Kanguva Twitter Review: 'ಕಂಗುವಾ' ಟ್ವಿಟರ್ ವಿಮರ್ಶೆ; ವಿದೇಶದಲ್ಲಿ ಪ್ರೀಮಿಯರ್‌ ಶೋ ಟಾಕ್‌ ಹೇಗಿದೆ? ಸಿನಿಮಾ ಪಡೆದುಕೊಂಡ ರೇಟಿಂಗ್ ಎಷ್ಟು?
ಕನ್ನಡ ಸುದ್ದಿ  /  ಮನರಂಜನೆ  /  Kanguva Twitter Review: 'ಕಂಗುವಾ' ಟ್ವಿಟರ್ ವಿಮರ್ಶೆ; ವಿದೇಶದಲ್ಲಿ ಪ್ರೀಮಿಯರ್‌ ಶೋ ಟಾಕ್‌ ಹೇಗಿದೆ? ಸಿನಿಮಾ ಪಡೆದುಕೊಂಡ ರೇಟಿಂಗ್ ಎಷ್ಟು?

Kanguva Twitter Review: 'ಕಂಗುವಾ' ಟ್ವಿಟರ್ ವಿಮರ್ಶೆ; ವಿದೇಶದಲ್ಲಿ ಪ್ರೀಮಿಯರ್‌ ಶೋ ಟಾಕ್‌ ಹೇಗಿದೆ? ಸಿನಿಮಾ ಪಡೆದುಕೊಂಡ ರೇಟಿಂಗ್ ಎಷ್ಟು?

ಸೂರ್ಯ ಅಭಿನಯದ ಬಹುನಿರೀಕ್ಷಿತ ಸಿನಿಮಾ ಕಂಗುವಾ ಇಂದು ರಿಲೀಸ್‌ ಆಗಿದೆ. ಈ ಸಿನಿಮಾದ ಬಗ್ಗೆ ಸಾಗರೋತ್ತರ ಟಾಕ್ ಹೇಗಿದೆ ಎಂಬುದನ್ನು ನಾವಿಲ್ಲಿ ನೀಡಿದ್ದೇವೆ. ಹಾಗೂ ಈ ಚಿತ್ರದ ರೇಟಿಂಗ್ ಮಾಹಿತಿಯೂ ಇಲ್ಲಿದೆ.

ಇಲ್ಲಿದೆ ನೋಡಿ ಕಂಗುವಾ ಸಿನಿಮಾದ ಟ್ವಿಟರ್ ವಿಮರ್ಷೆ
ಇಲ್ಲಿದೆ ನೋಡಿ ಕಂಗುವಾ ಸಿನಿಮಾದ ಟ್ವಿಟರ್ ವಿಮರ್ಷೆ

Kanguva Twitter Review: ಸೂರ್ಯ ಅವರ ವೃತ್ತಿಜೀವನದ ಅತಿದೊಡ್ಡ ಬಜೆಟ್ ಚಿತ್ರವಾದ 'ಕಂಗುವಾ' ಗುರುವಾರ ತಮಿಳು, ತೆಲುಗು, ಹಿಂದಿ ಮತ್ತು ಇತರ ದಕ್ಷಿಣದ ಭಾಷೆಗಳಲ್ಲಿ ಬಿಡುಗಡೆಯಾಗಿದೆ. ಆಕ್ಷನ್ ಥ್ರಿಲ್ಲರ್ ಕಥಾವಸ್ತುವಿನೊಂದಿಗೆ ತೆರೆಕಂಡ ಚಿತ್ರವನ್ನು ಶಿವ ನಿರ್ದೇಶಿಸಿದ್ದಾರೆ. ದಿಶಾ ಪಟಾನಿ ನಾಯಕಿಯಾಗಿ ನಟಿಸಿರುವ ಈ ಸಿನಿಮಾದಲ್ಲಿ ಅನಿಮಲ್ ಖ್ಯಾತಿಯ ಬಾಬಿ ಡಿಯೋಲ್ ವಿಲನ್ ಆಗಿ ಕಾಣಿಸಿಕೊಂಡಿದ್ದಾರೆ. ಕಂಗುವ ಸಾಗರೋತ್ತರ ಪ್ರೀಮಿಯರ್ ಟಾಕ್ ಹೇಗಿದೆ ಎಂಬ ಮಾಹಿತಿ ಇಲ್ಲಿದೆ.

ಕಂಗುವಾ ಚಿತ್ರದಲ್ಲಿ ಸೂರ್ಯ 1678 ರ ಕಾಲದ ಹೋರಾಟಗಾರನಾಗಿ ಕಾಣಿಸಿಕೊಂಡಿದ್ದಾರೆ. ಇಂದಿನ ಪೀಳಿಗೆಯ ಯುವಕ ಫ್ರಾನ್ಸಿಸ್ ಆಗಿಯೂ ದ್ವಿಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಈ ಚಿತ್ರದಲ್ಲಿ ಸೂರ್ಯ ಐದು ಗೆಟಪ್‌ಗಳಲ್ಲಿ ಕಾಣಿಸಿಕೊಳ್ಳಲಿದ್ದು, ಈ ಪಾತ್ರಗಳ ನಡುವಿನ ವ್ಯತ್ಯಾಸ ಮತ್ತು ಮ್ಯಾನರಿಸಂ ಆಕರ್ಷಕವಾಗಿದೆ ಎಂದಿದ್ದಾರೆ. ಕಂಗುವಾ ಚಿತ್ರ ಸೂರ್ಯ ಅವರ ಒನ್ ಮ್ಯಾನ್ ಶೋ ಆಗಿದೆ ಎಂದಿದ್ದಾರೆ.

ಕಂಗುವಾ ಪಾತ್ರದಲ್ಲಿ ಸೂರ್ಯ ಎಂಟ್ರಿ ಪ್ರೇಕ್ಷಕರಲ್ಲಿ ಗೂಸ್‌ಬಂಪ್ಸ್‌ ತರುವಂತಿದೆ. ಮೊದಲಾರ್ಧ ತುಂಬಾ ಚೆನ್ನಾಗಿದೆ ಎಂದು ಹೇಳುತ್ತಿದ್ದಾರೆ. ಟ್ವಿಟ್ಟರ್ ಮೂಲಕ ಜನ ಹಂಚಿಕೊಂಡ ರಿವ್ಯೂಗಳನ್ನು ನಾವಿಲ್ಲಿ ನೀಡಿದ್ದೇವೆ ಗಮನಿಸಿ.

ಆಕ್ಷನ್ ಸೀಕ್ವೆನ್ಸ್
ಆಕ್ಷನ್ ಸೀಕ್ವೆನ್ಸ್ ಮತ್ತು ವಿಎಫ್‌ಎಕ್ಸ್ ಅದ್ಭುತವಾಗಿದೆ ಎಂದು ಹೇಳಲಾಗುತ್ತಿದೆ. ಸೂರ್ಯಾ ಮತ್ತು ಬಾಬಿ ಡಿಯೋಲ್‌ಗೆ ಬೋಲ್ಡ್‌ ಪಾತ್ರಗಳು ತುಂಬಾ ಒಪ್ಪುತ್ತಿದೆ ಎಂದಿದ್ದಾರೆ. ಅದರಲ್ಲೂ ಕಂಗುವಾ ಸಿನಿಮಾದಲ್ಲಿ ಕಾರ್ತಿ ಎಂಟ್ರಿ ಅಚ್ಚರಿ ಮೂಡಿಸುವಂತಿದೆ. ಕಂಗುವಾ ಎರಡನೇ ಭಾಗ ಹೇಗಿರಲಿದೆ ಎಂಬ ಸುಳಿವನ್ನು ಕಾರ್ತಿ ಪಾತ್ರದ ಮೂಲಕ ಬಿಚ್ಚಿಟ್ಟ ನಿರ್ದೇಶಕರು ಪ್ರೇಕ್ಷಕರಲ್ಲಿ ಉತ್ಸಾಹ ಮೂಡಿಸಿದ್ದಾರೆ ಎನ್ನಲಾಗಿದೆ.

ದೇವಿಶ್ರೀಪ್ರಸಾದ್ ಅವರ ಬಿಜಿಎಂ ಈ ಸಿನಿಮಾಗೆ ಜೀವ ತುಂಬಿದೆ. ಪ್ರತಿ ಬಾರಿ ಕಂಗುವಾ ಪಾತ್ರ ಕಾಣಿಸಿಕೊಂಡಾಗ ಕೇಳಿಬರುವ ಬಿಜಿಎಂ ಪ್ರೇಕ್ಷಕರಿಗೆ ಜೋಶ್ ತರುತ್ತದೆ ಎನ್ನಲಾಗಿದೆ. ಕಂಗುವಾ ಚಿತ್ರ ಬ್ಲಾಕ್ ಬಸ್ಟರ್ ಆಗಿದ್ದು, ಸಾವಿರ ಕೋಟಿಗೂ ಹೆಚ್ಚು ಕಲೆಕ್ಷನ್ ಮಾಡುವುದು ಖಚಿತ ಎಂದು ಅಭಿಮಾನಿಗಳು ಹೇಳುತ್ತಿದ್ದಾರೆ.

ಎಂಟ್ರಿ ಚೆನ್ನಾಗಿದ್ದರೂ ಮೊದಲರ್ಧದ ಬಹುತೇಕ ದೃಶ್ಯಗಳು ಕಥೆಯ ಹೊರತಾಗಿ ಕಿರಿಕಿರಿ ಉಂಟು ಮಾಡುತ್ತವೆ ಎಂದು ಸಿನಿಮಾ ವೀಕ್ಷಿಸಿದ ಇನ್ನೊಬ್ಬ ಅಭಿಮಾನಿ ಹೇಳಿದ್ದಾರೆ. ಕಂಗುವ ಚಿತ್ರದಲ್ಲಿ ದಿಶಾ ಪಟಾನಿ ನಾಯಕಿಯಾಗಿ ನಟಿಸಿದ್ದಾರೆ. ಕೆಇ ಜ್ಞಾನವೇಲ್ ರಾಜ ಈ ಚಿತ್ರವನ್ನು ನಿರ್ಮಿಸಿದ್ದಾರೆ.

ಸದ್ಯ ಈ ಸಿನಿಮಾ 4.25/5 ರೇಟಿಂಗ್‌ ಪಡೆದುಕೊಂಡಿದೆ.

ತೆಲುಗು ನಟ ವೆಂಕಿ ವಿಮರ್ಷೆ

ಉತ್ತಮ ರೇಟಿಂಗ್ ಪಡೆದುಕೊಂಡಿದೆ. ಇನ್ನೂ ಸಾಕಷ್ಟು ಜನ ತಮ್ಮ ಅನಿಸಿಕೆ ಹಂಚಿಕೊಂಡಿದ್ದಾರೆ.

Whats_app_banner