ಕನ್ನಡ ಸುದ್ದಿ  /  ಮನರಂಜನೆ  /  ಸ್ವ- ಲಾಭಕ್ಕಾಗಿ ಕಾವೇರಿ ಹೋರಾಟಕ್ಕೆ ಇಳಿದಿದೆಯೇ ಕನ್ನಡ ಚಿತ್ರರಂಗ? ನಟ ಚೇತನ್‌ ಅಹಿಂಸಾ ಮಾತಿನ ಮರ್ಮವೇನು?

ಸ್ವ- ಲಾಭಕ್ಕಾಗಿ ಕಾವೇರಿ ಹೋರಾಟಕ್ಕೆ ಇಳಿದಿದೆಯೇ ಕನ್ನಡ ಚಿತ್ರರಂಗ? ನಟ ಚೇತನ್‌ ಅಹಿಂಸಾ ಮಾತಿನ ಮರ್ಮವೇನು?

ನಟ, ಸಾಮಾಜಿಕ ಹೋರಾಟಗಾರ ಚೇತನ್‌ ಅಹಿಂಸಾ, ಕಾವೇರಿ ಹೋರಾಟದಲ್ಲಿ ಕನ್ನಡ ಚಿತ್ರರಂಗ ಭಾಗವಹಿಸಿದ್ದಕ್ಕೆ ತಮ್ಮ ಪ್ರತಿಕ್ರಿಯೆ ನೀಡಿದ್ದಾರೆ.

ಸ್ವ- ಲಾಭಕ್ಕಾಗಿ ಕಾವೇರಿ ಹೋರಾಟಕ್ಕಿಳಿದಿದೆಯೇ ಕನ್ನಡ ಚಿತ್ರರಂಗ? ನಟ ಚೇತನ್‌ ಅಹಿಂಸಾ ಮಾತಿನ ಮರ್ಮವೇನು
ಸ್ವ- ಲಾಭಕ್ಕಾಗಿ ಕಾವೇರಿ ಹೋರಾಟಕ್ಕಿಳಿದಿದೆಯೇ ಕನ್ನಡ ಚಿತ್ರರಂಗ? ನಟ ಚೇತನ್‌ ಅಹಿಂಸಾ ಮಾತಿನ ಮರ್ಮವೇನು

Chetan Ahimsa: ಕರುನಾಡಲ್ಲಿ ಕಾವೇರಿ ಕಾಳ್ಗಿಚ್ಚು ತೀವ್ರವಾಗಿದೆ. ಬೆಂಗಳೂರು ಬಂದ್‌ ಬಳಿಕ ಶುಕ್ರವಾರ ಕರ್ನಾಟಕ ಬಂದ್‌ ಆಗಿದೆ. ರಾಜ್ಯದ ಹಲವೆಡೆಗಳಿಂದ ಬಂದ್‌ಗೆ ಮಿಶ್ರಪ್ರತಿಕ್ರಿಯೆ ಸಿಕ್ಕರೆ, ಮಂಡ್ಯ, ಮೈಸೂರು, ಬೆಂಗಳೂರು ಸೇರಿ ದಕ್ಷಿಣ ಕರ್ನಾಟಕ ಭಾಗದಲ್ಲಿ ಕೊಂಚ ಬಿರುಸಾಗಿಯೇ ಸಾಗಿದೆ ಪ್ರತಿಭಟನೆ. ಕನ್ನಡ ಚಿತ್ರರಂಗದಿಂದಲೂ ಬಂದ್‌ಗೆ ಬೆಂಬಲ ಸಿಕ್ಕಿದ್ದು, ಸ್ಯಾಂಡಲ್‌ವುಡ್‌ ಸಿನಿಮಾ ಮಂದಿಯೂ ಹೋರಾಟದಲ್ಲಿ ಭಾಗವಹಿಸಿದ್ದಾರೆ. ಈ ಹೋರಾಟಕ್ಕೆ ನಮ್ಮೆಲ್ಲರ ಈ ಹಿಂದೆಯೂ ಇತ್ತು, ಈಗಲೂ ಇದೆ. ಮುಂದೆಯೂ ಇರಲಿದೆ ಎಂದು ಒಕ್ಕೊರಲಿನಿಂದ ಹೇಳಿಕೊಂಡಿದ್ದಾರೆ.

ಟ್ರೆಂಡಿಂಗ್​ ಸುದ್ದಿ

ಇದೀಗ ಸ್ಯಾಂಡಲ್‌ವುಡ್‌ ಸಿನಿಮಾ ಮಂದಿ ಕಾವೇರಿ ನದಿ ನೀರು ಹಂಚಿಕೆ ವಿಚಾರಕ್ಕೆ ಸಂಬಂಧಿಸಿದಂತೆ, ಹೋರಾಟಕ್ಕೆ ಧುಮುಕಿದ ಬೆನ್ನಲ್ಲೇ, ನಟ, ಸಾಮಾಜಿಕ ಹೋರಾಟಗಾರ ಚೇತನ್‌ ಅಹಿಂಸಾ ಪ್ರತಿಕ್ರಿಯೆ ನೀಡಿದ್ದಾರೆ. ಸೋಷಿಯಲ್‌ ಮೀಡಿಯಾಗಳಲ್ಲಿ ತಮ್ಮ ಹೇಳಿಕೆಯ ಮೂಲಕವೇ ವಿವಾದಕ್ಕೆ ಕಾರಣವಾಗುವ ಚೇತನ್‌, ಇದೀಗ ಸಿನಿಮಾದವರ ಹೋರಾಟವನ್ನು ಅಣಕ ಮಾಡಿದ್ದಾರೆ. ಇದು ಕೇವಲ ದೋಷಪೂರಿತ ಹೋರಾಟ ಎಂದು ನೇರವಾಗಿ ಟೀಕಿಸಿದ್ದಾರೆ ಚೇತನ್‌.

ರಾಜ್ಯ ರಾಜಕೀಯದ ಜತೆಗೆ ಪ್ರಸ್ತುತ ಆಗುಹೋಗುಗಳ ಬಗ್ಗೆ ತಮ್ಮ ಸೋಷಿಯಲ್‌ ಮೀಡಿಯಾ ಹ್ಯಾಂಡಲ್‌ಗಳಲ್ಲಿ ತಮ್ಮ ಅನಿಸಿಕೆ ಅಭಿಪ್ರಾಯ ಹಂಚಿಕೊಳ್ಳುತ್ತಲೇ ಬರುತ್ತಿರುವ ಚೇತನ್‌, ತಮಗನಿಸಿದ್ದನ್ನು ನೇರವಾಗಿ ಹೇಳಿ ಬಿಡುತ್ತಾರೆ. ಅಷ್ಟೇ ಅಲ್ಲದೆ, ಪರ ವಿರೋಧ ಚರ್ಚೆಗೂ ಒಗ್ಗರಣೆ ಹಾಕುತ್ತಿರುತ್ತಾರೆ. ಇದೀಗ ಒಂದು ಹೆಜ್ಜೆ ಮುಂದೆ ಹೋಗಿ, ಕನ್ನಡ ಸಿನಿಮಾ ನಟರ ಬಗ್ಗೆಯೇ ವಿವಾದಾತ್ಮಕ ಹೇಳಿಕೆ ನೀಡಿ ಮತ್ತೆ ಸದ್ದು ಮಾಡಿದ್ದಾರೆ. ಹಾಗಾದರೆ, ಚೇತನ್‌ ಹೇಳಿಕೆ ಏನು?

ಸ್ವ- ಲಾಭಕ್ಕಾಗಿಯೇ ಈ ಹೋರಾಟ?

ಕನ್ನಡ ಚಲನಚಿತ್ರೋದ್ಯಮ ನಮ್ಮೆಲ್ಲರಂತೆ, ಪ್ರತಿಭಟನೆ ಮಾಡುವ ಹಕ್ಕು ಮತ್ತು ಜವಾಬ್ದಾರಿಯನ್ನು ಹೊಂದಿದೆ.

ತಮಿಳುನಾಡಿಗೆ ಕಾವೇರಿ ನೀರು ಬೀಡದಂತೆ ಕನ್ನಡ ಚಿತ್ರರಂಗದ ಹಲವು ಮಂದಿ ಇಂದಿನ ಬಂದ್‌ಗೆ ಬೆಂಬಲ ಸೂಚಿಸಿದ್ದಾರೆ. ಇದು ನಿರಂಕುಶ ಮತ್ತು ಸ್ವಾರ್ಥದ ಬೇಡಿಕೆಯಾಗಿದೆ.

ವಿಪರ್ಯಾಸವೆಂದರೆ, ಕನ್ನಡ ಚಲನಚಿತ್ರೋದ್ಯಮ ಬೆಂಬಲಿಸುವ ಪ್ರತಿಭಟನೆಗಳು ಸಾಮಾನ್ಯವಾಗಿ ದೋಷಪೂರಿತ, ಸ್ವ- ಲಾಭದಾಯಕ ಬೇಡಿಕೆಗಳನ್ನು / ವಿಷಯಗಳನ್ನು ಹೊಂದಿರುತ್ತದೆ.

ಕನ್ನಡ ಚಲನಚಿತ್ರೋದ್ಯಮವೂ ಸಮಾಜದ ಸಮಸ್ಯೆಗಳನ್ನು ಚನ್ನಾಗಿ ಅಧ್ಯಯನ ಮಾಡಬೇಕು.

ನೇರವಾಗಿ ಟಾಂಗ್‌

ಈ ರೀತಿಯ ದೋಷಪೂರಿತ ಪ್ರತಿಭಟನೆಯಲ್ಲಿ ಭಾಗವಹಿಸುವ ಮೂಲಕ ಹೋರಾಟಕ್ಕಿಳಿದಿದ್ದಾರೆ ಎಂದು ಚೇತನ್‌ ಹೇಳಿಕೊಂಡಿದ್ದಾರೆ. ಕನ್ನಡ ಚಲನಚಿತ್ರೋದ್ಯಮ ನಮ್ಮೆಲ್ಲರಂತೆ, ಪ್ರತಿಭಟನೆ ಮಾಡುವ ಹಕ್ಕು ಮತ್ತು ಜವಾಬ್ದಾರಿಯನ್ನು ಹೊಂದಿದೆ. ತಮಿಳುನಾಡಿಗೆ ಕಾವೇರಿ ನೀರು ಬೀಡದಂತೆ ಕನ್ನಡ ಚಿತ್ರರಂಗದ ಹಲವು ಮಂದಿ ಇಂದಿನ ಬಂದ್‌ಗೆ ಬೆಂಬಲ ಸೂಚಿಸಿದ್ದಾರೆ. ಇದು ನಿರಂಕುಶ ಮತ್ತು ಸ್ವಾರ್ಥದ ಬೇಡಿಕೆಯಾಗಿದೆ. ವಿಪರ್ಯಾಸವೆಂದರೆ, ಕನ್ನಡ ಚಲನಚಿತ್ರೋದ್ಯಮ ಬೆಂಬಲಿಸುವ ಪ್ರತಿಭಟನೆಗಳು ಸಾಮಾನ್ಯವಾಗಿ ದೋಷಪೂರಿತ, ಸ್ವ- ಲಾಭದಾಯಕ ಬೇಡಿಕೆಗಳನ್ನು / ವಿಷಯಗಳನ್ನು ಹೊಂದಿರುತ್ತದೆ. ಕನ್ನಡ ಚಲನಚಿತ್ರೋದ್ಯಮವೂ ಸಮಾಜದ ಸಮಸ್ಯೆಗಳನ್ನು ಚನ್ನಾಗಿ ಅಧ್ಯಯನ ಮಾಡಬೇಕು ಎಂದಿದ್ದಾರೆ.

ಮನರಂಜನೆ ಸುದ್ದಿಗಳಿಗೆ ಇಲ್ಲಿ ಕ್ಲಿಕ್‌ ಮಾಡಿ

IPL_Entry_Point