ಕನ್ನಡ ಸುದ್ದಿ  /  ಮನರಂಜನೆ  /  Nanu Kusuma: ನರ್ಸ್‌ ಕುಸುಮಾ ಬಾಳಿನ ಕರಾಳ ಮುಖ ಅನಾವರಣ; ಚಿತ್ರೋತ್ಸವದಲ್ಲಿ ಹಲವು ಪ್ರಶಸ್ತಿ ಪಡೆದ ಸಿನಿಮಾ ಶೀಘ್ರದಲ್ಲಿ ತೆರೆಗೆ

Nanu Kusuma: ನರ್ಸ್‌ ಕುಸುಮಾ ಬಾಳಿನ ಕರಾಳ ಮುಖ ಅನಾವರಣ; ಚಿತ್ರೋತ್ಸವದಲ್ಲಿ ಹಲವು ಪ್ರಶಸ್ತಿ ಪಡೆದ ಸಿನಿಮಾ ಶೀಘ್ರದಲ್ಲಿ ತೆರೆಗೆ

ಸರ್ಕಾರಿ ಆಸ್ಪತ್ರೆಯಲ್ಲಿನ ನರ್ಸ್‌ವೊಬ್ಬಳು ಎದುರಿಸುವ ಸಮಸ್ಯೆ, ಶೋಷಣೆಯೇ ನಾನು ಕುಸುಮಾ ಸಿನಿಮಾ. ಹಲವು ಸಿನಿಮೋತ್ಸವಳಲ್ಲಿ ಪ್ರಶಸ್ತಿ ಪಡೆದ ಈ ಚಿತ್ರ ಜೂನ್‌ 30ರಂದು ತೆರೆಗೆ ಬರುತ್ತಿದೆ.

ನರ್ಸ್‌ ಕುಸುಮಾ ಬಾಳಿನ ಕರಾಳ ಮುಖ ಅನಾವರಣ; ಚಿತ್ರೋತ್ಸವದಲ್ಲಿ ಹಲವು ಪ್ರಶಸ್ತಿ ಪಡೆದ ಚಿತ್ರ ಶೀಘ್ರದಲ್ಲಿ ತೆರೆಗೆ
ನರ್ಸ್‌ ಕುಸುಮಾ ಬಾಳಿನ ಕರಾಳ ಮುಖ ಅನಾವರಣ; ಚಿತ್ರೋತ್ಸವದಲ್ಲಿ ಹಲವು ಪ್ರಶಸ್ತಿ ಪಡೆದ ಚಿತ್ರ ಶೀಘ್ರದಲ್ಲಿ ತೆರೆಗೆ

Nanu Kusuma: ಹಿರಿಯ ಲೇಖಕ ಬೆಸಗರಹಳ್ಳಿ ರಾಮಣ್ಣ ಅವರ ಕಥೆಯನ್ನು ಆಧರಿಸಿ ತಯಾರಾಗಿರುವ ಕೃಷ್ಣೇಗೌಡ ನಿರ್ಮಿಸಿ, ನಿರ್ದೇಶಿಸಿರುವ ನಾನು ಕುಸುಮ ಸಿನಿಮಾ ಬಿಡುಗಡೆಗೆ ಸಿದ್ಧವಾಗಿದೆ. ಈಗಾಗಲೇ ಬಹುತೇಕ ಸಿನಿಮಾ ಕೆಲಸಗಳನ್ನು ಮುಗಿಸಿಕೊಂಡಿರುವ ಈ ಸಿನಿಮಾ, ಜೂನ್‌ 30ಕ್ಕೆ ರಾಜ್ಯಾದ್ಯಂತ ರಿಲೀಸ್‌ ಆಗಲಿದೆ.

ಟ್ರೆಂಡಿಂಗ್​ ಸುದ್ದಿ

ನರ್ಸ್ ಆಗಿ ಕೆಲಸ ಮಾಡುವ ಹುಡುಗಿಯೊಬ್ಬಳು ಸರ್ಕಾರಿ ಆಸ್ಪತ್ರೆಯಲ್ಲಿ ಎದುರಿಸುವ ಶೋಷಣೆಗಳ ಸುತ್ತ ‘ನಾನು ಕುಸುಮ’ ಸಿನಿಮಾ ಕಥಾಹಂದರ ಸಾಗುತ್ತದೆ. ಇತ್ತೀಚೆಗಷ್ಟೇ ನಡೆದ 14ನೇ ಬೆಂಗಳೂರು ಅಂತಾರಾಷ್ಟ್ರೀಯ ಸಿನಿಮೋತ್ಸವದಲ್ಲಿ ಪ್ರದರ್ಶನಗೊಂಡು ಅತ್ಯುತ್ತಮ ಕನ್ನಡ ಚಿತ್ರ ಪ್ರಶಸ್ತಿ ಪಡೆದುಕೊಂಡಿರುವ ನಾನು ಕುಸುಮ, ಈಗಾಗಲೇ ಹಲವು ಸಿನಿಮೋತ್ಸವಗಳಲ್ಲಿ ಭಾಗವಹಿಸಿ ಪ್ರಶಸ್ತಿಯನ್ನೂ ಪಡೆದುಕೊಂಡಿದೆ.

ಇಂಡಿಯನ್ ಪನೋರಮಾ, ರಾಜಸ್ಥಾನ್ ಫಿಲಂ ಫೆಸ್ಟಿವಲ್, ತ್ರಿಶೂರ್ ಫಿಲಂ ಫೆಸ್ಟಿವಲ್ ಹೀಗೆ ಹಲವು ಪ್ರತಿಷ್ಠಿತ ಚಿತ್ರೋತ್ಸವಗಳಲ್ಲಿ ಪ್ರದರ್ಶನಗೊಂಡು ಪ್ರಶಸ್ತಿ, ಪ್ರಶಂಸೆಗಳನ್ನು ತನ್ನದಾಗಿಸಿಕೊಂಡಿದೆ. ಈ ಚಿತ್ರದಲ್ಲಿ ಗ್ರೀಷ್ಮಾ ಶ್ರೀಧರ್, ಸನಾತನಿ ಜೋಶಿ, ಕಾವ್ಯಾ ಶ್ರೀಧರ್, ಕೃಷ್ಣೇಗೌಡ, ಸೌಮ್ಯ ಭಾಗವತ್, ಪ್ರತಿಭಾ ಸಂಶಿಮಠ್, ವಿಜಯ್ ಮೊದಲಾದವರು ಪ್ರಮುಖ ಪಾತ್ರಗಳಲ್ಲಿ ಅಭಿನಯಿಸಿದ್ದಾರೆ.

ನಾನು ಕುಸುಮ ಸಿನಿಮಾಕ್ಕೆ ಅರ್ಜುನ್ ರಾಜಾ ಛಾಯಾಗ್ರಹಣವಿದೆ. ಬೆಂಗಳೂರು ಸುತ್ತಮುತ್ತ ನಾನು ಕುಸುಮ ಸಿನಿಮಾದ ಚಿತ್ರೀಕರಣ ನಡೆಸಲಾಗಿದೆ. ಆಸ್ಪತ್ರೆ, ವಾರ್ಡ್, ಗಲ್ಲಿ, ಮನೆ ಹೀಗೆ ಸಿನಿಮಾದಲ್ಲಿ ಬರುವ ಎಲ್ಲ ಸ್ಥಳಗಳನ್ನು ನೈಜ ಲೊಕೇಶನ್ ಗಳಲ್ಲೇ ಚಿತ್ರೀಕರಿಸಲಾಗಿದ್ದು, ಸಿಂಕ್ ಸೌಂಡ್‌ನಲ್ಲಿ ಹಿನ್ನೆಲೆ ಧ್ವನಿಗ್ರಹಣ ಮಾಡಿರುವುದು ಸಿನಿಮಾದ ಮತ್ತೊಂದು ವಿಶೇಷತೆ.

ಸದ್ಯ ಈಗಾಗಲೇ ಚಿತ್ರೋತ್ಸವಗಳ ಮೂಲಕ ಚಿತ್ರರಂಗದಲ್ಲಿ ಅನೇಕ ಖ್ಯಾತನಾಮರ ಗಮನ ಸೆಳೆದಿರುವ ನಾನು ಕುಸುಮ ಜೂನ್ 30 ರಂದು ರಾಜ್ಯಾದ್ಯಂತ ಪ್ರೇಕ್ಷಕರ ಮುಂದೆ ಬರುತ್ತಿದೆ. ಸಿನಿಮಾ ತಂಡವೂ ಪ್ರಚಾರ ಕಾರ್ಯ ಶುರು ಮಾಡಿದೆ.

ಸಿನಿಮಾ ಸಂಬಂಧಿ ಈ ಸುದ್ದಿಗಳನ್ನೂ ಓದಿ

ಚಿನ್ನಾ ನಿನ್ನ ಮುದ್ದಾಡುವೆ, ಭಾಗ್ಯವಂತ ಸೇರಿದಂತೆ ಅನೇಕ ಸಿನಿಮಾಗಳಲ್ಲಿವೆ ಅಪ್ಪ-ಮಕ್ಕಳ ಬಾಂಧವ್ಯ ಬಿಂಬಿಸುವ ಹಾಡುಗಳು

ಅಪ್ಪಂದಿರ ದಿನವನ್ನು ಒಬ್ಬೊಬ್ಬರು ಒಂದೊಂದು ರೀತಿ ಆಚರಿಸುತ್ತಾರೆ. ಕೆಲವರು ಅಪ್ಪನಿಗೆ ಇಷ್ಟವಾದ ಗಿಫ್ಟ್‌ ಕೊಡ್ತಾರೆ, ಕೆಲವರು ಅಪ್ಪನಿಗೆ ಇಷ್ಟವಾದ ಸ್ಥಳಕ್ಕೆ ಕರೆದೊಯ್ಯುತ್ತಾರೆ. ಅಪ್ಪನಿಗೆ ಇಷ್ಟವಾದ ತಿಂಡಿ ಮಾಡಿಕೊಡ್ತಾರೆ. ಆದರೆ ಕೆಲವರಿಗೆ ಅಪ್ಪನೇ ಇರುವುದಿಲ್ಲ. ಅಪ್ಪನ ಪ್ರೀತಿ ಕಾಣದ ಎಷ್ಟೋ ಮಕ್ಕಳಿದ್ದಾರೆ. ಅಪ್ಪ ಇದ್ದರೂ ಅವರ ಜೊತೆ ಹೇಳಿಕೊಳ್ಳುವಂತ ಬಾಂಧವ್ಯ ಇಲ್ಲದವರೂ ಇದ್ದಾರೆ. ಆದರೂ ಅಪ್ಪನ ಸ್ಥಾನ ಅಪ್ಪನದ್ದೇ, ಆ ಜಾಗವನ್ನು ಬೇರೆ ಯಾರಿಂದಲೂ ತುಂಬಲು ಸಾಧ್ಯವಿಲ್ಲ. ಪೂರ್ಣ ಓದಿಗೆ ಇಲ್ಲಿ ಕ್ಲಿಕ್‌ ಮಾಡಿ

ರಂಗಭೂಮಿಗೆ ಮರಳಿದ ಪ್ರಕಾಶ್‌ ರಾಜ್; ಕಲಾವಿದರಿಗಾಗಿಯೇ ಲೋಕಪಾವನಿ ನದಿ ತಟದಲ್ಲಿ ತಲೆಯೆತ್ತಿದೆ ನಿರ್ದಿಗಂತ ವೇದಿಕೆ

Prakash Raj: ಕನ್ನಡದ ನಟ, ಪರಭಾಷೆಗಳಲ್ಲಿಯೂ ಕರುನಾಡನ್ನು ಪ್ರತಿನಿಧಿಸುವ ಪ್ರಕಾಶ್‌ ರಾಜ್‌, ತಮ್ಮ ಅಭಿನಯದ ಮೂಲಕವೇ ಎಲ್ಲರನ್ನು ಸೆಳೆದವರು. ನಾಟಕ, ರಂಗಭೂಮಿ ಹಿನ್ನೆಲೆಯಿಂದ ಬಂದಿರುವ ಅವರು, ಇಂದಿಗೂ ಅದರ ಸೆಳವು ಅವರಲ್ಲಿದೆ. ನಾಟಕ ವೀಕ್ಷಣೆಯ ಜತೆಗೆ ನಾಟಕ, ರಂಗಭೂಮಿಗೆ ಪ್ರೋತ್ಸಾಹ ಕೊಡುತ್ತಲೇ ಬಂದಿದ್ದಾರೆ. ಇದೀಗ ಒಂದು ಹೆಜ್ಜೆ ಮುಂದೆ ಹೋಗಿ, ಅವರೇ ಒಂದು ಬೃಹತ್‌ ವೇದಿಕೆ ಸೃಷ್ಟಿಸಿದ್ದಾರೆ. ಅದರ ಹೆಸರು ನಿರ್ದಿಗಂತ! ಪೂರ್ಣ ಓದಿಗೆ ಇಲ್ಲಿ ಕ್ಲಿಕ್‌ ಮಾಡಿ

IPL_Entry_Point