ಕನ್ನಡ ಸುದ್ದಿ  /  ಮನರಂಜನೆ  /  Brundavana Serial: ಭಾರ್ಗವಿಯ ದ್ವೇಷದ ಜ್ವಾಲೆಗೆ ತುಪ್ಪ ಸುರಿದ ಆಕಾಶ್‌, ಅಜ್ಜಮ್ಮನ ಉತ್ತರಾಧಿಕಾರಿಯಾಗ್ತಾಳಾ ಪುಷ್ಪಾ!

Brundavana Serial: ಭಾರ್ಗವಿಯ ದ್ವೇಷದ ಜ್ವಾಲೆಗೆ ತುಪ್ಪ ಸುರಿದ ಆಕಾಶ್‌, ಅಜ್ಜಮ್ಮನ ಉತ್ತರಾಧಿಕಾರಿಯಾಗ್ತಾಳಾ ಪುಷ್ಪಾ!

Brindavana Kannada Serial Today Episode April 25th: ʼಬೃಂದಾವನʼ ಧಾರಾವಾಹಿಯ ಗುರುವಾರದ ಎಪಿಸೋಡ್‌ನಲ್ಲಿ ಸಹನಾ ಪ್ರೀತಿಯನ್ನು ರಿಜೆಕ್ಟ್‌ ಮಾಡಿದ್ದು ಮಾತ್ರವಲ್ಲ, ಪುಷ್ಪಾಳೇ ತನ್ನ ಜೀವ, ಜೀವನ ಎಂದು ಒಪ್ಪಿಕೊಂಡ ಆಕಾಶ್‌. ಭಾರ್ಗವಿ ದ್ವೇಷದ ಜ್ವಾಲೆಗೆ ತುಪ್ಪ ಸುರಿದ ಬೃಂದಾವನದ ಕುಡಿ. ಪುಷ್ಪಾಳಿಗೆ ಮನೆ ಯಜಮಾನಿಕೆ ಪಟ್ಟ ವಹಿಸುವ ಸುಧಾಮೂರ್ತಿ.

ಭಾರ್ಗವಿಯ ದ್ವೇಷದ ಜ್ವಾಲೆಗೆ ತುಪ್ಪ ಸುರಿದ ಆಕಾಶ್‌; ಬೃಂದಾವನ ಧಾರಾವಾಹಿ ಏಪ್ರಿಲ್‌ 25th
ಭಾರ್ಗವಿಯ ದ್ವೇಷದ ಜ್ವಾಲೆಗೆ ತುಪ್ಪ ಸುರಿದ ಆಕಾಶ್‌; ಬೃಂದಾವನ ಧಾರಾವಾಹಿ ಏಪ್ರಿಲ್‌ 25th

ಬೃಂದಾವನ ಧಾರಾವಾಹಿಯ ನಿನ್ನೆಯ (ಏಪ್ರಿಲ್‌ 25)ಸಂಚಿಕೆಯಲ್ಲಿ ಸಹನಾ ಮನೆಗೆ ಬಂದು ಭಾರ್ಗವಿ ಮುಂದೆ ತನಗೆ ಸಹನಾ ಇಷ್ಟವಿಲ್ಲ ಎಂದು ಹೇಳುವ ಆಕಾಶ್‌ ತನ್ನ ಬದುಕಿನಲ್ಲಿ ನಡೆದ ಘಟನೆಗಳನ್ನು ಬಿಚ್ಚಿಡುತ್ತಾನೆ. ತಾನು ವಿದೇಶದಲ್ಲಿ ಓದುತ್ತಿದ್ದಾಗ ಅಜ್ಜಿಗೆ (ಸುಧಾಮೂರ್ತಿ) ಹಾರ್ಟ್‌ ಪ್ಲಾಬಂ ಬಂದಿದ್ದು, ನಂತರ ತನಗೆ ಮದುವೆ ಮಾಡಿಕೊಳ್ಳುವಂತೆ ಅಜ್ಜಿ ಬೇಡಿಕೆ ಇರಿಸಿದ್ದು, ಕೊನೆಗೆ ಪುಷ್ಪಾಳನ್ನು ಆಯ್ಕೆ ಮಾಡಿದ್ದು, ಸೈಬರ್‌ನವನು ಫೋಟೊ ಅದಲು ಬದಲು ಮಾಡಿದ್ದು, ಪುಷ್ಪಾಳ ಫೋಟೊ ಬದಲು ಸಹನಾ ಫೋಟೊ ಕಳುಹಿಸಿದ್ದು, ತಾನು ಸಹನಾಳೇ ಪುಷ್ಪಾ ಎಂದು ನಂಬಿ ಪ್ರೀತಿಸಿದ್ದು ಎಲ್ಲವನ್ನೂ ಹೇಳಿಕೊಳ್ಳುತ್ತಾನೆ. ಅಲ್ಲದೇ ತನಗೆ ಸಹನಾ ಮೇಲೆ ಯಾವುದೇ ಪ್ರೀತಿಯಿಲ್ಲ, ನನ್ನ ಬದುಕಿಗೆ ಪುಷ್ಪಾಳೇ ಎಲ್ಲಾ. ನಮ್ಮ ಮನೆಯಲ್ಲಿ ಪುಷ್ಪಾ ಇಲ್ಲ ಎಂಬುದನ್ನು ಯಾರಿಂದಲೂ ಊಹಿಸಲು ಆಗುವುದಿಲ್ಲ ಎಂದೆಲ್ಲಾ ಹೇಳುವುದು ಮಾತ್ರವಲ್ಲ, ತನ್ನ ಮನೆ ಅಂದರೆ ಬೃಂದಾವನದ ಒಗ್ಗಟ್ಟಿನ ಬಗ್ಗೆ ಹೇಳಿ ಇನ್ನಷ್ಟ ಭಾರ್ಗವಿಗೆ ಉರಿಯವಂತೆ ಮಾತನಾಡುತ್ತಾನೆ ಆಕಾಶ್‌. ಅವನ ಮಾತುಗಳು ಪುಷ್ಪಾ ಅಂದು ಆಡಿದ ಪ್ರತಿಧ್ವನಿಯಂತೆ ಭಾರ್ಗವಿಯ ಕಿವಿಗೆ ಅಪ್ಪಳಿಸುತ್ತದೆ. ಎಲ್ಲಾ ತಿಳಿದಿದ್ದರೂ ಏನೂ ತಿಳಿಯದಂತೆ ಮುಗ್ಧಳ ರೀತಿ ವರ್ತಿಸುವ ಭಾರ್ಗವಿಗೆ ಸಹನಾಗೆ ಹೇಳಿಬಿಡಿ ನನಗೆ ಅವಳ ಮೇಲೆ ಯಾವುದೇ ಭಾವನೆ ಇಲ್ಲ. ಎಲ್ಲಾ ಗೊತ್ತಿದ್ದು ಇದನ್ನು ಮುಂದುವರಿಸುವುದು ಸರಿಯಲ್ಲ. ಅದಕ್ಕಾಗಿ ಈಗಲೇ ಮುಗಿಸಿ ಬಿಡೋಣ ಅಂತ ಬಂದೆ ಎಂದು ಹೇಳಿ ಸಹನಾ ನೀಡಿದ್ದ ಗಿಫ್ಟ್‌ ಮರಳಿಸಿ ಹೊರಡುತ್ತಾನೆ.

ಟ್ರೆಂಡಿಂಗ್​ ಸುದ್ದಿ

ಪುಷ್ಪಾಗೆ ಮನೆಯ ಯಜಮಾನಿಕೆ ಕೊಡುವ ಅಜ್ಜಮ್ಮ

ರಾಯರ ಮಠದಿಂದ ಮನೆಗೆ ಪ್ರಸಾದ ಬಂದಾಗ ಅದನ್ನು ದೇವರ ಮನೆಯಲ್ಲಿ ಇಟ್ಟು ಪೂಜೆ ಮಾಡಿ ಎಲ್ಲರಿಗೂ ಪ್ರಸಾದ ಹಂಚುವಂತೆ ಪುಷ್ಪಾಳಿಗೆ ಹೇಳುತ್ತಾರೆ. ʼಅತ್ತೆ ಯಾವಾಗಲೂ ಪ್ರಸಾದ ಬಂದಾಗ ಪೂಜೆ ಮಾಡಿ ಎಲ್ಲರಿಗೂ ನೀವೇ ಹಂಚ್ತಾ ಇದ್ರಿ, ಆದರೆ ಈ ವರ್ಷ ಏನು ವಿಶೇಷ ಪುಷ್ಪಾಳಿಗೆ ಹೇಳುತ್ತಿದ್ದೀರಿʼ ಎಂದು ಅಳಿಯ ಕೇಳಿದಾಗ ಈ ವರ್ಷ ನಾನು ಇದ್ದೇನೆ ಆದರೆ ಮುಂದಿನ ವರ್ಷ ಕೂಡ ಇರುತ್ತೇನೆ ಎಂದು ಯಾವ ಗ್ಯಾರೆಂಟಿ ಇದೆ. ನನ್ನ ನಂತರ ಮನೆಯ ಯಜಮಾನಿಕೆ ಯಾರಿಗಾದ್ರೂ ಸೇರಲೇಬೇಕು ಅಲ್ವಾ, ಅದಕ್ಕೆ ಪುಷ್ಪಾಳೇ ಸರಿ ಎಂದು ನನಗೆ ಅನ್ನಿಸುತ್ತಿದೆ. ಪುಷ್ಪಾಳಲ್ಲಿ ಮನೆಯ ಯಜಮಾನಿಯಾಗುವ ಎಲ್ಲಾ ಲಕ್ಷಣಗಳು ಇವೆʼ ಎನ್ನುವ ಸುಧಾಮೂರ್ತಿ ಆಕೆಯನ್ನು ತನ್ನ ಉತ್ತರಾಧಿಕಾರಿ ಎಂದು ಘೋಷಿಸುತ್ತಾರೆ.

ಆಕಾಶ್‌ಗೆ ಜೀವನ-ಪ್ರೇಮ ಪಾಠ ಮಾಡುವ ಸುನಾಮಿ

ಸಹನಾ ನೀಡಿದ್ದ ಗಿಫ್ಟ್‌ ಮರಳಿಸಿ ಕಾಲೇಜಿಗೆ ಬರುವ ಆಕಾಶ್‌ಗೆ ಎದುರಾಗುವ ಸುನಾಮಿ ʼಗೆಳೆಯ ನೀನು ಒಳ್ಳೆ ನಿರ್ಧಾರ ಮಾಡಿದೆ. ಒಂದು ವೇಳೆ ನಿನಗೆ ಈಗಲೂ ಪುಷ್ಪಾಳ ಪ್ರೀತಿ ಅರ್ಥ ಆಗಿಲ್ಲ ಎಂದಾಗಿದ್ರೆ ಒಬ್ಬರ ಜೀವನ ಅಲ್ಲ ಇಬ್ಬರ ಜೀವನ ಹಾಳಾಗ್ತಾ ಇತ್ತು, ಜೊತೆಗೆ ನಿಮ್ಮ ಮನೆಯವರ ನೆಮ್ಮದಿ ಕೂಡ ಕೆಡ್ತಾ ಇತ್ತು, ನೀನು ಒಳ್ಳೆಯ ನಿರ್ಧಾರ ಮಾಡಿದೆ ಎನ್ನುವ ಸುನಾಮಿ, ಮದುವೆಯಾದ ಮೇಲೆ ಹೆಂಡತಿಯನ್ನು ಹೇಗೆ ನೋಡಿಕೊಳ್ಳಬೇಕು, ಗಂಡ ಹೆಂಡತಿಗೆ ಸ್ವಲ್ಪ ಪ್ರೀತಿ ತೋರಿದ್ರು ಹೆಂಡತಿ ಎಷ್ಟು ಖುಷಿ ಪಡ್ತಾಳೆ ಅಂತೆಲ್ಲಾ ವಿವರಿಸುತ್ತಾನೆ. ಅಲ್ಲದೆ ಇಂದೇ ಹೋಗಿ ಪುಷ್ಪಾಳ ಬಳಿ ನಿನ್ನ ಪ್ರೀತಿಯನ್ನು ಹೇಳಿಕೋ ಎಂದು ಸಲಹೆ ನೀಡುತ್ತಾನೆ.

ಸುನಾಮಿ ಮಾತು ಆಕಾಶ್‌ ಕಣ್ಣು ತೆರೆಸುತ್ತದೆ. ಅಲ್ಲದೇ ಇಂದೇ ತನ್ನ ಪ್ರೀತಿಯನ್ನು ಪುಷ್ಪಾಳ ಮುಂದೆ ವ್ಯಕ್ತಪಡಿಸಬೇಕು, ಇನ್ನು ಮುಂದೆ ಪುಷ್ಪಾಳಿಗೆ ಒಳ್ಳೆಯ ಗಂಡನಾಗಿ ಬದುಕುಬೇಕು ಎನ್ನುವ ನಿರ್ಧಾರಕ್ಕೆ ಬಂದು ಅಲ್ಲಿಂದ ಹೊರಡುತ್ತಾನೆ.

ಮಗಳ ಪ್ರೀತಿಯನ್ನು ದ್ವೇಷಕ್ಕೆ ದಾಳ ಮಾಡಿಕೊಳ್ಳುವ ಯೋಚನೆ ಮಾಡಿದ್ದ ಭಾರ್ಗವಿ ಈಗೇನು ಮಾಡ್ತಾಳೆ, ಪ್ರೀತಿ ನಿರಾಕರಿಸಿದ ಕಾರಣ ಪುಷ್ಪಾ ಹಾಗೂ ಆಕಾಶ್‌ ಜೀವನದಲ್ಲಿ ಬಿರುಗಾಳಿಯಾಗಿ ಬರ್ತಾಳಾ ಸಹನಾ, ಬೃಂದಾವನ ನೆಮ್ಮದಿ ಕೆಡಿಸಲು ಕುತಂತ್ರಿಗಳಿಗೆ ಸಾಧ್ಯವಾಗುವುದೇ ಈ ಎಲ್ಲವನ್ನೂ ಮುಂದಿನ ಸಂಚಿಕೆಗಳಲ್ಲಿ ನಿರೀಕ್ಷಿಸಿ.

IPL_Entry_Point