ಕನ್ನಡ ಸುದ್ದಿ  /  ಮನರಂಜನೆ  /  Devil Teaser: ಫೋಟೋ ತೆಗೆದವರ ಕೈ ಮುರಿಯೋಕೆ ಬಂದ ಪುಟ್ಟ ಪಾಪು! ಡೆವಿಲ್‌ ಟೀಸರ್‌ನಲ್ಲಿ ದರ್ಶನ್‌ ರೌದ್ರಾವತಾರ

Devil Teaser: ಫೋಟೋ ತೆಗೆದವರ ಕೈ ಮುರಿಯೋಕೆ ಬಂದ ಪುಟ್ಟ ಪಾಪು! ಡೆವಿಲ್‌ ಟೀಸರ್‌ನಲ್ಲಿ ದರ್ಶನ್‌ ರೌದ್ರಾವತಾರ

Devil First Look Teaser: ಚಾಲೆಂಜಿಂಗ್‌ ಸ್ಟಾರ್‌ ದರ್ಶನ್‌ ಅವರ ಬರ್ತ್‌ಡೇ (ಫೆ. 16) ಪ್ರಯುಕ್ತ ಬಹುನಿರೀಕ್ಷಿತ ಡೆವಿಲ್‌ ಚಿತ್ರದ ಫಸ್ಟ್‌ ಲುಕ್‌ ಟೀಸರ್‌ ಬಿಡುಗಡೆಯಾಗಿದೆ. ತಾರಕ್‌ ಸಿನಿಮಾ ಬಳಿಕ ಎರಡನೇ ಸಲ ದರ್ಶನ್‌ಗೆ ಆಕ್ಷನ್‌ ಕಟ್‌ ಹೇಳುತ್ತಿದ್ದಾರೆ ಪ್ರಕಾಶ್‌ ವೀರ್.‌ ಹೀಗಿದೆ ಡೆವಿಲ್‌ ಟೀಸರ್‌ ಝಲಕ್.‌

Devil Teaser: ಫೋಟೋ ತೆಗೆದವರ ಕೈ ಮುರಿಯೋಕೆ ಬಂದ ಪುಟ್ಟ ಪಾಪು; ಡೆವಿಲ್‌ ಟೀಸರ್‌ನಲ್ಲಿ ದರ್ಶನ್‌ ರೌದ್ರಾವತಾರ!
Devil Teaser: ಫೋಟೋ ತೆಗೆದವರ ಕೈ ಮುರಿಯೋಕೆ ಬಂದ ಪುಟ್ಟ ಪಾಪು; ಡೆವಿಲ್‌ ಟೀಸರ್‌ನಲ್ಲಿ ದರ್ಶನ್‌ ರೌದ್ರಾವತಾರ!

Devil First Look Teaser: ಕಳೆದ ಕೆಲವು ತಿಂಗಳ ಕುತೂಹಲ ತಣಿದಿದೆ. ಅಭಿಮಾನಿ ವಲಯದಲ್ಲಿ ಸೃಷ್ಟಿಯಾಗಿದ್ದ ನಿರೀಕ್ಷೆ ಮತ್ತಷ್ಟು ಹೆಚ್ಚಿದೆ. ಅದಕ್ಕೆ ಕಾರಣ; ಡೆವಿಲ್‌ ಚಿತ್ರದ ಫಸ್ಟ್‌ಲುಕ್‌ ಟೀಸರ್‌ ರಿಲೀಸ್‌ ಆಗಿದೆ. ದರ್ಶನ್‌ 47ನೇ ವರ್ಷದ ಬರ್ತ್‌ಡೇ ದಿನದ ಪ್ರಯುಕ್ತ ಡೆವಿಲ್‌ ಚಿತ್ರದ ಮಾಸ್‌ ಟೀಸರ್‌ ಝಲಕ್‌ ಬಿಡುಗಡೆಯಾಗಿದೆ. ಟೀಸರ್‌ ನೋಡಿದ ಅವರ ಸೆಲೆಬ್ರಿಟಿಗಳು ಕುಣಿದು ಕುಪ್ಪಳಿಸುತ್ತಿದ್ದಾರೆ. ಈ ಹಿಂದೆ ಕಂಡಿರದ ರೀತಿಯಲ್‌ ದರ್ಶನ್‌ ಎದುರಾಗಿ ಕೌತುಕಕ್ಕೆ ಒಗ್ಗರಣೆ ಹಾಕಿದ್ದಾರೆ.

ಟ್ರೆಂಡಿಂಗ್​ ಸುದ್ದಿ

ನಮ್ಮ ಮನೆಯಲೊಂದು ಪುಟ್ಟ ಪಾಪು ಇರುವುದು.. ಪೋಟೋ ತೆಗೆಯಲದು ಬಲು ಕೋಪ ಬರುವುದು.. ಫೋಟೋ ತೆಗೆದ ಕೈಯ ಪಾಪು ಮುರಿದು ಬಿಡುವುದು... ಸರಸು ಪಾಪು ಹೆಸರು ಕೇಳಲ್ವ? ಎನ್ನುತ್ತಿದ್ದಂತೆ ಆ ಪಾಪು ಡೆವಿಲ್‌ ಎಂದು ಗಹಗಹಿಸಿ ನಗುತ್ತಾರೆ ದರ್ಶನ್‌.. ಹೀಗೆ ಆ ಡೆವಿಲ್‌ ಎಷ್ಟು ಕ್ರೂರಿ ಇರಬಹುದು ಎಂಬುದನ್ನು ಒಂದು ಸಣ್ಣ ಝಲಕ್‌ನಲ್ಲಿ ತೋರಿಸಿಕೊಟ್ಟಿದ್ದಾರೆ ನಿರ್ದೇಶಕ ಪ್ರಕಾಶ್‌ ವೀರ್.‌

ಮಾಸ್‌ ಕಮರ್ಷಿಯಲ್‌ ಕಥೆಯ ಡೆವಿಲ್‌ ಚಿತ್ರದ ಫಸ್ಟ್‌ಲುಕ್‌ ಟೀಸರ್‌ನಲ್ಲಿ ಸದ್ಯ ದರ್ಶನ್‌ ಮಾತ್ರ ಕಂಡಿದ್ದಾರೆ. ಕೆಂಪು ವರ್ಣದ ಬ್ಯಾಕ್‌ಗ್ರೌಂಡ್‌ನಲ್ಲಿ ಕಡುಗೆಂಪು ವರ್ಣದ ಸೂಟ್‌ ಧರಿಸಿ, ಬಾಯಲ್ಲಿ ಸಿಗರೇಟ್‌ ಹೊತ್ತಿಸಿ, ಮತ್ತೊಂದು ಕೈಯಲ್ಲಿ ಗನ್‌ ಹಿಡಿದು ಹೊಸ ಅವತಾರದಲ್ಲಿ ಎದುರಾಗಿದ್ದಾರೆ ದರ್ಶನ್.‌ ಬರ್ತ್‌ಡೇ ಪ್ರಯುಕ್ತ ಈ ಸಿನಿಮಾದ ಅಧಿಕೃತ ಘೋಷಣೆ ಆಗಿದ್ದು, ಇನ್ನೇನು ಶೀಘ್ರದಲ್ಲಿಯೇ ಸಿನಿಮಾದ ಚಿತ್ರೀಕರಣವೂ ಶುರುವಾಗಲಿದೆ ಎಂಬ ಬರಹವೂ ಕೊನೆಯಲ್ಲಿ ಕಂಡಿದೆ.

ಇನ್ನು ನಿರ್ದೇಶಕ ಪ್ರಕಾಶ್‌ ವೀರ್‌, ಈ ಹಿಂದೆ ದರ್ಶನ್‌ಗೆ ತಾರಕ್‌ ಸಿನಿಮಾ ಮಾಡಿದ್ದರು. ಇದೀಗ ಕೆಲ ವರ್ಷಗಳ ಬಳಿಕ ಡೆವಿಲ್‌ ಮೂಲಕ ಆಗಮಿಸಿದ್ದಾರೆ. ದರ್ಶನ್‌ ಅವರನ್ನು ಬೇರೆ ರೀತಿಯಲ್ಲಿ ತೋರಿಸುವೆ ಎಂದು ಈ ಹಿಂದೆ ನಿರ್ದೇಶಕರು ಹೇಳಿದ್ದರು. ಅದರಂತೆ, ಹೊಸ ಅವತಾರದಲ್ಲಿಯೇ ದರ್ಶನ್‌ ಎದುರಾಗಿದ್ದಾರೆ. ರಗಡ್‌ ಡೈಲಾಗ್‌ ಮೂಲಕ ಸ್ಕ್ರೀನ್‌ ಮೇಲೆ ದರ್ಶನ್‌ ಅಬ್ಬರಿಸಿದರೆ, ಅದರ ನಡುವೆ ತೇಲಿ ಬರುವ ಅಜನೀಶ್‌ ಲೋಕನಾಥ್‌ ಅವರ ಮಾಸ್‌ ಬಿಜಿಎಂ ಸಹ ಮೆಚ್ಚುಗೆ ಪಡೆದುಕೊಂಡಿದೆ.

ಬರ್ತ್‌ಡೇ ಪ್ರಯುಕ್ತ ಮನೆ ಬಳಿ ಫ್ಯಾನ್ಸ್‌

ದರ್ಶನ್‌ ಬರ್ತ್‌ಡೇ ಎಂದರೆ ಅಲ್ಲಿ ಅಭಿಮಾನಿಗಳ ಸಂಭ್ರಮಕ್ಕೇನು ಕೊರತೆ ಕಾಣಿಸದು. ನೆಚ್ಚಿನ ನಟನ ಬರ್ತ್‌ಡೇಯನ್ನು ಹಬ್ಬದಂತೆ ಆಚರಿಸುತ್ತಾರೆ ಸೆಲೆಬ್ರಿಟಿಗಳು. ಈ ಸಲವೂ ಅಷ್ಟೇ ಪ್ರಮಾಣದ ಅಭಿಮಾನಿಗಳು ಬೆಂಗಳೂರಿನ ಆರ್‌ಆರ್‌ ನಗರದ ದರ್ಶನ್‌ ಮನೆ ಬಳಿ ಮಧ್ಯರಾತ್ರಿಯಿಂದಲೇ ಆಗಮಿಸಿ ದರ್ಶನ್‌ ಅವರನ್ನು ಕಣ್ತುಂಬಿಕೊಳ್ಳುತ್ತಿದೆ. ಈ ಮೊದಲೇ ದರ್ಶನ್‌ ಮನವಿ ಮಾಡಿದಂತೆ, ಹಾರ ತುರಾಯಿ, ಕೇಕ್‌, ಬ್ಯಾನರ್‌ ಯಾವುದನ್ನೂ ತರದೇ, ದಿನಸಿ ವಸ್ತುಗಳನ್ನು ನೀಡುತ್ತಿದ್ದಾರೆ.

ದರ್ಶನ್‌ ಬೆಳ್ಳಿ ಪರ್ವ..

ನಟ ದರ್ಶನ್‌ ಚಂದನವನಕ್ಕೆ ಪದಾರ್ಪಣೆ ಮಾಡಿ ಭರ್ತಿ 25 ವರ್ಷ ಕಳೆದ ಹಿನ್ನೆಲೆಯಲ್ಲಿ ಮತ್ತು ಬರ್ತ್‌ಡೇ ಪ್ರಯುಕ್ತ, ದರ್ಶನ್ ಅವರ ನೆಚ್ಚಿನ ಸೆಲೆಬ್ರಿಟಿಗಳು, ಸ್ನೇಹಿತರು ಹಾಗೂ ಹಿತೈಷಿಗಳು ಅರ್ಥಪೂರ್ಣವಾದ ಸಮಾರಂಭವೊಂದನ್ನು ಏರ್ಪಡಿಸಿದ್ದಾರೆ. ಶ್ರೀ ಆದಿಚುಂಚನಗಿರಿ ಶ್ರೀಗಳು, ಶ್ರೀ ಸುತ್ತೂರು ಶ್ರೀಗಳು, ಬೀಬಿಮಠದ ಶ್ರೀಗಳ ಸಾನಿಧ್ಯದಲ್ಲಿ ಹಾಗೂ ಸಂಸದೆ, ಚಿತ್ರನಟಿ ಸುಮಲತಾ ಅಂಬರೀಶ್ ಅವರ ಉಪಸ್ಥಿತಿಯಲ್ಲಿ ಬೆಳ್ಳಿ ಪರ್ವ ಡಿ-25 ವಿಶೇಷ ಕಾರ್ಯಕ್ರಮ ನಡೆಯಲಿದೆ.

ಶ್ರೀರಂಗ ಪಟ್ಟಣದ ಶ್ರೀ ರಂಗನಾಥ ಸ್ವಾಮಿ ದೇವಸ್ಥಾನ ಮೈದಾನದಲ್ಲಿ ದರ್ಶನ್‌ ಅವರ ಬೆಳ್ಳಿ ಪರ್ವ ಕಾರ್ಯಕ್ರಮ ನಡೆಯಲಿದೆ. ಫೆಬ್ರವರಿ 17ರ ಶನಿವಾರ ಸಂಜೆ 5 ಗಂಟೆಗೆ ಬೆಳ್ಳಿ ಪರ್ವ ಡಿ-25 ಎಂಬ ಕಾರ್ಯಕ್ರಮ ನಡೆಯಲಿದೆ. ಸಾವಿರಾರು ಅಭಿಮಾನಿಗಳ ಸಮ್ಮುಖದಲ್ಲಿ ಈ ಸಮಾರಂಭ ನಡೆಯಲಿದ್ದು, ಕನ್ನಡ ಚಿತ್ರರಂಗದಲ್ಲಿ 25 ವರ್ಷ ಪೂರೈಸಿರುವ ದರ್ಶನ್ ಅವರಿಗೆ ಸನ್ಮಾನ ಕಾರ್ಯಕ್ರಮ ನಡೆಯಲಿದೆ. ಜತೆಗೆ ವಿ.ಹರಿಕೃಷ್ಣ ಸಂಗೀತ ಸಂಜೆ ಸೇರಿದಂತೆ ಹಲವು ಮನರಂಜನಾ ಕಾರ್ಯಕ್ರಮಗಳು ಇರಲಿವೆ.

IPL_Entry_Point