ಕನ್ನಡ ಸುದ್ದಿ  /  ಮನರಂಜನೆ  /  Kaatera Day 4 Collection: ಬಾಕ್ಸ್‌ಆಫೀಸ್‌ನಲ್ಲಿ ನಾಲ್ಕನೇ ದಿನವೂ ‘ಕಾಟೇರ’ ಸುನಾಮಿ! ಒಟ್ಟಾರೆ ಕಲೆಕ್ಷನ್‌ ಎಷ್ಟಾಯ್ತು?

Kaatera Day 4 Collection: ಬಾಕ್ಸ್‌ಆಫೀಸ್‌ನಲ್ಲಿ ನಾಲ್ಕನೇ ದಿನವೂ ‘ಕಾಟೇರ’ ಸುನಾಮಿ! ಒಟ್ಟಾರೆ ಕಲೆಕ್ಷನ್‌ ಎಷ್ಟಾಯ್ತು?

ದರ್ಶನ್‌ ನಟನೆಯ ಕಾಟೇರ ಸಿನಿಮಾ ಬಾಕ್ಸ್‌ ಆಫೀಸ್‌ನಲ್ಲಿ ಅಕ್ಷರಶಃ ಸುನಾಮಿ ಎಬ್ಬಿಸುತ್ತಿದೆ. ಬಿಡುಗಡೆಯಾದ ಕೇವಲ ನಾಲ್ಕೇ ದಿನಗಳಲ್ಲಿ ದಾಖಲೆಯ ಮೊತ್ತವನ್ನೇ ಬಾಚಿಕೊಂಡಿದೆ. ಹಾಗಾದರೆ ನಾಲ್ಕನೇ ದಿನದ ಗಳಿಕೆ ಎಷ್ಟು? ಇಲ್ಲಿದೆ ಉತ್ತರ

Kaatera Day 4 Collection: ಬಾಕ್ಸ್‌ಆಫೀಸ್‌ನಲ್ಲಿ ನಾಲ್ಕನೇ ದಿನವೂ ‘ಕಾಟೇರ’ ಸುನಾಮಿ! ಒಟ್ಟಾರೆ ಕಲೆಕ್ಷನ್‌ ಎಷ್ಟಾಯ್ತು?
Kaatera Day 4 Collection: ಬಾಕ್ಸ್‌ಆಫೀಸ್‌ನಲ್ಲಿ ನಾಲ್ಕನೇ ದಿನವೂ ‘ಕಾಟೇರ’ ಸುನಾಮಿ! ಒಟ್ಟಾರೆ ಕಲೆಕ್ಷನ್‌ ಎಷ್ಟಾಯ್ತು?

Kaatera Day 4 Collection: ಚಾಲೆಂಜಿಂಗ್‌ ಸ್ಟಾರ್‌ ದರ್ಶನ್‌ ನಾಯಕನಾಗಿ ನಟಿಸಿದ ಕಾಟೇರ ಸಿನಿಮಾ ಶುಕ್ರವಾರವಷ್ಟೇ ಬಿಡುಗಡೆಯಾಗಿ, ಎಲ್ಲೆಡೆಯಿಂದ ಮೆಚ್ಚುಗೆಯನ್ನೇ ಪಡೆಯುತ್ತಿದೆ. ಬಾಯಿ ಮಾತಿನ ಪ್ರಚಾರದಿಂದ ಹೆಚ್ಚೆಚ್ಚು ನೋಡುಗರನ್ನು ಚಿತ್ರಮಂದಿರಕ್ಕೆ ಕರೆತರುತ್ತಿದೆ ಈ ಸಿನಿಮಾ. ಮೊದಲ ದಿನವೇ ದಾಖಲೆಯ 19.79 ಕೋಟಿ ಕಲೆಕ್ಷನ್‌ ಮಾಡಿ, ಮತ್ತೆ ಬಾಕ್ಸ್‌ ಆಫೀಸ್‌ ಸುಲ್ತಾನ ಎನಿಸಿಕೊಂಡಿದ್ದರು ದರ್ಶನ್‌. ಮೂರು ದಿನಗಳಲ್ಲಿ 58 ಕೋಟಿ ಬಾಚಿಕೊಂಡಿದ್ದ ಈ ಸಿನಿಮಾ, ಇದೀಗ ನಾಲ್ಕನೇ ದಿನವೂ ತನ್ನ ಆರ್ಭಟ ಮುಂದುವರಿಸಿದ್ದಾನೆ.

ಟ್ರೆಂಡಿಂಗ್​ ಸುದ್ದಿ

ತರುಣ್‌ ಸುಧೀರ್‌ ನಿರ್ದೇಶನದಲ್ಲಿ ಮೂಡಿಬಂದಿರುವ ಕಾಟೇರ ಚಿತ್ರವನ್ನು ಸದ್ಯ ಕರ್ನಾಟಕದಲ್ಲಿ ಮಾತ್ರ ಬಿಡುಗಡೆ ಮಾಡಲಾಗಿದೆ. ಮಧ್ಯರಾತ್ರಿಯಿಂದಲೇ ಪ್ರದರ್ಶನ ಆರಂಭಿಸಿದ್ದ ಈ ಸಿನಿಮಾ, ರಾಜ್ಯದ ಹಲವೆಡೆ ಇಂದಿಗೂ ಹೌಸ್‌ಫುಲ್‌ ಪ್ರದರ್ಶನ ಮುಂದುವರಿಸಿದೆ. ಬಹುತೇಕ ಕಡೆಗಳಲ್ಲಿ ಮುಂಗಡ ಟಿಕೆಟ್‌ ಬುಕಿಂಗ್‌ ಸಹ ಕ್ಲೋಸ್‌ ಆಗಿತ್ತು. ಆ ಮಟ್ಟಿಗಿನ ಯಶಸ್ಸು ಪಡೆದುಕೊಂಡಿದೆ ಕಾಟೇರ. ಇದೀಗ ನಾಲ್ಕನೇ ದಿನವೂ ಸ್ಕ್ರೀನ್‌ಗಳನ್ನು ಹೆಚ್ಚಿಸಿಕೊಳ್ಳುವುದರ ಜತೆಗೆ ಕಲೆಕ್ಷನ್‌ನಲ್ಲೂ ಏರಿಕೆ ಕಂಡಿದೆ.

ನಾಲ್ಕನೇ ದಿನದ ಗಳಿಕೆ ಎಷ್ಟು?

ಬಿಡುಗಡೆಯಾದ ಮೊದಲ ದಿನ ಶುಕ್ರವಾರ ದಾಖಲೆಯ 19.79 ಕೋಟಿ ಗಳಿಕೆ ಕಂಡ ಕಾಟೇರ, ಎರಡನೇ ದಿನ 17.35 ಕೋಟಿ ಬಾಚಿಕೊಂಡಿತ್ತು. ಅದಾದ ಮೇಲೆ ಮೂರನೇ ದಿನ 20.94 ಕೋಟಿ ಬಾಚಿಕೊಂಡು ಮೂರೇ ದಿನದಲ್ಲಿ 58.8 ಕೋಟಿ ಗಳಿಕೆ ಕಂಡಿತ್ತು. ಇದೀಗ ನಾಲ್ಕನೇ ದಿನವಾಸ ಸೋಮವಾರ ಕಾಟೇರನ ಬೊಕ್ಕಸಕ್ಕೆ ಹಣದ ಹೊಳೆಯೇ ಹರಿದು ಬಂದಿದೆ. ಬರೋಬ್ಬರಿ 18.26 ಕೋಟಿ ಗಳಿಸುವ ಮೂಲಕ ಕೇವಲ ನಾಲ್ಕೇ ದಿನದಲ್ಲಿ 77.6 ಕೋಟಿ ಬಾಕ್ಸ್‌ ಆಫೀಸ್‌ ಗಳಿಕೆ ಮಾಡಿದೆ ಕಾಟೇರ ಸಿನಿಮಾ. ಈ ವಿಚಾರವನ್ನು ಸ್ವತಃ ಚಿತ್ರತಂಡವೇ ಸೋಷಿಯಲ್‌ ಮೀಡಿಯಾದಲ್ಲಿ ಪೋಸ್ಟ್‌ ಹಂಚಿಕೊಳ್ಳುವ ಮೂಲಕ ಖಚಿತಪಡಿಸಿದೆ. ಕನ್ನಡ ಚಿತ್ರರಂಗದಲ್ಲೇ ಮೊಟ್ಟ ಮೊದಲ ಬಾರಿಗೆ 4 ದಿನಗಳಲ್ಲಿ 75 ಕೋಟಿ ಕ್ಲಬ್ ಸೇರಿದ ಮೊದಲ ನಾನ್ ಪ್ಯಾನ್ ಇಂಡಿಯಾ ಸಿನಿಮಾ ನಮ್ಮ ಕಾಟೇರ ಎಂದೂ ಹೇಳಿದೆ.

ಸೆಲೆಬ್ರಿಟಿಸ್‌ಗೆ ದರ್ಶನ್‌ ಧನ್ಯವಾದ

ರಾಜ್ಯಾದ್ಯಂತ ಎಲ್ಲೆಡೆಯಿಂದ ಸಿನಿಮಾಕ್ಕೆ ಮೆಚ್ಚುಗೆ ವ್ಯಕ್ತವಾಗುತ್ತಿರುವ ಬೆನ್ನಲ್ಲೇ, ನಟ ದರ್ಶನ್‌ ಸಿನಿಮಾ ಗೆಲ್ಲಿಸಿದ ಅಭಿಮಾನಿಗಳಿಗೆ ಧನ್ಯವಾದ ಅರ್ಪಿಸಿದ್ದರು. "ಏನೆಂದು ನಾ ಹೇಳಲಿ, ನಿಮ್ಮಯ ಪ್ರೀತಿ- ಆಶೀರ್ವಾದಕ್ಕೆ ಕೊನೆಯಲ್ಲಿ! ಧನ್ಯೋಸ್ಮಿ ಸೆಲೆಬ್ರಿಟಿಸ್! ಹೃದಯಪೂರ್ವಕ ಧನ್ಯವಾದಗಳು ಕರ್ನಾಟಕ. ಈ ಪ್ರೀತಿಯ ಚಪ್ಪಾಳೆ ನಮ್ಮ ಕಾಟೇರ ಚಿತ್ರತಂಡದ ಮನತುಂಬಿದೆ" ಎಂದು X ವೇದಿಕೆಯಲ್ಲಿ ಬರೆದುಕೊಂಡಿದ್ದಾರೆ.

ಕಾಟೇರ ಚಿತ್ರದ ಕಥೆ ಏನು?

ಇದು 1974ರಲ್ಲಿ ನಡೆಯುವ ಕಥೆ. ಭೀಮನಹಳ್ಳಿಯಲ್ಲಿ ಕುಲುಮೆ ಕೆಲಸ ಮಾಡುವ ಕಟ್ಟುಮಸ್ತು ದೇಹದ ಯುವಕ ಕಾಟೇರ. ಆತನಿಗೆ ತನ್ನ ಕೆಲಸವೇ ದೈವ. ದುಡಿಮೆನೇ ಆತನ ಮನೆದೇವ್ರು. ಇಂತ ಭೀಮನಹಳ್ಳಿಯಲ್ಲಿ ಜಮಿನ್ದಾರಿಕೆ ಪದ್ಧತಿ ಚಾಲ್ತಿಯಲ್ಲಿರುತ್ತದೆ. ಕೃಷಿ ಮಾಡೋ ಕೃಷಿಕರು ಒಂದೆಡೆಯಾದರೆ, ಅವರ ಮೇಲೆ ಕುಳಿತ ಉಳ್ಳವರ ದಬ್ಬಾಳಿಕೆ ಮತ್ತೊಂದು ಕಡೆ. ಕಷ್ಟಪಟ್ಟು ಬೆಳೆದ ಬೆಳೆ ಕೈ ಸೇರದೆ, ಜಮಿನ್ದಾರನ ಹೊಟ್ಟೆ ಸೇರುತ್ತಿರುತ್ತದೆ. ಈ ಹೋರಾಟಕ್ಕೆ ಧುಮುಕುವ ಕಥಾನಾಯಕ ಕಾಟೇರ, ಆ ಸರ್ವಾಧಿಕಾರಿತನವನ್ನು ಹೇಗೆ ಮಟ್ಟ ಹಾಕುತ್ತಾನೆ ಎಂಬುದೇ ಕಾಟೇರನ ಒನ್‌ ಲೈನ್‌ ಸ್ಟೋರಿ.

IPL_Entry_Point