ಕನ್ನಡ ಸುದ್ದಿ  /  ಮನರಂಜನೆ  /  Aavesham Ott: ಸದ್ಯದಲ್ಲಿಯೇ ಒಟಿಟಿಯಲ್ಲಿ ಫಹಾದ್‌ ಫಾಸಿಲ್‌ ನಟನೆಯ ಆವೇಶಂ ಬಿಡುಗಡೆ; 100 ಕೋಟಿಗೂ ಹೆಚ್ಚು ಗಳಿಸಿದ ಬ್ಲಾಕ್‌ಬಸ್ಟರ್‌ ಸಿನಿಮಾ

Aavesham OTT: ಸದ್ಯದಲ್ಲಿಯೇ ಒಟಿಟಿಯಲ್ಲಿ ಫಹಾದ್‌ ಫಾಸಿಲ್‌ ನಟನೆಯ ಆವೇಶಂ ಬಿಡುಗಡೆ; 100 ಕೋಟಿಗೂ ಹೆಚ್ಚು ಗಳಿಸಿದ ಬ್ಲಾಕ್‌ಬಸ್ಟರ್‌ ಸಿನಿಮಾ

Aavesham OTT Release Date: ಮಲಯಾಳಂ ಸಿನಿಮಾ ಪ್ರಿಯರಿಗೆ ಸಿಹಿಸುದ್ದಿ. ಫಹಾದ್‌ ಫಾಸಿಲ್‌ ನಟನೆಯ ಆವೇಶಂ ಸಿನಿಮಾ ಮೇ 17ರಂದು ಒಟಿಟಿಯಲ್ಲಿ ಬಿಡುಗಡೆಯಾಗುವ ಸೂಚನೆ ದೊರಕಿದೆ. ಈ ಸಿನಿಮಾದಲ್ಲಿ ಆಶಿಷ್ ವಿದ್ಯಾರ್ಥಿ ಕೂಡ ನಟಿಸಿದ್ದಾರೆ.

Aavesham OTT Release: ಸದ್ಯದಲ್ಲಿಯೇ ಒಟಿಟಿಯಲ್ಲಿ ಫಹಾದ್‌ ಫಾಸಿಲ್‌ ನಟನೆಯ ಆವೇಶಂ ಬಿಡುಗಡೆ
Aavesham OTT Release: ಸದ್ಯದಲ್ಲಿಯೇ ಒಟಿಟಿಯಲ್ಲಿ ಫಹಾದ್‌ ಫಾಸಿಲ್‌ ನಟನೆಯ ಆವೇಶಂ ಬಿಡುಗಡೆ

Aavesham On OTT: ಮಲಯಾಳಂ ಭಾಷೆಯ ಆಕ್ಷನ್‌ ಕಾಮಿಡಿ ಸಿನಿಮಾ ಆವೇಶಂ ಒಟಿಟಿಯಲ್ಲಿ ಸ್ಟ್ರೀಮಿಂಗ್‌ ಆಗಲು ಸಜ್ಜಾಗಿದೆ. ಜಿತು ಮಾಧವನ್ ಬರೆದು ನಿರ್ದೇಶಿಸಿದ ಮಲಯಾಳಂ ಭಾಷೆಯ ಈ ಆಕ್ಷನ್ ಹಾಸ್ಯ ಚಿತ್ರದಲ್ಲಿ ಫಹಾದ್ ಫಾಸಿಲ್, ಆಶಿಶ್ ವಿದ್ಯಾರ್ಥಿ, ಸಜಿನ್ ಗೋಪು ಮತ್ತು ಮನ್ಸೂರ್ ಅಲಿ ಖಾನ್ ನಟಿಸಿದ್ದಾರೆ. ಆವಶಂ ಏಪ್ರಿಲ್ 11, 2024 ರಂದು ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಿತ್ತು.

ಟ್ರೆಂಡಿಂಗ್​ ಸುದ್ದಿ

ಬಾಕ್ಸ್‌ ಆಫೀಸ್‌ನಲ್ಲಿ ಸೂಪರ್‌ಹಿಟ್‌ ಆಗಿರುವ ಈ ಸಿನಿಮಾ ನಿರೀಕ್ಷೆಗಿಂತ ಮುಂಚೆಯೇ ಒಟಿಟಿಗೆ ಆಗಮಿಸಲಿದೆ. ನಜ್ರಿಯಾ ನಾಜಿಮ್, ಫಹಾದ್ ಮತ್ತು ಅನ್ವರ್ ರಶೀದ್ ಆವೇಶಂ ಸಿನಿಮಾದ ಸಹ-ನಿರ್ಮಾಪಕರು. ಆಶಿಶ್ ವಿದ್ಯಾರ್ಥಿ, ಸಜಿನ್ ಗೋಪು ಮತ್ತು ಮನ್ಸೂರ್ ಅಲಿ ಖಾನ್ ಕೂಡ ನಟಿಸಿದ್ದಾರೆ. ಸಮೀರ್ ತಾಹಿರ್ ಕ್ಯಾಮೆರಾ, ಸುಶಿನ್ ಶ್ಯಾಮ್ ಸೌಂಡ್‌ಟ್ರ್ಯಾಕ್‌ ಉಸ್ತುವಾರಿ ವಹಿಸಿದ್ದಾರೆ.

ಈ ಸಿನಿಮಾವು ಏಪ್ರಿಲ್ 11ರಂದು ಚಿತ್ರಮಂದಿರಗಳಲ್ಲಿ ರಿಲೀಸ್‌ ಆಗಿತ್ತು. ಸದ್ಯ ಚಿತ್ರಮಂದಿರಗಳಲ್ಲಿ ಯಶಸ್ವಿಯಾಗಿ ಪ್ರದರ್ಶನಗೊಳ್ಳುತ್ತಿದೆ. ಇದೀಗ ಈ ಸಿನಿಮಾದ ಒಟಿಟಿ ಬಿಡುಗಡೆಯ ಕುರಿತು ಮಾಹಿತಿ ದೊರಕಿದೆ. ವರದಿಗಳ ಪ್ರಕಾರ ಅಮೆಜಾನ್‌ ಪ್ರೈಮ್‌ ವಿಡಿಯೋದಲ್ಲಿ ಮೇ 17ರಂದು ಸ್ಟ್ರೀಮಿಂಗ್‌ ಆಗಲಿದೆ. ಈ ಸಿನಿಮಾವನ್ನು ಮಲಯಾಳಂ ಮಾತ್ರವಲ್ಲದೆ ತೆಲುಗು, ತಮಿಳು, ಕನ್ನಡ ಮತ್ತು ಹಿಂದಿ ಭಾಷೆಗಳಲ್ಲಿ ನೋಡಬಹುದು.

ಈ ಸಿನಿಮಾದ ನಿರ್ದೇಶನದ ಕುರಿತು ಸಾಕಷ್ಟು ಪ್ರಶಂಸೆ ವ್ಯಕ್ತವಾಗಿದೆ. ಈ ಸಿನಿಮಾದ ಸಾಹಸ ದೃಶ್ಯಗಳು, ಛಾಯಾಗ್ರಹಣ, ಸಂಗೀತ, ತಾಂತ್ರಿಕ ಅಂಶಗಳು ಸಿನಿಮಾ ರಸಿಕರ ಮೆಚ್ಚುಗೆ ಗಳಿಸಿವೆ. ಈ 20 ಕೋಟಿ ಬಜೆಟ್‌ನ ಸಿನಿಮಾವು 100 ಕೋಟಿ ರೂಪಾಯಿಗೂ ಹೆಚ್ಚು ಗಳಿಕೆ ಮಾಡಿತ್ತು. 2024ರಲ್ಲಿ ಅತ್ಯಧಿಕ ಗಳಿಕೆ ಮಾಡಿದ ನಾಲ್ಕನೇ ಸಿನಿಮಾವೆಂಬ ಖ್ಯಾತಿಗೆ ಪಾತ್ರವಾಗಿತ್ತು. ದಕ್ಷಿಣ ಭಾರತದ ಅತ್ಯಧಿಕ ಗಳಿಕೆಯ ಎಂಟನೇ ಸಿನಿಮಾ ಎಂಬ ಹಿರಿಮೆಗೆ ಪಾತ್ರವಾಗಿತ್ತು.

ಆವೇಶಂ ಸಿನಿಮಾದ ಕಥೆಯೇನು?

ಅಜು (ಹಿಪ್ಸ್ಟರ್), ಬೀಬಿ (ಮಿಥುನ್ ಜೈ ಶಂಕರ್), ಮತ್ತು ಶಾಂತನ್ (ರೋಷನ್ ಶಹನವಾಜ್) ಎಂಜಿನಿಯರಿಂಗ್‌ ಓದಲು ಕೇರಳದಿಂದ ಬೆಂಗಳೂರಿಗೆ ಬರುತ್ತಾರೆ. ತಮಗೆ ಬೇಕಾದ ಸ್ವಾತಂತ್ರ್ಯ ದೊರಕಬೇಕೆಂದು ಬಿಕೆ ಹಾಸ್ಟೆಲ್‌ಗೆ ಸೇರುತ್ತಾರೆ. ಆದರೆ, ಅಲ್ಲಿ ಸೀನಿಯರ್‌ ವಿದ್ಯಾರ್ಥಿ ಕುಟ್ಟಿ (ಮಿಧುಟ್ಟಿ) ಜತೆಗೆ ಜಗಳವಾಗುತ್ತದೆ. ಈತನ ವಿರುದ್ಧ ಸೇಡು ತೀರಿಸಿಕೊಳ್ಳಲು ದರೋಡೆಕೋರ ರಂಗ (ಫಹದ್ ಫಾಸಿಲ್) ನೊಂದಿಗೆ ಸ್ನೇಹ ಬೆಳೆಸುತ್ತಾರೆ. ಆದರೆ, ಶೀಘ್ರದಲ್ಲಿ ಆ ಗ್ಯಾಂಗ್‌ನ ಕೊರತೆಯನ್ನು ಅರಿತುಕೊಳ್ಳುತ್ತಾರೆ. ರಂಗನೊಂದಿಗೆ ಒಡನಾಟದಿಂದ ಅವರ ಕಾಲೇಜು ವಿದ್ಯಾಭ್ಯಾಸದ ಮೇಲೆ ಪರಿಣಾಮ ಬೀರುತ್ತದೆ. ಇವರನ್ನು ಕಾಲೇಜಿನಿಂದ ಹೊರಹಾಕುತ್ತಾರೆ.

ರಂಗನ ಮಾಜಿ ಬಾಸ್‌ ರೆಡ್ಡಿ (ಮನ್ಸೂರ್ ಅಲಿ ಖಾನ್)ಯನ್ನು ಅಪಹರಿಸುತ್ತಾರೆ. ಆದರೆ, ಈ ಸಂದರ್ಭದಲ್ಲಿ ಆತನ ಕರಾಳ ಸತ್ಯವನ್ನು ಕಂಡುಕೊಳ್ಳುತ್ತಾರೆ. ಸೇಡು ತೀರಿಸಿಕೊಳ್ಳಲು ಅವನನ್ನು ಬಳಸಿದ್ದಕ್ಕಾಗಿ ಕ್ಷಮೆಯಾಚಿಸುತ್ತಾರೆ. ಬಳಿಕ ರಂಗ ಏಕಾಂಗಿಯಾಗಿ ರೆಡ್ಡಿಯನ್ನು ಎದುರಿಸಿ ವಿಜಯಶಾಲಿಯಾಗುತ್ತಾನೆ. ಶಾಂತನ್ ಮಾತ್ರ ಪರೀಕ್ಷೆಗಳಲ್ಲಿ ಉತ್ತೀರ್ಣನಾಗುತ್ತಾನೆ, ಆದರೆ ಅಜು ಮತ್ತು ಬೀಬಿ ಫೇಲ್ ಆಗುತ್ತಾನೆ. ಬಳಿಕ ಇವರು ರಂಗನನ್ನು ಭೇಟಿಯಾಗುತ್ತಾರೆ. ತಮ್ಮ ವೈಫಲ್ಯಗಳಿಗಾಗಿ ಆತನನ್ನು ಶಿಕ್ಷಿಸುತ್ತಾರೆ. ಈ ರೀತಿಯ ಕಥೆಯಲ್ಲಿ ಆಕ್ಷನ್‌ ಮತ್ತು ಹಾಸ್ಯವೂ ಇದ್ದು, ಪ್ರೇಕ್ಷಕರಿಗೆ ಇಷ್ಟವಾಗಿದೆ.

ಭೀಮಾ ಸಿನಿಮಾ ಏಪ್ರಿಲ್‌ 25ರಂದು ರಿಲೀಸ್‌

ತೆಲುಗು ಸಿನಿಮಾ ಭೀಮಾ ಏಪ್ರಿಲ್‌ 25ರಂದು ಒಟಿಟಿಯಲ್ಲಿ ಬಿಡುಗಡೆಯಾಗಲಿದೆ. ಮಾರ್ಚ್‌ 8ರಂದು ಚಿತ್ರಮಂದಿರಗಳಲ್ಲಿ ಈ ಸಿನಿಮಾ ಬಿಡುಗಡೆಯಾಗಿತ್ತು. ಈ ತೆಲುಗು ಸಿನಿಮಾ ಬಾಕ್ಸ್‌ ಆಫೀಸ್‌ನಲ್ಲಿ ಸಾಕಷ್ಟು ಗಳಿಕೆ ಮಾಡಿತ್ತು. ಇದೀಗ ಈ ಸಿನಿಮಾವನ್ನು ತೆಲುಗು ಭಾಷೆಯಲ್ಲಿ ಮಾತ್ರವಲ್ಲದೆ ಭಾರತದ ಇತರೆ ಕೆಲವು ಭಾಷೆಗಳಲ್ಲಿಯೂ ವೀಕ್ಷಿಸಬಹುದಾಗಿದೆ. ಭೀಮಾ ಸಿನಿಮಾದಲ್ಲಿ ಪ್ರಿಯಾ ಭವಾನಿ ಶಂಕರ್, ಮಾಳವಿಕಾ ಶರ್ಮಾ, ವೆನ್ನೆಲ ಕಿಶೋರ್, ರಘು ಬಾಬು, ನಾಸರ್, ನರೇಶ್, ಮುಖೇಶ್ ತಿವಾರಿ, ರೋಹಿಣಿ ಮುಂತಾದವರು ನಟಿಸಿದ್ದಾರೆ.

IPL_Entry_Point