ಕನ್ನಡ ಸುದ್ದಿ  /  ಮನರಂಜನೆ  /  Kaatera Day 9 Collection: ಮುಂದುವರೆದ ದರ್ಶನ್‌ ಕಾಟೇರ ಅಬ್ಬರ; 9 ದಿನಗಳಲ್ಲಿ ಬಾಕ್ಸ್‌ ಆಫೀಸ್‌ ರಾಜನಾಗಿ ಮೆರೆದ ಕನ್ನಡ ಸಿನಿಮಾ

Kaatera Day 9 Collection: ಮುಂದುವರೆದ ದರ್ಶನ್‌ ಕಾಟೇರ ಅಬ್ಬರ; 9 ದಿನಗಳಲ್ಲಿ ಬಾಕ್ಸ್‌ ಆಫೀಸ್‌ ರಾಜನಾಗಿ ಮೆರೆದ ಕನ್ನಡ ಸಿನಿಮಾ

Kaatera Box Office Collection Day 9: ಚಾಲೆಂಜಿಂಗ್‌ ಸ್ಟಾರ್‌ ದರ್ಶನ್‌ ಮತ್ತು ಆರಾಧನಾ ರಾಮ್‌ ನಟನೆಯ ಕಾಟೇರ ಸಿನಿಮಾ ಶನಿವಾರವೂ ಬಾಕ್ಸ್‌ ಆಫೀಸ್‌ನಲ್ಲಿ ಭರ್ಜರಿ ಗಳಿಕೆ ಮಾಡಿದೆ. ಕಾಟೇರ ಸಿನಿಮಾ 9ನೇ ದಿನವೂ ಹಲವು ಕೋಟಿ ಗಳಿಕೆ ಮಾಡಿದೆ.

ಕಾಟೇರ ಬಾಕ್ಸ್‌ ಆಫೀಸ್‌ ಕಲೆಕ್ಷನ್‌
ಕಾಟೇರ ಬಾಕ್ಸ್‌ ಆಫೀಸ್‌ ಕಲೆಕ್ಷನ್‌

ಡಿಸೆಂಬರ್‌ 29ರಂದು ಬಿಡುಗಡೆಯಾದ ಕನ್ನಡ ಚಲನಚಿತ್ರ ಕಾಟೇರ ಬಾಕ್ಸ್‌ ಆಫೀಸ್‌ ಕೊಳ್ಳೆ ಹೊಡೆಯುವುದನ್ನು ಮುಂದುವರೆದಿದೆ. ವಾರಾಂತ್ಯ, ವಾರದ ನಡುವಿನ ದಿನಗಳ ನಡುವೆ ಹೆಚ್ಚಿನ ವ್ಯತ್ಯಾಸ ಇಲ್ಲದೆ ಬಾಕ್ಸ್‌ ಆಫೀಸ್‌ನಲ್ಲಿ ಭರ್ಜರಿ ಗಳಿಕೆ ಮಾಡಿದೆ. ಕಾಟೇರ ಸಿನಿಮಾವು ಸಣ್ಣಪುಟ್ಟ ಸಿನಿಮಾ ಥಿಯೇಟರ್‌ಗಳಿಂದ ಹಿಡಿದು ಮಲ್ಟಿಫ್ಲೆಕ್ಸ್‌ವರೆಗೆ ವಿವಿಧ ಪರದೆಗಳಲ್ಲಿ ತೆರೆ ಕಾಣುತ್ತಿರುವುದರಿಂದ ಕಾಟೇರ ಬಾಕ್ಸ್‌ ಆಫೀಸ್‌ ರಿಪೋರ್ಟ್‌ನ ಸಮರ್ಪಕ ವರದಿ ದೊರಕುತ್ತಿಲ್ಲ. ಸಚ್‌ನಿಲ್ಕ್‌.ಕಾಂ ತಾಣವು ಬುಕ್‌ ಮೈ ಶೋ ಇತ್ಯಾದಿ ಆನ್‌ಲೈನ್‌ ಮುಂಗಡ ಬುಕ್ಕಿಂಗ್‌ ಆಧರಿತ ಲೆಕ್ಕ ಪ್ರತಿದಿನ ಬಿಡುಗಡೆ ಮಾಡುತ್ತದೆ. ಇದೇ ಸಮಯದಲ್ಲಿ ಚಿತ್ರತಂಡದ ಮೂಲಗಳು ಪ್ರತಿದಿನದ ಅಂದಾಜು ಲೆಕ್ಕವನ್ನೂ ಪ್ರಕಟಿಸುತ್ತವೆ.

ಟ್ರೆಂಡಿಂಗ್​ ಸುದ್ದಿ

ಕಾಟೇರ ಬಾಕ್ಸ್‌ ಆಫೀಸ್‌ ವರದಿ: ದಿನ 9

ಕಾಟೇರ ಕನ್ನಡ ಸಿನಿಮಾವು ಶನಿವಾರ 6.4 ಕೋಟಿ ರೂಪಾಯಿ ಗಳಿಕೆ ಮಾಡಿದೆ ಎಂದು ವರದಿಗಳು ತಿಳಿಸಿವೆ. ಚಿತ್ರತಂಡದಿಂದ ಅಧಿಕೃತ ಮಾಹಿತಿ ಇನ್ನಷ್ಟೇ ಬರಬೇಕಿದೆ. ಈಗಾಗಲೇ ಕಾಟೇರ ಕಲೆಕ್ಷನ್‌ 100 ಕೋಟಿ ರೂಪಾಯಿಗೂ ಹೆಚ್ಚಾಗಿದೆ. ಕಾಟೇರ ಸಿನಿಮಾ ಕರ್ನಾಟಕ ಮಾತ್ರವಲ್ಲದೆ ಭಾರತದ ವಿವಿಧ ಚಿತ್ರಮಂದಿರಗಳಲ್ಲಿ ಪ್ರದರ್ಶನಗೊಳ್ಳುತ್ತಿದೆ. ಭಾರತದ ಹೊರಗೆ ಒಮನ್‌ನಲ್ಲೂ ಚಿತ್ರ ಬಿಡುಗಡೆಯಾಗಿದೆ. ಈ ಮೂಲಕ ಅನಿವಾಸಿ ಭಾರತೀಯರೂ ಕಾಟೇರ ಸಿನಿಮಾವನ್ನು ಕಣ್ತುಂಬಿಕೊಂಡಿದ್ದಾರೆ.

ಕಾಟೇರದ ಬಾಕ್ಸ್‌ ಆಫೀಸ್‌ ಕಲೆಕ್ಷನ್‌ನ ಕಳೆದೆರಡು ದಿನದ ಸಮರ್ಪಕ ಲೆಕ್ಕ ಇನ್ನೂ ಹೊರಬಿದ್ದಿಲ್ಲ. ಬುಕ್‌ ಮೈ ಶೋ ಮುಂತಾದ ಆನ್‌ಲೈನ್‌ ತಾಣಗಳ ಮುಂಗಡ ಬುಕ್ಕಿಂಗ್‌ ಆಧರಿಸಿದ ಲೆಕ್ಕ ಕಡಿಮೆ ಇರುತ್ತದೆ. ಯಾಕೆಂದರೆ, ಆನ್‌ಲೈನ್‌ ಬುಕ್ಕಿಂಗ್‌ ಇಲ್ಲದೆ ಕಾಟೇರ ಸಿನಿಮಾವನ್ನು ಸಾಕಷ್ಟು ಜನರು ನೋಡಿರುತ್ತಾರೆ. ಸಚ್‌ನಿಲ್ಕ್‌.ಕಾಂ ಪ್ರಕಾರ ಕಾಟೇರ ಸಿನಿಮಾ ಬಿಡುಗಡೆಯಾದ 9 ದಿನ 3.25 ಕೋಟಿ ರೂಪಾಯಿ ಗಳಿಕೆ ಮಾಡಿದೆ. ಸಚ್‌ನಿಲ್ಕ್‌.ಕಾಂ ಪ್ರಕಾರ ಕಳೆದ ಒಂಬತ್ತು ದಿನಗಳಲ್ಲಿ ಒಟ್ಟಾರೆ ಬಾಕ್ಸ್‌ ಆಫೀಸ್‌ ಕಲೆಕ್ಷನ್‌ 50.42 ಕೋಟಿ ರೂಪಾಯಿ ದಾಟಿದೆ.

ಕಾಟೇರ ಬಾಕ್ಸ್‌ ಆಫೀಸ್‌ ರಿಪೋರ್ಟ್‌: ದಿನ 1ರಿಂದ 9

ಡಿಸೆಂಬರ್‌ 29ರಂದು ಕಾಟೇರ ಬಿಡುಗಡೆಯಾದ ಸಂದರ್ಭದಲ್ಲಿ ಇದು ದರ್ಶನ್‌ ಅವರ ಇತ್ತೀಚಿನ ಸಿನಿಮಾಗಳಂತೆ ಅಭಿಮಾನಿಗಳಿಗೆ ಮಾತ್ರ ಸೀಮಿತವಾಗುವ ಸಿನಿಮಾವ ಎಂಬ ಸಂದೇಹ ಎಲ್ಲರಲ್ಲಿಯೂ ಇತ್ತು. ಆದರೆ, ಒಂದೊಳ್ಳೆ ಕಥೆ, ಹೊಸ ಜಾನರ್‌ನ ಕಾಟೇರ ನಂತರ ಇತಿಹಾಸ ಬರೆದಿತ್ತು. ಕನ್ನಡ ನೆಲದ ಸಿನಿಮಾ ಬಾಕ್ಸ್‌ ಆಫೀಸ್‌ನಲ್ಲೂ ಭರ್ಜರಿ ಗಳಿಕೆ ಮಾಡಿತ್ತು. ಥಿಯೇಟರ್‌ನಲ್ಲಿ ಟಿಕೆಟ್‌ ಸಿಗುತ್ತಿಲ್ಲ ಎಂಬ ಮಾತುಗಳು ಕೇಳಿಬಂದವು. ಕೇವಲ ಕರ್ನಾಟಕದಲ್ಲಿ ಮಾತ್ರ ಬಿಡುಗಡೆಯಾದ ಚಿತ್ರ ಇದೀಗ ಹೊರರಾಜ್ಯಗಳಲ್ಲಿ, ಹೊರದೇಶಗಳಲ್ಲಿಯೂ ಸದ್ದು ಮಾಡುತ್ತಿದೆ.

ಕಾಟೇರ ಬಿಡುಗಡೆಯಾದ ದಿನ ಕರ್ನಾಟಕದಲ್ಲಿ ಮಾತ್ರವೇ 19.79 ಕೋಟಿ ಗಳಿಸಿತ್ತು. ಎರಡನೇ ದಿನ (ಡಿ.30) 17.35 ಕೋಟಿ, ಮೂರನೇ ದಿನ (ಡಿ.31) 20.96 ಕೋಟಿ, ನಾಲ್ಕನೇ ದಿನವಾದ ಸೋಮವಾರ (ಜ. 1) 18.26 ಕೋಟಿ ಗಳಿಸಿತ್ತು. ಐದನೇ ದಿನ 9.24 ಕೋಟಿ, ಆರನೇ ದಿನ 9.78 ಕೋಟಿ, ಏಳನೇ ದಿನ 9.52 ಕೋಟಿ ಕಲೆಕ್ಷನ್‌ ಮಾಡಿ, ಕೇವಲ ಏಳೇ ದಿನದಲ್ಲಿ 104. 58 ಕೋಟಿ ಗಳಿಕೆ ಮಾಡಿತ್ತು. ಭರ್ತಿ ಒಂದು ವಾರದಲ್ಲಿ ನೂರರ ಗಡಿ ದಾಟಿ ಇತಿಹಾಸ ಬರೆದಿತ್ತು.

IPL_Entry_Point