ಕನ್ನಡ ಸುದ್ದಿ  /  ಮನರಂಜನೆ  /  Lakshmi Nivasa Serial: ಜಯಂತನ ಸ್ಥಿತಿ ಕಂಡು ಗಹಗಹಿಸಿ ನಕ್ಕು ಅಣಕ ಮಾಡಿದ ಅವನದೇ ಆತ್ಮಸಾಕ್ಷಿಗಳು! ವಿಲಿ ವಿಲಿ ಒದ್ದಾಡಿದ ಸೈಕೋ

Lakshmi nivasa Serial: ಜಯಂತನ ಸ್ಥಿತಿ ಕಂಡು ಗಹಗಹಿಸಿ ನಕ್ಕು ಅಣಕ ಮಾಡಿದ ಅವನದೇ ಆತ್ಮಸಾಕ್ಷಿಗಳು! ವಿಲಿ ವಿಲಿ ಒದ್ದಾಡಿದ ಸೈಕೋ

Lakshmi nivasa Serial: ಪರೀಕ್ಷೆ ಬರೆಯಲು ತವರು ಮನೆಯಿಂದ ಕಾಲೇಜಿಗೆ ಹೋಗುವ ವಿಚಾರವನ್ನು ಪತಿ ಜಯಂತನ ಮುಂದಿಟಟ್ಟಿದ್ದಾಳೆ ಜಾಹ್ನವಿ. ಆದರೆ, ಜಯಂತನಿಗೆ ಇದು ಸುತಾರಾಂ ಇಷ್ಟವಿಲ್ಲ. ಕೋಪದಲ್ಲಿಯೇ ಆಫೀಸ್‌ಗೂ ಬಂದಿದ್ದಾನೆ. ಇತ್ತ ಅವನ ಮನಸ್ಸಿನಲ್ಲಿ ಆತಂಕವನ್ನು ಅವನದೇ ಆದ ಆತ್ಮಸಾಕ್ಷಿಗಳು ಅವನನ್ನೇ ಅಣಕ ಮಾಡಿ ಗಹಗಹಿಸಿ ನಕ್ಕಿವೆ.

Lakshmi nivasa Serial: ಸೈಕೋ ಜಯಂತನ ಸ್ಥಿತಿ ನೋಡಿ ಗಹಗಹಿಸಿ ನಕ್ಕು ಅಣಕ ಮಾಡಿದ ಅವನದೇ ಆತ್ಮಸಾಕ್ಷಿಗಳು!
Lakshmi nivasa Serial: ಸೈಕೋ ಜಯಂತನ ಸ್ಥಿತಿ ನೋಡಿ ಗಹಗಹಿಸಿ ನಕ್ಕು ಅಣಕ ಮಾಡಿದ ಅವನದೇ ಆತ್ಮಸಾಕ್ಷಿಗಳು!

Lakshmi nivasa Serial: ಹೆಂಡತಿ ಮೇಲಿನ ಅತಿಯಾದ ಪೊಸೆಸಿವ್‌ನೆಸ್‌ ಜಯಂತನನ್ನು ಇಕ್ಕಟ್ಟಿಗೆ ಸಿಲುಕಿಸುತ್ತಿದೆ. ಭದ್ರಕೋಟೆಯಲ್ಲಿ ಜಾಹ್ನವಿಯನ್ನು ಲಾಕ್‌ ಮಾಡಿ ಬಂಧಿಸಿರುವ ಜಯಂತ್‌, ಆಕೆಯ ಮೇಲೆ ಹದ್ದಿನ ಕಣ್ಣಿಟ್ಟಿದ್ದಾನೆ. ಮನೆಯಲ್ಲಿನ ಆಕೆಯ ಚಲನವಲನವನ್ನು ಸೂಕ್ಷ್ಮವಾಗಿ ಗಮನಿಸುತ್ತಿದ್ದಾನೆ. ಮನೆಯಿಂದಾಚೆ ಎಲ್ಲೂ ಆಕೆಯನ್ನು ಅಪ್ಪಿ ತಪ್ಪಿಯೂ ಕರೆದೊಯ್ಯುತ್ತಿಲ್ಲ. ಮೊನ್ನೆಯಷ್ಟೇ ಜಾಹ್ನವಿ ಹುಷಾರು ತಪ್ಪಿದಾಗ ಆಸ್ಪತ್ರೆಗೆ ಕರೆದೊಯ್ದಾಗ, ಪತ್ನಿಯನ್ನು ಮುಟ್ಟಿದ ವೈದ್ಯನ ಕೈಯನ್ನೇ ಮುರಿದಿದ್ದಾನೆ ಈ ಸೈಕೋ ಜಯಂತ್.‌ ಈಗ ಮತ್ತೆ ವಿಚಲಿತನಾಗಿದ್ದಾನೆ!

ಟ್ರೆಂಡಿಂಗ್​ ಸುದ್ದಿ

ಪರೀಕ್ಷೆ ಬರೆಯುವ ಆತುರದಲ್ಲಿ ಜಾಹ್ನವಿ

ಜಾಹ್ನವಿಗೆ ಈಗ ಕಾಲೇಜಿನಲ್ಲಿ ಪರೀಕ್ಷೆಗಳು ಶುರುವಾಗಿವೆ. ತವರು ಮನೆಯಿಂದ ಆಕೆಗೆ ಕಾಲೇಜು ಹತ್ತಿರ. ಗಂಡನ ಮನೆಯಿಂದ ತುಂಬ ದೂರ. ಈ ಕಾರಣಕ್ಕೆ ಸಮಯ ಸಿಕ್ಕಾಗಲೆಲ್ಲ ಮನೆಯಲ್ಲಿ ಓದು ಆರಂಭಿಸಿದ್ದಾಳೆ. ಪರೀಕ್ಷೆಯನ್ನು ತನ್ನ ಮನೆಗೆ ಹೋಗಿ ಅಲ್ಲಿಂದ ಕಾಲೇಜಿಗೆ ಓಡಾಡಿ ಬರೆಯುವ ಪ್ಲಾನ್‌ ಜಾಹ್ನವಿಯದ್ದು. ಈ ವಿಚಾರವನ್ನು ಪತಿಯ ಮುಂದೆ ಹೇಳಿ, ಅವರ ಒಪ್ಪಿಗೆ ಪಡೆಯಲು ತೀರ್ಮಾನಿಸಿದ್ದಾಳೆ. ಈ ನಡುವೆ ಪತಿ ಆಫೀಸ್‌ಗೆ ಹೊರಡುವುದಕ್ಕೂ ಮುನ್ನ ತನ್ನ ಬ್ಯಾಗ್‌ ಪ್ಯಾಕ್‌ ಮಾಡಿಕೊಳ್ಳುತ್ತಿದ್ದಾಳೆ. ಅಚ್ಚರಿಯ ರೀತಿಯಲ್ಲಿ ಪತಿಯ ಆಗಮನವಾಗಿದೆ.

ಜಾಹ್ನವಿ ಮಾತಿಗೆ ಕುಪಿತನಾದ ಜಯಂತ್

ಯಾಕೆ ಬ್ಯಾಗ್‌ ಪ್ಯಾಕ್‌ ಮಾಡ್ತಿದ್ದೀರಿ? ಎಂದು ಜಾಹ್ನವಿಗೆ ಕೇಳಿದ್ದಾನೆ ಜಯಂತ್.‌ ಅರೇ ಈಗ ಪರೀಕ್ಷೆ ಶುರುವಾಯ್ತು. ಅದಕ್ಕಾಗಿ ಅಮ್ಮನ ಮನೆಗೆ ಹೋಗಿ ಅಲ್ಲಿಂದಲೇ ಕಾಲೇಜಿಗೆ ಪರೀಕ್ಷೆಗೆ ಹೋಗ್ತಿನಿ ಎಂದಿದ್ದಾಳೆ. ಪತ್ನಿಯ ಮಾತು ಕೇಳಿ ಕೊಂಚ ಕುಪಿತನಾಗಿದ್ದಾನೆ. ಜೋರು ಧ್ವನಿಯಲ್ಲಿ ಮಾತನಾಡಿದ್ದಾನೆ. ಬಳಿಕ ನಿಮ್ಮಿಷ್ಟ ನಿಮಗನಿಸಿದ್ದನ್ನು ಮಾಡಿ. ನನ್ನನ್ನು ಬಿಟ್ಟು ಇರಲು ನಿಮಗೆ ಆಗುತ್ತೆ, ನನಗಾಗಲ್ಲ ಎಂದು ಹೇಳಿ ಆಫೀಸ್‌ ಕಡೆ ನಡೆದಿದ್ದಾನೆ. ಇತ್ತ ಪತಿಯ ಮಾತು ಜಾಹ್ನವಿಯನ್ನು ಇಕ್ಕಟ್ಟಿಗೆ ಸಿಲುಕಿಸಿದೆ. ಏನು ಮಾಡಲಿ ಎಂದು ಚಿಂತಿಸುತ್ತ ಕೂತಿದ್ದಾಳೆ.‌

ಆತ್ಮಸಾಕ್ಷಿಗಳ ಕೈಗೆ ಸಿಕ್ಕು ವಿಲಿ ವಿಲಿ ಒದ್ದಾಡಿದ ಜಯಂತ್

ಇತ್ತ ಪತ್ನಿ ತವರು ಮನೆಗೆ ಹೊರಟ ವಿಚಾರವನ್ನೇ ತಲೆಗೆ ತುಂಬಿಕೊಂಡು ಆಫೀಸ್‌ಗೆ ಬಂದ ಜಯಂತ್‌ಗೆ ಅವನದೇ ಆದ ಪ್ರತಿರೂಪಗಳು ಕಂಡಿವೆ. ಅವನ ಆತ್ಮಸಾಕ್ಷಿಗಳೇ ಅವನನ್ನೇ ಅಣಕ ಮಾಡುತ್ತಿವೆ. ಒಬ್ಬ ಜಯಂತನಿಗೆ ಅವನದೇ ಆದ ನಾಲ್ಕು ಆತ್ಮಸಾಕ್ಷಿಗಳು ಪ್ರಶ್ನೆ ಮಾಡುತ್ತಿವೆ. ಅಷ್ಟು ಸುಲಭಕ್ಕೆ ಜಾಹ್ನವಿಯನ್ನು ಅವಳ ಮನೆಗೆ ಕಳಿಸಿಕೊಡ್ತಿಯಾ? ಅವಳಿಗೆ ನಿನ್ನ ಮೇಲೆ ಪ್ರೀತಿ ಇಲ್ಲ, ಅದಕ್ಕಾಗಿಯೇ ಅವಳು ಹೋಗ್ತಿದ್ದಾಳೆ. ನಿನ್ನ ಹೆಂಡತಿಯನ್ನು ತವರಿಗೆ ಹೋಗೋದನ್ನ ತಡಿಯಲಾಗಲಿಲ್ಲ ನಿನ್ನ ಕೈಯಲ್ಲಿ. ಇದರರ್ಥ ಅವಳಿಗೆ ನಿನ್ನ ಮೇಲೆ ನಯಾ ಪೈಸೆಯೂ ಪ್ರೀತಿ ಇಲ್ಲ ಅಂತರ್ಥ ಎಂದು ಟೀಕಿಸುತ್ತಿವೆ.

ಜಾಹ್ನವಿಗೆ ನಿನ್ನ ಮೇಲೆ ಪ್ರೀತಿ ಇಲ್ಲ ಎಂದು ಅಣಕ

ಮುಂದುವರಿದು, ಒಂದು ಬಾರಿ ಹೆಂಡತಿ ಹೊರಗೆ ಹೋದ್ಲು ಅಂದ್ರೆ, ಗಂಡನನ್ನು ಮನಸ್ಸಿನಿಂದ ಹೊರಹಾಕಿದ್ಲು ಅಂತ ಅರ್ಥ. ತವರಿಗೆ ಹೋಗುವ ನಿನ್ನ ಹೆಂಡತಿಯನ್ನು ಮೊದಲು ತಡೆದು ನಿಲ್ಲಿಸು ಎಂದು ನಾಲ್ಕು ಆತ್ಮಸಾಕ್ಷಿಗಳು ಜಯಂತನನ್ನು ನೋಡಿ ಗಹಗಹಿಸಿ ನಕ್ಕು ಅಣಕ ಮಾಡಿವೆ. ಜೋರಾಗಿ ಕಿರುಚಿದ್ದಾನೆ. ತಕ್ಷಣ ಅವೆಲ್ಲವೂ ಅಲ್ಲಿಂದ ಮಾಯವಾಗಿವೆ. ಬಳಿಕ ಫೋನ್‌ ಕೈಯಲ್ಲಿ ಹಿಡಿದು ಪತ್ನಿಗೆ ಫೋನ್‌ ಮಾಡಿದ್ದಾನೆ. ಅತ್ತ ಕಡೆಯಿಂದ ರೀ ನಾನು ನಿಮ್ಮನ್ನ ಬಿಟ್ಟು ಎಲ್ಲೂ ಹೋಗಲ್ಲ. ನೀವಿಲ್ಲದೆ ನನಗೂ ಇರೋಕೆ ಆಗಲ್ಲ ಎಂದಿದ್ದಾಳೆ. ಇದನ್ನು ಕೇಳಿ ಜಯಂತ್‌ ಖುಷಿಯಾಗಿದ್ದಾನೆ.

ನೀವು ಬನ್ನಿ ನಮ್ಮ ಮನೆಗೆ ನಾನೂ ಅಲ್ಲಿಂದಲೇ ಕಾಲೇಜಿಗೆ ಪರೀಕ್ಷೆಗೆ ಹೋಗುತ್ತೇನೆ ಎಂದಿದ್ದಾಳೆ. ಹೀಗಿರುವಾಗಲೇ ಜಯಂತ್‌ಗೆ ಜಾಹ್ನವಿ ಮನೆಯಲ್ಲಿನ ವೆಂಕಿ ನೆನಪಿಗೆ ಬಂದಿದ್ದಾನೆ. ಬಾಲ್ಯದ ನೆನಪಿಗೆ ಜಾರಿದ್ದಾನೆ. ಮುಖದಲ್ಲಿ ಗಾಬರಿ ಕಾಣುತ್ತಿದೆ. ಹಾಗಾದರೆ, ಜಾಹ್ನವಿಯನ್ನು ತವರಿಗೆ ಕಳಿಸ್ತಾನಾ ಜಯಂತ್‌? ಅಥವಾ ತಾನೇ ಆಕೆಯ ಮನೆಗೆ ಹೋಗುತ್ತಾನಾ? ಸದ್ಯ ಈ ಪ್ರಶ್ನೆಗೆ ಇಂದಿನ ಸಂಚಿಕೆಯಲ್ಲಿ ಉತ್ತರ ಸಿಗಲಿದೆ.

IPL_Entry_Point