ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  ಸಂಗಮ್ಮಪ್ಪ ಎನ್ನುತ್ತಲೇ ಕರುನಾಡ ಮನಗೆದ್ದ ನಮ್ಮ ಲಚ್ಚಿ; ಸಾಂಘವಿ ರಿಯಲ್‌ ಲೈಫ್‌ ಕಹಾನಿ

ಸಂಗಮ್ಮಪ್ಪ ಎನ್ನುತ್ತಲೇ ಕರುನಾಡ ಮನಗೆದ್ದ ನಮ್ಮ ಲಚ್ಚಿ; ಸಾಂಘವಿ ರಿಯಲ್‌ ಲೈಫ್‌ ಕಹಾನಿ

  • ʼಸಂಗಮ್ಮಪ್ಪ, ನಾನೂವೇ ನಿಮ್‌ ಥರಾ ಸಿಂಗರ್‌ ಆಗ್ತೀನಿ, ಹಾಡೋದು ಅಂದ್ರೆ ನಂಗೆ ಬೋ ಇಷ್ಟʼ ಎಂದು ಮುದ್ದಾಗಿ ಮಾತನಾಡುತ್ತಾ, ಪ್ರಬುದ್ಧವಾಗಿ ನಟಿಸುತ್ತಾ ಕನ್ನಡಿಗರ ಮನಗೆದ್ದಿದ್ದಾಳೆ ಲಚ್ಚಿ. ಸ್ಟಾರ್‌ ಸುವರ್ಣ ವಾಹಿನಿಯ ʼನಮ್ಮ ಲಚ್ಚಿʼ ಧಾರಾವಾಹಿಯ ಲಕ್ಷ್ಮೀನಾರಾಯಣ ಅಲಿಯಾಸ್‌ ಲಚ್ಚಿಗೆ ನಟನೆಯೇ ಜೀವಾಳ. ಇವಳ ರಿಯಲ್‌ ಲೈಫ್‌ ಕಹಾನಿ ಇಲ್ಲಿದೆ. 

ಕರುನಾಡಿನಾದ್ಯಂತ ʼಲಚ್ಚಿʼ ಎಂದೇ ಖ್ಯಾತಿ ಪಡೆದಿರುವ ಈ ಪುಟ್ಟ ಬಾಲಕಿ ನಿಜನಾಮಧೇಯ ಸಾಂಘವಿ ಕೆ.ಕೆ. ಬೆಂಗಳೂರಿನ ಶ್ರೀ ಚೈತನ್ಯ ಟೆಕ್ನೊ ಶಾಲೆಯಲ್ಲಿ 4ನೇ ತರಗತಿ ಓದುತ್ತಿದ್ದಾಳೆ. ಶಿವಮೊಗ್ಗದ ಸಾಗರ ಮೂಲದ ಈ ಮುದ್ದಾದ ಹುಡುಗಿ ಸದ್ಯ ಪೋಷಕರೊಂದಿಗೆ ಬೆಂಗಳೂರಿನ ರಾಮಮೂರ್ತಿನಗರದಲ್ಲಿ ನೆಲೆಸಿದ್ದಾರೆ. 
icon

(1 / 9)

ಬಾಲ್ಯದಿಂದಲೇ ನಟನೆಯ ಮೇಲೆ ಇವಳಿಗೆ ವಿಪರೀತ ಒಲವು. ಬೆಮೆಲ್‌ನಲ್ಲಿ ಉದ್ಯೋಗಿಯಾಗಿರುವ ತಂದೆ ನಾಟಕಗಳಲ್ಲಿ ಅಭಿನಯಿಸುತ್ತಾರೆ. ಅವರಿಗೂ ನಟನೆ ಇಷ್ಟ. ಹಾಗಾಗಿ ನಟನೆ ಈಕೆಗೆ ಬಳವಳಿಯಾಗಿ ಬಂದಿತ್ತು ಎನ್ನಬಹುದು. ʼನನಗೆ ಡೈರೆಕ್ಟರ್‌ ಸರ್‌ ಆಕ್ಟಿಂಗ್‌ ಹೇಳಿ ಕೊಡ್ತಾರೆʼ ಎನ್ನುವ ಈ ಪುಟ್ಟು ಹುಡುಗಿಗೆ ಮನೆಯಲ್ಲಿ ಅಮ್ಮ, ಅಪ್ಪ, ಅಜ್ಜಿ ಸೇರಿದಂತೆ ಎಲ್ಲರೂ ನಟನಾ ಸಲಹೆ ನೀಡುತ್ತಾರಂತೆ. 
icon

(2 / 9)

ʼಶಾಲೆಯಲ್ಲಿ ರಜೆ ಕೊಡ್ತಾರೆ, ಆಕ್ಟಿಂಗ್‌ಗೊಸ್ಕರ ಪರ್ಮಿಶನ್‌ ತಗೊಂಡಿದೇವೆ. ಟೈಮ್‌ ಸಿಕ್ಕಾಗೆಲ್ಲಾ ಬರೆದುಕೊಳ್ಳುತ್ತೇನೆ. ನನಗೆ ಆಕ್ಟಿಂಗ್‌, ಸ್ಕೂಲ್‌ ಎರಡೂ ಮ್ಯಾನೇಜ್‌ ಮಾಡೋದು ಕಷ್ಟ ಆಗುತ್ತಿಲ್ಲ, ಆಕ್ಟಿಂಗ್‌, ಸ್ಕೂಲ್‌ ಎರಡೂ ನನಗಿಷ್ಟʼ ಎಂದು ಮುದ್ದಾಗಿ ಹೇಳುತ್ತಾಳೆ ಲಚ್ಚಿ ಅಲಿಯಾಸ್‌ ಸಾಂಘವಿ. 
icon

(3 / 9)

ನಮ್ಮ ಲಚ್ಚಿ ಧಾರಾವಾಹಿಯ ಆಡಿಷನ್‌ನಲ್ಲಿ ಭಾಗವಹಿಸಿದ್ದ ಸಾಂಘವಿ ʼಲಚ್ಚಿʼ ಪಾತ್ರಕ್ಕೆ ಆಯ್ಕೆಯಾಗುತ್ತಾರೆ. ಈ ಹಿಂದೆ ʼಭಜರಂಗಿ 2ʼ ಸಿನಿಮಾದಲ್ಲೂ ನಟಿಸಿದ್ದಾಳೆ ಈ ಪೋರಿ. 
icon

(4 / 9)

ಕರ್ನಾಟಕದಾದ್ಯಂತ ಎಲ್ಲರೂ ಧಾರಾವಾಹಿ ನೋಡಿ, ಮೆಚ್ಚುಗೆ ಸೂಚಿಸುತ್ತಿರುವುದಕ್ಕೆ ಸಂತಸ ವ್ಯಕ್ತಪಡಿಸುತ್ತಾಳೆ ಸಾಂಘವಿ. ʼನನಗೆ ಲಕ್ಷ್ಮೀನಾರಾಯಣ ಆಗಿರುವುದಕ್ಕಿಂತ ಲಚ್ಚಿ ಆಗಿರುವುದೇ ಇಷ್ಟ. ಹುಡುಗಿ ಆಗಿದ್ದರೆ ವಿಗ್‌ ಎಲ್ಲಾ ಹಾಕಿಕೊಳ್ಳುವಂತಿಲ್ಲ. ವಿಗ್‌ ಹಾಕೋದು ಸ್ವಲ್ಪ ಕಷ್ಟ, ನಂಗೆ ಅದಕ್ಕೆ ಲಚ್ಚಿ ಆಗಿರೋದೆ ಇಷ್ಟʼ ಎಂದು ಮುದ್ದಾಗಿ ಒಲಿಯುತ್ತಾಳೆ. 
icon

(5 / 9)

ಡಾನ್ಸ್‌ ಅಂದ್ರೆ ತುಂಬಾ ಇಷ್ಟಪಡುವ ಸಾಂಘವಿಗೆ ಈಗ ಧಾರಾವಾಹಿ, ಶಾಲೆಯ ನಡುವೆ ಡಾನ್ಸ್‌ ಹೋಗಲು ಸಮಯ ಸಿಗುತ್ತಿಲ್ಲ ಎಂಬ ಬೇಸರವೂ ಇದೆ. 
icon

(6 / 9)

ʼಸೀನಿಯರ್‌ ಆಕ್ಟರ್ಸ್‌ಗಳನ್ನು ನೋಡಿ, ನನಗೂ ಅವರಂತೆ ನಟಿಸಬೇಕು ಎಂದು ಅನ್ನಿಸುತ್ತದೆ. ಅವರ ಆಕ್ಟಿಂಗ್‌ ನೋಡಿ ನಾನು ಕಲಿಯುತ್ತೇನೆʼ ಎಂದು ಪ್ರಬುದ್ಧಳಂತೆ ಮಾತನಾಡುತ್ತಾಳೆ ಈ 10 ವರ್ಷದ ಹುಡುಗಿ. 
icon

(7 / 9)

ʼಮೊದ ಮೊದಲು ನಂಗೆ ಹಳ್ಳಿ ಭಾಷೆ ತುಂಬಾನೇ ಕಷ್ಟ ಅನ್ನಿಸ್ತಾ ಇತ್ತು, ಈಗ ಅದು ಅಭ್ಯಾಸ ಆಗಿದೆ. ಅಲ್ಲದೇ ಈಗ ಮಾತನಾಡುವ ಮಧ್ಯೆ ಮಧ್ಯೆ ಅದೇ ಭಾಷೆ ಬರುತ್ತದೆʼ ಎನ್ನುತ್ತಾ ನಗುತ್ತಾಳೆ. 
icon

(8 / 9)

ʼಮೊದ ಮೊದಲು ನಂಗೆ ಹಳ್ಳಿ ಭಾಷೆ ತುಂಬಾನೇ ಕಷ್ಟ ಅನ್ನಿಸ್ತಾ ಇತ್ತು, ಈಗ ಅದು ಅಭ್ಯಾಸ ಆಗಿದೆ. ಅಲ್ಲದೇ ಈಗ ಮಾತನಾಡುವ ಮಧ್ಯೆ ಮಧ್ಯೆ ಅದೇ ಭಾಷೆ ಬರುತ್ತದೆʼ ಎನ್ನುವ ಸಾಂಘವಿ ಮುಂದಿನ ದಿನಗಳಲ್ಲಿ ಓದಿನೊಂದಿಗೆ ನಟನೆಯಲ್ಲೂ ಸಾಧನೆ ಮಾಡುವ ಕನಸು ಹೊಂದಿದ್ದಾಳೆ. 
icon

(9 / 9)

IPL_Entry_Point

ಇತರ ಗ್ಯಾಲರಿಗಳು