ಕನ್ನಡ ಸುದ್ದಿ  /  ಮನರಂಜನೆ  /  ‘ವಿದ್ಯಾರ್ಥಿ ವಿದ್ಯಾರ್ಥಿನಿಯರೇ’ ಚಿತ್ರದಿಂದ ಹೊಸ ಪ್ರಯೋಗ; Ai ಆನಿಮೇಟೆಡ್ ವಿಡಿಯೋ ಸಾಂಗ್ ಹೊರತಂದ ಚಿತ್ರತಂಡ

‘ವಿದ್ಯಾರ್ಥಿ ವಿದ್ಯಾರ್ಥಿನಿಯರೇ’ ಚಿತ್ರದಿಂದ ಹೊಸ ಪ್ರಯೋಗ; AI ಆನಿಮೇಟೆಡ್ ವಿಡಿಯೋ ಸಾಂಗ್ ಹೊರತಂದ ಚಿತ್ರತಂಡ

ಅರುಣ್‌ ಅಮುಕ್ತ ನಿರ್ದೇಶನದಲ್ಲಿ ಮೂಡಿಬಂದಿರುವ ವಿದ್ಯಾರ್ಥಿ ವಿದ್ಯಾರ್ಥಿನಿಯರೇ ಸಿನಿಮಾದ ಬ್ಯಾಡ್‌ ಬಾಯ್ಸ್‌ ಹೆಸರಿನ ಹೊಸ ಹಾಡು ಬಿಡುಗಡೆಯಾಗಿದೆ. ವಿಶೇಷ ಏನೆಂದರೆ, ಈ ಹಾಡಿಗೆ AI ತಂತ್ರಜ್ಞಾನದ ಟಚ್‌ ಸಿಕ್ಕಿದೆ.

ವಿದ್ಯಾರ್ಥಿ ವಿದ್ಯಾರ್ಥಿನಿಯರೇ ಚಿತ್ರದಿಂದ ಹೊಸ ಪ್ರಯೋಗ; AI ಆನಿಮೇಟೆಡ್ ವೀಡಿಯೋ ಸಾಂಗ್ ಹೊರತಂದ ಚಿತ್ರತಂಡ
ವಿದ್ಯಾರ್ಥಿ ವಿದ್ಯಾರ್ಥಿನಿಯರೇ ಚಿತ್ರದಿಂದ ಹೊಸ ಪ್ರಯೋಗ; AI ಆನಿಮೇಟೆಡ್ ವೀಡಿಯೋ ಸಾಂಗ್ ಹೊರತಂದ ಚಿತ್ರತಂಡ

Vidyarthi Vidyarthiniyare bad boy song: ಅರುಣ್ ಅಮುಕ್ತ ನಿರ್ದೇಶನದ ವಿದ್ಯಾರ್ಥಿ ವಿದ್ಯಾರ್ಥಿನಿಯರೇ ಹಂತ ಹಂತವಾಗಿ, ಕ್ರಿಯಾಶೀಲ ಹಾದಿಯಲ್ಲಿ ಪ್ರೇಕ್ಷಕರನ್ನು ಸೆಳೆಯುತ್ತಾ ಮುಂದುವರೆಯುತ್ತಿದೆ. ಸದ್ಯದ ಮಟ್ಟಿಗೆ ಬಿಡುಗಡೆಗೆ ತಯಾರಾಗುತ್ತಿರುವ ಈ ಸಿನಿಮಾ ಸುತ್ತ ಸಕಾರಾತ್ಮಕ ವಾತಾವರಣ ಹಬ್ಬಿಕೊಂಡಿದೆ. ಆ ಖುಷಿಯಲ್ಲಿರುವ ಚಿತ್ರತಂಡವೀಗ ಬ್ಯಾಡ್ ಬಾಯ್ಸ್ ಎಂಬ ವೀಡಿಯೋ ಸಾಂಗ್ ಒಂದನ್ನು ಬಿಡುಗಡೆಗೊಳಿಸಿದೆ. ಸುಬ್ರಮಣ್ಯ ಕುಕ್ಕೆ ಮತ್ತು ಎ.ಸಿ ಶಿವಲಿಂಗೇಗೌಡ ವಿದ್ಯಾರ್ಥಿ ವಿದ್ಯಾರ್ಥಿನಿಯರೇ ಚಿತ್ರವನ್ನು ನಿರ್ಮಾಣ ಮಾಡುತ್ತಿದ್ದಾರೆ. ಶ್ರೀಕಾಂತ್ ಜಿ ಕಶ್ಯಪ್ ಈ ಚಿತ್ರದ ಕಾರ್ಯಕಾರಿ ನಿರ್ಮಾಪಕ.

ಟ್ರೆಂಡಿಂಗ್​ ಸುದ್ದಿ

ಅದಾಗಿ ವಾರ ಕಳೆಯುವುದರೊಳಗಾಗಿ ಎಲ್ಲಡೆಯಿಂದ ಈ ಹಾಡಿನ ಬಗ್ಗೆ ಮೆಚ್ಚುಗೆಯ ಮಾತುಗಳು ಕೇಳಿಬರುತ್ತಿವೆ. ಇಂದಿನ ಪೀಳಿಗೆ ಹಿನ್ನೆಲೆಯಲ್ಲಿಯೇ ಮೂಡಿಬಂದಿರುವ ಬ್ಯಾಡ್‌ ಬಾಯ್ಸ್‌ ಹಾಡು ಹಲವು ವಿಶೇಷತೆಗಳಿಂದ ಕೂಡಿದೆ. ಯುವ ಸಮುದಾಯದ ಈಗಿನ ಮನಸ್ಥಿತಿಯನ್ನೂ ಈ ಹಾಡು ನೋಡುಗರ ಮುಂದೆ ತಂದಿರಿಸಿದೆ. ಹೆಚ್ಚೆಚ್ಚು ವೀಕ್ಷಣೆ ಪಡೆಯುತ್ತ ಮುಂದೆ ಸಾಗುತ್ತಿದೆ.

ವಿದ್ಯಾರ್ಥಿ ವಿದ್ಯಾರ್ಥಿನಿಯರೇ ಎಂಬ ಶೀರ್ಷಿಕೆಯೇ ಇದೊಂದು ಯುವ ಆವೇಗದ ಕಥಾನಕವನ್ನೊಳಗೊಂಡಿರುವ ಚಿತ್ರವೆಂಬುದನ್ನು ಸಾರಿ ಹೇಳುವಂತಿದೆ. ಇದೀಗ ಬಿಡುಗಡೆಗೊಂಡಿರುವ ಬ್ಯಾಡ್ ಬಾಯ್ಸ್ ವೀಡಿಯೋ ಸಾಂಗ್ ಶೀರ್ಷಿಕೆಗೆ ಅನ್ವರ್ಥವೆಂಬಂತಿದೆ. ಸಾಹಿತ್ಯ, ತಾಂತ್ರಿಕತೆ ಸೇರಿದಂತೆ ಎಲ್ಲ ರೀತಿಯಿಂದಲೂ ಹೊಸತೆಂಬಂತೆ ಮೂಡಿಬಂದಿರುವ ಈ ಹಾಡಿಗೆ ವಿಜೇತ್ ಕೃಷ್ಣ ಸಂಗೀತ ಸಂಯೋಜನೆ ಮಾಡಿದ್ದಾರೆ. ಭರ್ಜರಿ ಚೇತನ್ ಕುಮಾರ್ ಸಾಹಿತ್ಯ ಒದಗಿಸಿರುವ ಈ ಹಾಡು, ವಿಜೇತ್ ಕೃಷ್ಣ, ಕೀರ್ತನಾ ಚಂದ್ರು ಮತ್ತು ಸುನೈನಾ ಕಂಠಸಿರಿಯಲ್ಲಿ ಮೂಡಿ ಬಂದಿದೆ.

ಯುವ ಸಮುದಾಯಕ್ಕೆ ಹಿಡಿಸುವಂತೆ ಮೂಡಿ ಬಂದಿರುವ ಈ ಹಾಡನ್ನು ತಾಂತ್ರಿಕವಾಗಿಯೂ ವಿಶೇಷತೆಗಳೊಂದಿಗೆ ರೂಪಿಸಲಾಗಿದೆ. ಈ ನಡುವೆ ಸದ್ಯ ತಂತ್ರಜ್ಞಾನದಲ್ಲಿ ಭಾರೀ ಬದಲಾವಣೆಗಳು ಘಟಿಸುತ್ತಿವೆ. ಆ ಪೈಕಿ AI ತಂತ್ರಜ್ಞಾನವೂ ಎಲ್ಲ ಕ್ಷೇತ್ರಗಳನ್ನು ಆವರಿಸಿದೆ. ಅದರಂತೆ ಈಗ ಸಿನಿಮಾದಲ್ಲೂ ಅದರಲ್ಲೂ ಹಾಡಿಗಾಗಿ AI ಅನಿಮೇಷನ್‌ ಬಳಕೆ ಮಾಡಲಾಗಿದೆ. ಈ ಪ್ರಯತ್ನಕ್ಕೆ ನೋಡುಗರ ಪ್ರತಿಕ್ರಿಯೆ ಹೇಗಿರಬಹುದೆಂಬ ಕುತೂಹಲವಿತ್ತು. ಈಗ ಭರಪೂರ ಮೆಚ್ಚುಗೆಯಲ್ಲಿ ಚಿತ್ರತಂಡದ ಶ್ರಮ ಸಾರ್ಥಕ ಎನಿಸಿದೆ.

ಸದ್ಯ ಸೋಷಿಯಲ್‌ ಮೀಡಿಯಾದಲ್ಲಿ ಟ್ರೆಂಡ್‌ನತ್ತ ಸಾಗುತ್ತಿರುವ ಈ ಹಾಡಿನಲ್ಲಿ ಮನೋಜ್ ವಿವಾನ್, ಮನಸ್ವಿ, ಭಾವನಾ ಅಪ್ಪು, ಅಮರ್ ಹಾಡಿಗೆ ಹೆಜ್ಜೆ ಹಾಕಿದ್ದಾರೆ. ಚಿತ್ರಕ್ಕೆ ಕುಮಾರ್ ಗೌಡ ಛಾಯಾಗ್ರಹಣ ಮಾಡಿದರೆ, ಭರ್ಜರಿ ಚೇತನ್ ಮತ್ತು ವಾಸುಕಿ ವೈಭವ್ ಹಾಡುಗಳಿಗೆ ಸಾಹಿತ್ಯ ಬರೆದಿದ್ದಾರೆ, ಪವನ್ ಗೌಡ ಅವರ ಸಂಕಲನ, ಟೈಗರ್ ಶಿವು, ನರಸಿಂಹ ಸಾಹಸ ನಿರ್ದೇಶನ ಮಾಡಿದ್ದಾರೆ. ಅರುಣ್ ಸುರೇಶ್ ಬ್ಯಾಡ್‌ ಬಾಯ್ಸ್‌ ಹಾಡಿಗೆ ಕ್ಯಾಮರಾ ಹಿಡಿದ್ದಾರೆ. ವಿಜೇತ್ ಕೃಷ್ಣ, ವಾಸು ದೀಕ್ಷಿತ್ ಸಂಗೀತ ನಿರ್ದೇಶನ ಈ ಚಿತ್ರಕ್ಕಿದೆ.

ಚಿತ್ರದಲ್ಲಿ ನಟ, ಸಂಗೀತ ನಿರ್ದೇಶಕ ಚಂದನ್ ಶೆಟ್ಟಿ, ಭಾವನಾ, ಅಮರ್, ವಿವಾನ್, ಮಾನಸಿ ಮುಖ್ಯಭೂಮಿಕೆಯಲ್ಲಿ ನಟಿಸಿದ್ದಾರೆ. ಇನ್ನುಳಿದಂತೆ ಭವ್ಯ, ಅರವಿಂದ್ ರಾವ್, ಸುನೀಲ್ ಪುರಾಣಿಕ್ ಪೋಷಕ ಪಾತ್ರದಲ್ಲಿ ನಟಿಸಿದ್ದಾರೆ. ಕಾಕ್ರೋಚ್ ಸುಧಿ ಹಾಗೂ ಬಿಗ್‌ ಬಾಸ್‌ ಖ್ಯಾತಿಯ ಪ್ರಶಾಂತ್ ಸಂಬರ್ಗಿ ಸೇರಿ ಇನ್ನೂ ಹಲವರು ಈ ಚಿತ್ರದಲ್ಲಿ ನಟಿಸಿದ್ದಾರೆ.

IPL_Entry_Point