ಕನ್ನಡ ಸುದ್ದಿ  /  ಮನರಂಜನೆ  /  Omg 2 Ott: ತೆಲುಗು, ತಮಿಳು, ಬಾಂಗ್ಲಾ, ಮರಾಠಿ ಭಾಷೆಯಲ್ಲಿ ಒಟಿಟಿಗೆ ಬಂತು ಓ ಮೈ ಗಾಡ್‌ 2; ಕನ್ನಡ ಮರೆತ ನೆಟ್‌ಫ್ಲಿಕ್ಸ್‌

OMG 2 OTT: ತೆಲುಗು, ತಮಿಳು, ಬಾಂಗ್ಲಾ, ಮರಾಠಿ ಭಾಷೆಯಲ್ಲಿ ಒಟಿಟಿಗೆ ಬಂತು ಓ ಮೈ ಗಾಡ್‌ 2; ಕನ್ನಡ ಮರೆತ ನೆಟ್‌ಫ್ಲಿಕ್ಸ್‌

OMG 2: ಒಟಿಟಿಯಲ್ಲಿ ತೆಲುಗು, ತಮಿಳು, ಬಾಂಗ್ಲಾ ಮತ್ತು ಮರಾಠಿ ಭಾಷೆಗಳಲ್ಲಿ ಅಕ್ಷಯ್‌ ಕುಮಾರ್‌ ನಟನೆಯ ಓ ಮೈ ಗಾಡ್‌ 2 ರಿಲೀಸ್‌ ಆಗಿದೆ. ಕನ್ನಡದಲ್ಲಿ ಈ ಸಿನಿಮಾ ಒಟಿಟಿಯಲ್ಲಿ ಬಿಡುಗಡೆಯಾಗಿಲ್ಲ.

OMG 2 OTT: ತೆಲುಗು, ತಮಿಳು, ಬಾಂಗ್ಲಾ, ಮರಾಠಿ ಭಾಷೆಯಲ್ಲಿ ಒಟಿಟಿಗೆ ಬಂತು ಓ ಮೈ ಗಾಡ್‌ 2
OMG 2 OTT: ತೆಲುಗು, ತಮಿಳು, ಬಾಂಗ್ಲಾ, ಮರಾಠಿ ಭಾಷೆಯಲ್ಲಿ ಒಟಿಟಿಗೆ ಬಂತು ಓ ಮೈ ಗಾಡ್‌ 2

ಬಾಲಿವುಡ್‌ ನಟ ಅಕ್ಷಯ್‌ ಕುಮಾರ್‌ ನಟನೆಯ ಓ ಮೈ ಗಾಡ್‌ 2 ಚಿತ್ರವು ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಿ ಹಲವು ತಿಂಗಳುಗಳು ಕಳೆದಿವೆ. ಇದಾದ ಬಳಿಕ ಹಿಂದಿ ಆವೃತ್ತಿಯ ಒಮೈಗಾಡ್‌ 2 ಒಟಿಟಿಯಲ್ಲಿ ಬಿಡುಗಡೆ ಬಂದಿತ್ತು. ಆದರೆ, ಭಾರತದ ಇತರೆ ಭಾಷೆಗಳಲ್ಲಿ ಒಟಿಟಿಯಲ್ಲಿ ರಿಲೀಸ್‌ ಆಗಿರಲಿಲ್ಲ. ಇದೀಗ ತೆಲುಗು, ತಮಿಳು, ಬಾಂಗ್ಲಾ, ಮರಾಠಿ, ಹಿಂದಿ ಸೇರಿದಂತೆ ಹಲವು ಭಾಷೆಗಳಲ್ಲಿ ಓ ಮೈ ಗಾಡ್‌ 2 ಒಟಿಟಿಯಲ್ಲಿ ರಿಲೀಸ್‌ ಆಗಿದೆ. ಬಹುತೇಕ ಸಿನಿಮಾಗಳಲ್ಲಿ ಆಗುವಂತೆ ನೆಟ್‌ಫ್ಲಿಕ್ಸ್‌ನಲ್ಲಿ ಓ ಮೈ ಗಾಡ್‌ ಕನ್ನಡ ಅವತರಣಿಕೆಯಲ್ಲಿ ಲಭ್ಯವಿಲ್ಲ.

ಕಳೆದ ವರ್ಷ ಆಗಸ್ಟ್‌ 11ರಂದು ಚಿತ್ರಮಂದಿರಗಳಲ್ಲಿ ಬಿಡುಗಡೆಯಾದ ಈ ಸಿನಿಮಾ ಬಾಕ್ಸ್‌ ಆಫೀಸ್‌ನಲ್ಲಿ ಬಂಪರ್‌ ಬೆಳೆ ತೆಗೆದಿತ್ತು. ಅಂದರೆ, ಸುಮಾರು 200 ಕೋಟಿ ರೂಪಾಯಿಗೂ ಹೆಚ್ಚು ಗಳಿಕೆ ಮಾಡಿತ್ತು. ಅದೇ ವರ್ಷದ ಅಕ್ಟೋಬರ್‌ 8ರಂದು ಹಿಂದಿ ಆವೃತ್ತಿಯು ಒಟಿಟಿಯಲ್ಲಿ ಬಿಡುಗಡೆಯಾಗಿತ್ತು. ಇದೀಗ ಹಲವು ತಿಂಗಳ ಬಳಿಕ ಇನ್ನಷ್ಟು ಭಾಷೆಗಳಲ್ಲಿ ಈ ಸಿನಿಮಾ ಒಟಿಟಿಯಲ್ಲಿ ರಿಲೀಸ್‌ ಆಗಿದೆ.

ಅಕ್ಷಯ್ ಕುಮಾರ್, ಪಂಕಜ್ ತ್ರಿಪಾಠಿ ಅಭಿನಯದ ‘ಓ ಮೈ ಗಾಡ್ 2’ ಚಿತ್ರಕ್ಕೆ ಸೆನ್ಸಾರ್‌ ಮಂಡಳಿಯಿಂದ ಆಕ್ಷೇಪ ವ್ಯಕ್ತವಾಗಿತ್ತು. ಇದಾದ ಬಳಿಕ ಹಲವು ಕಡೆ ಕತ್ತರಿ ಪ್ರಯೋಗ ಮಾಡಲಾಗಿತ್ತು. ಪಂಕಜ್ ತ್ರಿಪಾಠಿ, ಯಾಮಿ ಗೌತಮ್ ಮುಖ್ಯಭೂಮಿಕೆಯಲ್ಲಿರುವ ಈ ಸಿನಿಮಾಕ್ಕೆ ಸರ್ಟಿಫಿಕೇಟ್‌ ನೀಡಲು ಸೆನ್ಸಾರ್‌ ಮಂಡಳಿ ಹಿಂದೇಟು ಹಾಕಿತ್ತು. ಬಳಿಕ ಈ ಸಿನಿಮಾ ರಿಲೀಸ್‌ ಆಗಿತ್ತು. 25ಕ್ಕೂ ಹೆಚ್ಚು ದೃಶ್ಯಗಳಲ್ಲಿ ಬದಲಾವಣೆ ಮಾಡಿರುವ ಸೆನ್ಸಾರ್ ಮಂಡಳಿಯನ್ನು ಚಿತ್ರತಂಡ ಬಹಿರಂಗವಾಗಿ ಟೀಕಿಸಿತ್ತು.ಓ ಮೈ ಗಾಡ್ 2 ಚಿತ್ರದಲ್ಲಿ ಅಕ್ಷಯ್ ಕುಮಾರ್ ಶಿವನ ಪಾತ್ರದಲ್ಲಿ ಕಾಣಿಸಿಕೊಂಡಿರುವುದಕ್ಕೆ ಸಾಕಷ್ಟು ಜನರು, ಧಾರ್ಮಿಕ ಸಂಘಗಳು ಆಕ್ಷೇಪ ವ್ಯಕ್ತಪಡಿಸಿದ್ದವು.

2012ರಲ್ಲಿ ಬಿಡುಗಡೆಯಾದ ಓಎಂಜಿ ಚಿತ್ರದ ಮುಂದುವರಿದ ಭಾಗವಾಗಿ ಪಾರ್ಟ್‌ 2 ಬಿಡುಗಡೆಯಾಗಿತ್ತು. ಪರೇಶ್ ರಾವಲ್ ಮತ್ತು ಅಕ್ಷಯ್ ಕುಮಾರ್ ಕಾಣಿಸಿಕೊಂಡಿದ್ದ ಮೊದಲ ಭಾಗವೂ ಸಾಕಷ್ಟು ವಿವಾದಕ್ಕೆ ಕಾರಣವಾಗಿತ್ತು. ದೇವರು ಮತ್ತು ಭಕ್ತನೊಬ್ಬನ ನಡುವಿನ ಕಥೆ ಇದಾಗಿದೆ. ಮೊದಲ ಚಿತ್ರದಲ್ಲಿ ನಾಸ್ತಿಕ ಕಾಂಜಿ ಲಾಲ್ ಮೆಹ್ತಾ ಅವರನ್ನು ಆಧರಿಸಿದ್ದರೆ, ಪಾರ್ಟ್‌ 2ರಲ್ಲಿ ಆಸ್ತಿಕ ಕಾಂತಿ ಶರಣ್ ಮುದ್ಗಲ್ ಅವರ ಸುತ್ತ ಸಿನಿಮಾದ ಕಥೆ ಸುತ್ತುವರೆದಿದೆ. ಇದೀಗ ಈ ಸಿನಿಮಾ ಹಿಂದಿ ಮಾತ್ರವಲ್ಲದೆ ತೆಲುಗು, ತಮಿಳು ಮುಂತಾದ ಭಾಷೆಗಳಲ್ಲಿಯೂ ಲಭ್ಯವಿದೆ.

ಆದರೆ, ಈ ಸಿನಿಮಾ ಕನ್ನಡದಲ್ಲಿ ರಿಲೀಸ್‌ ಆಗುವ ಕುರಿತು ಯಾವುದೇ ಮಾಹಿತಿ ದೊರಕಿಲ್ಲ. ನೆಟ್‌ಫ್ಲಿಕ್ಸ್‌ನಲ್ಲಿ ಕೆಲವು ಸಿನಿಮಾಗಳು ತಮಿಳು, ತೆಲುಗು ಭಾಷೆಗಳಲ್ಲಿ ಲಭ್ಯವಿದ್ದರೂ ಕನ್ನಡ ಆಡಿಯೋದಲ್ಲಿ ದೊರಕುವುದಿಲ್ಲ.

ಹಲವು ಸಿನಿಮಾಗಳು ಒಟಿಟಿಯಲ್ಲಿ ಬಿಡುಗಡೆ

ಆಡುಜೀವಿತಂ ಒಟಿಟಿಯಲ್ಲಿ ರಿಲೀಸ್‌: ಹಲವು ಬ್ಲಾಕ್‌ಬಸ್ಟರ್‌ ಸಿನಿಮಾಗಳು ಮುಂದಿನ ದಿನಗಳಲ್ಲಿ ಒಟಿಟಿಯಲ್ಲಿ ಬಿಡುಗಡೆಯಾಗಲಿವೆ. ಮೇ 10ರಂದು ಆಡುಜೀವಿತಂ ಸಿನಿಮಾ ಒಟಿಟಿಯಲ್ಲಿ ರಿಲೀಸ್‌ ಆಗಲಿದೆ. ಪೃಥ್ವಿರಾಜ್‌ ಸುಕುಮಾರನ್‌ ನಟನೆಯ ಈ ಚಿತ್ರದ ಕುರಿತು ವ್ಯಾಪಕ ಪ್ರಶಂಸೆ ವ್ಯಕ್ತವಾಗಿದೆ. ಸದ್ಯ ಬಂದಿರುವ ವರದಿಯ ಪ್ರಕಾರ ಮೇ 10ರಂದು ಈ ಸಿನಿಮಾ ಡಿಸ್ನಿ ಪ್ಲಸ್‌ ಹಾಟ್‌ಸ್ಟಾರ್‌ನಲ್ಲಿ ಸ್ಟ್ರೀಮಿಂಗ್‌ ಆರಂಭವಾಗಲಿದೆಯಂತೆ. ಈ ಕುರಿತು ಅಧಿಕೃತವಾಗಿ ಡಿಸ್ನಿ ಪ್ಲಸ್‌ ಹಾಟ್‌ಸ್ಟಾರ್‌ ಮಾಹಿತಿ ನೀಡಿಲ್ಲ.

ಫ್ಯಾಮಿಲಿ ಸ್ಟಾರ್‌ ಒಟಿಟಿಗೆ: ವಿಜಯ್‌ ದೇವರಕೊಂಡ ಮತ್ತು ಮೃಣಾಲ್‌ ಠಾಕೂರ್‌ ಜೋಡಿಯ 'ಫ್ಯಾಮಿಲಿ ಸ್ಟಾರ್' ಚಿತ್ರದ ಒಟಿಟಿ ಬಿಡುಗಡೆಯ ದಿನಾಂಕ ಪ್ರಕಟವಾಗಿದೆ. ಫ್ಯಾಮಿಲಿ ಸ್ಟಾರ್' ಸಿನಿಮಾ ಏಪ್ರಿಲ್ 26ರಂದು ಅಮೆಜಾನ್ ಪ್ರೈಮ್ ಒಟಿಟಿಯಲ್ಲಿ ಬಿಡುಗಡೆಯಾಗಲಿದೆ. ಅಂದರೆ, ನಾಳೆಯೇ ಈ ಸಿನಿಮಾ ಒಟಿಟಿಗೆ ಆಗಮಿಸಲಿದೆ.

ಆವೇಶಂ ಒಟಿಟಿಗೆ: ಮಲಯಾಳಂ ಭಾಷೆಯ ಆಕ್ಷನ್‌ ಕಾಮಿಡಿ ಸಿನಿಮಾ ಆವೇಶಂ ಒಟಿಟಿಯಲ್ಲಿ ಸ್ಟ್ರೀಮಿಂಗ್‌ ಆಗಲಿದೆ. ಜಿತು ಮಾಧವನ್ ಬರೆದು ನಿರ್ದೇಶಿಸಿದ ಮಲಯಾಳಂ ಭಾಷೆಯ ಈ ಆಕ್ಷನ್ ಹಾಸ್ಯ ಚಿತ್ರದಲ್ಲಿ ಫಹಾದ್ ಫಾಸಿಲ್, ಆಶಿಶ್ ವಿದ್ಯಾರ್ಥಿ, ಸಜಿನ್ ಗೋಪು ಮತ್ತು ಮನ್ಸೂರ್ ಅಲಿ ಖಾನ್ ನಟಿಸಿದ್ದಾರೆ. ಆವೇಶಂ ಸಿನಿಮಾವು ಏಪ್ರಿಲ್ 11, 2024 ರಂದು ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಿತ್ತು. 20 ಕೋಟಿ ಬಜೆಟ್‌ನ ಸಿನಿಮಾವು 100 ಕೋಟಿ ರೂಪಾಯಿಗೂ ಹೆಚ್ಚು ಗಳಿಕೆ ಮಾಡಿ ಬ್ಲಾಕ್‌ಬಸ್ಟರ್‌ ಸಿನಿಮಾವೆಂಬ ಖ್ಯಾತಿಗೆ ಪಾತ್ರವಾಗಿದೆ. ಈ ಸಿನಿಮಾವು ಅಮೆಜಾನ್‌ ಪ್ರೈಮ್‌ ವಿಡಿಯೋದಲ್ಲಿ ಮೇ 17ರಂದು ಸ್ಟ್ರೀಮಿಂಗ್‌ ಆಗಲಿದೆ ಎಂದು ವರದಿಗಳು ತಿಳಿಸಿವೆ.

IPL_Entry_Point