ಕನ್ನಡ ಸುದ್ದಿ  /  ಮನರಂಜನೆ  /  Rashmika Birthday: ಕೊಡಗಿನ ಕುವರಿ ರಶ್ಮಿಕಾ ಮಂದಣ್ಣ ಹುಟ್ಟುಹಬ್ಬಕ್ಕೆ ಡಬಲ್‌ ಗಿಫ್ಟ್‌; ಪುಷ್ಪ 2, ದಿ ಗರ್ಲ್‌ಫ್ರೆಂಡ್‌ ಪೋಸ್ಟರ್‌ ರಿಲೀಸ್‌

Rashmika Birthday: ಕೊಡಗಿನ ಕುವರಿ ರಶ್ಮಿಕಾ ಮಂದಣ್ಣ ಹುಟ್ಟುಹಬ್ಬಕ್ಕೆ ಡಬಲ್‌ ಗಿಫ್ಟ್‌; ಪುಷ್ಪ 2, ದಿ ಗರ್ಲ್‌ಫ್ರೆಂಡ್‌ ಪೋಸ್ಟರ್‌ ರಿಲೀಸ್‌

ಬಹುಭಾಷಾ ನಟಿ ರಶ್ಮಿಕಾ ಮಂದಣ್ಣ ಹುಟ್ಟುಹಬ್ಬದ ಪ್ರಯುಕ್ತ ಪುಷ್ಪ 2 ಮತ್ತು ದಿ ಗರ್ಲ್‌ಫ್ರೆಂಡ್‌ ಚಿತ್ರತಂಡಗಳು ಹೊಸ ಪೋಸ್ಟರ್‌ಗಳನ್ನು ಬಿಡುಗಡೆ ಮಾಡಿವೆ. ಈ ಮೂಲಕ ನ್ಯಾಷನಲ್‌ ಕ್ರಶ್‌ ರಶ್ಮಿಕಾ ಅಭಿಮಾನಿಗಳಿಗೆ ಡಬಲ್‌ ಗಿಫ್ಟ್‌ ದೊರಕಿದೆ.

Rashmika Birthday: ಕೊಡಗಿನ ಕುವರಿ ರಶ್ಮಿಕಾ ಮಂದಣ್ಣ ಹುಟ್ಟುಹಬ್ಬಕ್ಕೆ ಡಬಲ್‌ ಗಿಫ್ಟ್‌
Rashmika Birthday: ಕೊಡಗಿನ ಕುವರಿ ರಶ್ಮಿಕಾ ಮಂದಣ್ಣ ಹುಟ್ಟುಹಬ್ಬಕ್ಕೆ ಡಬಲ್‌ ಗಿಫ್ಟ್‌

ಬೆಂಗಳೂರು: ಬಹುಭಾಷಾ ನಟಿ ರಶ್ಮಿಕಾ ಮಂದಣ್ಣ ಹುಟ್ಟುಹಬ್ಬದ ಪ್ರಯುಕ್ತ ಪುಷ್ಪ 2 ಮತ್ತು ದಿ ಗರ್ಲ್‌ಫ್ರೆಂಡ್‌ ಚಿತ್ರತಂಡಗಳು ಹೊಸ ಪೋಸ್ಟರ್‌ಗಳನ್ನು ಬಿಡುಗಡೆ ಮಾಡಿವೆ. ಈ ಮೂಲಕ ನ್ಯಾಷನಲ್‌ ಕ್ರಶ್‌ ರಶ್ಮಿಕಾ ಅಭಿಮಾನಿಗಳಿಗೆ ಡಬಲ್‌ ಗಿಫ್ಟ್‌ ದೊರಕಿದೆ. ರಶ್ಮಿಕಾ ಮಂದಣ್ಣ ಅವರು ಅಬುದಾಬಿಯಲ್ಲಿ ತನ್ನ ಹುಟ್ಟುಹಬ್ಬ ಆಚರಿಸಿಕೊಳ್ಳುತ್ತಿದ್ದಾರೆ. ಅಲ್ಲು ಅರ್ಜುನ್‌ ಜತೆ ರಶ್ಮಿಕಾ ನಟಿಸುತ್ತಿರುವ ಪುಷ್ಪ 2 ಸಿನಿಮಾ ಇದೇ ಆಗಸ್ಟ್‌ 15ರಂದು ಬಿಡುಗಡೆಯಾಗಲಿದೆ. ಇದೇ ಸಮಯದಲ್ಲಿ ಪುಷ್ಪ 2 ಎಕ್ಸ್‌ ಖಾತೆಯಲ್ಲಿ ಹೊಸ ಪೋಸ್ಟರ್‌ ಬಿಡುಗಡೆ ಮಾಡಲಾಗಿದೆ.

ಟ್ರೆಂಡಿಂಗ್​ ಸುದ್ದಿ

ಹ್ಯಾಪಿ ಬರ್ತ್‌ಡೇ ಶ್ರೀವಲ್ಲಿ

ರಶ್ಮಿಕಾ ಮಂದಣ್ಣರಿಗೆ ಪುಷ್ಪ 2 ಸಿನಿಮಾ ತಂಡವು "ಹುಟ್ಟುಹಬ್ಬದ ಶುಭಾಶಯಗಳು ಶ್ರೀವಲ್ಲಿ" ಎಂದು ವಿಶ್‌ ಮಾಡಿದೆ. ಸೀರೆಯುಟ್ಟ ಶ್ರೀವಲ್ಲಿಯ ಸುಂದರವಾದ ಫೋಟೋ ಹಂಚಿಕೊಳ್ಳಲಾಗಿದೆ. ಒಂದು ಕಣ್ಣಿಗೆ ಬೆರಳನ್ನು ಇಟ್ಟು ವಿಭಿನ್ನವಾಗಿ ರಶ್ಮಿಕಾ ಪೋಸ್‌ ನೀಡಿದ್ದಾರೆ. ಕೊರಳ ತುಂಬಾ ಬಂಗಾರ ಧರಿಸಿದ್ದಾರೆ. ಶ್ರೀವಲ್ಲಿಯ ಹೊಸ ಲುಕ್‌ಗೆ ಅಭಿಮಾನಿಗಳು ಫಿದಾ ಆಗಿದ್ದು, ಆ ಫೋಟೋಗಳನ್ನು ಹಂಚಿಕೊಳ್ಳುತ್ತಿದ್ದಾರೆ. ಇದೇ ರೀತಿ ಕಣ್ಣಿಗೆ ಬೆರಳಿಟ್ಟ ಇತರೆ ನಟನಟಿಯರ ಜತೆಗೂ ಶ್ರೀವಲ್ಲಿಯ ಫೋಟೋವನ್ನು ಹೋಲಿಕೆ ಮಾಡುತ್ತಿದ್ದಾರೆ. ಪುಷ್ಪ 2 ಸಿನಿಮಾ ಬಿಡುಗಡೆ ದಿನಾಂಕವನ್ನೂ ಪೋಸ್ಟರ್‌ನಲ್ಲಿ ನಮೂದಿಸಲಾಗಿದೆ.

ಗರ್ಲ್‌ಫ್ರೆಂಡ್‌ಗೆ ಹುಟ್ಟುಹಬ್ಬದ ಶುಭಾಶಯ

ಇದೇ ಸಮಯದಲ್ಲಿ ರಶ್ಮಿಕಾ ಮಂದಣ್ಣ ನಟನೆಯ ಮುಂಬರುವ ಸಿನಿಮಾ ಗರ್ಲ್‌ಫ್ರೆಂಡ್‌ ಕುರಿತು ಗೀತಾ ಆರ್ಟ್ಸ್‌ ಅಪ್‌ಡೇಟ್‌ ನೀಡಿದೆ. "ಇವಳು ನಗುವ ಮೊದಲು ಈಕೆಯ ಕಣ್ಣುಗಳು ನಗುತ್ತವೆ. ಆಕೆ ಮಾತನಾಡದ ಪದಗಳನ್ನು ಆಕೆಯ ಕಣ್ಣುಗಳು ಮಾತನಾಡುತ್ತವೆ. "ದಿ ಗರ್ಲ್‌ಫ್ರೆಂಡ್‌ ಪರಿಚಯಿಸುತ್ತಿದ್ದೇವೆ" ನ್ಯಾಷನಲ್‌ ಕ್ರಶ್‌ ರಶ್ಮಿಕಾ ಮಂದಣ್ಣರಿಗೆ ಹುಟ್ಟುಹಬ್ಬದ ಶುಭಾಶಯಗಳು" ಎಂದು ಗೀತಾ ಆರ್ಟ್ಸ್‌ ಪೋಸ್ಟ್‌ ಮಾಡಿದೆ. ಇದೇ ಸಮಯದಲ್ಲಿ ದಿ ಗರ್ಲ್‌ಫ್ರೆಂಡ್‌ ಸಿನಿಮಾದಲ್ಲಿನ ರಶ್ಮಿಕಾ ಮಂದಣ್ಣರ ಪಾತ್ರದ ಎರಡು ಫೋಟೋಗಳನ್ನು ಹಂಚಿಕೊಂಡಿದೆ.

IPL_Entry_Point