ಕನ್ನಡ ಸುದ್ದಿ  /  ಮನರಂಜನೆ  /  ಟಿವಿಯಲ್ಲಿ Rcb ಮ್ಯಾಚು, ಥಿಯೇಟರ್‌ನಲ್ಲಿ ‘ಅವತಾರ ಪುರುಷ 2’ ಸಿನಿಮಾ ರಿಲೀಸು; ನಿರ್ದೇಶಕ ಸಿಂಪಲ್‌ ಸುನಿ ಕಡೆಯಿಂದ ಭರ್ಜರಿ ಮನರಂಜನೆ

ಟಿವಿಯಲ್ಲಿ RCB ಮ್ಯಾಚು, ಥಿಯೇಟರ್‌ನಲ್ಲಿ ‘ಅವತಾರ ಪುರುಷ 2’ ಸಿನಿಮಾ ರಿಲೀಸು; ನಿರ್ದೇಶಕ ಸಿಂಪಲ್‌ ಸುನಿ ಕಡೆಯಿಂದ ಭರ್ಜರಿ ಮನರಂಜನೆ

ಸಿಂಪಲ್‌ ಸುನಿ ಮತ್ತು ಶರಣ್‌ ಕಾಂಬಿನೇಷನ್‌ನ ಅವತಾರ ಪುರುಷ 2 ಸಿನಿಮಾಕ್ಕೆ ಕೊನೆಗೂ ಬಿಡುಗಡೆ ದಿನಾಂಕ ಘೋಷಣೆಯಾಗಿದೆ. 2022ರಲ್ಲಿ ಮೊದಲ ಭಾಗ ತೆರೆಗೆ ಬಂದಿತ್ತು. ಇದೀಗ ಎರಡು ವರ್ಷದ ಬಳಿಕ ಇದೇ ತಿಂಗಳಲ್ಲಿ 22ರಂದೇ ಸಿನಿಮಾ ತೆರೆಗೆ ತರುತ್ತಿದ್ದಾರೆ ನಿರ್ಮಾಪಕರು.

ಟಿವಿಯಲ್ಲಿ RCB ಮ್ಯಾಚ್‌, ಥಿಯೇಟರ್‌ನಲ್ಲಿ ‘ಅವತಾರ ಪುರುಷ 2’ ಸಿನಿಮಾ ರಿಲೀಸ್; ನಿರ್ದೇಶಕ ಸಿಂಪಲ್‌ ಸುನಿ ಕಡೆಯಿಂದ ಭರ್ಜರಿ ಮನರಂಜನೆ
ಟಿವಿಯಲ್ಲಿ RCB ಮ್ಯಾಚ್‌, ಥಿಯೇಟರ್‌ನಲ್ಲಿ ‘ಅವತಾರ ಪುರುಷ 2’ ಸಿನಿಮಾ ರಿಲೀಸ್; ನಿರ್ದೇಶಕ ಸಿಂಪಲ್‌ ಸುನಿ ಕಡೆಯಿಂದ ಭರ್ಜರಿ ಮನರಂಜನೆ

Avatara Purusha 2 Release Date: ಸಿಂಪಲ್‌ ಸುನಿ ಸಿನಿಮಾ ಮೇಲೆ ಎಷ್ಟು ಫ್ಯಾಷನೇಟ್‌ ಆಗಿದ್ದಾರೋ, ಕ್ರಿಕೆಟ್‌ ಮೇಲೂ ಅಷ್ಟೇ ವ್ಯಾಮೋಹಿ. ಅದರಲ್ಲೂ IPL ಬಂತೆಂದರೆ ಈ ನಿರ್ದೇಶಕನ ಸೋಷಿಯಲ್‌ ಮೀಡಿಯಾದ ತುಂಬೆಲ್ಲ ಬರೀ RCB ಮ್ಯಾಚ್‌ನದ್ದೇ ಪೋಸ್ಟ್‌ಗಳು. ಇದೀಗ ಇದೇ ಆರ್‌ಸಿಬಿ ಪ್ರೇಮಿ ಸಿಂಪಲ್‌ ಸುನಿ, ತಮ್ಮ ಮುಂದಿನ ಬಹುನಿರೀಕ್ಷಿತ ಸಿನಿಮಾ ಅವತಾರ ಪುರುಷ 2 ಸಿನಿಮಾದ ಬಿಡುಗಡೆ ದಿನಾಂಕವನ್ನು ಅಧಿಕೃತವಾಗಿ ಘೋಷಿಸಿದ್ದಾರೆ. ಅಚ್ಚರಿಯ ವಿಚಾರ ಏನೆಂದರೆ ಆ ಸಿನಿಮಾ RCB ಪಂದ್ಯ ನಡೆಯುವ ದಿನವೇ ರಿಲೀಸ್‌ ಆಗುತ್ತಿದೆ.

ಟ್ರೆಂಡಿಂಗ್​ ಸುದ್ದಿ

ಪುಷ್ಕರ್ ಮಲ್ಲಿಕಾರ್ಜುನಯ್ಯ ನಿರ್ಮಾಣದ, ಸಿಂಪಲ್ ಸುನಿ ನಿರ್ದೇಶನದ ಹಾಗೂ ಶರಣ್ ನಾಯಕರಾಗಿ ನಟಿಸಿರುವ ಅವತಾರ ಪುರುಷ 2 ಚಿತ್ರ ಮಾರ್ಚ್ 22 ರಂದು ರಾಜ್ಯಾದ್ಯಂತ ತೆರೆ ಕಾಣುತ್ತಿದೆ. ಈ ಬಗ್ಗೆ ಮೊದಲು ಮಾತು ಆರಂಭಿಸಿದ ನಿರ್ದೇಶಕ ಸಿಂಪಲ್‌ ಸುನಿ, "ಎರಡು ವರ್ಷಗಳಿಂದ ಸ್ನೇಹಿತರು ಹಾಗೂ ಅಭಿಮಾನಿಗಳು ಕೇಳುತ್ತಿದ್ದರು. ಅವತಾರ ಪುರುಷ 2 ಯಾವಾಗ ರಿಲೀಸ್? ಎಂದು. ಈಗ ನಮ್ಮ ಚಿತ್ರದ ಬಿಡುಗಡೆಗೆ ದಿನಾಂಕ ನಿಗದಿಯಾಗಿದೆ. ಬಹು ನಿರೀಕ್ಷಿತ ಈ ಚಿತ್ರ ಇದೇ 22ರಂದು ರಾಜ್ಯಾದ್ಯಂತ ಬಿಡುಗಡೆಯಾಗುತ್ತಿದೆ" ಎಂದಿದ್ದಾರೆ.

ಆರ್‌ಸಿಬಿ ಪಂದ್ಯದ ದಿನವೇ ಸಿನಿಮಾ ರಿಲೀಸ್

ಮುಂದುವರಿದು ಮಾತನಾಡಿದ ಅವರು, ಚಿತ್ರದ ಮೊದಲ ಭಾಗ ನೋಡಿದವರಿಗೂ ಹಾಗೂ ನೋಡದವರಿಗೂ ಈ ಚಿತ್ರ ಇಷ್ಟವಾಗುವುದಂತು ಖಂಡಿತ. ಅಂತಹ ಉತ್ತಮ ಮನೋರಂಜನಾ ಚಿತ್ರವಿದು. ಶರಣ್ ಅವರು ನಾಯಕನಾಗಿ, ಆಶಿಕಾ ರಂಗನಾಥ್ ನಾಯಕಿಯಾಗಿ ನಟಿಸಿದ್ದಾರೆ. ಕುಮಾರ ಪಾತ್ರದಲ್ಲಿ ಶ್ರೀನಗರ ಕಿಟ್ಟಿ ಕಾಣಿಸಿಕೊಂಡಿದ್ದಾರೆ. ಸಾಯಿಕುಮಾರ್, ಸಾಧುಕೋಕಿಲ, ಸುಧಾರಾಣಿ, ಭವ್ಯ ಮುಂತಾದವರು ತಾರಾಬಳಗದಲ್ಲಿದ್ದಾರೆ. ಕಲಾವಿದರ ಹಾಗೂ ತಾಂತ್ರಿಕವರ್ಗದವರ ಸಹಕಾರದಿಂದ ಚಿತ್ರ ಚೆನ್ನಾಗಿ ಬಂದಿದೆ.‌ ಅಚ್ಚರಿ ಏನೆಂದರೆ, ಆರ್‌ಸಿಬಿ ಪಂದ್ಯದ ದಿನವೇ ನಮ್ಮ ಸಿನಿಮಾ ಬಿಡುಗಡೆಯಾಗುತ್ತಿದೆ ಎಂದರು ಸುನಿ. ‌

ಇದೇ 22ರಂದು ಸಿನಿಮಾ ಬಿಡುಗಡೆ

ಇದೇ ಚಿತ್ರದ ಬಗ್ಗೆ ನಿರ್ಮಾಪಕ ಪುಷ್ಕರ್‌ ಮಲ್ಲಿಕಾರ್ಜುನಯ್ಯ ಮಾತನಾಡಿದ್ದಾರೆ. ಅವತಾರ ಪುರುಷ 2 ಚಿತ್ರ ಮಾರ್ಚ್‌ 22ರಂದು ತೆರೆಗೆ ಬರಲು ಸಿದ್ದವಾಗಿದೆ. ಮೋಹನ್ ಅವರು ಚಿತ್ರದ ವಿತರಣೆ ಮಾಡುತ್ತಿದ್ದಾರೆ. ನೋಡುಗರಿಗೆ ಈ ಚಿತ್ರ ಮನೋರಂಜನೆಯ ರಸದೌತಣ ನೀಡುವುದು ಖಚಿತ. ಸದ್ಯದಲ್ಲೇ ಟ್ರೇಲರ್ ಹಾಗೂ ಹಾಡು ಬಿಡುಗಡೆಯಾಗಲಿದೆ. ಚಿತ್ರ ಉತ್ತಮವಾಗಿ ಮೂಡಿಬರಲು ಸಹಕಾರ ನೀಡಿದ ನನ್ನ ಇಡೀ ತಂಡಕ್ಕೆ ಧನ್ಯವಾದ ಎಂದರು‌ ಪುಷ್ಕರ್.

ಫ್ಯಾನ್ಸ್‌ ಜತೆಗೇ ಸಿನಿಮಾ ನೋಡುವೆ ಎಂದ ಶರಣ್

"ನನ್ನನ್ನು ಕೂಡ ಬಹಳಷ್ಟು ಜನ ಅವತಾರ ಪುರುಷ 2 ಯಾವಾಗ ಬಿಡುಗಡೆಯಾಗುತ್ತದೆ? ಎಂದು ಕೇಳುತ್ತಿದ್ದರು. ಚಿತ್ರದ ಎರಡನೇ ಭಾಗ ಇಷ್ಟು ಕುತೂಹಲ ಹುಟ್ಟಿಸಿದೆ ಎಂದರೆ ನಿಜಕ್ಕೂ ಮೊದಲ ಭಾಗ ಎಲ್ಲರಿಗೂ ಇಷ್ಟವಾಗಿದೆ ಎಂದು ಅರ್ಥ. ನಾನು, ನನ್ನ ಯಾವ ಸಿನಿಮಾವನ್ನು ಮೊದಲು ನೋಡುವುದಿಲ್ಲ. ಅಭಿಮಾನಿಗಳ ಜೊತೆಗೆ ಚಿತ್ರಮಂದಿರದಲ್ಲೇ ನೋಡುತ್ತೇನೆ. ಈ ಚಿತ್ರವನ್ನು ನೋಡಲು ನಾನು ಸಹ ಕಾತುರದಿಂದ ಕಾಯುತ್ತಿದ್ದೇನೆ. ಕೆಲವರು ಚಿತ್ರ ಸ್ವಲ್ಪ ತಡವಾಯಿತು ಎನ್ನುತ್ತಿದ್ದಾರೆ. ಹಾಗೆನಿಲ್ಲ. ಮೊದಲ ಭಾಗ ಕೂಡ 2022 ರಲ್ಲೇ ಬಿಡುಗಡೆಯಾಗಿತ್ತು. ಇದು ಕೂಡ 22 ರಂದೇ ಬಿಡುಗಡೆಯಾಗುತ್ತಿದೆ. ಮೊದಲ ಭಾಗ 2022 ರಲ್ಲಿ. ಎರಡನೇ ಭಾಗ 2024 ರ ಮಾರ್ಚ್ 22ರಂದು ಎಂದರು ಶರಣ್.

ಬಹಳ ದಿನಗಳ ನಂತರ ನನ್ನ ಅಭಿನಯದ ಕನ್ನಡ ಚಿತ್ರ ಬಿಡುಗಡೆಯಾಗುತ್ತಿದೆ. ಒಳ್ಳೆಯ ತಂಡದೊಂದಿಗೆ ಚಿತ್ರ ಮಾಡಿರುವ ಖುಷಿಯಿದೆ. ದಯವಿಟ್ಟು ಚಿತ್ರವನ್ನು ಚಿತ್ರಮಂದಿರಗಳಲ್ಲೇ ನೋಡಿ ಎಂದರು ನಟಿ ಆಶಿಕಾ ರಂಗನಾಥ್. ಈ ಚಿತ್ರದಲ್ಲಿ ಕುಮಾರ ಎಂಬ ಪಾತ್ರದಲ್ಲಿ ಅಭಿನಯಿಸಿರುವುದಾಗಿ ನಟ ಶ್ರೀನಗರ ಕಿಟ್ಟಿ ಹೇಳಿದರು. 150 ರಿಂದ 200 ಚಿತ್ರಮಂದಿರಗಳಲ್ಲಿ ಚಿತ್ರ ಬಿಡುಗಡೆ ಮಾಡುವುದಾಗಿ ವಿತರಕ ಮೋಹನ್ ತಿಳಿಸಿದರು.

IPL_Entry_Point

ವಿಭಾಗ