ಕನ್ನಡ ಸುದ್ದಿ  /  ಮನರಂಜನೆ  /  Abhirami: ಮದುವೆಯಾಗಿ 14 ವರ್ಷ ಕಳೆದರೂ ಮಕ್ಕಳಿಲ್ಲದ ಕೊರಗು; ಹೆಣ್ಣು ಮಗುವನ್ನು ದತ್ತು ಪಡೆದ ಲಾಲಿಹಾಡು ಸಿನಿಮಾ ನಟಿ ಅಭಿರಾಮಿ

Abhirami: ಮದುವೆಯಾಗಿ 14 ವರ್ಷ ಕಳೆದರೂ ಮಕ್ಕಳಿಲ್ಲದ ಕೊರಗು; ಹೆಣ್ಣು ಮಗುವನ್ನು ದತ್ತು ಪಡೆದ ಲಾಲಿಹಾಡು ಸಿನಿಮಾ ನಟಿ ಅಭಿರಾಮಿ

ಅಭಿರಾಮಿ 2009ರಲ್ಲಿ ಮಲಯಾಳಂ ಖ್ಯಾತ ಸಾಹಿತಿ ಪುತನ್‌ ವೆಟೆಲ್‌ ನಾರಾಯಣನ್‌ ನಾಯರ್‌ ಅವರ ಮೊಮ್ಮಗ ರಾಹುಲ್‌ ಪವನ್‌ ಎಂಬುವರನ್ನು ಮದುವೆ ಆಗಿದ್ದಾರೆ. ಮದುವೆ ಆಗಿ 14 ವರ್ಷಗಳಾದರೂ ಈ ಜೋಡಿಗೆ ಮಕ್ಕಳು ಆಗಿಲ್ಲ.

ಹೆಣ್ಣುಮಗು ದತ್ತು ಪಡೆದ ನಟಿ ಅಭಿರಾಮಿ
ಹೆಣ್ಣುಮಗು ದತ್ತು ಪಡೆದ ನಟಿ ಅಭಿರಾಮಿ (PC: Abhirami Social media)

ಪ್ರತಿಯೊಬ್ಬರಿಗೂ ಜೀವನದಲ್ಲಿ ಅನೇಕ ತಿರುವುಗಳಿರುತ್ತದೆ. ಬಾಲ್ಯ ಒಂದು ಹಂತವಾದರೆ ಯೌವನ, ಮದುವೆ ಕೂಡಾ ಒಂದು ಹಂತ. ಮದುವೆ ನಂತರ ತಂದೆ ತಾಯಿ ಆಗುವುದು ಕೂಡಾ ಒಂದು ಸುಂದರ ಕ್ಷಣ. ಆದರೆ ಎಷ್ಟೋ ಜನರಿಗೆ ಈ ಸಂತೋಷ ದೊರೆಯುವುದಿಲ್ಲ. ಮಕ್ಕಳಿಲ್ಲ ಎನ್ನುವುದೇ ಅವರಿಗೆ ಜೀವನದಲ್ಲಿ ದೊಡ್ಡ ಕೊರತೆ ಆಗಿರುತ್ತದೆ.

ಟ್ರೆಂಡಿಂಗ್​ ಸುದ್ದಿ

ಬಹುಭಾಷಾ ನಟಿ ಅಭಿರಾಮಿ ಅವರಿಗೆ ಕೂಡಾ ಕೆಲವು ದಿನಗಳಿಂದ ಮಕ್ಕಳು ಇಲ್ಲ ಎಂಬ ಕೊರಗು ಕಾಡುತ್ತಿದೆ. ಆದರೆ ಇದೀಗ ಅವರೊಂದಿಗೆ ನಿರ್ಧಾರಕ್ಕೆ ಬಂದಿದ್ದಾರೆ. ಅದನ್ನು ತಮ್ಮ ಸೋಷಿಯಲ್‌ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ಅಭಿರಾಮಿ, ಚಿತ್ರರಂಗದಲ್ಲಿ ಬಹುಭಾಷಾ ನಟಿಯಾಗಿ ಗುರುತಿಸಿಕೊಂಡಿದ್ದಾರೆ. ಕನ್ನಡದಲ್ಲಿ ಕೂಡಾ ಅನೇಕ ಸಿನಿಮಾಗಳಲ್ಲಿ ನಟಿಸಿದ್ದಾರೆ. ಲಾಲಿ ಚಿತ್ರದಲ್ಲಿ ದರ್ಶನ್‌ ಜೊತೆ ಡ್ಯೂಯೆಟ್‌ ಹಾಡಿದ್ದಾರೆ. ಚಿತ್ರರಂಗದಲ್ಲಿ ದೊಡ್ಡ ಯಶಸ್ಸು ಕಂಡಿರುವ ಅಭಿರಾಮಿ ವೈಯಕ್ತಿಕ ಜೀವನದಲ್ಲಿ ಪತಿಯೊಂದಿಗೆ ಖುಷಿ ಆಗಿದ್ದಾರೆ. ಆದರೆ ಅವರಿಗೆ ಮಕ್ಕಳು ಇಲ್ಲ. ಇದು ಅವರ ನೋವಿಗೆ ಕಾರಣವಾಗಿತ್ತು. ಆದರೆ ಇದೀಗ ಅಭಿರಾಮಿ ಅಮ್ಮ ಆಗಿದ್ದಾರೆ.

2009ರಲ್ಲಿ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದ ಅಭಿರಾಮಿ

ಅಭಿರಾಮಿ 2009ರಲ್ಲಿ ಮಲಯಾಳಂ ಖ್ಯಾತ ಸಾಹಿತಿ ಪುತನ್‌ ವೆಟೆಲ್‌ ನಾರಾಯಣನ್‌ ನಾಯರ್‌ ಅವರ ಮೊಮ್ಮಗ ರಾಹುಲ್‌ ಪವನ್‌ ಎಂಬುವರನ್ನು ಮದುವೆ ಆಗಿದ್ದಾರೆ. ಆದರೆ ಮದುವೆ ಆಗಿ 14 ವರ್ಷಗಳಾದರೂ ಈ ಜೋಡಿಗೆ ಮಕ್ಕಳು ಆಗಿಲ್ಲ. ಇದೀಗ ಅಭಿರಾಮಿ ಹಾಗೂ ರಾಹುಲ್‌ ಪವನ್‌ ದಂಪತಿ ಒಂದು ನಿರ್ಧಾರಕ್ಕೆ ಬಂದಿದ್ದು ಮಗುವೊಂದನ್ನು ದತ್ತು ಪಡೆದಿದ್ದಾರೆ. ಈ ಜೋಡಿ ಹೆಣ್ಣು ಮಗುವನ್ನು ದತ್ತು ಪಡೆದಿರುವುದು ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದೆ. ಸ್ವತ: ಅಭಿರಾಮಿ ತಾವು ಮಗುವನ್ನು ದತ್ತು ಪಡೆದಿರುವ ವಿಡಿಯೋವನ್ನು ತಮ್ಮ ಇನ್‌ಸ್ಟಾಗ್ರಾಮ್‌ನಲ್ಲಿ ಹಂಚಿಕೊಂಡಿದ್ದಾರೆ.

ವಿಶ್ವ ತಾಯಂದಿರ ದಿನದಂದು ಸಂತೋಷದ ಸುದ್ದಿ ಹಂಚಿಕೊಂಡ ನಟಿ

ಮೇ 14 ವಿಶ್ವ ತಾಯಂದಿರ ದಿನದಂದು ಅಭಿರಾಮಿ ಈ ಖುಷಿಯ ವಿಚಾರವನ್ನು ತಮ್ಮ ಅಭಿಮಾನಿಗಳೊಂದಿಗೆ ಹಂಚಿಕೊಂಡಿದ್ದಾರೆ. ''ಪ್ರೀತಿಯ ಸ್ನೇಹಿತರೇ, ರಾಹುಲ್‌ ಹಾಗೂ ನಾನು ಈ ಸುದ್ದಿಯನ್ನು ನಿಮ್ಮೊಂದಿಗೆ ಹಂಚಿಕೊಳ್ಳಲು ಥ್ರಿಲ್‌ ಆಗಿದ್ದೇವೆ. ನಾವು ಈಗ ಕಲ್ಕಿ ಎಂಬ ಹೆಣ್ಣು ಮಗುವಿನ ಪೋಷಕರಾಗಿದ್ದೇವೆ. ನಾವು ಈ ಮಗುವನ್ನು ಕಳೆದ ವರ್ಷ ದತ್ತು ಪಡೆದಿದ್ದೇವೆ. ಈ ಮಗು ನಮ್ಮ ಜೀವನದಲ್ಲಿ ಬಂದ ನಂತರ ಎಲ್ಲವೂ ಬದಲಾವಣೆ ಆಗಿದೆ. ತಾಯಂದಿರ ದಿನವನ್ನು ಸೆಲೆಬ್ರೇಟ್‌ ಮಾಡಲು ಬಹಳ ಖುಷಿ ಆಗುತ್ತಿದೆ. ನಮ್ಮ ಕುಟುಂಬದ ಮೇಲೆ ನಿಮ್ಮ ಆಶೀರ್ವಾದ ಇರಲಿ'' ಎಂದು ಅಭಿರಾಮಿ ಬರೆದುಕೊಂಡಿದ್ದಾರೆ. ಅಭಿರಾಮಿ ಇನ್‌ಸ್ಟಾಗ್ರಾಮ್‌ ಪೋಸ್ಟ್‌ಗೆ ಸೆಲೆಬ್ರಿಟಿಗಳು ಜನ ಸಾಮಾನ್ಯರು ಶುಭ ಕೋರಿದ್ದಾರೆ.

1995 ರಲ್ಲಿ ಅಭಿರಾಮಿ ಬಾಲನಟಿಯಾಗಿ ಚಿತ್ರರಂಗಕ್ಕೆ ಬಂದರು. ನಾಯಕಿಯಾಗಿ ಕೂಡಾ ಅಭಿರಾಮಿ ಅನೇಕ ಸಿನಿಮಾಗಳಲ್ಲಿ ನಟಿಸಿದ್ದಾರೆ. ಕನ್ನಡದಲ್ಲಿ ಅಭಿರಾಮಿ ಲಾಲಿಹಾಡು, ಶ್ರೀರಾಮ್‌, ಚೌಕ, ದಶರಥ, ಕೋಟಿಗೊಬ್ಬ 3 ಸಿನಿಮಾಗಳಲ್ಲಿ ನಟಿಸಿದ್ದಾರೆ. ಸದ್ಯಕ್ಕೆ ಅವರು ಆರ್‌ ಯು ಓಕೆ ಬೇಬಿ ತಮಿಳು ಹಾಗೂ ಗರುಡನ್‌ ಮಲಯಾಳಂ ಸಿನಿಮಾದಲ್ಲಿ ಬ್ಯುಸಿ ಇದ್ದಾರೆ. ಬಾಲನಟಿ, ನಾಯಕಿ, ಪೋಷಕ ನಟಿಯಾಗಿ ಅಭಿರಾಮಿ ಸಿನಿಜರ್ನಿ ಮುಂದುವರೆಸುತ್ತಿದ್ದಾರೆ.

ಟಿ20 ವರ್ಲ್ಡ್‌ಕಪ್ 2024