ಕನ್ನಡ ಸುದ್ದಿ  /  ಮನರಂಜನೆ  /  ನಟಿ ಹೇಮಾ ಚೌಧರಿ ಆಸ್ಪತ್ರೆಗೆ ದಾಖಲು; ಕನ್ನಡದಲ್ಲಿ 90+ ಸಿನಿಮಾಗಳಲ್ಲಿ ನಟಿಸಿದ್ದ ಕಲಾವಿದೆಯ ಆರೋಗ್ಯ ಸ್ಥಿತಿ ಚಿಂತಾಜನಕ

ನಟಿ ಹೇಮಾ ಚೌಧರಿ ಆಸ್ಪತ್ರೆಗೆ ದಾಖಲು; ಕನ್ನಡದಲ್ಲಿ 90+ ಸಿನಿಮಾಗಳಲ್ಲಿ ನಟಿಸಿದ್ದ ಕಲಾವಿದೆಯ ಆರೋಗ್ಯ ಸ್ಥಿತಿ ಚಿಂತಾಜನಕ

Veteran Actress Hema Choudhary Health Update: ಕನ್ನಡ, ತಮಿಳು, ತೆಲುಗು, ಮಲಯಾಳಂ ಸಿನಿಮಾ ರಂಗದಲ್ಲಿ 100ಕ್ಕೂ ಹೆಚ್ಚು ಸಿನಿಮಾಗಳಲ್ಲಿ ನಟಿಸಿರುವ ಹಿರಿಯ ನಟಿ ಹೇಮಾ ಚೌಧರಿ ಆಸ್ಪತ್ರೆಗೆ ದಾಖಲಾಗಿದ್ದಾರೆ. ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿರುವ ಇವರ ಸ್ಥಿತಿ ಚಿಂತಾಜನಕವಾಗಿದೆ ಎಂದು ಮೂಲಗಳು ತಿಳಿಸಿವೆ.

ದಕ್ಷಿಣ ಭಾರತದ ಜನಪ್ರಿಯ ನಟಿ ಹೇಮಾ ಚೌಧರಿ ಆಸ್ಪತ್ರೆಗೆ ದಾಖಲು
ದಕ್ಷಿಣ ಭಾರತದ ಜನಪ್ರಿಯ ನಟಿ ಹೇಮಾ ಚೌಧರಿ ಆಸ್ಪತ್ರೆಗೆ ದಾಖಲು

ಬೆಂಗಳೂರು: ದಕ್ಷಿಣ ಭಾರತದ ಜನಪ್ರಿಯ ನಟಿ ಹೇಮಾ ಚೌಧರಿ ಅವರು ಬ್ರೈನ್‌ ಹೆಮರೇಜ್‌ನಿಂದ ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಅವರು ಚಿಕಿತ್ಸೆಗೆ ಸ್ಪಂದಿಸುತ್ತಿಲ್ಲ ಎನ್ನಲಾಗಿದೆ. ವಿದೇಶದಲ್ಲಿರುವ ಮಗನ ಆಗಮನಕ್ಕಾಗಿ ಕುಟುಂಬದವರು ಕಾಯುತ್ತಿರುವುದಾಗಿ ವರದಿಗಳು ತಿಳಿಸಿವೆ. ಇತ್ತೀಚೆಗೆ ನಟಿ ಲೀಲಾವತಿ ಪುಣ್ಯತಿಥಿ ಸಂದರ್ಭದಲ್ಲಿ ಆಗಮಿಸಿ ವಿನೋದ್‌ ರಾಜ್‌ಗೆ ಸಾಂತ್ವಾನ ಹೇಳಿದ್ದ ನಟಿ ಇದೀಗ ಬ್ರೈನ್‌ ಹೆಮರೇಜ್‌ನಿಂದ ಜೀವನ್ಮರಣ ಹೋರಾಟ ನಡೆಸುತ್ತಿದ್ದಾರೆ.

ಟ್ರೆಂಡಿಂಗ್​ ಸುದ್ದಿ

ನಟಿ ಹೇಮಾ ಚೌಧರಿ ಅವರು ಕನ್ನಡ ಮಾತ್ರವಲ್ಲದೆ ತಮಿಳು, ತೆಲುಗು, ಮಲಯಾಳಂ ಚಿತ್ರಗಳಲ್ಲಿ ನಟಿಸಿದ್ದಾರೆ. ಕನ್ನಡದಲ್ಲಿ ಡಾ. ರಾಜ್‌ಕುಮಾರ್‌, ವಿಷ್ಣುವರ್ಧನ್‌, ಅಂಬರೀಶ್‌, ಶಂಕರ್‌ನಾಗ್‌, ಅನಂತ್‌ನಾಗ್‌, ರವಿಚಂದ್ರನ್‌ ಮುಂತಾದ ಪ್ರಮುಖ ನಟರ ಜತೆ ನಟಿಸಿದ್ದಾರೆ. ಕಮಲ್‌ ಹಾಸನ್‌, ಚಿರಂಜೀವಿ, ಮೋಹನ್‌ ಬಾಬು, ಪ್ರೇಮ್‌ ನಜೀರ್ ಮುಂತಾದವರ ಜತೆಯೂ ನಟಿಸಿದ್ದಾರೆ.

ನಟಿ ಹೇಮಾ ಚೌಧರಿ ನಟಿಸಿರುವ ಕನ್ನಡ ಚಲನಚಿತ್ರಗಳು

ನಟಿ ಹೇಮಾ ಚೌಧರಿ ಅವರು ಕನ್ನಡದಲ್ಲಿ 1976ರ ವಿಜಯವಾಣಿಯಿಂದ, ಶುಭಾಶಯ, ದೀಪಾ, ದದೇವರ ದುಡ್ಡು, ಶ್ರೀದೇವಿ, ಅನುಬಂಧ, ವಂಶಜ್ಯೋತಿ, ವರದಕ್ಷಿಣೆ, ನಾರದ ವಿಜಯ, ನನ್ನ ರೋಷ ನೂರು ವರುಷ, ಮಂಕುತಿಮ್ಮ, ಶ್ರೀ ರಾಘವೇಂದ್ರ ವೈಭವ, ಗುರು ಶಿಷ್ಯರು, ಗಾಳಿಮಾತು, ಅವಳಿ ಜವಳಿ, ಪ್ರೇಮಾ ಮಠಸಾರ, ಕಣ್ಣು ತೆರೆಸಿದ ಹೆಣ್ಣು, ಜಿಮ್ಮಿಗಲ್ಲು, ಗರುಡಾ ರೇಖೆ, ತಿರುಗು ಬಾಣ, ಕ್ರಾಂತಿಯೋಗಿ ಬಸವಣ್ಣ, ಯಾರಿವನು, ಆರಾಧನೆ, ನೀ ಬರೆದ ಕಾದಂಬರಿ, ಮಸಣದ ಹೂವು, ಕುರಿದೊಡ್ಡಿ ಕುರುಕ್ಷೇತ್ರ, ಹಾವು ಏಣಿ ಆಟ, ಗೂಂಡ ಗುರು, ಭಯಂಕರ ಭಷ್ಮಾಸುರ, ಸಂಪ್ರದಾಯ, ತಾಯಿ ಆಸೆ, ಕೃಷ್ಣ ರುಕ್ಮಿಣಿ.... ಅಣ್ಣ ತಂಗಿ, ಅಯ್ಯ, ವಾಲ್ಮಿಕಿ, ಸಾವಿನ ಮೆಟ್ಟಿಲು, ತವರಿನ ಸಿರಿ, ಲವಕುಶ, ಸಂತಾ, ಗಂಡನ ಮನೆ, ಬುದ್ಧಿವಂತ, ಬಂಧು ಬಳಗ, ದೇವರುಕೊಟ್ಟ ತಂಗಿ, ಶಕ್ತಿ, ಭಾಗೀರಥಿ, ಗಾಡ್‌ಫಾದರ್‌, ಸೂಪರ್‌ರಂಗ, ಗಂಗಾ ದಶರಥ ಮುಂತಾದ 90ಕ್ಕೂ ಹೆಚ್ಚು ಕನ್ನಡ ಚಲನಚಿತ್ರಗಳಲ್ಲಿ ನಟಿಸಿದ್ದಾರೆ. ಇದನ್ನೂ ಓದಿ: ಅಣ್ಣಾವ್ರ ಜತೆ ಅಭಿನೇತ್ರಿ ಲೀಲಾವತಿ ನಟಿಸಿದ 46 ಚಿತ್ರಗಳು; ನಾ ನಿನ್ನ ಮರೆಯಲಾರೆ, ಸಿಪಾಯಿ ರಾಮು, ವಿಧಿ ವಿಲಾಸ

ಅಮೃತವರ್ಷಿಣಿ ಧಾರಾವಾಹಿಯಲ್ಲಿ ನಟನೆ

ಕನ್ನಡದಲ್ಲಿ ಇವರು ಅಮೃತವರ್ಷಿಣಿ ಧಾರಾವಾಹಿ ಮೂಲಕ ಇತ್ತೀಚೆಗೆ ಹೆಚ್ಚು ಜನಪ್ರಿಯತೆ ಪಡೆದಿದ್ದರು ಅಮೃತವರ್ಷಿಣಿ ಧಾರಾವಾಹಿಯಲ್ಲಿ ಅತ್ತೆ ಶಕುಂತಲಾ ದೇವಿಯಾಗಿ ನಟಿಸಿದ್ದರು. ಇವರು ಕರ್ನಾಟಕ ರಾಜ್ಯ ಚಲನಚಿತ್ರ ಪ್ರಶಸ್ತಿ ಆಯ್ಕೆ ಸಮಿತಿಯ ಸದಸ್ಯೆಯಾಗಿಯೂ ಸೇವೆ ಸಲ್ಲಿಸಿದ್ದಾರೆ. ಸುವರ್ಣ ರತ್ನ ಪ್ರಶಸ್ತಿ, ಸುವರ್ಣ ಪರಿವಾರ ಜನಮೆಚ್ಚಿದ ತಾರೆ ಸೇರಿದಂತೆ ಹಲವು ಪ್ರಶಸ್ತಿಗಳನ್ನು ಪಡೆದಿದ್ದಾರೆ.

ಸದ್ಯ ಇವರ ಆರೋಗ್ಯ ಸ್ಥಿತಿ ಚಿಂತಾಜನಕವಾಗಿದ್ದು, ಚಿಕಿತ್ಸೆಗೆ ಸ್ಪಂಧಿಸುತ್ತಿಲ್ಲ. ವಿದೇಶದಿಂದ ಮಗನ ಆಗಮನಕ್ಕಾಗಿ ಕುಟುಂಬದ ಜನರು ಕಾಯುತ್ತಿದ್ದಾರೆ ಎಂದು ವರದಿಗಳು ತಿಳಿಸಿವೆ. ಹೆಚ್ಚಿನ ವಿವರ ನಿರೀಕ್ಷಿಸಲಾಗುತ್ತಿದೆ.

IPL_Entry_Point