Aadujeevitham OTT: ‘ಆಡುಜೀವಿತಂ’ ಒಟಿಟಿ ಬಿಡುಗಡೆ ಯಾವಾಗ, ಸರ್ವೈವಲ್‌ ಥ್ರಿಲ್ಲರ್‌ ಚಿತ್ರದ ಸ್ಟ್ರೀಮಿಂಗ್‌ ಎಲ್ಲಿ? ಹೀಗಿದೆ ಮಾಹಿತಿ
ಕನ್ನಡ ಸುದ್ದಿ  /  ಮನರಂಜನೆ  /  Aadujeevitham Ott: ‘ಆಡುಜೀವಿತಂ’ ಒಟಿಟಿ ಬಿಡುಗಡೆ ಯಾವಾಗ, ಸರ್ವೈವಲ್‌ ಥ್ರಿಲ್ಲರ್‌ ಚಿತ್ರದ ಸ್ಟ್ರೀಮಿಂಗ್‌ ಎಲ್ಲಿ? ಹೀಗಿದೆ ಮಾಹಿತಿ

Aadujeevitham OTT: ‘ಆಡುಜೀವಿತಂ’ ಒಟಿಟಿ ಬಿಡುಗಡೆ ಯಾವಾಗ, ಸರ್ವೈವಲ್‌ ಥ್ರಿಲ್ಲರ್‌ ಚಿತ್ರದ ಸ್ಟ್ರೀಮಿಂಗ್‌ ಎಲ್ಲಿ? ಹೀಗಿದೆ ಮಾಹಿತಿ

ಬ್ಲಾಸ್ಲಿ ನಿರ್ದೇಶನದ ಆಡುಜೀವಿತಂ ಸಿನಿಮಾ ಚಿತ್ರಮಂದಿರದಲ್ಲಿ ಬಿಡುಗಡೆಯಾಗಿ ಮೆಚ್ಚುಗೆ ಪಡೆದಿದೆ. ಈ ನಡುವೆ ಈಗ ಇದೇ ಚಿತ್ರದ ಒಟಿಟಿ ಬಿಡುಗಡೆ ಯಾವಾಗ, ಎಲ್ಲಿ ವೀಕ್ಷಣೆ? ಎಂಬಿತ್ಯಾದಿ ವಿವರವೂ ಲಭ್ಯವಾಗಿದೆ.

‘ಆಡುಜೀವಿತಂ’ ಒಟಿಟಿ ಬಿಡುಗಡೆ ಯಾವಾಗ, ಸರ್ವೈವಲ್‌ ಥ್ರಿಲ್ಲರ್‌ ಚಿತ್ರದ ಸ್ಟ್ರೀಮಿಂಗ್‌ ಎಲ್ಲಿ? ಹೀಗಿದೆ ಮಾಹಿತಿ
‘ಆಡುಜೀವಿತಂ’ ಒಟಿಟಿ ಬಿಡುಗಡೆ ಯಾವಾಗ, ಸರ್ವೈವಲ್‌ ಥ್ರಿಲ್ಲರ್‌ ಚಿತ್ರದ ಸ್ಟ್ರೀಮಿಂಗ್‌ ಎಲ್ಲಿ? ಹೀಗಿದೆ ಮಾಹಿತಿ

Aadujeevitham OTT: ಮಲಯಾಳಂ ಹೀರೋ ಪೃಥ್ವಿರಾಜ್ ಸುಕುಮಾರನ್ ಅವರ ಸರ್ವೈವಲ್ ಥ್ರಿಲ್ಲರ್ ಸಿನಿಮಾ 'ಆಡು ಜೀವಿತಂ' (ದಿ ಗೋಟ್ ಲೈಫ್) ಬಾಕ್ಸ್‌ ಆಫೀಸ್‌ನಲ್ಲಿ ಒಳ್ಳೆಯ ಕಮಾಯಿಯನ್ನೇ ಮಾಡಿದೆ. 150 ಕೋಟಿಗೂ ಅಧಿಕ ಕಲೆಕ್ಷನ್‌ ಕಂಡಿದೆ ಈ ಸಿನಿಮಾ. ಮಾ. 28ರಂದು ಪ್ಯಾನ್‌ ಇಂಡಿಯಾ ಮಟ್ಟದಲ್ಲಿ ಬಿಡುಗಡೆಯಾಗಿದ್ದ ಈ ಸಿನಿಮಾದಲ್ಲಿ ನಟ ಪೃಥ್ವಿರಾಜ್‌ ಹೊಸ ಅವತಾರದಲ್ಲಿ ಎದುರಾಗಿ, ಸಿನಿಮಾ ಪ್ರೇಮಿಗಳಿಗೆ ಹೊಸತನವನ್ನೇ ನೀಡಿದ್ದರು. ಈಗ ಇದೇ ಚಿತ್ರದ ಒಟಿಟಿ ಬಿಡುಗಡೆ ದಿನಾಂಕದ ಬಗ್ಗೆ ಹೊಸ ಮಾಹಿತಿ ಹರಿದಾಡುತ್ತಿದೆ. ಹಾಗಾದರೆ ಯಾವಾಗ ಈ ಚಿತ್ರ ಒಟಿಟಿಗೆ ಬರಲಿದೆ? ಮುಂದೆ ಓದಿ.

ಬಹುಭಾಷೆಗಳಲ್ಲಿ ಬಿಡುಗಡೆ

ಬ್ಲಾಸ್ಲಿ ನಿರ್ದೇಶನದಲ್ಲಿ ಆಡುಜೀವಿತಂ ಸಿನಿಮಾ ಮೂಡಿಬಂದಿದೆ. ಸೌದಿಯಲ್ಲಿನ ಕಷ್ಟಗಳನ್ನು ಆಧರಿಸಿ ಅವರು ಈ ಸಿನಿಮಾ ಮಾಡಿದ್ದರು. ಮೂಲ ಮಲಯಾಳಂ ಜತೆಗೆ ತೆಲುಗು, ತಮಿಳು, ಕನ್ನಡ ಮತ್ತು ಹಿಂದಿಯಲ್ಲಿಯೂ ಈ ಸಿನಿಮಾ ಮಾ. 28ರಂದು ಬಿಡುಗಡೆ ಆಗಿತ್ತು. ಪಾಸಿಟಿವ್‌ ಟಾಕ್‌ನಿಂದಲೇ ಮೆಚ್ಚುಗೆ ಪಡೆದಿದ್ದ ಈ ಸಿನಿಮಾ, ವಿಮರ್ಶೆ ದೃಷ್ಟಿಯಿಂದಲೂ ಗೆಲುವು ಕಂಡಿತ್ತು. ಕನ್ನಡದಲ್ಲಿ ಹೊಂಬಾಳೆ ಫಿಲಂಸ್‌ ಈ ಸಿನಿಮಾ ವಿತರಣೆ ಹಕ್ಕನ್ನು ಪಡೆದುಕೊಂಡಿತ್ತು. ತೆಲುಗಿನಲ್ಲಿ ಮೈತ್ರಿ ಮೂವಿ ಮೇಕರ್ಸ್‌ ವತಿಯಿಂದ ಸಿನಿಮಾ ಬಿಡುಗಡೆ ಆಗಿತ್ತು.

ಮೇ 10ಕ್ಕೆ ಡಿಸ್ನಿ ಪ್ಲಸ್‌ ಹಾಟ್‌ಸ್ಟಾರ್‌ನಲ್ಲಿ

ಹೀಗೆ ಚಿತ್ರಮಂದಿರದಲ್ಲಿನ ಆಟ ಮುಗಿಸಿರುವ ಆಡುಜೀವಿತಂ ಸಿನಿಮಾ ಈಗ ಒಟಿಟಿ ಅಂಗಳಕ್ಕೆ ಆಗಮಿಸಲು ಸಜ್ಜಾಗಿದೆ. ಡಿಸ್ನಿ ಪ್ಲಾಸ್‌ ಹಾಟ್‌ ಸ್ಟಾರ್‌ ಈ ಸಿನಿಮಾದ ಡಿಜಿಟಲ್‌ ಹಕ್ಕುಗಳನ್ನು ಪಡೆದುಕೊಂಡಿದ್ದು, ಬರೋಬ್ಬರಿ 30 ಕೋಟಿಗೆ ಈ ಚಿತ್ರವನ್ನು ಖರೀದಿಸಿದೆ ಎಂದು ಹೇಳಲಾಗುತ್ತಿದೆ. ಸದ್ಯ ಒಪ್ಪಂದದ ಪ್ರಕಾರ, ಚಿತ್ರಮಂದಿರದಲ್ಲಿ ಬಿಡುಗಡೆಯಾದ 40ದಿನಗಳ ಬಳಿಕ ಡಿಜಿಟಲ್‌ ವೇದಿಕೆಗೆ ಆಡುಜೀವಿತಂ ಸಿನಿಮಾ ಬರಲಿದೆ. ಕೆಲ ಮೂಲಗಳ ಪ್ರಕಾರ ಮೇ 10ರಂದು ಈ ಸಿನಿಮಾ ಡಿಸ್ನಿ ಪ್ಲಸ್‌ ಹಾಟ್‌ಸ್ಟಾರ್‌ನಲ್ಲಿ ಸ್ಟ್ರೀಮಿಂಗ್‌ ಆರಂಭಿಸಲಿದೆ. ಈ ಬಗ್ಗೆ ಇನ್ನಷ್ಟೇ ಅಧಿಕೃತ ಮಾಹಿತಿ ಹೊರಬೀಳಬೇಕಿದೆ.

ದಿ ಗೋಟ್‌ ಡೇಸ್‌ ಕಾದಂಬರಿ ಆಧರಿತ ಸಿನಿಮಾ

ಆಡು ಜೀವಿತಂ ಚಿತ್ರದಲ್ಲಿ ಅಮಲಾ ಪೌಲ್ ನಾಯಕಿಯಾಗಿ ನಟಿಸಿದ್ದಾರೆ. ಹಾಲಿವುಡ್ ನಟ ಜಿಮ್ಮಿ ಜೀನ್ ಲೂಯಿಸ್, ಕೆ. ಆರ್. ಗೋಕುಲ್, ಅರಬ್ ನಟರಾದ ತಾಲಿಬ್ ಅಲ್ ಬಲೂಶಿ, ರಿಕ್ ಅಬೆ ಮುಂತಾದವರು ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. ಆಸ್ಕರ್ ಪ್ರಶಸ್ತಿ ವಿಜೇತ ಎ. ಆರ್. ರೆಹಮಾನ್ ಈ ಚಿತ್ರಕ್ಕೆ ಸಂಗೀತ ನೀಡಿದ್ದಾರೆ. ದಿ ಗೋಟ್‌ಡೇಸ್ ಕಾದಂಬರಿಯನ್ನು ಆಧರಿಸಿ, ನಿರ್ದೇಶಕ ಬ್ಲಾಸ್ಲಿ ಈ ಚಿತ್ರವನ್ನು ನಿರ್ದೇಶಿಸಿದ್ದಾರೆ.

Whats_app_banner