ಕನ್ನಡ ಸುದ್ದಿ  /  Entertainment  /  Sandalwood News Actress Milana Nagaraj Darling Krishna Confirm Pregnancy Baby Expected September Pcp

ಮೊದಲ ಮಗುವಿನ ನಿರೀಕ್ಷೆಯಲ್ಲಿ ಮಿಲನಾ ನಾಗರಾಜ್‌; ವಿವಾಹವಾಗಿ ಮೂರನೇ ವರ್ಷ ಗುಡ್‌ನ್ಯೂಸ್‌ ನೀಡಿದ್ರು ಡಾರ್ಲಿಂಗ್‌

Milana Nagaraj: ಸ್ಯಾಂಡಲ್‌ವುಡ್‌ ನಟಿ ಮಿಲನಾ ನಾಗರಾಜ್‌ ಮತ್ತು ಡಾರ್ಲಿಂಗ್‌ ಕೃಷ್ಣ ಮೊದಲ ಮಗುವಿನ ನಿರೀಕ್ಷೆಯಲ್ಲಿದ್ದಾರೆ. ಮಿಲನಾ ನಾಗರಾಜ್‌ ಇನ್‌ಸ್ಟಾಗ್ರಾಂನಲ್ಲಿ ಮಗುವಿನ ಟೀಶರ್ಟ್‌ ಫೋಟೋದಲ್ಲಿ ಕ್ರಿಸ್ಮಿ ಬೇಬಿ ಎಂಬ ಫೋಟೋ ಹಂಚಿಕೊಂಡಿದ್ದಾರೆ.

ಮೊದಲ ಮಗುವಿನ ನಿರೀಕ್ಷೆಯಲ್ಲಿ ಮಿಲನಾ ನಾಗರಾಜ್‌; ವಿವಾಹವಾಗಿ ಮೂರನೇ ವರ್ಷಕ್ಕೆ ಗುಡ್‌ನ್ಯೂಸ್‌
ಮೊದಲ ಮಗುವಿನ ನಿರೀಕ್ಷೆಯಲ್ಲಿ ಮಿಲನಾ ನಾಗರಾಜ್‌; ವಿವಾಹವಾಗಿ ಮೂರನೇ ವರ್ಷಕ್ಕೆ ಗುಡ್‌ನ್ಯೂಸ್‌

ಸ್ಯಾಂಡಲ್‌ವುಡ್‌ ನಟಿ ಮಿಲನಾ ನಾಗರಾಜ್‌ ಶುಭಸುದ್ದಿಯೊಂದನ್ನು ನೀಡಿದ್ದಾರೆ. ಸುಮಾರು ಮೂರು ವರ್ಷದ ಹಿಂದೆ ವಿವಾಹವಾಗಿ, ಕಳೆದ ತಿಂಗಳಷ್ಟೇ ಮೂರನೇ ವಿವಾಹ ವಾರ್ಷಿಕೋತ್ಸವ ಆಚರಿಸಿಕೊಂಡಿದ್ದ ಮಿಲನಾ ನಾಗರಾಜ್‌, ಡಾರ್ಲಿಂಗ್‌ ಕೃಷ್ಣ ಮೊದಲ ಮಗುವಿನ ನಿರೀಕ್ಷೆಯಲ್ಲಿದ್ದಾರೆ. ಮಿಲನಾ ನಾಗರಾಜ್‌ ಇನ್‌ಸ್ಟಾಗ್ರಾಂನಲ್ಲಿ ಮಗುವಿನ ಟೀಶರ್ಟ್‌ ಫೋಟೋದಲ್ಲಿ ಕ್ರಿಸ್ಮಿ ಬೇಬಿ ಎಂಬ ಫೋಟೋ ಹಂಚಿಕೊಂಡಿದ್ದಾರೆ. ಜತೆಗೆ, "ಬ್ಲೆಸ್‌ ಅಸ್‌- ಆಶೀರ್ವದಿಸಿ" ಎಂದು ಬರೆದಿದ್ದಾರೆ. ಆ ಟೀ ಶರ್ಟ್‌ನಲ್ಲಿ ಡ್ಯೂ ಸೆಪ್ಟೆಂಬರ್‌ 2024 ಎಂದಿದೆ. ಈ ಮೂಲಕ ಇನ್ನಾರು ತಿಂಗಳಲ್ಲಿ ಮಗುವಿನ ಆಗಮನದ ನಿರೀಕ್ಷೆಯಲ್ಲಿದ್ದಾರೆ.

ಶುಭಾಶಯ ಅಂದ್ರು ಫ್ಯಾನ್ಸ್‌

ಮೊದಲ ಮಗುವಿನ ನಿರೀಕ್ಷೆಯಲ್ಲಿರುವ ಮಿಲನಾ ನಾಗರಾಜ್‌, ಡಾರ್ಲಿಂಗ್‌ ಕೃಷ್ಣರಿಗೆ ಶುಭಾಶಯಗಳ ಮಹಾಪೂರವೇ ಹರಿದಿದೆ. ಹಲವು ಅಭಿಮಾನಿಗಳು, ಸಹೋದ್ಯೋಗಿಗಳು, ಚಿತ್ರನಟಿಯರು, ನಟರು ಶುಭಾಶಯ ಹೇಳಿದ್ದಾರೆ. ನಿರಂಜನ್‌ ದೇಶ್‌ಪಾಂಡೆ, ರುಕ್ಮಿಣಿ ವಸಂತ್‌, ದಿವ್ಯ ಉರುಡುಗ, ಸುನಯನ, ಸಪ್ತಮಿ ಗೌಡ, ಸಂಯುಕ್ತ ಹೊರನಾಡು ಸೇರಿದಂತೆ ಸಾಕಷ್ಟು ಸೆಲೆಬ್ರಿಟಿಗಳು ಕಂಗ್ರಾಜ್ಯುಲೇಷನ್‌ ತಿಳಿಸಿದ್ದಾರೆ.

ಪ್ರೀತಿಸಿ ವಿವಾಹವಾಗಿದ್ರು

ಮಿಲನಾ ನಾಗರಾಜ್‌, ಡಾರ್ಲಿಂಗ್‌ ಕೃಷ್ಣ ಪ್ರೀತಿಸಿ ವಿವಾಹವಾಗಿದ್ದರು. ಸುಮಾರು ಎಂಟು ವರ್ಷಗಳ ಕಾಲ ಒಬ್ಬರನ್ನೊಬ್ಬರು ಇಷ್ಟಪಟ್ಟು, ಕುಟುಂದವರನ್ನು ಒಪ್ಪಿಸಿ ಮದುವೆಯಾಗಿದ್ದರು. ಪ್ರೇಮಿಗಳ ದಿನದಂದು ಮೂರು ವರ್ಷದ ಹಿಂದೆ ಮದುವೆಯಾಗಿದ್ದರು. ಕಳೆದ ತಿಂಗಳು ಫೆಬ್ರವರಿ 14ರಂದು ಮೂರನೇ ವರ್ಷದ ವಿವಾಹ ವಾರ್ಷಿಕೋತ್ಸವ ಆಚರಿಸಿಕೊಂಡಿದ್ದರು. ಬೆಂಗಳೂರಿನ ಹೋಟೆಲ್‌ನಲ್ಲಿ ಅನಿರ್ವಸರಿ ಪಾರ್ಟಿ ಮಾಡಿದ್ದರು.

"ಮೂರು ಸುಂದರ ವರ್ಷಗಳು ತುಂಬಾ ವೇಗವಾಗಿ ಸರಿದುಹೋಗಿದೆ. ನಾನು ನಿನ್ನನ್ನು ಪ್ರೀತಿಸಿದೆ. ಈ ದಾರಿಯಲ್ಲಿ ಪ್ರತಿ ಹೆಜ್ಜೆಯಲ್ಲೂ ನನಗೆ ನೀನು ಪ್ರೀತಿ ನೀಡಿದೆ. ನನ್ನ ವ್ಯಾಲೆಂಟಿನ್ ಡಾರ್ಲಿಂಗ್‌ ಕೃಷ್ಣ ನಿಮಗಿದೋ ಹ್ಯಾಪಿ ವೆಡ್ಡಿಂಗ್‌ ಅನಿವರ್ಸರಿ" ಎಂದು ಮಿಲನಾ ನಾಗರಾಜ್‌ ಇನ್‌ಸ್ಟಾಗ್ರಾಂನಲ್ಲಿ ಬರೆದುಕೊಂಡಿದ್ದರು. ಇದೀಗ ಅನಿರ್ಸರಿ ಕಳೆದು ಒಂದು ತಿಂಗಳಾಗುವ ಮುನ್ನವೇ ಗುಡ್‌ನ್ಯೂಸ್‌ ನೀಡಿದ್ದಾರೆ.

ಮಿಲನಾ ನಾಗರಾಜ್‌ ಮತ್ತು ಡಾರ್ಲಿಂಗ್‌ ಕೃಷ್ಣ ಜೋಡಿಯಾಗಿ ಲವ್‌ ಮಾಕ್ಟೆಲ್‌ ಸಿನಿಮಾದಲ್ಲಿ ನಟಿಸಿದ್ದರು. ಇದು ಭರ್ಜರಿ ಹಿಟ್‌ ಕಂಡಿತ್ತು. ಬಳಿಕ ಲವ್‌ ಮಾಕ್ಟೆಲ್‌ 2 ಸಹ ಬಿಡುಗಡೆಯಾಗಿತ್ತು. ಮಿಲನಾ ನಾಗರಾಜ್‌ ಮತ್ತು ಡಾರ್ಲಿಂಗ್‌ ಕೃಷ್ಣ ವಿವಾಹಕ್ಕೆ ಶಿವರಾಜ್‌ ಕುಮಾರ್‌, ಸುದೀಪ್‌, ಪುನೀತ್‌ ರಾಜ್‌ಕುಮಾರ್‌, ರವಿಚಂದ್ರನ್‌, ರಕ್ಷಿತ್‌ ಶೆಟ್ಟ, ನಿಖಿಲ್‌ ಕುಮಾರಸ್ವಾಮಿ, ತಮನ್ನಾ ಸೇರಿದಂತೆ ಸಾಕಷ್ಟು ಸೆಲೆಬ್ರಿಟಿಗಳು ಆಗಮಿಸಿದ್ದರು. ̧ಇವರ ವಿವಾಹ ವೈಭವದಿಂದ ನಡೆದಿತ್ತು. ಮದುವೆಯಾಗಿ ಮೂರು ವರ್ಷದ ಬಳಿಕ ಇವರು ಗುಡ್‌ನ್ಯೂಸ್‌ ನೀಡಿದ್ದು, ಫ್ಯಾನ್ಸ್‌ ಖುಷಿಯಾಗಿದ್ದಾರೆ.

ಮಿಲನಾ ನಾಗರಾಜ್‌ ಅವರು ಲಿಖಿತ್‌ ಶೆಟ್ಟಿ ಜತೆ ನಮ್ಮ ದುನಿಯಾ ನಮ್‌ ಸ್ಟೈಲ್‌ ಚಿತ್ರದಲ್ಲಿ ನಟಿಸಿದ್ದರು. ಚಾಲೆಂಜಿಂಗ್‌ ಸ್ಟಾರ್‌ ದರ್ಶನ್‌ ನಟನೆಯ ಬೃಂದಾವನ ಸಿನಿಮಾದಲ್ಲೂ ನಟಿಸಿದ್ದರು. ಚಾರ್ಲಿ ಸಿನಿಮಾದಲ್ಲಿ ಪೂರ್ವಿಯಾಗಿ ನಟಿಸಿದ್ದರು. ಅವರುಂಡೆ ರಾವುಕಾಲ್‌ ಎಂಬ ಮಲಯಾಳಂ ಸಿನಿಮಾದಲ್ಲಿಯೂ ನಟಿಸಿದ್ದರು. ವಿಜಯ ರಾಘವೇಂದ್ರ ಜತೆ ಜಾನಿ ಚಿತ್ರದಲ್ಲಿ ನಟಿಸಿದ್ದರು. ಲವ್‌ ಮಾಕ್‌ಟೆಲ್‌ ಚಿತ್ರ ದೊಡ್ಡಮಟ್ಟದ ಯಶಸ್ಸು ತಂದುಕೊಟ್ಟಿತ್ತು. ಕಳೆದ ವರ್ಷ ಲವ್‌ ಬರ್ಡ್ಸ್‌, ಕೌಶಲ್ಯ ಸುಪ್ರಜಾ ರಾಮಾ ಚಿತ್ರದಲ್ಲಿ ನಟಿಸಿದ್ದರು. ಮಿಲನಾ ನಾಗರಾಜ್‌ ನಟನೆಯ ಫಾರ್‌ ರಿಜಿಸ್ಟ್ರೇಷನ್‌ ಸಿನಿಮಾ ಇತ್ತೀಚೆಗೆ ಬಿಡುಗಡೆಯಾಗಿತ್ತು.

ಹಿಂದೂಸ್ತಾನ್‌ ಟೈಮ್ಸ್‌ ಕನ್ನಡದಲ್ಲಿ ಮನರಂಜನೆ ಸುದ್ದಿಗಳನ್ನು ಓದಿ