ಕನ್ನಡ ಸುದ್ದಿ  /  Entertainment  /  Sandalwood News Kannada Actor Dwarakish Death Just 125cm Height But Acted Produced Directed Many Kannada Films Pcp

Actor Dwarakish: ಕನ್ನಡ ನಟ ದಿವಂಗತ ದ್ವಾರಕೀಶ್‌ ಹೈಟು ಎಷ್ಟು? ನೋಡಲು ವಾಮನ, ಸಾಧನೆಯಲ್ಲಿ ತ್ರಿವಿಕ್ರಮ

Kannada Actor Dwarakish: ಕನ್ನಡದ ಹಿರಿಯ ನಟ ನಿರ್ದೇಶಕ ನಿರ್ಮಾಪಕ ದ್ವಾರಕೀಶ್‌ (81) ಹೃದಯಾಘಾತದಿಂದ ನಿಧನರಾಗಿದ್ದಾರೆ. ಸುಮಾರು 4.1 ಅಡಿ ಎತ್ತರದ ದ್ವಾರಕೀಶ್‌ ಸಾಧನೆಯಲ್ಲಿ ಪ್ರಚಂಡ ಎನ್ನಬಹುದು. ದಿವಂಗತ ದ್ವಾರಕೀಶ್‌ ಅವರ ಸಾಧನೆಯ ಮೇಲೊಂದು ನೋಟ ಇಲ್ಲಿದೆ.

Actor Dwarakish: ಕನ್ನಡ ನಟ ದಿವಂಗತ ದ್ವಾರಕೀಶ್‌ ಹೈಟು ಎಷ್ಟು? ನೋಡಲು ವಾಮನ, ಸಾಧನೆಯಲ್ಲಿ ತಿವಿಕ್ರಮ
Actor Dwarakish: ಕನ್ನಡ ನಟ ದಿವಂಗತ ದ್ವಾರಕೀಶ್‌ ಹೈಟು ಎಷ್ಟು? ನೋಡಲು ವಾಮನ, ಸಾಧನೆಯಲ್ಲಿ ತಿವಿಕ್ರಮ

ಬೆಂಗಳೂರು: ಕನ್ನಡದ ಹಿರಿಯ ನಟ ನಿರ್ದೇಶಕ ನಿರ್ಮಾಪಕ ದ್ವಾರಕೀಶ್‌ (81) ಹೃದಯಾಘಾತದಿಂದ ನಿಧನರಾಗಿದ್ದಾರೆ. ಸಿನಿಮಾದಲ್ಲಿ ನಟಿಸಲು ಹೈಟು, ವೈಟು ಬೇಕು ಎಂದೆಲ್ಲ ಹೇಳುವವರಿಗೆ "ನಟನೆಗೆ ಬೇಕಾದದ್ದು ಪ್ರತಿಭೆ" ಎಂಬ ಸಂದೇಶವನ್ನು ನಟ ದ್ವಾರಕೀಶ್‌ ಬಿಟ್ಟು ಹೋಗಿದ್ದಾರೆ. ದ್ವಾರಕೀಶ್‌ ನಿರ್ಮಾಣ ಮಾಡಿರುವ ಸಿನಿಮಾಗಳು ಯಾವುವು? ಇವರ ನಿರ್ದೇಶನದ ಚಲನಚಿತ್ರಗಳು ಯಾವುವು? ಯಾವ ಸಿನಿಮಾಗಳಲ್ಲಿ ಹೀರೋ ಆಗಿ ನಟಿಸಿದ್ದಾರೆ? ಯಾವೆಲ್ಲ ಸಿನಿಮಾದಲ್ಲಿ ಸಹನಟನಾಗಿ ಮಿಂಚಿದ್ದಾರೆ ಎಂಬೆಲ್ಲ ಪ್ರಶ್ನೆಗಳು ಸಿನಿಮಾ ಆಸಕ್ತರಲ್ಲಿ ಇರಬಹುದು. ಇದೇ ಸಮಯದಲ್ಲಿ ದ್ವಾರಕೀಶ್‌ ಎಷ್ಟು ಎತ್ತರವಿದ್ದರು? ಇತ್ಯಾದಿ ಪ್ರಶ್ನೆಗಳಿಗೂ ಉತ್ತರ ಇಲ್ಲಿದೆ.

ನಟ ದ್ವಾರಕೀಶ್‌ ಎತ್ತರ ಎಷ್ಟು?

ಸ್ಯಾಂಡಲ್‌ವುಡ್‌ನ ಕುಳ್ಳಗಿನ ನಟರೆಂದರೆ ತಕ್ಷಣ ದ್ವಾರಕೀಶ್‌ ನೆನಪಿಗೆ ಬರುತ್ತಾರೆ. ಸಿನಿಮಾ ಹೀರೋ ಆಗಲು, ನಟ ಆಗಲು ಹೈಟು ಕೇವಲ ಅಂಕಿ ಅಷ್ಟೇ ಎಂದು ಇವರು ಸಾಧಿಸಿ ತೋರಿಸಿದರು. ಆನ್‌ಲೈನ್‌ನಲ್ಲಿ ಲಭ್ಯವಿರುವ ಮಾಹಿತಿಗಳ ಪ್ರಕಾರ ನಟ, ನಿರ್ಮಾಪಕ, ನಿರ್ದೇಶಕ ದ್ವಾರಕೀಶ್‌ 4.1 ಅಡಿ ಎತ್ತರವಿದ್ದರು. ಅಂದರೆ 125 ಸೆಂಟಿಮೀಟರ್‌ ಎತ್ತರ ಇದ್ದರು. ಕೇವಲ 4.1 ಅಡಿ ಎತ್ತರವಿದ್ದರೂ 85ಕ್ಕೂ ಹೆಚ್ಚು ಸಿನಿಮಾಗಳಲ್ಲಿ ನಟಿಸಿದ್ದರು. 10ಕ್ಕೂ ಹೆಚ್ಚು ಸಿನಿಮಾಗಳಲ್ಲಿ ಹೀರೋ ಆಗಿದ್ದರು. ಇವರು ಕೇವಲ ನಟನಲ್ಲ. ನಿರ್ದೇಶಕರು, ಚಲನಚಿತ್ರ ಸಂಭಾಷಣೆ ಬರಹಗಾರ, ನಿರ್ಮಾಪಕರಾಗಿಯೂ ಹೆಸರು ಮಾಡಿದ್ದರು.

ದ್ವಾರಕೀಶ್‌ ಪೂರ್ಣ ಹೆಸರು

ಇವರ ಮೂಲ ಹೆಸರು ಬುಂಗ್ಲೆ ಶರ್ಮಾ ರಾವ್‌ . ಸ್ಯಾಂಡಲ್‌ವುಡ್‌ನ ನಿರ್ಮಾಪಕ ಮತ್ತು ನಿರ್ದೇಶಕರಾಗಿದ್ದ ಸಿವಿ ಶಿವಶಂಕರ್‌ ಅವರು ಇವರಿಗೆ ದ್ವಾರಕೀಶ್‌ ಎಂದು ಹೆಸರಿಟ್ಟಿದ್ದರು. ಸ್ಯಾಂಡಲ್‌ವುಡ್‌ನ ಪ್ರಚಂಡ ಕುಳ್ಳ ದ್ವಾರಕೀಶ್‌ ಅವರು ಮೈಸೂರಿನ ಇಟ್ಟಿಗೆಗೂಡುವಿನಲ್ಲಿ 1942ರ ಆಗಸ್ಟ್‌ 19ರಂದು ಜನಿಸಿದರು. ಆರಂಭಿಕ ಶಿಕ್ಷಣವನ್ನು ಶಾರದಾ ವಿಲಾಸ್‌ ಮತ್ತು ಬಾನುಮಯ್ಯ ಸ್ಕೂಲ್‌ನಲ್ಲಿ ಪಡೆದರು. ಸಿಪಿಸಿ ಪಾಲಿಟೆಕ್ನಿಕ್‌ನಲ್ಲಿ ಮೆಕ್ಯಾನಿಕಲ್‌ ಎಂಜಿನಿಯರಿಂಗ್‌ನಲ್ಲಿ ಡಿಪ್ಲೊಮಾ ಪಡೆದರು. ಶಿಕ್ಷಣ ಪೂರ್ಣಗೊಂಡ ಬಳಿಕ ಇವರ ಸಹೋದರ ವಾಹನ ಬಿಡಿಭಾಗಗಳ ಬಿಸ್ನೆಸ್‌ ಆರಂಭಿಸಿದರು. ಭಾರತ್‌ ಆಟೋ ಸ್ಪೇರ್‌ ಹೆಸರಿನ ಶಾಪ್‌ ಅನ್ನು ಮೈಸೂರಿನಲ್ಲಿ ತೆರೆದಿದ್ದರು. ಮಾವ ಹುಣಸೂರು ಕೃಷ್ಣಮೂರ್ತಿ ನೆರವಿನಿಂದ ಸಿನಿಮಾರಂಗ ಪ್ರವೇಶಿಸಿದರು.

24ನೇ ವರ್ಷದಲ್ಲಿ ಪ್ರೊಡ್ಯುಸರ್‌

ದಿವಂಗತ ದ್ವಾರಕೀಶ್‌ ಅವರು ತನ್ನ 24ನೇ ವಯಸ್ಸಿನಲ್ಲಿ ನಿರ್ಮಾಪಕರಾದರು. 1966ರಲ್ಲಿ ಇವರು ಮಮತೆಯ ಬಂಧನ ಎಂಬ ಸಿನಿಮಾದ ಸಹ ನಿರ್ಮಾಪಕರಾದರು. ತುಂಬಾ ಫಿಕ್ಚರ್ಸ್‌ನಡಿ ಈ ಸಿನಿಮಾ ತೆರೆಕಂಡಿತ್ತು. ಇದಾದ ಬಳಿಕ 1969ರಲ್ಲಿ ಡಾ. ರಾಜ್‌ಕುಮಾರ್‌ ಮತ್ತು ಭಾರತಿ ಪ್ರಮುಖ ಪಾತ್ರಗಳಲ್ಲಿ ನಟಿಸಿದ ಮೇಯರ್‌ ಮುತ್ತಣ್ಣ ಎಂಬ ಸಿನಿಮಾವನ್ನು ಸ್ವತಂತ್ರವಾಗಿ ನಿರ್ಮಾಣ ಮಾಡಿದರು. . ಡ್ಯಾನ್ಸ್‌ ರಾಜಾ ಡ್ಯಾನ್ಸ್‌, ನೀ ಬರೆದ ಕಾದಂಬರಿ, ಶೃತಿ, ಶೃತಿ ಹಾಕಿದ ಹೆಜ್ಜೆ, ರಾಯರು ಬಂದರು ಮಾವನ ಮನೆಗೆ, ಕಿಲಾಡಿಗಳು ಸೇರಿದಂತೆ ಹಲವು ಸಿನಿಮಾಗಳಿಗೆ ನಿರ್ದೇಶನ ಮಾಡಿದ್ದಾರೆ.

IPL_Entry_Point