‘ಅಪ್ಪು ಫೋಟೋ ಹಾಕಿ ವಿ ಲವ್‌ ಯೂ ಎಂದು ಪ್ರೀತಿ ತೋರಿಸೋದಲ್ಲ, ದಯವಿಟ್ಟು ಅದನ್ನು ಕಡ್ಡಾಯ ಮಾಡಬೇಡಿ!’ ಶಿವರಾಜ್‌ಕುಮಾರ್‌ ಬೇಸರ
ಕನ್ನಡ ಸುದ್ದಿ  /  ಮನರಂಜನೆ  /  ‘ಅಪ್ಪು ಫೋಟೋ ಹಾಕಿ ವಿ ಲವ್‌ ಯೂ ಎಂದು ಪ್ರೀತಿ ತೋರಿಸೋದಲ್ಲ, ದಯವಿಟ್ಟು ಅದನ್ನು ಕಡ್ಡಾಯ ಮಾಡಬೇಡಿ!’ ಶಿವರಾಜ್‌ಕುಮಾರ್‌ ಬೇಸರ

‘ಅಪ್ಪು ಫೋಟೋ ಹಾಕಿ ವಿ ಲವ್‌ ಯೂ ಎಂದು ಪ್ರೀತಿ ತೋರಿಸೋದಲ್ಲ, ದಯವಿಟ್ಟು ಅದನ್ನು ಕಡ್ಡಾಯ ಮಾಡಬೇಡಿ!’ ಶಿವರಾಜ್‌ಕುಮಾರ್‌ ಬೇಸರ

ಪುನೀತ್‌ ನಿಧನದ ಬಳಿಕ ಅಪ್ಪು ಫೋಟೋವನ್ನು ಬಿಡುಗಡೆಯಾಗುವ ಪ್ರತಿ ಸಿನಿಮಾಗಳ ಆರಂಭದಲ್ಲಿ ಹಾಕಿ ನಮನ ಸಲ್ಲಿಸಲಾಗುತ್ತಿದೆ. ಈ ಬಗ್ಗೆ ಶಿವರಾಜ್‌ಕುಮಾರ್‌ ಬೇಸರ ವ್ಯಕ್ತಪಡಿಸಿದ್ದಾರೆ.

‘ಅಪ್ಪು ಫೋಟೋ ಹಾಕಿ ವಿ ಲವ್‌ ಯೂ ಎಂದು ಪ್ರೀತಿ ತೋರಿಸೋದಲ್ಲ, ದಯವಿಟ್ಟು ಅದನ್ನು ಕಡ್ಡಾಯ ಮಾಡಬೇಡಿ!’ ಶಿವರಾಜ್‌ಕುಮಾರ್‌ ಬೇಸರ
‘ಅಪ್ಪು ಫೋಟೋ ಹಾಕಿ ವಿ ಲವ್‌ ಯೂ ಎಂದು ಪ್ರೀತಿ ತೋರಿಸೋದಲ್ಲ, ದಯವಿಟ್ಟು ಅದನ್ನು ಕಡ್ಡಾಯ ಮಾಡಬೇಡಿ!’ ಶಿವರಾಜ್‌ಕುಮಾರ್‌ ಬೇಸರ

Shivarajkumar: ಪವರ್‌ ಸ್ಟಾರ್‌ ಪುನೀತ್‌ ರಾಜ್‌ಕುಮಾರ್‌ ಅಕಾಲಿಕ ನಿಧನ ಕೇವಲ ಅವರ ಕುಟುಂಬವನ್ನಷ್ಟೇ ಅಲ್ಲ ಅವರ ಕೋಟ್ಯಂತರ ಅಭಿಮಾನಿಗಳ ಮನಸ್ಸನ್ನೂ ನೋಯಿಸಿದೆ. ಅವರಿಲ್ಲದೆ, ಎರಡು ವರ್ಷಗಳು ಉರುಳಿದರೂ, ಇಂದಿಗೂ ಪ್ರತಿಯೊಬ್ಬ ಅಭಿಮಾನಿಯ ಮನದಲ್ಲಿ ಅಪ್ಪು ಅಜರಾಮರ! ಇಂದಿಗೂ ಅವರ ಸಿನಿಮಾಗಳನ್ನು ಸೆಲೆಬ್ರೇಟ್‌ ಮಾಡುವ ಅವರ ಫ್ಯಾನ್ಸ್‌ ಬಳಗವಿದೆ. ಅವರ ಬರ್ತ್‌ಡೇಯನ್ನು ಹಬ್ಬದಂತೆ ಆಚರಿಸುವ ವರ್ಗವೇ ಇದೆ. ಈ ನಡುವೆ ಈ ಸಲದ ಬರ್ತ್‌ಡೇಗೂ ಇನ್ನೇನು ದಿನಗಣನೆ ಆರಂಭವಾಗಿದೆ. ಹೀಗಿರುವಾಗಲೇ ಅಪ್ಪು ಬಗ್ಗೆ ಶಿವರಾಜ್‌ಕುಮಾರ್‌ ಹೀಗೊಂದು ಮಾತು ಹೇಳಿದ್ದಾರೆ.

ಪುನೀತ್‌ ರಾಜ್‌ಕುಮಾರ್‌ ನಿಧನದ ಬಳಿಕ ಬಿಡುಗಡೆಯಾಗುವ ಪ್ರತಿಯೊಂದು ಕನ್ನಡ ಸಿನಿಮಾದ ಆರಂಭದಲ್ಲಿ ಪುನೀತ್‌ ರಾಜ್‌ಕುಮಾರ್‌ ಅವರ ಫೋಟೋ ಕಾಣಿಸುತ್ತಲೇ ಬರುತ್ತಿದೆ. ಅವರ ಮೇಲಿಮ ಅಭಿಮಾನಕ್ಕಾಗಿ ಸಿನಿಮಾ ತಂಡಗಳು ವಿಶೇಷ ನಮನ ಸಲ್ಲಿಸುತ್ತಲೇ ಬರುತ್ತಿವೆ. ಹೊಸಬರಿರಲಿ, ಹಳಬರದ್ದೇ ಇರಲಿ, ಪುನೀತ್‌ ಬಗ್ಗೆ ಒಂದೆರಡು ಸಾಲು ಬರೆದು, ಅವರ ಪೋಟೋ ಮೂಲಕವೇ ಸಿನಿಮಾ ಶುರು ಮಾಡುವ ಸಂಪ್ರದಾಯವೇ ಬೆಳೆದಿದೆ. ಆದರೆ, ಇದೇ ವಿಚಾರಕ್ಕೆ ಸೋಷಿಯಲ್‌ ಮೀಡಿಯಾದಲ್ಲೂ ಕೆಲವರು ಆಕ್ಷೇಪ ತೆಗೆದಿದ್ದರು.

ಎಲ್ಲರ ಫೋಟೋ ಹಾಕಬೇಕಾಗುತ್ತೆ

ಹೀಗೆ ಪ್ರತಿ ಸಿನಿಮಾದಲ್ಲೂ ಫೋಟೋ ಹಾಕುತ್ತಿರುವ ವಿಚಾರಕ್ಕೆ ಸಂಬಂಧಿಸಿದಂತೆ ಮೊದಲ ಸಲ ಶಿವಣ್ಣ ಮಾತನಾಡಿದ್ದಾರೆ. ಎಲ್ಲ ಸಿನಿಮಾಗಳಲ್ಲೂ ಅಪ್ಪು ಫೋಟೋ ಹಾಕಲೇಬೇಕು ಎಂಬುದನ್ನು ಕಡ್ಡಾಯಗೊಳಿಸಬೇಡಿ ಎಂದಿದ್ದಾರೆ. "ಪೋಟೋ ಹಾಕಿಬಿಟ್ಟರೆ ಗೌರವ ಕೊಟ್ಟಂಗಲ್ಲ ಅದು. ಹಾಗಾದ್ರೆ ಇನ್ಮೇಲೆ ಎಲ್ಲರ ಫೋಟೋಗಳನ್ನೂ ಹಾಕಬೇಕಾಗುತ್ತದೆ. ಅಪ್ಪಾಜಿ ಫೋಟೋ, ವಿಷ್ಣು ಸರ್‌, ಅಂಬರೀಶ್‌ ಸರ್‌, ಶಂಕರ್‌ನಾಗ್‌ ಫೋಟೋ ಹಾಕಬೇಕಾಗುತ್ತೆ. ಆಕ್ಚುಲಿ ಅದಲ್ಲ. ಇವು ನೆನಪುಗಳಷ್ಟೇ. ನೆನಪುಗಳು ಯಾವತ್ತಿದ್ದರೂ ಶಾಶ್ವತ" ಎಂದಿದ್ದಾರೆ.

ಸಿನಿಮಾ ಗೆಲ್ಲಿಸಿ ತೋರಿಸಿ ನೋಡೋಣ..

ಫೋಟೋ ಫ್ರೇಮ್‌ ಇಟ್ಬಿಟ್ಟು ಪ್ರೀತಿ ತೋರಿಸ್ತೀವಿ ಎಂಬುದು ಪ್ರೀತಿ ಅನ್ನಲ್ಲ. ಎಲ್ಲ ಕಡೆಗೆ, ಅದರಲ್ಲೂ ಸಿನಿಮಾಗಳಲ್ಲಿ ಅಪ್ಪು ಫೋಟೋ ಹಾಕಲೇಬೇಕು ಎಂಬುದನ್ನು ಕಡ್ಡಾಯ ಮಾಡಬೇಡಿ. ಹಾಗಾದ್ರೆ, ಎಲ್ಲ ಸಿನಿಮಾಗಳೂ ಚೆನ್ನಾಗಿ ಹೋಗಬೇಕಿತ್ತಲ್ವಾ? ನಾನು ತುಂಬ ಪ್ರಾಕ್ಟಿಕಲ್‌. ಓಪನ್‌ ಆಗಿಯೇ ಮಾತನಾಡ್ತಿನಿ. ಅವನೂ ಸಹ ಪ್ರೀತಿಯಿಂದ್ಲೇ ಅಪ್ಪು ಫೋಟೋ ಹಾಕಿರ್ತಾನೆ. ಹಾಗಾದ್ರೆ, ಸಿನಿಮಾ ಗೆಲ್ಲಿಸಲಿ ನೋಡೋಣ" ಎಂದಿದ್ದಾರೆ.

ಫೋಟೋ ಹಾಕಿದ್ರೆ ಮಾತ್ರ ಪ್ರೀತಿನಾ?

ಅಪ್ಪು ಫೋಟೋ ಹಾಕಿ, ಅಪ್ಪು ಇಲ್ಲಿದ್ದಾರೆ ಎಂದು ಹೇಳುವುದಲ್ಲ. ವಿ ಮಿಸ್‌ ಯೂ ಅಪ್ಪು, ವಿ ಲವ್‌ ಯೂ ಅಪ್ಪು. ನೋ ಅದೆಲ್ಲ ಬೇಡ! ನಾವು ಅವನನ್ನು ಹೃದಯದಿಂದ ಪ್ರೀತಿಸಬೇಕು. ಇದನ್ನು ನೀವು ತಪ್ಪು ಭಾವಿಸಬೇಡಿ. ಫೋಟೋ ಹಾಕಿಬಿಟ್ಟರೆ ಮಾತ್ರ ಪುನೀತ್‌ ಮೇಲೆ ಲವ್‌ ಅಂತಲ್ಲ. ಯಾವತ್ತಿದ್ದರೂ ಅಪ್ಪು ಒಳಗಡೆನೇ ಇರ್ತಾರೆ. ನಿಮ್ಮೊಳಗೂ, ನಮ್ಮೊಳಗೂ ಇಡೀ ಇಂಡಸ್ಟ್ರಿವೊಳಗೂ ಇರ್ತಾರೆ" ಎಂದು ಪುನೀತ್‌ ಫೋಟೋ ಹಾಕುವ ಸಿನಿಮಾ ತಂಡಗಳಿಗೆ ಕಿವಿ ಮಾತು ಹೇಳಿದ್ದಾರೆ ಶಿವರಾಜ್‌ಕುಮಾರ್‌.

Whats_app_banner