ಹಿರಿಯ ನಟ ದ್ವಾರಕೀಶ್ ಇನ್ನಿಲ್ಲ; ವಿಷ್ಣುವರ್ಧನ್ - ದ್ವಾರಕೀಶ್‌ ಭಲೇ ಜೋಡಿಯ 5 ಸೂಪರ್ ಹಿಟ್ ಸಿನಿಮಾಗಳಿವು-sandalwood news actor dwarakish death dwarakish superhit movies with vishnuvardhan 5 slides uks ,ಫೋಟೋ ಗ್ಯಾಲರಿ ಸುದ್ದಿ
ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  ಹಿರಿಯ ನಟ ದ್ವಾರಕೀಶ್ ಇನ್ನಿಲ್ಲ; ವಿಷ್ಣುವರ್ಧನ್ - ದ್ವಾರಕೀಶ್‌ ಭಲೇ ಜೋಡಿಯ 5 ಸೂಪರ್ ಹಿಟ್ ಸಿನಿಮಾಗಳಿವು

ಹಿರಿಯ ನಟ ದ್ವಾರಕೀಶ್ ಇನ್ನಿಲ್ಲ; ವಿಷ್ಣುವರ್ಧನ್ - ದ್ವಾರಕೀಶ್‌ ಭಲೇ ಜೋಡಿಯ 5 ಸೂಪರ್ ಹಿಟ್ ಸಿನಿಮಾಗಳಿವು

ಚಂದನವನದ ಹಿರಿಯ ನಟ, ಕನ್ನಡ ಚಿತ್ರರಂಗದ ಮೊದಲ ಶೋಮ್ಯಾನ್‌ ದ್ವಾರಕೀಶ್ ಅವರು ಮಂಗಳವಾರ (ಏಪ್ರಿಲ್ 16) ಹೃದಯಾಘಾತಕ್ಕೆ ಒಳಗಾಗಿ ನಿಧನರಾದರು. ಅವರ ನೆನಪುಗಳು ಈಗ ಮುನ್ನೆಲೆಗೆ ಬಂದಿದ್ದು, ವಿಷ್ಣುವರ್ಧನ್ - ದ್ವಾರಕೀಶ್‌ ಭಲೇ ಜೋಡಿಯ 5 ಸೂಪರ್ ಹಿಟ್ ಸಿನಿಮಾಗಳ ಕಡೆಗೆ ಕಿರುನೋಟ ಇಲ್ಲಿದೆ.

ಕನ್ನಡ ಚಿತ್ರರಂಗದಲ್ಲಿ 70ರ ದಶಕದಲ್ಲಿ ಸದ್ದು ಮಾಡಿದ ಸಿನಿಮಾ ಕಿಟ್ಟು ಪುಟ್ಟು. ಇದರಲ್ಲಿ ವಿಷ್ಣುವರ್ಧನ್ ಮತ್ತು ದ್ವಾರಕೀಶ್ ಜೋಡಿ ಮಾಡಿದ ಮೋಡಿ ಇಂದಿಗೂ ಪದೇಪದೆ ನೆನಪಿಗೆ ಬರುವಂತೆ ಮಾಡುತ್ತದೆ. 1977ರಲ್ಲಿ ಬಿಡುಗಡೆಯಾದ ಈ ಚಿತ್ರದಲ್ಲಿ ವಿಷ್ಣುವರ್ಧನ್ ಕಿಟ್ಟು ಪಾತ್ರದಲ್ಲಿ, ದ್ವಾರಕೀಶ್ ಪುಟ್ಟು ಮತ್ತು ಕುಟ್ಟಿ ಎಂಬ ದ್ವಿಪಾತ್ರದಲ್ಲಿ ನಟಿಸಿದ್ದರು. ಮಂಜುಳಾ ಅವರು ನಾಯಕಿಯಾಗಿ ಇದರಲ್ಲಿ ಅಭಿನಯಿಸಿದ್ದರು. ತಮಿಳು ಚಿತ್ರದ ರಿಮೇಕ್ ಇದು. ಇದು ಸೂಪರ್ ಹಿಟ್ ಆಗಿತ್ತು. 
icon

(1 / 5)

ವಿಷ್ಣುವರ್ಧನ್ ಮತ್ತು ದ್ವಾರಕೀಶ್ ಜೋಡಿಯ ಇನ್ನೊಂದು ಸೂಪರ್ ಹಿಟ್ ಚಿತ್ರ ಇದು. 1981ರಲ್ಲಿ ಬಿಡುಗಡೆಯಾದ ಗುರು ಶಿಷ್ಯರು ಚಿತ್ರವನ್ನು ಭಾರ್ಗವ ನಿರ್ದೇಶನ ಮಾಡಿದ್ದರು. ವಿಷ್ಣುವರ್ಧನ್, ಮಂಜುಳಾ, ಜಯಮಾಲಿನಿ ಪ್ರಮುಖ ಪಾತ್ರದಲ್ಲಿ ನಟಿಸಿದ್ದರು. ದ್ವಾರಕೀಶ್ ಈ ಚಿತ್ರವನ್ನು ನಿರ್ಮಿಸಿ ನಟಿಸಿದ್ದರು. ಇದು ಕನ್ನಡದ ಅತ್ಯದ್ಭುತ ಹಾಸ್ಯ ಚಿತ್ರವಾಗಿ ಇಂದಿಗೂ ಪದೇಪದೆ ನೋಡುವಂತೆ ಮಾಡುತ್ತಿದೆ.
icon

(2 / 5)

ಕಿಲಾಡಿಗಳು ಸಿನಿಮಾ 1994ರಲ್ಲಿ ತೆರೆಕಂಡಿದ್ದು, ಇದನ್ನು ದ್ವಾರಕೀಶ್ ಅವರೇ ನಿರ್ದೇಶನ ನೀಡಿದ್ದರು. ವಿಷ್ಣುವರ್ಧನ್ ಹಾಗೂ ದ್ವಾರಕೀಶ್ ಇಬ್ಬರೂ ದ್ವಿಪಾತ್ರದಲ್ಲಿ ನಟಿಸಿದ್ದರು. ಸಿನಿಮಾದಲ್ಲಿ ಹರಿ (ದ್ವಾರಕೀಶ್) ಮತ್ತು ಕೃಷ್ಣ (ವಿಷ್ಣುವರ್ಧನ್)ನ ಪಾತ್ರದಲ್ಲಿ, ಮುಂದೆ ಅವರನ್ನೇ ಹೋಲುವ ಕಿಟ್ಟಪ್ಪ ಹಾಗೂ ಪುಟ್ಟಪ್ಪ ಎಂಬ ಪಾತ್ರದಲ್ಲಿ ಕಾಣಿಸಿಕೊಂಡಿದ್ದರು. ಇದು ಕೂಡ ಆ ಕಾಲದ ಸೂಪರ್‌ಹಿಟ್‌ ಸಿನಿಮಾಗಳ ಪೈಕಿ ಒಂದು. 
icon

(3 / 5)

'ಸಿಂಗಾಪುರದಲ್ಲಿ ರಾಜ ಕುಳ್ಳ' 1978ರಲ್ಲಿ ತೆರೆಕಂಡ ಸಿನಿಮಾ. ಇದಕ್ಕೆ ವಿದೇಶದಲ್ಲಿ ಚಿತ್ರೀಕರಣಗೊಂಡ ಮೊದಲ ಕನ್ನಡ ಸಿನಿಮಾ ಎಂಬ ಹೆಗ್ಗಳಿಕೆಯೂ ಇತ್ತು. ವಿಷ್ಣುವರ್ಧನ್, ದ್ವಾರಕೀಶ್ ಹಾಗೂ ಮಂಜುಳ ಮುಖ್ಯ ಪಾತ್ರದಲ್ಲಿ ಅಭಿನಯಿಸಿದ್ದರು. ಬಹಳ ಯಶಸ್ವಿ ಸಿನಿಮಾ ಇದಾಗಿತ್ತು.   
icon

(4 / 5)

ಕಳ್ಳ ಕುಳ್ಳ ಸಿನಿಮಾ 1975ರಲ್ಲಿ ತೆರೆಕಂಡಿತ್ತು. ಇದರಲ್ಲಿ ದ್ವಾರಕೀಶ್ ಮತ್ತು ವಿಷ್ಣುವರ್ಧನ್ ಸ್ನೇಹ, ಅಭಿನಯವನ್ನು ಇಂದಿಗೂ ಸಿನಿರಸಿಕರು ನೆನಪಿಸಿಕೊಳ್ಳುತ್ತಾರೆ. ಈ ಸಿನಿಮಾದ ಕಥೆ, ಹಾಡುಗಳು ಸೂಪರ್ ಹಿಟ್ ಆಗಿದ್ದವು. ಈ ಚಿತ್ರದಲ್ಲಿ ವಿಷ್ಣು ಅವರು ಮಹೇಶ್ ಎಂಬ ಕಳ್ಳನ ಪಾತ್ರದಲ್ಲಿ ಹಾಗೂ ದ್ವಾರಕೀಶ್ ಅವರು ರಮೇಶ್ ಎಂಬ ಕುಳ್ಳನ ಪಾತ್ರದಲ್ಲಿ ಮಿಂಚಿದ್ದರು.  
icon

(5 / 5)

ಇತರ ಗ್ಯಾಲರಿಗಳು