ಕನ್ನಡಕ್ಕೆ ರೀಮೇಕ್ ಆಗ್ತಿದೆ ಜಪಾನ್ ತೊತ್ತೊಚಾನ್ ಸಿನಿಮಾ; ಶಿವ ರಾಜ್‌ಕುಮಾರ್ ಅಮೆರಿಕದಿಂದ ವಾಪಸಾದ ಬಳಿಕ ಶೂಟಿಂಗ್ ಶುರು
ಜಪಾನಿನ ಪ್ರಸಿದ್ಧ ಕಾದಂಬರಿ ತೊತ್ತೊಚಾನ್ ಸಿನಿಮಾ ರೂಪದಲ್ಲಿ ನಮ್ಮ ಮುಂದೆ ಬರ್ತಿದೆ. ಎಂಜಿ ಶ್ರೀನಿವಾಸ್ ಹಾಗೂ ಶಿವ ರಾಜ್‌ಕುಮಾರ್ ಅವರ ಕಾಂಬಿನೇಷನ್‌ನಲ್ಲಿ ಈ ಸಿನಿಮಾ ಮೂಡಿ ಬರಲಿದೆ. ಮಕ್ಕಳ ದಿನಾಚರಣೆಯಂದೇ ಈ ಗುಡ್‌ನ್ಯೂಸ್ ಲಭಿಸಿದೆ.
ನವೆಂಬರ್ 14 ರಂದು, ನಿರ್ದೇಶಕ ಎಂಜಿ ಶ್ರೀನಿವಾಸ್ ಅವರು ತಮ್ಮ ಮುಂದಿನ ನಿರ್ದೇಶನವನ್ನು ಅಧಿಕೃತವಾಗಿ ಘೋಷಿಸಿದ್ದಾರೆ. ಶೀರ್ಷಿಕೆ ಬಹಿರಂಗಗೊಂಡಿದೆ. ತೊತ್ತೊಚಾನ್ ಕನ್ನಡಕ್ಕೆ ಬರುತ್ತಿದೆ. ಚಲನಚಿತ್ರ ನಿರ್ಮಾಪಕರಾದ ಗೀತಾ ಶಿವ ರಾಜಕುಮಾರ್ ಅವರ ವೈಯಕ್ತಿಕ ನೆಚ್ಚಿನ ಜಪಾನೀಸ್ ಕಾದಂಬರಿ ಆಧಾರಿತ ಮಕ್ಕಳ ಚಲನಚಿತ್ರವನ್ನು ಶ್ರೀನಿವಾಸ್ ನಿರ್ದೇಶಿಸಲಿದ್ದಾರೆ. 'ದೊಡ್ಡವರೆಲ್ಲ ಜಾಣರಲ್ಲ' ಎಂಬ ಶೀರ್ಷಿಕೆಯನ್ನು ಈ ಸಿನಿಮಾ ಹೊಂದಿರಲಿದೆ ಎಂದು ಮೂಲಗಳ ಪ್ರಕಾರ ತಿಳಿದು ಬಂದಿದೆ. ಮಕ್ಕಳ ದಿನಾಚರಣೆಯಂದು ಅಧಿಕೃತ ಪ್ರಕಟಣೆ ಹೊರಬೀಳಲಿದೆ. ಎನ್‌ಜಿಒ ಶಕ್ತಿಧಾಮಾದಲ್ಲಿ ಚಿತ್ರತಂಡವು ಮಕ್ಕಳೊಂದಿಗೆ ಚಿತ್ರದ ಪ್ರೋಮೋವನ್ನು ಚಿತ್ರೀಕರಿಸಿದೆ ಎಂಬ ಮಾಹಿತಿಯೂ ಇದೆ. ಈ ಬಗ್ಗೆ ಓಟಿಟಿ ಪ್ಲೇ ಮಾಹಿತಿ ಹಂಚಿಕೊಂಡಿದೆ.
ದಿ ಲಿಟ್ಲ್ ಗರ್ಲ್ ಅಟ್ ದಿ ವಿಂಡೋ ಜಪಾನಿನ ಪ್ರಸಿದ್ಧ ಕಾದಂಬರಿ. ಜಪಾನಿನ ಇತಿಹಾಸದಲ್ಲಿ ಅತಿ ಹೆಚ್ಚು ಮಾರಾಟವಾದ ಪುಸ್ತಕ ಇದು. 1981ರಲ್ಲಿ ಈ ಪುಸ್ತಕವನ್ನು ಪ್ರಕಟಿಸಲಾಗಿತ್ತು. ಇದೊಂದು ಅರೆ- ಆತ್ಮ ಚರಿತ್ರೆಯಾಗಿದೆ. ತನ್ನ ಶಾಲೆಯಲ್ಲಿ 7ನೇ ವರ್ಷದಲ್ಲಿರುವ ಹುಡುಗಿಯೊಬ್ಬಳು ಅನುಭವಿಸಿದ ಕಷ್ಟವನ್ನು ಇದರಲ್ಲಿ ವಿವರಿಸಲಾಗಿದೆ. ಗುಡ್‌ವಿಲ್ ರಾಯಭಾರಿ ಕುರೊಯಾನಾ ಬರೆದ ಆತ್ಮಚರಿತ್ರೆ ಇದಾಗಿದೆ. ಚಲನಚಿತ್ರ ನಿರ್ದೇಶಕ ಮತ್ತು ಚಿತ್ರಕಥೆಗಾರ ಎಂಜಿ ಶ್ರೀನಿವಾಸ್ ಅವರು ತೊತ್ತೋಚಾನ್ ರೀಮೇಕ್ ಮಾಡುವ ನಿರ್ಧಾರ ಕೈಗೊಂಡಿದ್ದಾರೆ. ಇವರು ಇನ್ನೊಂದು ಸಿನಿಮಾ ಮಾಡುತ್ತಿದ್ದಾರೆ ಎಂದಷ್ಟೇ ಈ ಹಿಂದೆ ಸುದ್ದಿಯಾಗಿತ್ತು. ಆದರೆ ಯಾವ ಸಿನಿಮಾ ಎಂದು ಯಾರಿಗೂ ತಿಳಿದಿರಲಿಲ್ಲ
ಇದು ಪುಟ್ಟ ಮಕ್ಕಳಿಗೂ ಇಷ್ಟವಾಗುವ ಅವರೇ ಕೇಂದ್ರವಾಗಿರುವ ಸಿನಿಮಾ ಆದ ಕಾರಣ. ಅವರ ಮುಂದಿನ ಹೆಜ್ಜೆ ಏನು ಎಂಬುದು ಮಕ್ಕಳ ದಿನಾಚರಣೆ ಅಂದರೆ ನವೆಂಬರ್ 14ರಂದೇ ಸಿನಿಮಾ ಬಗ್ಗೆ ಘೋಷಣೆ ಮಾಡಲಾಗಿದೆ. ಶಿವ ರಾಜ್‌ಕುಮಾರ್ ಈ ಸಿನಿಮಾದಲ್ಲಿ ಮುಖ್ಯವಾದ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ ಎಂದು ಹೇಳಲಾಗಿದೆ. ಇನ್ನು ಮಕ್ಕಳನ್ನು ಬಳಸಿಕೊಂಡು ಶೂಟಿಂಗ್ ಮಾಡಿದ ಟ್ರೇಲರ್ ನೋಡಲು ಪ್ರೇಕ್ಷಕರು ಆಸಕ್ತರಾಗಿದ್ದಾರೆ.
ಮಕ್ಕಳ ದಿನಾಚರಣೆಯಂದೇ ಈ ಖುಷಿಯ ಸುದ್ದಿ ಹೊರಬಿದ್ದಿದೆ. ಗೀತಾ ಶಿವರಾಜ್ ಕುಮಾರ್ ಅವರಿಗೂ ಇದು ತುಂಬಾ ಇಷ್ಟವಾದ ಕಾದಂಬರಿಯಂತೆ, ಈ ಸಿನಿಮಾವನ್ನು ಅವರೇ ಪ್ರೊಡ್ಯೂಸ್ ಮಾಡಲಿದ್ದಾರೆ. ಶಿವ ರಾಜ್‌ಕುಮಾರ್ ಅವರು ಅನಾರೋಗ್ಯದಿಂದ ಬಳಲುತ್ತಿದ್ದು ಅವರು ತಮ್ಮ ಚಿಕಿತ್ಸೆಗಾಗಿ ಅಮೇರಿಕಾಗೆ ತೆರಳಲಿದ್ದಾರೆ. ಅವರಿಗೆ ಶಸ್ತ್ರ ಚಿಕಿತ್ಸೆ ನಡೆಯಲಿದೆ. ಅದಾದ ಬಳಿಕ ಒಂದು ತಿಂಗಳ ಕಾಲ ಅವರು ಚೇತರಿಕೆಗಾಗಿ ಸಮಯ ಮೀಸಲಿಡುತ್ತಿದ್ದಾರೆ. ನಾಳೆ ಅವರ ಅಭಿನಯದ ಚಿತ್ರ ಭೈರತಿ ರಣಗಲ್ ಬಿಡುಗಡೆಯಾಗುತ್ತಿದೆ. ಈ ಹಿಂದೆ ಕೂಡ ಎಂಜಿ ಶ್ರೀನಿವಾಸ್ ಜೊತೆ ಶಿವ ರಾಜ್‌ಕುಮಾರ್ ಕೆಲಸ ಮಾಡಿದ್ದರು. ಈ ಚಿತ್ರವೂ ಅವರಿಬ್ಬರ ಜೋಡಿಯಲ್ಲಿ ಮೂಡಿ ಬರಲಿದೆ.
ನರ್ತನ್ ಕಥೆ ಬರೆದು ನಿರ್ದೇಶನ ಮಾಡಿರುವ ಶಿವ ರಾಜ್‌ಕುಮಾರ್ ಅಭಿನಯದ ಭೈರತಿ ರಣಗಲ್ ಸಿನಿಮಾ ನಾಳೆ ತೆರೆಕಾಣಲಿದೆ. ಟ್ರೈಲರ್ ರಿಲೀಸ್ ಆಗಿದೆ. ಚಿತ್ರವನ್ನು ಗೀತಾ ಶಿವ ರಾಜ್‌ಕುಮಾರ್ ಅವರ ಗೀತಾ ಪಿಕ್ಚರ್ಸ್ ಬ್ಯಾನರ್ ಅಡಿ ನಿರ್ಮಿಸಲಾಗಿದೆ. ಭೈರತಿ ರಣಗಲ್ ಆಗಿ ಶಿವ ರಾಜ್‌ಕುಮಾರ್ ಅಬ್ಬರಿಸಿದ್ದಾರೆ. ಸಿನಿಮಾ ನವೆಂಬರ್ 15ಕ್ಕೆ ರಿಲೀಸ್ ಆಗಲಿದ್ದು ಸಾಕಷ್ಟು ನಿರೀಕ್ಷೆಗಳನ್ನು ಹೊಂದಿದೆ.