Kanguva Review: ಅಬ್ಬರ ಜಾಸ್ತಿ, ಭಾವನಾತ್ಮಕತೆ ನಾಸ್ತಿ; ಸೂರ್ಯ, ದಿಶಾ ಪಟಾನಿ ನಟನೆಯ ಕಂಗುವಾ ಸಿನಿಮಾ ಹೇಗಿದೆ, ನೋಡಬಹುದೇ? ಓದಿ ವಿಮರ್ಶೆ
ಕನ್ನಡ ಸುದ್ದಿ  /  ಮನರಂಜನೆ  /  Kanguva Review: ಅಬ್ಬರ ಜಾಸ್ತಿ, ಭಾವನಾತ್ಮಕತೆ ನಾಸ್ತಿ; ಸೂರ್ಯ, ದಿಶಾ ಪಟಾನಿ ನಟನೆಯ ಕಂಗುವಾ ಸಿನಿಮಾ ಹೇಗಿದೆ, ನೋಡಬಹುದೇ? ಓದಿ ವಿಮರ್ಶೆ

Kanguva Review: ಅಬ್ಬರ ಜಾಸ್ತಿ, ಭಾವನಾತ್ಮಕತೆ ನಾಸ್ತಿ; ಸೂರ್ಯ, ದಿಶಾ ಪಟಾನಿ ನಟನೆಯ ಕಂಗುವಾ ಸಿನಿಮಾ ಹೇಗಿದೆ, ನೋಡಬಹುದೇ? ಓದಿ ವಿಮರ್ಶೆ

Kanguva Movie review: ಫ್ರಾನ್ಸಿಸ್‌, ಕಂಗುವಾ ಎಂಬ ದ್ವಿಪಾತ್ರದಲ್ಲಿ ಸೂರ್ಯ ನಟಿಸಿದ್ದಾರೆ. ಈ ಸಿನಿಮಾದಲ್ಲಿ ಇಷ್ಟವಾಗುವ ಅಂಶಗಳೇನು? ಇಷ್ಟವಾಗದ ಅಂಶಗಳೇನು? ಯುಎಸ್‌ ಪ್ರೀಮಿಯರ್‌ ರಿವ್ಯೂ ಇಲ್ಲಿದೆ. ಈ ಸಿನಿಮಾದಲ್ಲಿ ಮಾಸ್‌ ಅಂಶಗಳು ಹೆಚ್ಚಿವೆ. ಆದರೆ, ಭಾವನಾತ್ಮಕವಾಗಿ ಹತ್ತಿರವಾಗದು ಎಂದು ವಿಮರ್ಶಕರು ಅಭಿಪ್ರಾಯಪಟ್ಟಿದ್ದಾರೆ.

ಕಂಗುವಾ ಸಿನಿಮಾ ವಿಮರ್ಶೆ
ಕಂಗುವಾ ಸಿನಿಮಾ ವಿಮರ್ಶೆ

Kanguva Movie review: ಕಂಗುವಾ ಸಿನಿಮಾ ಭಾರತದಲ್ಲಿ ಮತ್ತು ಜಾಗತಿಕವಾಗಿ ಬಿಡುಗಡೆಯಾಗಿದೆ. ಭಾರತದಲ್ಲಿ ಇಂದು (ನವೆಂಬರ್‌14) ಬೆಳಗ್ಗಿನಿಂದಲೇ ಅಭಿಮಾನಿಗಳು ಚಿತ್ರಮಂದಿರಕ್ಕೆ ತೆರಳಿ ಸೋಷಿಯಲ್‌ ಮೀಡಿಯಾದಲ್ಲಿ ರಿವ್ಯೂ ಬರೆಯುತ್ತಿದ್ದಾರೆ. ಇದೇ ಸಮಯದಲ್ಲಿ ಅಮೆರಿಕದಲ್ಲಿ ಸಿನಿಮಾ ನೋಡಿದವರು ವಿಮರ್ಶೆ ನೀಡಿದ್ದಾರೆ. ಕಂಗುವ ಸಿನಿಮಾದ ಯುಎಸ್‌ ಪ್ರೀಮಿಯರ್‌ ರಿವ್ಯೂ ನೋಡಿ .ಎಂ9 ನ್ಯೂಸ್‌ ಪ್ರಕಟಿಸಿದ ವಿಮರ್ಶೆಯ ಸಾರಾಂಶ ಇಲ್ಲಿದೆ.

ಕಂಗುವಾ ಸಿನಿಮಾದ ಕಥೆ ಏನು?

ಕಂಗುವಾ ಎರಡು ಟೈಮ್‌ಲೈನ್‌ ಅಥವಾ ಎರಡು ಕಾಲದಲ್ಲಿ ನಡೆಯುವ ಕಥೆ. ಸೂರ್ಯ ಇಲ್ಲಿ ದ್ವಿಪಾತ್ರದಲ್ಲಿ ನಟಿಸಿದ್ದಾರೆ. ಒಂದು ಪಾತ್ರದಲ್ಲಿ ಈ ಕಾಲದ ಫ್ರಾನ್ಸಿಸ್‌ ಆಗಿ ನಟಿಸಿದ್ದಾರೆ. ಮತ್ತೊಂದು ಪಾತ್ರದಲ್ಲಿ ಹಳೆ ಕಾಲದ ಕಂಗುವಾ ಆಗಿ ನಟಿಸಿದ್ದಾರೆ. ಜತೆಗೆ ಒಂದು ಮಗು ಇದೆ. ಈ ಎರಡು ದ್ವಿಪಾತ್ರಗಳಲ್ಲಿಯೂ ಮಗುವಿಗಾಗಿ ನಡೆಯುವ ಘಟನೆಗಳನ್ನು ಚಿತ್ರಿಸಲಾಗಿದೆ. ಯಾಕೆ ಈ ಮಗು ಹಿಂದೆ ಜನರು ಬಿದ್ದಿದ್ದಾರೆ? ದುಷ್ಟರಿಂದ ಜನರನ್ನು ಉಳಿಸಲು ಆಯಾ ಕಾಲಘಟ್ಟದಲ್ಲಿ ಫ್ರಾನ್ಸಿಸ್‌ ಮತ್ತು ಕಂಗುವಾ ಹೇಗೆ ಹೋರಾಡುತ್ತಾರೆ ಎನ್ನುವುದು ಸಿನಿಮಾದ ಪ್ರಮುಖ ಸ್ಟೋರಿ.

ನಟನೆ ಹೇಗಿದೆ?

ಸೂರ್ಯ ಎರಡು ಪಾತ್ರದಲ್ಲಿ ನಟಿಸಿದ್ದಾರೆ. ಹಳೆಕಾಲದ ಮತ್ತು ಹೊಸಕಾಲದ ನಾಯಕನಾಗಿ ನಟಿಸಿದ್ದಾರೆ. ಫ್ರಾನ್ಸಿಸ್‌ ಮತ್ತು ಕಂಗುವಾ ಎಂಬ ಇಬ್ಬರ ನಡುವೆ ವೇಷಭೂಷಣದ ವ್ಯತ್ಯಾಸ ಇದ್ದರೂ ಭೌತಿಕವಾಗಿ ಇಬ್ಬರ ನಡುವೆ ವ್ಯತಿರಿಕ್ತ ಅಂಶಗಳು ಹೆಚ್ಚು ಸ್ಪಷ್ಟವಾಗಿಲ್ಲ. ಈ ಇಬ್ಬರಲ್ಲಿ ಫ್ರಾನ್ಸಿಸ್‌ ವರ್ಣರಂಜಿತ ವ್ಯಕ್ತಿ. ಪ್ರತಿ ದೃಶ್ಯದಲ್ಲೂ ಸೂರ್ಯ ಹೊಸ ಸೂಟ್‌ನಲ್ಲಿ ಕಾಣಿಸಿಕೊಂಡಿದ್ದಾರೆ. ಕಂಗುವಾ ಹಳೆ ಕಾಲದ ಚಿತ್ರವಿಚಿತ್ರದ ವೇಷಭೂಷಣಗಳ ವ್ಯಕ್ತಿ. ದೇಹ, ಹಚ್ಚೆ ಇತ್ಯಾದಿಗಳೊಂದಿಗೆ ಯೋಧನ ಲುಕ್‌ನಲ್ಲಿ ಕಾಣಿಸಿದ್ದಾರೆ. ಇವರಿಬ್ಬರ ವೇಷಭೂಷಣ ಇಷ್ಟವಾಗಬಹುದು. ಆದರೆ, ಈ ಸಿನಿಮಾದಲ್ಲಿ ಇಷ್ಟವಾಗದ ಅಂಶವೊಂದಿದೆ. ಅದು ಬರವಣಿಗೆ.

ಸಿನಿಮಾದ ಬರವಣಿಗೆ ಉತ್ತಮವಾಗಿಲ್ಲ. ಫ್ರಾನ್ಸಿಸ್‌ನ ಪಾತ್ರದ ಮೂಲಕ ತಮಾಷೆ ಮತ್ತು ಮನರಂಜನೆ ಅಂಶ ತುರುಕಲು ಯತ್ನಿಸಲಾಗಿದೆ. ಕೆಲವೊಮ್ಮೆ ನಗು ತರದ ಜೋಕ್ಸ್‌ಗಳು ಕೆಟ್ಟದ್ದಾಗಿರುತ್ತವೆ. ಅದೇ ರೀತಿ ಈ ಸಿನಿಮಾದಲ್ಲಿ ಕಾಮಿಡಿಗೆ ವ್ಯರ್ಥ ಪ್ರಯತ್ನ ಮಾಡಿದಂತೆ ಇದೆ. ಭಾವನಾತ್ಮಕ ಮತ್ತು ಇತರೆ ಅಂಶಗಳಿಂದ ಕಂಗುವಾ ಪಾತ್ರವೂ ಟೊಳ್ಳಾಗಿ ಕಾಣಿಸುತ್ತದೆ.

ಸೂರ್ಯನ ಕಡೆಯಿಂದ ಯಾವುದೇ ತಪ್ಪಾಗಿಲ್ಲ. ಆದರೆ, ಸಿನಿಮಾ ಪರಿಣಾಮಕಾರಿಯಾಗಿರದೆ ಇರುವುದೇ ಸಮಸ್ಯೆ. ಯಾವುದೇ ಪಾತ್ರಗಳು ಸ್ಮರಣೀಯ ಅಂಶಗಳನ್ನು ಹೊಂದಿಲ್ಲ. ಇದೇ ಕಾರಣಕ್ಕೆ ಕಂಗುವಾ ನಿರಾಶದಾಯಕವಾಗಿ ಕೊನೆಗೊಳ್ಳುತ್ತದೆ.

ದಿಶಾ ಪಟಾನಿ ಹೇಗೆ ನಟಿಸಿದ್ದಾರೆ ಎಂದು ಕೇಳುವಿರಾ? ಟ್ರೆಂಡಿ, ಮನಮೋಹಕ ಉಡುಗೆಗಳಲ್ಲಿ ದಿಶಾ ಪಟಾನಿ ಸೆಳೆಯುತ್ತಾರೆ. ನಟನೆಯ ವಿಷಯಕ್ಕೆ ಬಂದರೆ ಕಿರಿಕಿರಿ ಉಂಟಾಗುತ್ತದೆ!

ಒಟ್ಟಾರೆ ಕಂಗುವಾ ಸಿನಿಮಾ ಹೇಗಿದೆ?

ಶಿವ ನಿರ್ದೇಶನದ ವಿಶೇಷ ಸನ್ನಿವೇಶಗಳನ್ನು ಹೊಂದಿರುವ ಕಂಗುವಾ ಒಂದು ಮಹತ್ವದ ಸಿನಿಮಾವಾಗಿದೆ. ಆದರೆ, ಮೊದಲ 40 ನಿಮಿಷ ಈ ಸಿನಿಮಾ ಸೂತ್ರವಿಲ್ಲದ ಗಾಳಿಪಟ. ಸಿನಿಮಾ ಆರಂಭವಾದ ಕೆಲವೇ ನಿಮಿಷಗಳಲ್ಲಿ ಯೋಲೋ ಎಂಬ ಹಾಡು ಶುರುವಾಗುತ್ತದೆ. ಇದಾದ ಬಳಿಕ ಫ್ರಾನ್ಸಿಸ್‌ (ಸೂರ್ಯ) ಮತ್ತು ದಿಶಾಪಟಾನಿಯ ಹಾಸ್ಯ ಶುರುವಾಗುತ್ತದೆ. ಈ ಹಾಸ್ಯ ಮನರಂಜನೆ ನೀಡುವುದಿಲ್ಲ. ಯೋಗಿ ಬಾಬು ಮತ್ತು ಕೆಎಸ್‌ ರವಿಕುಮಾರ್‌ ನಗಿಸಲು ಯತ್ನಿಸುತ್ತಾರೆ.

ಇದಾದ ಬಳಿಕ ಒಂದು ಫ್ಲ್ಯಾಷ್‌ಬ್ಯಾಕ್‌ ಆರಂಭವಾದಗ ಸಿನಿಮಾ ಕುತೂಹಲದತ್ತ ಮುಖ ಮಾಡುತ್ತದೆ. ಇದಾದ ಬಳಿಕ ಸಿನಿಮಾ ಕಿಕ್‌ ನೀಡುತ್ತದೆ. ದೃಶ್ಯಗಳು ಉತ್ತಮವಾಗಿ ಕಾಣಿಸುತ್ತವೆ. ನೂರು ಕೈಗಳನ್ನು ಕತ್ತರಿಸುವ ದೃಶ್ಯ ಅಸಾಧ್ಯವೆನಿಸಿದರೂ ಪರಿಣಾಮಕಾರಿಯಾಗಿದೆ. ನಿರ್ದೇಶಕ ಶಿವ ಅವರು ಕಂಗುವಾ ಪಾತ್ರವನ್ನು ಹೆಚ್ಚು ಬೆಳೆಸಲು ಆಸಕ್ತಿ ವಹಿಸಿಲ್ಲ. ಪ್ರೇಕ್ಷಕರಿಗೆ ಕಂಗುವಾನನ್ನು ಸರಿಯಾಗಿ ಕನೆಕ್ಟ್‌ ಮಾಡಲು ಪ್ರಯತ್ನಿಸಿದಂತೆ ಇಲ್ಲ. ಇದು ಚಿತ್ರದ ಮೇಲೆ ಪರಿಣಾಮ ಬೀರಿದೆ. ಇದೇ ಸಮಯದಲ್ಲಿ ಚಿತ್ರದಲ್ಲಿ ಹಲವು ಹೆಸರುಗಳನ್ನು ತಿಳಿಸಲಾಗುತ್ತದೆ. ಆ ಸಂಕೀರ್ಣ ಹೆಸರುಗಳು ನೆನಪಿನಲ್ಲಿ ಉಳಿಯುವುದು ಕಷ್ಟ. ನೆನಪಿಡುವ ಅಗತ್ಯವೂ ಇಲ್ಲ.

ಒಟ್ಟಾರೆ ಸಿನಿಮಾದ ಮೊದಲಾರ್ಧವು ಅಷ್ಟೇನೂ ಪರಿಣಾಮಕಾರಿಯಾಗಿಲ್ಲ. ಇಂಟರ್‌ವಲ್‌ ಬಳಿಕ ಸಿನಿಮಾ ಆಕರ್ಷಕವಾಗಿ ಕಾಣಿಸಿದರೂ ಒಟ್ಟಾರೆಯಾಗಿ ಸಿನಿಮಾ ನಿರಾಶೆಗೊಳಿಸುತ್ತದೆ. ವಿಶೇಷವಾಗಿ ಕ್ಲೈಮ್ಯಾಕ್ಸ್‌ನಲ್ಲಿ ನಿರಾಶೆ ಕಾಡುತ್ತದೆ. ಫ್ರಾನ್ಸಿಸ್‌ ಜಿಗಿಯುವ ದೃಶ್ಯಗಳೇ ರಿಪೀಟ್‌ ಆಗಿ ಬೇಸರ ಮೂಡಿಸುತ್ತದೆ.

ನೀರಿನಲ್ಲಿ ಮೊಸಳೆಯಿಂದ ಮಗುವನ್ನು ರಕ್ಷಿಸುವಂತಹ ದೃಶ್ಯಗಳಲ್ಲಿನ ವಿಎಫ್‌ಎಕ್ಸ್‌ಗಳು ಜನರನ್ನು ತೃಪ್ತಿಪಡಿಸದೆ ಇರಬಹುದು. ಆದರೆ, ಹಿಮಾಕೋನಾದ ಹೊಡೆದಾಟದ ದೃಶ್ಯಗಳು ಪ್ರೇಕ್ಷಕರಿಗೆ ಖುಷಿ ನೀಡಬಹುದು.

ಈ ಸಿನಿಮಾ ಒಂದು ಹಂತದ ಬಳಿಕ ಏಕತಾನತೆ ಮೂಡಿಸುತ್ತದೆ. ಭಾವನೆಯ ವಿಷಯ ಮಾತನಾಡದೆ ಇರುವುದು ಒಳ್ಳೆಯದು. ಯಾಕೆಂದರೆ ಈ ಸಿನಿಮಾ ಭಾವನಾತ್ಮಕವಾಗಿ ತಟ್ಟುವುದಿಲ್ಲ.

ಒಟ್ಟಾರೆ, ಈ ಸಿನಿಮಾದ ಜೀವನಾಡಿಯಾದ ಕಂಗುವಾ ಪಾತ್ರವನ್ನು ಅಭಿವೃದ್ಧಿಪಡಿಸುವಲ್ಲಿ ನಿರ್ದೇಶಕ ಶಿವ ವಿಫಲವಾಗಿದ್ದಾರೆ. ಒಂದು ಮಾಸ್‌ ಸಿನಿಮಾದಂತೆ ನಿರ್ದೇಶಕರು ಸಿನಿಮಾ ರಚಿಸಿದ್ದಾರೆ. ಯಾವುದೇ ಪಾತ್ರವನ್ನು ಇನ್ನಷ್ಟು ಡೆವಲಪ್‌ ಮಾಡದೆ ಇರುವುದು ಮತ್ತು ಭಾವನಾತ್ಮಕವಾಗಿ ಟಚ್‌ ಮಾಡದೆ ಇರುವುದು ಈ ಚಿತ್ರದ ಮೈನಸ್‌ ಪಾಯಿಂಟ್‌.

ಈ ಚಿತ್ರದಲ್ಲಿ ಬಾಬಿ ಡಿಯೋಲ್‌ ಪಾತ್ರವು ಸೂರ್ಯನಿಗೆ ಸರಿಸಮನಾಗಿದೆ. ಈ ಪಾತ್ರದಲ್ಲಿ ಅದ್ಭುತವಾಗಿ ಕಾಣಿಸಿದ್ದಾರೆ. ಆದರೆ, ಕಳಪೆ ಬರವಣಿಗೆ ಮತ್ತು ಪಾತ್ರವನ್ನು ಅಭಿವೃದ್ಧಿಪಡಿಸಿರುವ ರೀತಿಯಿಂದ ಸೋಲಾಗಿದೆ. ಯೋಗಿ ಬಾಬು, ಕೆಎಸ್‌ ರವಿಕುಮಾರ್‌, ರೆಡಿನ್‌ ಕಿಂಗ್ಸ್‌ಲಿ ಮುಂತಾದವರ ನಟನೆ ಗಮನ ಸೆಳೆಯುತ್ತದೆ.

ದೇವಿ ಶ್ರೀಪ್ರಸಾದ್‌ ಸಂಗೀತ ಮತ್ತು ಹಿನ್ನೆಲೆ ಸಂಗೀತ ನೀಡಿದ್ದಾರೆ. ಹಾಡುಗಳು ಸಾಕಷ್ಟಿವೆ. ಯಾವುದೂ ಗಮನ ಸೆಳೆಯುವುದಿಲ್ಲ. ಒಂದೆರಡು ಹಾಡುಗಳನ್ನು ಮೆಚ್ಚಿಕೊಳ್ಳಬಹುದು. ಈ ಹಾಡುಗಳು ಕಥೆ ಹೇಳುವ ಸಾಧನಗಳಾಗಿ ನಿರೂಪಣೆಗೆ ಬೆರೆತುಕೊಳ್ಳುತ್ತವೆ. ಬಿಜಿಎಂ ಅಥವಾ ಬ್ಯಾಕ್‌ ಗ್ರೌಂಡ್‌ ಮ್ಯೂಸಿಕ್‌ ಕೆಲವು ಕಡೆ ಉತ್ತಮವಾಗಿದೆ, ಕೆಲವು ಕಡೆ ನಿರಾಶೆಗೊಳಿಸುತ್ತದೆ. ಯಾವುದೇ ಪಾತ್ರಗಳಿಗೆ ನೆನಪಿನಲ್ಲಿಟ್ಟುಕೊಳ್ಳುವಂತಹ ಬೀಟ್‌ ನೀಡಿಲ್ಲ.

ದೃಶ್ಯ ವೈಭವವಾಗಿ ಕಂಗುವಾ ಬೆರಗುಗೊಳಿಸಬಹುದು. ಎಡಿಟಿಂಗ್‌ ಇನ್ನಷ್ಟು ಉತ್ತಮವಾಗಿಸಬೇಕಿತ್ತು. ಪ್ರೊಡಕ್ಷನ್‌ ವಿಷಯದಲ್ಲೂ ಚಿತ್ರ ಇಷ್ಟವಾಗುತ್ತದೆ. ಸಾಕಷ್ಟು ಹಣ ಸುರಿದಿರುವುದರಿಂದ ಚಿತ್ರವು ಬಿಗ್‌ ಬಜೆಟ್‌ ಲಕ್ಷಣಗಳನ್ನು ಹೊಂದಿದೆ. ಭರ್ಜರಿ ಫೈಟಿಂಗ್‌ ದೃಶ್ಯಗಳು ಇವೆ. ಅಲ್ಲಲ್ಲಿ ವಿಎಫ್‌ಎಕ್ಸ್‌ ವಿಫಲವಾಗಿದೆ. ಆದರೆ, ಸಿನಿಮಾವಾಗಿ ಭಾವನಾತ್ಮಕವಾಗಿ ಟಚ್‌ ಮಾಡದೆ ಇದ್ದರೆ ಪ್ರೇಕ್ಷಕರಿಗೆ ಇಷ್ಟವಾಗುತ್ತದೆ.

ಕಂಗುವಾ ಸಿನಿಮಾದಲ್ಲಿ ಇಷ್ಟವಾಗುವ ಅಂಶಗಳೇನು?

ದೃಶ್ಯ ವೈಭವ ಇಷ್ಟವಾಗುತ್ತದೆ. ಹಿಮಾಕೋನಾದ ಸಾಹಸ ದೃಶ್ಯಗಳು ಇಷ್ಟವಾಗುತ್ತವೆ. ಸೂರ್ಯನ ನಟನೆ ಇಷ್ಟವಾಗುತ್ತದೆ. ಕಂಗುವಾ ಸಿನಿಮಾದಲ್ಲಿ ಫೈಟಿಂಗ್‌ ಚೆನ್ನಾಗಿದೆ, ಅನಿರೀಕ್ಷಿತ ಘಟನೆಗಳೂ ಎದುರಾಗುತ್ತವೆ.

ಚಿತ್ರದಲ್ಲಿ ಇಷ್ಟವಾಗದ ಅಂಶಗಳೇನು?

ಪಾತ್ರಗಳ ಅಭಿವೃದ್ಧಿ ಕಳಪೆಯಾಗಿದೆ. ನೆನಪಿನಲ್ಲಿಟ್ಟುಕೊಳ್ಳುವಂತಹ ಅದ್ಭುತ ಕ್ಷಣಗಳು, ದೃಶ್ಯಗಳು ಹೆಚ್ಚು ಇಲ್ಲ. ಭಾವನಾತ್ಮಕವಾಗಿ ಕನೆಕ್ಟ್‌ ಆಗುವುದಿಲ್ಲ. ಅಬ್ಬರ ಜಾಸ್ತಿ, ಮಾಸ್‌ ಫಿಲ್ಮ್‌ನಂತೆ ನಿರ್ಮಿಸಲಾಗಿದೆ.

Whats_app_banner