಥಿಯೇಟರ್‌ಗಳಲ್ಲಿ ಹೆಚ್ಚು ರೆಸ್ಪಾನ್ಸ್ ಸಿಗದಿದ್ದರೂ ಒಟಿಟಿಯಲ್ಲಿ ಹೆಚ್ಚಿನ ಜನರು ವೀಕ್ಷಿಸಿದ್ದಾರೆ. ನೀವು ಈ ಚಲನಚಿತ್ರವನ್ನು ಪ್ರೈಮ್ ವಿಡಿಯೋದಲ್ಲಿ ವೀಕ್ಷಿಸಬಹುದು.

2.0 - ಜಿಯೋ ಸಿನಿಮಾ

ರಜನಿಕಾಂತ್ ಮತ್ತು ಶಂಕರ್ ಅವರ ವೈಜ್ಞಾನಿಕ ಸಿನಿಮಾ 2.0. ಇದರಲ್ಲಿ ಅಕ್ಷಯ್ ಕುಮಾರ್ ಕೂಡ ನಟಿಸಿದ್ದಾರೆ. ಮೊಬೈಲ್ ಟವರ್‌ಗಳಿಂದ ಪಕ್ಷಿಗಳು ಸಾಯುವುದು ಮತ್ತು ಅವುಗಳನ್ನು ಉಳಿಸಲು ಪಕ್ಷಿ ಪ್ರೇಮಿಯೊಬ್ಬರು ನಡೆಸುವ ಹೋರಾಟವನ್ನು ಆಧರಿಸಿದ ಚಿತ್ರ. ನೀವು ಈ ಚಿತ್ರವನ್ನು ಜಿಯೋ ಸಿನಿಮಾದಲ್ಲಿ ವೀಕ್ಷಿಸಬಹುದು.

ಅತ್ಯುತ್ತಮ ಹಾಲಿವುಡ್ ಸೈ-ಫೈ ಚಲನಚಿತ್ರಗಳು

ಇಂಟರ್‌ಸ್ಟೆಲ್ಲರ್‌ - ಪ್ರೈಮ್‌ ವಿಡಿಯೋ

ಕ್ರಿಸ್ಟೋಫರ್ ನೋಲನ್ ನಿರ್ದೇಶನದ ಇಂಟರ್ಸ್ಟೆಲ್ಲಾರ್ ಚಲನಚಿತ್ರವು ನಮ್ಮನ್ನು ಸಂಪೂರ್ಣ ಹೊಸ ಜಗತ್ತಿಗೆ ಕರೆದೊಯ್ಯುತ್ತದೆ. ಅಂತರತಾರಾ ನಮ್ಮ ನಕ್ಷತ್ರಪುಂಜವನ್ನು ಮೀರಿ ಮತ್ತು ಅಂತರತಾರಾ ಪ್ರಪಂಚಕ್ಕೆ ಪ್ರಯಾಣವಾಗಿದೆ. ನೀವು ಈ ಚಲನಚಿತ್ರವನ್ನು ಪ್ರೈಮ್ ವಿಡಿಯೋದಲ್ಲಿ ವೀಕ್ಷಿಸಬಹುದು.

ಇನ್ನಿತರ ಸೈನ್ಸ್‌ ಫಿಕ್ಷನ್‌ ಸಿನಿಮಾಗಳು

ದಿ ಮ್ಯಾಟ್ರಿಕ್ಸ್ - ನೆಟ್‌ಫ್ಲಿಕ್ಸ್

ಜುರಾಸಿಕ್ ಪಾರ್ಕ್ - ನೆಟ್‌ಫ್ಲಿಕ್ಸ್‌

ಹರ್‌- ಪ್ರೈಮ್‌ ವಿಡಿಯೋ

ಅವತಾರ್ - ಡಿಸ್ನಿ ಪ್ಲಸ್ ಹಾಟ್‌ಸ್ಟಾರ್

ಬ್ಲೇಡ್ ರನ್ನರ್ 2049 - ಪ್ರೈಮ್ ವಿಡಿಯೋ

ದಿ ಮಾರ್ಟಿಯನ್ - ಹಾಟ್‌ಸ್ಟಾರ್

ಇನ್‌ಸ್ಪೆಷನ್‌- ಪ್ರೈಮ್‌ ವಿಡಿಯೋ

ಎವರ್‌ಥಿಂಗ್‌ ಎವರಿವೇರ್‌ ಆಲ್‌ ಅಟ್‌ ಒನ್ಸ್‌- ನೆಟ್‌ಫ್ಲಿಕ್ಸ್

ಅರೈವಲ್‌- ಪ್ರೈಮ್‌ ವಿಡಿಯೋ

ಗ್ರಾವಿಟಿ- ಅಮೆಜಾನ್‌ ಪ್ರೈಮ್‌ ವಿಡಿಯೋ

ಎ ಕ್ವೈಟ್‌ ಪ್ಲೇಸ್‌- ಪ್ರೈಮ್‌ ವಿಡಿಯೋ

ಟರ್ಮಿನೇಟರ್ - ಪ್ರೈಮ್‌ ವಿಡಿಯೋ