ಕನ್ನಡ ಸುದ್ದಿ  /  ಮನರಂಜನೆ  /  ದರ್ಶನ್‌ ಹುಟ್ಟುಹಬ್ಬ: ಕಾಟೇರ ನಟನಿಗೆ ಶುಭಾಶಯಗಳ ಮಹಾಪೂರ, ದಚ್ಚು ಮನೆ ಮುಂದೆ ಫ್ಯಾನ್ಸ್‌ ಜಾತ್ರೆ

ದರ್ಶನ್‌ ಹುಟ್ಟುಹಬ್ಬ: ಕಾಟೇರ ನಟನಿಗೆ ಶುಭಾಶಯಗಳ ಮಹಾಪೂರ, ದಚ್ಚು ಮನೆ ಮುಂದೆ ಫ್ಯಾನ್ಸ್‌ ಜಾತ್ರೆ

Darshan birthday: ಚಾಲೆಂಜಿಂಗ್‌ ಸ್ಟಾರ್‌ ದರ್ಶನ್‌ ಹುಟ್ಟುಹಬ್ಬ (ಜನ್ಮ ದಿನಾಂಕ: 16 ಫೆಬ್ರವರಿ 1977)ದ ಸಂಭ್ರಮ ಎಲ್ಲೆಡೆ ಕಾಣಿಸುತ್ತಿದೆ. ಸೋಷಿಯಲ್‌ ಮೀಡಿಯಾ ಮಾತ್ರವಲ್ಲದೆ ಕರ್ನಾಟಕದ ವಿವಿಧೆಡೆ ದಚ್ಚು ಬರ್ತ್‌ಡೇ ಸೆಲೆಬ್ರೆಷನ್‌ ನಡೆಯುತ್ತಿದೆ.

ದರ್ಶನ್‌ ಹುಟ್ಟುಹಬ್ಬ: ಕಾಟೇರ ನಟನಿಗೆ ಶುಭಾಶಯಗಳ ಮಹಾಪೂರ
ದರ್ಶನ್‌ ಹುಟ್ಟುಹಬ್ಬ: ಕಾಟೇರ ನಟನಿಗೆ ಶುಭಾಶಯಗಳ ಮಹಾಪೂರ

ಚಾಲೆಂಜಿಂಗ್‌ ಸ್ಟಾರ್‌ ದರ್ಶನ್‌ ಹುಟ್ಟುಹಬ್ಬ (ಜನ್ಮ ದಿನಾಂಕ: 16 ಫೆಬ್ರವರಿ 1977)ದ ಸಂಭ್ರಮ ಮುಗಿಲುಮುಟ್ಟಿದೆ. ಸ್ಯಾಂಡಲ್‌ವುಡ್‌ನ ಕಲಾವಿದರು, ಅಭಿಮಾನಿಗಳು, ರಾಜಕಾರಣಿಗಳು ಸೇರಿದಂತೆ ಸಾಕಷ್ಟು ಜನರು ಚಾಲೆಂಜಿಂಗ್‌ ಸ್ಟಾರ್‌ಗೆ ಹುಟ್ಟುಹಬ್ಬದ ಶುಭಾಶಯಗಳನ್ನು ಹೇಳುತ್ತಿದ್ದಾರೆ. ದರ್ಶನ್‌ ಮನೆಯ ಮುಂದೆ ನಿನ್ನೆ ಸಂಜೆಯಿಂದಲೇ ಜಾತ್ರೆಯಂತೆ ಜನ ನೆರೆದಿದ್ದಾರೆ. ರಾಜ್ಯದ ವಿವಿಧ ಭಾಗಗಳಲ್ಲಿ ದರ್ಶನ್‌ ಅಭಿಮಾನಿಗಳು ಕಟೌಟ್‌, ಕೇಕ್‌ ಕಟ್‌ ಮೂಲಕ ಕಾಟೇರ ನಟನ ಹುಟ್ಟುಹಬ್ಬವನ್ನು ಆಚರಿಸಿದ್ದಾರೆ. ಇದೇ ಸಮಯದಲ್ಲಿ ಸಾಕಷ್ಟು ಸೆಲೆಬ್ರಿಟಿಗಳು ದರ್ಶನ್‌ ಬಗ್ಗೆ ಭಾವುಕರಾಗಿ ಸೋಷಿಯಲ್‌ ಮೀಡಿಯಾದಲ್ಲಿ ಸಂದೇಶ ಬರೆದಿದ್ದಾರೆ.

ಟ್ರೆಂಡಿಂಗ್​ ಸುದ್ದಿ

ರಕ್ಷಿತಾ ಪ್ರೇಮ್‌ ಭಾವುಕ ಬರಹ

"ಪ್ರೀತಿಯ ದರ್ಶನ್‌ ಒಂದು ದಿವಸ ನೀವು ನನಗೆ ಹೇಳಿದ್ರಿ, ನಾನು ಯಾವಾಗ್ಲೂ ನಿನ್‌ ಜತೆ ಕಷ್ಟ ಆಗಲಿ ಸುಖ ಆಗಲಿ ನಿಂತಿರ್ತಿನಿ ಅಂತ, ಅಂದು ನಾನು ತುಂಬಾ ದುಃಖದಲ್ಲಿದ್ದೆ. ನಿನ್ನ ಪದಗಳು ನನಗೆ ದೃಢವಾಗಿ ನಿಲ್ಲಲು ಸಹಕರಿಸಿತು. ಅಂದು ಹೇಳಿದಂತೆ ನನ್ನ ಪ್ರೀತಿಯ ದರ್ಶನ್‌ ನನ್ನ ಜತೆಗೆ ನಿಂತೆ. ನಾನು ಯಾವಾಗಲೂ ಇಲ್ಲಿ ನಿನಗಾಗಿ ಇರುವೆ. ನೀನು ಅದ್ಭುತ ಸ್ನೇಹಿತ, ಪ್ರೀತಿಯ ತಂದೆ, ಒಂದು ಸುಂದರ ಆತ್ಮ, ಒಂದು ಸೂಪರ್‌ ಡ್ಯೂಪರ್‌ ಸ್ಟಾರ್‌, ಐ ಲವ್‌ ಯು ಮೈ ಡಿಯರೆಸ್ಟ್‌ ಫ್ರೆಂಡ್‌, ಹ್ಯಾಪಿ ಹ್ಯಾಪಿ ಬರ್ತ್‌ಡೇ, ಖುಷಿ ಆಗಿ Sandalwood News Challenging star darshan birthday Kaatera Actor Birthday Celebration Fans Wishes pcpಇರು, ಆರೋಗ್ಯವಾಗಿ ಇರು, ಸದಾ ನಗುನಗುತ್ತಾ ಇರು" ಎಂದು ರಕ್ಷಿತಾ ಪ್ರೇಮ್‌ ದರ್ಶನ್‌ಗೆ ಭಾವುಕರಾಗಿ ಹುಟ್ಟುಹಬ್ಬದ ಶುಭಾಶಯ ತಿಳಿಸಿದ್ದಾರೆ.

ಇನ್ನೊಂದೆಡೆ ದರ್ಶನ್‌ ಅಭಿಮಾನಿಗಳು ಸಮಾಜಕ್ಕೆ ಉಪಕಾರವಾಗುವಂತಹ ಹಲವು ಕೆಲಸಗಳಲ್ಲಿ ತೊಡಗಿದ್ದಾರೆ. ದರ್ಶನ್‌ಗೆ ವಿಷಸ್‌ ಹೇಳಲು ಬಂದಾಗ ಆಹಾರ ಸಾಮಾಗ್ರಿಗಳನ್ನು ತಂದು ನೀಡಿದ್ದಾರೆ. ಬಡವರಿಗೆ ಉಪಕಾರವಾಗುವಂತಹ ಕೆಲಸಗಳಿಗೆ ನೆರವಾಗಿದ್ದಾರೆ.

ಕನ್ನಡ ಚಿತ್ರರಂಗದ ಹಲವು ನಟನಟಿಯರು ದರ್ಶನ್‌ಗೆ ಶುಭ ಹಾರೈಸಿದ್ದಾರೆ. ಹಲವು ಆತ್ಮೀಯರು ದರ್ಶನ್‌ ಮನೆಗೆ ಹೋಗಿ ವಿಷ್‌ ಮಾಡಿದ್ದಾರೆ. ಅಭಿಷೇಕ್ ಅಂಬರೀಷ್, ಧನ್ವೀರ್, ನಿರ್ದೇಶಕ ಮಹೇಶ್ ಕುಮಾರ್ ಸೇರಿದಂತೆ ದರ್ಶನ್‌ ಆತ್ಮೀಯರು ದಚ್ಚು ಜತೆಯಲ್ಲಿಯೇ ಇದ್ದು ಬರ್ತ್‌ಡೇ ಸೆಲೆಬ್ರೆಷನ್‌ ಮಾಡಿದ್ದಾರೆ. ಇದೇ ಸಮಯದಲ್ಲಿ ಹಲವು ರಾಜಕಾರಣಿಗಳೂ ದರ್ಶನ್‌ಗೆ ಬರ್ತ್‌ಡೇ ಶುಭಾಶಯ ತಿಳಿಸಿದ್ದಾರೆ.

ಪ್ರೀತಿಯ ಸಹೋದರನಿಗೆ ಜನುಮ ದಿನದ ಶುಭಾಶಯಗಳು. ಎಲ್ಲಾ ಸವಾಲುಗಳನ್ನು ಎದುರಿಸುವ ಶಕ್ತಿ, ಸಂತೋಷ, ಅರೋಗ್ಯ, ಯಶಸ್ಸು. . ಇವೆಲ್ಲವನ್ನು ಡಬಲ್‌ ಕೊಟ್ಟು ಕಾಪಾಡಲಿ. ಮುಖ್ಯವಾಗಿ ನಿಮ್ಮ ಹಾಗೂ ನಿಮ್ಮ ಸೆಲೆಬ್ರಿಟಿಸ್ ಮಧ್ಯ ಇರುವ ಪ್ರೀತಿ ನೂರಾರು ಕಾಲ ಹೀಗೇ ಇರಲಿ ಎಂದು ನಟಿ ಶೃತಿ ಶುಭಾಶಯ ಹೇಳಿದ್ದಾರೆ.

ಕೋಟ್ಯಂತರ ಅಭಿಮಾನಿಗಳ ನೆಚ್ಚಿನ ನಟ, ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರಿಗೆ ಜನ್ಮದಿನದ ಹಾರ್ದಿಕ ಶುಭಾಶಯಗಳು. ದೇವರು ತಮಗೆ ಉತ್ತಮ ಆಯುರಾರೋಗ್ಯ, ಸುಖ, ನೆಮ್ಮದಿ ನೀಡಲಿ ಎಂದು ಹಾರೈಸುತ್ತೇನೆ ಎಂದು ಕರ್ನಾಟಕದ ಮಾಜಿ ಗೃಹ ಸಚಿವ ಅರಗ ಜ್ಞಾನೇಂದ್ರ ಟ್ವೀಟ್‌ ಮಾಡಿದ್ದಾರೆ.

"ಚಂದನವನದ ತೂಗುದೀಪ, ಕನ್ನಡಿಗರ ನೆಚ್ಚಿನ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರಿಗೆ ಹುಟ್ಟುಹಬ್ಬದ ಹಾರ್ದಿಕ ಶುಭಕಾಮನೆಗಳು. ತಾಯಿ ಚಾಮುಂಡೇಶ್ವರಿ ತಮಗೆ ದೀರ್ಘಾಯುಷ್ಯ, ಉತ್ತಮ ಆರೋಗ್ಯ ನೀಡಿ ಹರಸಲಿ, ಕನ್ನಡಾಂಬೆಯ ಕಲಾಸೇವೆಯಲ್ಲಿ ಇನಷ್ಟು ಯಶಸ್ಸು, ಕೀರ್ತಿ ತಮ್ಮದಾಗಲಿ ಎಂದು ಹಾರೈಸುವೆ" ಎಂದು ರಾಜ್ಯದ ಮಾಜಿ ಆರೋಗ್ಯ ಸಚಿವ ಡಾ. ಕೆ. ಸುಧಾಕರ್‌ ಟ್ವೀಟ್‌ ಮಾಡಿದ್ದಾರೆ.

ದರ್ಶನ್‌ಗೆ ಆತ್ಮೀಯರ ಮತ್ತು ಅಭಿಮಾನಿಗಳ ವಿಷಸ್‌ನ ಕೆಲವು ಸ್ಯಾಂಪಲ್‌ಗಳು

ಕಾಟೇರ ಸಿನಿಮಾ ಯಶಸ್ಸಿನ ಬಳಿಕ ದರ್ಶನ್‌ ಅಭಿಮಾನಿಗಳ ಸಂಭ್ರಮ ಹೆಚ್ಚಾಗಿದೆ. ದರ್ಶನ್‌ ಹುಟ್ಟುಹಬ್ಬದಂದೇ ಡೆವಿಲ್‌ ದಿ ಹೀರೋ ಸಿನಿಮಾದ ಫಸ್ಟ್‌ ಲುಕ್‌ ಟೀಸರ್‌ ಕೂಡ ಬಿಡುಗಡೆಯಾಗಿದೆ. ಚಾಲೆಂಜಿಂಗ್‌ ಸ್ಟಾರ್‌ ದರ್ಶನ್‌ ಸ್ಯಾಂಡಲ್‌ವುಡ್‌ಗೆ ಆಗಮಿಸಿ 25 ವರ್ಷಗಳಾಗಿವೆ. ಇದೇ ಕಾರಣಕ್ಕೆ ನಾಳೆ (ಫೆಬ್ರವರಿ 17)ರಂದು ದರ್ಶನ್‌ ಬೆಳ್ಳಿಹಬ್ಬ/ ದರ್ಶನ್‌ ರಜತ ಮಹೋತ್ಸವ/ ದರ್ಶನ್‌ ಡಿ-15 ಹಬ್ಬ ನಡೆಯಲಿದೆ.

IPL_Entry_Point