ಕನ್ನಡ ಸುದ್ದಿ  /  ಮನರಂಜನೆ  /  ಮಾಂಸಾಹಾರದ ಬಗ್ಗೆ ಸುಧಾ ಮೂರ್ತಿಗೆ ಚುಚ್ಚಿದ್ದ ನಟ ಚೇತನ್‌ ಅಹಿಂಸಾ, ಈಗ ನಾರಾಯಣ ಮೂರ್ತಿಯನ್ನೂ ಬಿಡ್ತಿಲ್ಲ!

ಮಾಂಸಾಹಾರದ ಬಗ್ಗೆ ಸುಧಾ ಮೂರ್ತಿಗೆ ಚುಚ್ಚಿದ್ದ ನಟ ಚೇತನ್‌ ಅಹಿಂಸಾ, ಈಗ ನಾರಾಯಣ ಮೂರ್ತಿಯನ್ನೂ ಬಿಡ್ತಿಲ್ಲ!

ಯುವಕರು ವಾರಕ್ಕೆ 70 ಗಂಟೆ ಕೆಲಸ ಮಾಡಬೇಕೆಂದು ಇನ್ಫೋಸಿಸ್‌ನ ನಾರಾಯಣ ಮೂರ್ತಿ ಸಲಹೆ ನೀಡಿದ್ದಾರೆ. ಈ ಹೇಳಿಕೆ ಸದ್ಯ ವೈರಲ್‌ ಆಗಿದ್ದು, ಮೂರ್ತಿ ಅವರನ್ನು ಟ್ರೋಲ್‌ ಮಾಡುತ್ತಿದ್ದಾರೆ. ಈ ಬಗ್ಗೆ ಚೇತನ್‌ ಅಹಿಂಸಾ ಸಹ ಆಕ್ಷೇಪ ವ್ಯಕ್ತಪಡಿಸಿದ್ದಾರೆ.

ಮಾಂಸಾಹಾರದ ಬಗ್ಗೆ ಸುಧಾ ಮೂರ್ತಿಗೆ ಚುಚ್ಚಿದ್ದ ನಟ ಚೇತನ್‌ ಅಹಿಂಸಾ, ಈಗ ನಾರಾಯಣ ಮೂರ್ತಿಯನ್ನೂ ಬಿಡ್ತಿಲ್ಲ!
ಮಾಂಸಾಹಾರದ ಬಗ್ಗೆ ಸುಧಾ ಮೂರ್ತಿಗೆ ಚುಚ್ಚಿದ್ದ ನಟ ಚೇತನ್‌ ಅಹಿಂಸಾ, ಈಗ ನಾರಾಯಣ ಮೂರ್ತಿಯನ್ನೂ ಬಿಡ್ತಿಲ್ಲ!

Chetan Kumar On Narayana Murthy: ಸಾಮಾಜಿಕ ಕಾರ್ಯಕರ್ತ ಮತ್ತು ನಟ ಚೇತನ್‌ ಅಹಿಂಸಾ ತಮ್ಮ ನೇರ ಮಾತುಗಳ ಮೂಲಕವೇ ಸೋಷಿಯಲ್‌ ಮೀಡಿಯಾದಲ್ಲಿ ಸದ್ದು ಮಾಡುತ್ತಿರುತ್ತಾರೆ. ರಾಜಕೀಯ, ಸಿನಿಮಾ, ಸರ್ಕಾರ, ಶಿಕ್ಷಣ, ಪ್ರಸ್ತುತತೆ ವಿಚಾರಗಳು.. ಹೀಗೆ ಎಲ್ಲದರ ಬಗ್ಗೆ ತಮ್ಮ ಅನಿಸಿಕೆ ಅಭಿಪ್ರಾಯಗಳನ್ನು ಹೇಳಿಕೊಳ್ಳುತ್ತಿರುತ್ತಾರೆ. ಕೇಂದ್ರ, ರಾಜ್ಯ ಸರ್ಕಾರಗಳ ನಡೆಯನ್ನು ಒಮ್ಮೊಮ್ಮೆ ಟೀಕಿಸುತ್ತ, ಮಗದೊಮ್ಮೆ ತೆಗಳುತ್ತ ಸುದ್ದಿಯಲ್ಲಿರುತ್ತಾರೆ. ಇದೀಗ ಇದೇ ಚೇತನ್‌ ಅಹಿಂಸಾ, ಇನ್‌ಫೋಸಿಸ್‌ನ ನಾರಾಯಣ ಮೂರ್ತಿ ಬಗ್ಗೆ ಮಾತನಾಡಿದ್ದಾರೆ.

ಟ್ರೆಂಡಿಂಗ್​ ಸುದ್ದಿ

ದೇಶದ ಅಭಿವೃದ್ಧಿ ಮತ್ತು ಭಾರತದ ಉತ್ಪಾದಕತೆಯನ್ನು ಹೆಚ್ಚಿಸಲು ಯುವಕರು ವಾರಕ್ಕೆ 70 ಗಂಟೆಗಳ ಕಾಲ ಕೆಲಸ ಮಾಡಬೇಕು ಎಂದು ನಾರಾಯಣ ಮೂರ್ತಿ ಸಲಹೆ ನೀಡಿದ್ದರು. ಹೀಗೆ ನೀಡಿದ್ದ ಸಲಹೆ ವಿರುದ್ಧವೇ ನಟ, ಸಾಮಾಜಿಕ ಹೋರಾಟಗಾರ ಚೇತನ್‌ ತಿರುಗಿ ಬಿದ್ದಿದ್ದಾರೆ. ಯುವಕರು ಹೆಚ್ಚೆಚ್ಚು ಕೆಲಸ ಮಾಡಿದಷ್ಟು ನಿಮ್ಮ ಬ್ಯಾಂಕ್‌ ಬ್ಯಾಲನ್ಸ್‌ ಸಹ ಏರಿಕೆ ಕಾಣಲಿದೆ ಅಲ್ವಾ? ಎಂದು ಅವರ ಮಾತಿಗೆ ಆಕ್ಷೇಪ ವ್ಯಕ್ತಪಡಿಸಿದ್ದಾರೆ.

ಅಷ್ಟಕ್ಕೂ ಚೇತನ್‌ ಮಾತೇನು?

"ಭಾರತದ ಉತ್ಪಾದಕತೆಯನ್ನು ಹೆಚ್ಚಿಸಲು ಯುವಕರು ವಾರಕ್ಕೆ 70 ಗಂಟೆಗಳ ಕಾಲ ಕೆಲಸ ಮಾಡಬೇಕೆಂದು ನಾರಾಯಣ ಮೂರ್ತಿ ಬಯಸುತ್ತಾರೆ. ಆ ತರ್ಕದ ಪ್ರಕಾರ, ಯುವಕರು 140 ಗಂಟೆಗಳ ಕಾಲ ಕೆಲಸ ಮಾಡಿದರೆ ಭಾರತೀಯ ಉತ್ಪಾದಕತೆ ಇನ್ನೂ ಹೆಚ್ಚಾಗುವುದಿಲ್ಲವೇ ಸಹಜವಾಗಿ ಮನಸ್ಸು ಮತ್ತು ದೇಹಕ್ಕೆ ವಿಶ್ರಾಂತಿ ನೀಡುವ ಅಗತ್ಯವಿಲ್ಲ. ಇದು ಎಂತಹ ಸಮಯ ವ್ಯರ್ಥ! ಅಲ್ವಾ? ಯುವಕರು ಕಷ್ಟಪಟ್ಟು ಕೆಲಸ ಮಾಡಲಿ, ಇದರಿಂದ ನಿಮ್ಮ (ನಾರಾಯಣ ಮೂರ್ತಿಯವರ) ಬ್ಯಾಂಕ್ ಬ್ಯಾಲೆನ್ಸ್ ಇನ್ನಷ್ಟು ಬೆಳೆಯಲಿ, ಅಲ್ವಾ? ಇದು ನಾರಾಯಣ ಮೂರ್ತಿಯವರ ಇಂತಹ ಸಮಸ್ಯಾತ್ಮಕ, ಅತಿ ಬಂಡವಾಳಶಾಹಿ ಸಲಹೆ" ಎಂದು ಟೀಕೆ ಮಾಡಿದ್ದಾರೆ.

ನಾರಾಯಣ ಮೂರ್ತಿ ವಿರುದ್ಧ ಮತ್ತೊಂದು ಬರಹ

ತನ್ನ ವಾದವನ್ನು ಬಲಪಡಿಸಲು, ನಾರಾಯಣ ಮೂರ್ತಿ WWII ನಂತರ ಆಕ್ಸಿಸ್ ಶಕ್ತಿಗಳಾದ ಜರ್ಮನಿ ಮತ್ತು ಜಪಾನ್‌ನ ಯುವಕರು 'ರಾಷ್ಟ್ರ ನಿರ್ಮಾಣ'ಕ್ಕಾಗಿ ವಾರಕ್ಕೆ 70 ಗಂಟೆಗಳ ಕಾಲ ಕೆಲಸ ಮಾಡಿದ್ದರು ಎಂದು ಉದಾಹರಿಸಿದರು. ಇಂದಿನ ಭಾರತಕ್ಕೆ ಸಂಬಂಧಿಸಿದ WWII ಸಂದರ್ಭವು ಬಾಬಾಸಾಹೇಬ್ ಅಂಬೇಡ್ಕರ್ ಅವರು 1942 ರಲ್ಲಿ 12 ರಿಂದ 8 ಕ್ಕೆ ದೈನಂದಿನ ಕೆಲಸದ ಸಮಯವನ್ನು ಕಡಿಮೆ ಮಾಡಿದ್ದು ಹೊರತು ಜರ್ಮನಿ-ಜಪಾನ್ ಅಲ್ಲ ಎಂದು ಮೂರ್ತಿ ಅವರು ಕಲಿಯಬೇಕು. ವಿದೇಶಿ ಆಮದುಗಳು -- ಬ್ರಾಹ್ಮಣ್ಯವು ಮತ್ತು ಬಂಡವಾಳಶಾಹಿ ವ್ಯವಸ್ಥೆ— ಎರಡನ್ನೂ ಕಿತ್ತುಹಾಕಬೇಕು

ಮಾಂಸಾಹಾರದ ವಿಚಾರಕ್ಕೆ ಸುಧಾಮೂರ್ತಿಗೆ ಚೇತನ್‌ ಟಾಂಗ್

ಕಳೆದ ಕೆಲ ತಿಂಗಳ ಹಿಂದೆ ಸಸ್ಯಾಹಾರ ಮತ್ತು ಮಾಂಸಾಹಾರ ಕುರಿತಾಗಿ ಸುಧಾ ಮೂರ್ತಿ ತಮ್ಮ ಹೇಳಿಕೆ ನೀಡಿದ್ದರು. ಅವರ ಆ ವಿಚಾರ ಕೆಲವರನ್ನು ತೀವ್ರ ಕೆರಳಿಸುವಂತೆ ಮಾಡಿತ್ತು. "ನಾನು ಶುದ್ಧ ಸಸ್ಯಾಹಾರಿ. ಅದ್ಯಾವ ಮಟ್ಟಿಗೆ ಎಂದರೆ, ನಾನು ಮೊಟ್ಟೆ ಮತ್ತು ಬೆಳ್ಳುಳ್ಳಿಯನ್ನೂ ತಿನ್ನುವುದಿಲ್ಲ. ನಾನು ವಿದೇಶಕ್ಕೆ ಹೋಗುವಾಗ ನನಗೇನು ಬೇಕೆಂದು ಮನೆಯಲ್ಲಿಯೇ ಮಾಡಿಕೊಂಡು ಹೋಗುತ್ತೇನೆ. ಸಸ್ಯಾಹಾರ ಮತ್ತು ಮಾಂಸಾಹಾರಕ್ಕೆ ಒಂದೇ ಚಮಚ ಬಳಸುತ್ತಾರೆ ಎಂಭ ಭಯ. ನನ್ನ ಚಮಚವನ್ನು ನಾನೇ ತೆಗೆದುಕೊಂಡು ಹೋಗುತ್ತೇನೆ. ವಿದೇಶಿ ಪ್ರವಾಸಗಳಲ್ಲಿ ಸಸ್ಯಾಹಾರಿ ಹೊಟೇಲ್‌ಗಳನ್ನೇ ಹುಡುಕುತ್ತೇನೆ" ಎಂದು ಸುಧಾ ಮೂರ್ತಿ ಹೇಳಿಕೊಂಡಿದ್ದರು.

ಸುಧಾ ಮೂರ್ತಿ ಮಾತಿಗೆ ಚೇತನ್‌ ಉತ್ತರ

"ಸುಧಾ ಮೂರ್ತಿಯವರು ನಮ್ಮ ಬ್ರಾಹ್ಮಣ್ಯ- ಬಂಡವಾಳಶಾಹಿ ಸಮಾಜದಿಂದ ಅತಿಯಾದ ಬಿಲ್ಡಪ್‌ನಿಂದ ಗುರುತಿಸಲ್ಪಟ್ಟ ಮತ್ತು ಅನರ್ಹವಾಗಿ ಗೌರವಿಸಲ್ಪಟ್ಟ ಸಾರ್ವಜನಿಕ ವ್ಯಕ್ತಿ. ಅವರು ತನ್ನ ಸೀಮಿತ, ಮಡಿವಂತಿಕೆಯ ಚಿಂತನೆಯನ್ನು ಬಹಿರಂಗಪಡಿಸುವ ಹೇಳಿಕೆಗಳನ್ನು ನಿರಂತರವಾಗಿ ಮಾಡುತ್ತಾರೆ. ಸುಧಾ ಮೂರ್ತಿಯವರು ಹೆಚ್ಚು ಮಾತನಾಡಬೇಕು. ಅವರ ಆಸ್ತಿ ಜಗದಗಲ, ತಿಳುವಳಿಕೆ ಚಮಚದಗಲ' ಎಂದು ಲೇವಡಿ ಮಾಡಿದ್ದರು.

IPL_Entry_Point